Ezekiel · chapter 28 · verse 3
Ezekiel 28:3 in Kannada
ಇಗೋ, ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆ; ರಹಸ್ಯವಾದದ್ದು ಏನಿದ್ದರೂ ನಿನಗೆ ಮರೆಯಾಗಿರುವದಿಲ್ಲ.
Igo, neenu daaniyelaniginta jnyaaniyaagiruve; rahasyavaadaddu eniddaroo ninage mareyaagiruvadilla.
Ezekiel 28:3 in English
- King James Version (KJV)
- Behold, thou [art] wiser than Daniel; there is no secret that they can hide from thee:
- World English Bible (WEB)
- behold, you are wiser than Daniel. There is no secret that is hidden from you.
- American Standard Version (ASV)
- behold, thou art wiser than Daniel; there is no secret that is hidden from thee;
- Bible in Basic English (BBE)
- See, you are wiser than Daniel; there is no secret which is deeper than your knowledge:
- Darby Translation (DBY)
- behold, thou art wiser than Daniel! nothing secret is obscure for thee;
- Webster's Bible (WBS)
- Behold, thou [art] wiser than Daniel; there is no secret that they can hide from thee:
- Young's Literal Translation (YLT)
- Lo, thou [art] wiser than Daniel, No hidden thing have they concealed from thee.
Read in context
- 1ಕರ್ತನ ವಾಕ್ಯವು ಮತ್ತೆ ಬಂದು ನನಗೆ ಹೇಳಿದ್ದೇನಂದರೆ--
- 2ಮನುಷ್ಯಪುತ್ರನೇ, ತೂರಿನ ಪ್ರಭುವಿಗೆ ಹೇಳಬೇಕಾದದ್ದೇನಂದರೆ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಹೃದಯವು ಹೆಚ್ಚಿಸಲ್ಪಟ್ಟಿದ್ದರಿಂದ--ನಾನೇ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿ ರುವೆನೆಂದು ಹೇಳಿದ್ದರಿಂದ ನೀನು ದೇವರಲ್ಲ, ಮನು ಷ್ಯನೇ; ಆದರೂ ನೀನು ನಿನ್ನ ಹೃದಯವನ್ನು ದೇವರ ಹೃದಯದಂತೆ ಮಾಡಿಕೊಂಡಿರುವೆ.
- 3ಇಗೋ, ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆ; ರಹಸ್ಯವಾದದ್ದು ಏನಿದ್ದರೂ ನಿನಗೆ ಮರೆಯಾಗಿರುವದಿಲ್ಲ.
- 4ನಿನ್ನ ಜ್ಞಾನ ದಿಂದಲೂ ವಿವೇಕದಿಂದಲೂ ನಿನಗೆ ದ್ರವ್ಯವನ್ನುಂಟು ಮಾಡಿಕೊಂಡಿರುವೆ. ಚಿನ್ನವನ್ನೂ ಬೆಳ್ಳಿಯನ್ನೂ ನಿನ್ನ ಭಂಡಾರಗಳಲ್ಲಿ ಇಟ್ಟುಕೊಂಡಿರುವೆ.
- 5ನಿನ್ನ ಅಧಿಕ ಜ್ಞಾನದಿಂದಲೂ ವ್ಯಾಪಾರದಿಂದಲೂ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವಿ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯವು ಹೆಚ್ಚಿಸಿಕೊಂಡಿದೆ;
Cross references
- Daniel 1:20 ದಾನಿಯೇಲನು 1:20ಅರಸನು ಅವರ ಹತ್ತಿರ ವಿಚಾರಿಸಿದ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರ ರಿಗಿಂತಲೂ ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡರು.ದಾನಿಯೇಲನು ರಾಜ ನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.
