Ezekiel · chapter 28 · verse 5
Ezekiel 28:5 in Kannada
ನಿನ್ನ ಅಧಿಕ ಜ್ಞಾನದಿಂದಲೂ ವ್ಯಾಪಾರದಿಂದಲೂ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವಿ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯವು ಹೆಚ್ಚಿಸಿಕೊಂಡಿದೆ;
Ninna adhika jnyaanadindaloo vyaapaaradindaloo sampattannu vruddhimaadikondiruvi. Ninna aastiya nimitta ninna hrudayavu hechchisikondide;
Ezekiel 28:5 in English
- King James Version (KJV)
- By thy great wisdom [and] by thy traffick hast thou increased thy riches, and thine heart is lifted up because of thy riches:
- World English Bible (WEB)
- By your great wisdom and by your trading you have increased your riches, and your heart is lifted up because of your riches—”
- American Standard Version (ASV)
- by thy great wisdom [and] by thy traffic hast thou increased thy riches, and thy heart is lifted up because of thy riches;—
- Bible in Basic English (BBE)
- By your great wisdom and by your trade your power is increased, and your heart is lifted up because of your power:
- Darby Translation (DBY)
- by thy great wisdom thou hast by thy traffic increased thy riches, and thy heart is lifted up because of thy riches.
- Webster's Bible (WBS)
- By thy great wisdom [and] by thy traffick hast thou increased thy riches, and thy heart is lifted up because of thy riches:
- Young's Literal Translation (YLT)
- By the abundance of thy wisdom, Through thy merchandise, Thou hast multiplied thy wealth, And high is thy heart through thy wealth.
Read in context
- 3ಇಗೋ, ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆ; ರಹಸ್ಯವಾದದ್ದು ಏನಿದ್ದರೂ ನಿನಗೆ ಮರೆಯಾಗಿರುವದಿಲ್ಲ.
- 4ನಿನ್ನ ಜ್ಞಾನ ದಿಂದಲೂ ವಿವೇಕದಿಂದಲೂ ನಿನಗೆ ದ್ರವ್ಯವನ್ನುಂಟು ಮಾಡಿಕೊಂಡಿರುವೆ. ಚಿನ್ನವನ್ನೂ ಬೆಳ್ಳಿಯನ್ನೂ ನಿನ್ನ ಭಂಡಾರಗಳಲ್ಲಿ ಇಟ್ಟುಕೊಂಡಿರುವೆ.
- 5ನಿನ್ನ ಅಧಿಕ ಜ್ಞಾನದಿಂದಲೂ ವ್ಯಾಪಾರದಿಂದಲೂ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವಿ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯವು ಹೆಚ್ಚಿಸಿಕೊಂಡಿದೆ;
- 6ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿನ್ನ ಹೃದಯವನ್ನು ದೇವರ ಹೃದಯದಂತೆ ಮಾಡಿಕೊಂಡ ದ್ದರಿಂದ;
- 7ಇಗೋ, ನಾನು ನಿನ್ನ ಮೇಲೆ ಭಯಂಕರ ವಾದ ಜನಾಂಗಗಳ ಅಪರಿಚಿತರನ್ನು ತರುತ್ತೇನೆ; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ವಿರುದ್ಧವಾಗಿ ಕತ್ತಿಯನ್ನು ಹಿರಿಯುವರು; ನಿನ್ನ ಪ್ರಕಾಶವನ್ನು ಕೆಡಿಸುವರು.
Cross references
- Psalm 52:7 ಕೀರ್ತನೆಗಳು 52:7ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.
- Psalm 62:10 ಕೀರ್ತನೆಗಳು 62:10ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.
- Hosea 13:6 ಹೋಶೇಯ 13:6ಅವರ ಆಹಾರದ ಪ್ರಕಾರ ತೃಪ್ತರಾದರು, ಅದರಿಂದ ಅವರ ಹೃದಯಗಳು ಉಬ್ಬಿಕೊಂಡಿತು; ಆದಕಾರಣ ಅವರು ನನ್ನನ್ನು ಮರೆತುಬಿಟ್ಟರು.
- Ezekiel 28:2 ಯೆಹೆಜ್ಕೇಲನು 28:2ಮನುಷ್ಯಪುತ್ರನೇ, ತೂರಿನ ಪ್ರಭುವಿಗೆ ಹೇಳಬೇಕಾದದ್ದೇನಂದರೆ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಹೃದಯವು ಹೆಚ್ಚಿಸಲ್ಪಟ್ಟಿದ್ದರಿಂದ--ನಾನೇ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿ ರುವೆನೆಂದು ಹೇಳಿದ್ದರಿಂದ ನೀನು ದೇವರಲ್ಲ, ಮನು ಷ್ಯನೇ; ಆದರೂ ನೀನು ನಿನ್ನ ಹೃದಯವನ್ನು ದೇವರ ಹೃದಯದಂತೆ ಮಾಡಿಕೊಂಡಿರುವೆ.