- Daniel 2:22 ದಾನಿಯೇಲನು 2:22ಅಗಾಧವಾದವುಗಳನ್ನು, ರಹಸ್ಯವಾದವು ಗಳನ್ನು ಪ್ರಕಟಮಾಡುತ್ತಾನೆ; ಕತ್ತಲೆಯಲ್ಲಿ ಇರುವಂತ ವುಗಳನ್ನು ತಿಳಿದಿರುವಂತವನಾಗಿದ್ದಾನೆ; ಬೆಳಕು ಆತ ನೊಳಗೆ ವಾಸಿಸುತ್ತದೆ.
- Daniel 2:27–28 ದಾನಿಯೇಲನು 2:27–28ಆಗ ದಾನಿ ಯೇಲನು ಅರಸನ ಸನ್ನಿಧಿಯಲ್ಲಿ ಪ್ರತ್ಯುತ್ತರವಾಗಿ--ಅರಸನು ನಿರ್ಭಂಧವಾಗಿ ಕೇಳುವ ರಹಸ್ಯವನ್ನು ಜ್ಞಾನಿಗಳೂ ಜೋತಿಷ್ಯರೂ ಮಂತ್ರಗಾರರೂ ಶಕುನ ಹೇಳುವವರೂ ಅರಸನಿಗೆ ತಿಳಿಸಲಾರರು. ಆದರೆ ಈ ರಹಸ್ಯಗಳನ್ನು ಪ್ರಕಟಪಡಿಸುವಂತ ದೇವರು ಪರಲೋಕದಲ್ಲಿದ್ದಾನೆ; ಆತನು ದಿವಸಗಳ ಅಂತ್ಯದಲ್ಲಿ ಸಂಭವಿಸುವಂತವುಗಳನ್ನು ಅರಸನಾದ ನೆಬೂಕದ್ನೆಚ್ಚ ರನಿಗೆ ತಿಳಿಯಪಡಿಸುತ್ತಾನೆ. ನಿನ್ನ ಕನಸಿನಲ್ಲಿ, ನಿನ್ನ ಹಾಸಿಗೆಯಲ್ಲಿ ಬಂದ ನಿನ್ನ ಮನಸ್ಸಿನ ದರ್ಶನಗಳು ಇವೇ ಆಗಿವೆ,
- Daniel 5:11–12 ದಾನಿಯೇಲನು 5:11–12ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು. ಬೆಲ್ಶೆಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವದಕ್ಕೂ ಕಠಿಣವಾದ ಸಂಗತಿಗಳನ್ನು ತಿಳಿಸುವದಕ್ಕೂ ಮರ್ಮಗಳನ್ನು ಬಿಚ್ಚುವ ದಕ್ಕೂ ಉತ್ತಮ ಆತ್ಮವೂ ಜ್ಞಾನವೂ ವಿವೇಕವೂ ಸಿಕ್ಕಿ ದವು ಅಂದಳು. ಈಗ ಆ ದಾನಿಯೇಲನನ್ನು ಕರೆಯಿ ಸಿದರೆ ಅವನು ಈ ಬರಹದ ಅರ್ಥವನ್ನು ವಿವರಿಸುವನು ಅಂದಳು.
- Job 15:8 ಯೋಬನು 15:8ದೇವರ ಗುಟ್ಟನ್ನು ಕೇಳಿದ್ದೀಯೋ? ಜ್ಞಾನವನ್ನು ನಿನಗೆ ನೀನೇ ಇಟ್ಟುಕೊಂಡಿದ್ದೀಯೋ?
- 1 Kings 10:3 1 ಅರಸುಗಳು 10:3ಆಗ ಸೊಲೊ ಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಅವಳಿಗೆ ತಿಳಿಸದಂಥ ಅರಸನಿಗೆ ಮರೆಯಾಗಿದ್ದಂಥದ್ದು ಒಂದೂ ಇರಲಿಲ್ಲ.
- 1 Kings 4:29–32 1 ಅರಸುಗಳು 4:29–32ಇದಲ್ಲದೆ ದೇವರು ಸೊಲೊ ಮೋನನಿಗೆ ಸಮುದ್ರ ತೀರದಲ್ಲಿರುವ ಮರಳಿನ ಹಾಗೆ ಅತ್ಯಧಿಕವಾಗಿ ಜ್ಞಾನ ವಿವೇಕಗಳನ್ನೂ ಮನೋವಿಶಾಲ ತೆಯನ್ನೂ ಕೊಟ್ಟನು. ಸೊಲೊಮೋನನ ಜ್ಞಾನವು ಮೂಡಣ ದೇಶದ ಎಲ್ಲಾ ಜನರ ಜ್ಞಾನಕ್ಕಿಂತಲೂ ಐಗುಪ್ತದ ಎಲ್ಲಾ ಜನರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು. ಎಜ್ರಾಹಿಯಾದ ಎತಾನನು, ಮಹೋಲನನ ಮಕ್ಕಳಾದ ಹೆಮಾನನು, ಕಲ್ಕೋಲನು, ದರ್ದಾವನು ಮೊದಲಾದ ಎಲ್ಲಾ ಜನ ರಿಗಿಂತ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ಜನಾಂಗಗಳಲ್ಲಿ ಅವನ ಕೀರ್ತಿ ಇತ್ತು. ಅವನು ಮೂರು ಸಾವಿರ ಸಾಮತಿಗಳನ್ನು ಹೇಳಿದನು; ಅವನ ಹಾಡುಗಳು ಸಾವಿರದ ಐದು.
- Psalm 25:14 ಕೀರ್ತನೆಗಳು 25:14ಕರ್ತನ ಗುಟ್ಟು ಆತ ನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆ ಯನ್ನು ಆತನು ಅವರಿಗೆ ತಿಳಿಸುವನು.
- Zechariah 9:2–3 ಜೆಕರ್ಯ 9:2–3ಹಮಾತು ಬಹಳ ಜ್ಞಾನವಿರುವ ತೂರ್ ಚೀದೋನ್ ಸಹ ಅದರ ಮೇರೆಯಾಗಿದೆ. ತೂರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.
- Daniel 2:47–48 ದಾನಿಯೇಲನು 2:47–48ಅರಸನು ದಾನಿಯೇಲನಿಗೆ ಉತ್ತರವಾಗಿ--ನೀನು ಈ ರಹಸ್ಯವನ್ನು ಪ್ರಕಟ ಮಾಡಲು ಸಮರ್ಥನಾದದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ ಅರಸುಗಳ ಕರ್ತನಾಗಿಯೂ ರಹಸ್ಯಗಳನ್ನು ಪ್ರಕಟಮಾಡುವಾತ ನಾಗಿಯೂ ಆಗಿದ್ದಾನೆ ಅಂದನು. ಆಗ ಅರಸನು ದಾನಿಯೇಲನನ್ನು ಒಬ್ಬ ಮಹಾ ವ್ಯಕ್ತಿಯನ್ನಾಗಿ ಮಾಡಿ ಅವನಿಗೆ ಅನೇಕ ದೊಡ್ಡ ಬಹುಮಾನಗಳನ್ನು ಕೊಟ್ಟು ಸಮಸ್ತ ಬಾಬೆಲಿನ ಪ್ರಾಂತ್ಯಗಳಿಗೆ ಅಧಿಕಾರಿಯನ್ನಾ ಗಿಯೂ ಬಾಬೆಲಿನ ಸಮಸ್ತ ಜ್ಞಾನಿಗಳಿಗೆ ಮುಖ್ಯಾಧಿ ಪತಿಯನ್ನಾಗಿಯೂ ನೇಮಿಸಿದನು.ಆ ಮೇಲೆ ದಾನಿ ಯೇಲನು ಅರಸನನ್ನು ಬೇಡಿಕೊಂಡದ್ದರಿಂದ ಅರಸನು ಶದ್ರಕ್ ಮೇಷಕ್ ಮತ್ತು ಅಬೇದ್ನೆಗೋ ಎಂಬವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನಾದರೋ ಅರಸನ ಅರಮನೆಯಲ್ಲೇ ಇದ್ದನು.