- Hosea 12:7–8 ಹೋಶೇಯ 12:7–8ಅವನು ವ್ಯಾಪಾರಿಯಾಗಿದ್ದು ಅವನ ಕೈಯಲ್ಲಿ ಮೋಸದ ತ್ರಾಸು ಇದೆ. ಕಸಕೊಳ್ಳುವದನ್ನು ಅವನು ಪ್ರೀತಿಮಾಡುತ್ತಾನೆ. ಎಫ್ರಾಯಾಮು--ಆದಾಗ್ಯೂ ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು; ನನ್ನ ಕೆಲಸಗಳಲ್ಲೆಲ್ಲಾ ಪಾಪವಾದ ದುಷ್ಟತ್ವವನ್ನು ಅವರು ನನ್ನಲ್ಲಿ ಕಂಡುಕೊಳ್ಳುವದಿಲ್ಲ.
- Proverbs 11:28 ಜ್ಞಾನೋಕ್ತಿಗಳು 11:28ತನ್ನ ಐಶ್ವರ್ಯವನ್ನು ನಂಬಿದವನು ಬಿದ್ದುಹೋಗುವನು; ನೀತಿವಂತರು ಕೊಂಬೆಯ ಹಾಗೆ ಚಿಗುರುವರು.
- James 4:13–14 ಯಾಕೋಬನು 4:13–14ಈ ಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರುಷವಿದ್ದುಕೊಂಡು ಕೊಳ್ಳುವ ಮತ್ತು ಮಾರುವ ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಅನ್ನುವವರೇ, ಕೇಳಿರಿ. ನಾಳೆ ಏನಾಗುವದೋ ನಿಮಗೆ ತಿಳಿಯದು. ನಿಮ್ಮ ಜೀವ ಮಾನವು ಎಂಥದ್ದು? ಅದು ಸ್ವಲ್ಪ ಹೊತ್ತು ಕಾಣಿಸಿ ಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದೆ.
- Deuteronomy 6:11–12 ಧರ್ಮೋಪದೇಶಕಾಂಡ 6:11–12ನೀನು ತುಂಬದಿದ್ದ ಎಲ್ಲಾ ಒಳ್ಳೆಯವುಗಳು ತುಂಬಿರುವ ಮನೆ ಗಳನ್ನೂ ಅಗೆಯದಿರುವ ಬಾವಿಗಳನ್ನೂ ನೆಡದ ದ್ರಾಕ್ಷೇ ತೋಟಗಳನ್ನೂ ಇಪ್ಪೇತೋಟಗಳನ್ನೂ ನಿನಗೆ ಕೊಡ ಲಾಗಿ ನೀನು ತಿಂದು ತೃಪ್ತಿಯಾದಾಗ ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ನಿನ್ನನ್ನು ಹೊರಗೆ ಬರ ಮಾಡಿದ ಕರ್ತನನ್ನು ಮರೆಯದ ಹಾಗೆ ನೋಡಿ ಕೋ.
- Proverbs 26:12 ಜ್ಞಾನೋಕ್ತಿಗಳು 26:12ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ನೋಡಿ ದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ,
- Isaiah 5:21 ಯೆಶಾಯ 5:21ತಮ್ಮ ಸ್ವಂತ ಕಣ್ಣುಗಳಲ್ಲಿ ಜ್ಞಾನಿಗಳೂ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೂ ಆಗಿರುವವರಿಗೆ ಅಯ್ಯೋ!
- Job 31:24–25 ಯೋಬನು 31:24–25ನಾನು ಬಂಗಾರವನ್ನು ನನ್ನ ನಿರೀಕ್ಷೆಯನ್ನಾಗಿ ಇಟ್ಟಿದ್ದರೆ, ಅಪ ರಂಜಿಗೆ--ನೀನು ನನ್ನ ಭರವಸವು ಎಂದು ಹೇಳಿದ್ದರೆ, ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ,
- Deuteronomy 8:13–14 ಧರ್ಮೋಪದೇಶಕಾಂಡ 8:13–14ನಿನ್ನ ಪಶು ಕುರಿಗಳು ಹೆಚ್ಚಿದಾಗಲೂ ಬೆಳ್ಳಿ ಬಂಗಾರ ನಿನಗೆ ಹೆಚ್ಚಿದಾಗಲೂ ನಿನಗಿರುವಂಥದ್ದೆಲ್ಲಾ ಹೆಚ್ಚಿದಾ ಗಲೂ ನಿನ್ನ ಹೃದಯವು ಉಬ್ಬಿಕೊಳ್ಳದ ಹಾಗೆಯೂ ನಿನ್ನನ್ನು ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ,