Ezekiel · chapter 34 · verse 23
Ezekiel 34:23 in Kannada
ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
Naanu avugala mele obba kurubanannu nemisuvenu; avanu avugalannu meyisuttaane. Nanna sevakanaada daaveedane avugalannu meyisi avugalige kurubanaaguttaane.
Ezekiel 34:23 in English
- King James Version (KJV)
- And I will set up one shepherd over them, and he shall feed them, [even] my servant David; he shall feed them, and he shall be their shepherd.
- World English Bible (WEB)
- I will set up one shepherd over them, and he will feed them, even my servant David. He will feed them, and he will be their shepherd.
- American Standard Version (ASV)
- And I will set up one shepherd over them, and he shall feed them, even my servant David; he shall feed them, and he shall be their shepherd.
- Bible in Basic English (BBE)
- And I will put over them one keeper, and he will give them food, even my servant David; he will give them food and be their keeper.
- Darby Translation (DBY)
- And I will set up one shepherd over them, and he shall feed them, even my servant David: he shall feed them, and he shall be their shepherd.
- Webster's Bible (WBS)
- And I will set up one shepherd over them, and he shall feed them, [even] my servant David; he shall feed them, and he shall be their shepherd.
- Young's Literal Translation (YLT)
- And have raised up over them one shepherd, And he hath fed them — my servant David, He doth feed them, and he is their shepherd,
Read in context
- 21ನೀವು ಅವುಗಳನ್ನು ಪಕ್ಕೆ ಮತ್ತು ಹೆಗಲುಗಳಿಂದ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಮಂದೆಯನ್ನು ದೂರ ಚದುರಿಸಿ ಬಿಟ್ಟಿರಿ.
- 22ಆದದರಿಂದ ನಾನು ನನ್ನ ಮಂದೆಯನ್ನು ಕಾಪಾಡುತ್ತೇನೆ; ಅವು ಎಂದೆಂದೂ ಕೊಳ್ಳೆಯಾಗು ವದಿಲ್ಲ; ನಾನು ದನಗಳ ಮತ್ತು ಪಶುಗಳ ಮಧ್ಯೆ ನ್ಯಾಯತೀರಿಸುವೆನು.
- 23ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
- 24ಕರ್ತನಾದ ನಾನೇ ಅವುಗಳಿಗೆ ದೇವರಾಗಿರುವೆನು; ಮತ್ತು ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವನೆಂದು ಕರ್ತನಾದ ನಾನೇ ಅದನ್ನು ಮಾತಾಡಿದ್ದೇನೆ;
- 25ಅವರ ಸಂಗಡ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಕೆಟ್ಟ ಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು; ಅವರು ನಿರ್ಭಯವಾಗಿ ಅರಣ್ಯಗಳಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.
Cross references
- Ezekiel 37:24–25 ಯೆಹೆಜ್ಕೇಲನು 37:24–25ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು; ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು ನನ್ನ ನ್ಯಾಯನಿಯಮ ಗಳನ್ನೇ ಅನುಸರಿಸುವಂತೆ ಮಾಡುವೆನು. ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ತಂದೆಗಳು(ಪಿತೃಗಳು) ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮಕ್ಕಳ ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ಪ್ರಧಾನನಾಗಿರುವನು.
- Jeremiah 30:9 ಯೆರೆಮೀಯ 30:9ಆದರೆ ಅವರು ತಮ್ಮ ದೇವರಾದ ಕರ್ತನಿಗೂ ಅವರಿಗೋಸ್ಕರ ನಾನು ಎಬ್ಬಿ ಸುವ ಅವರ ಅರಸನಾದ ದಾವೀದನಿಗೂ ಸೇವೆ ಮಾಡು ವರು.
- Isaiah 40:11 ಯೆಶಾಯ 40:11ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
- Hosea 3:5 ಹೋಶೇಯ 3:5ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- John 10:11 ಯೋಹಾನನು 10:11ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
- Ecclesiastes 12:11 ಪ್ರಸಂಗಿ 12:11ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳ ಹಾಗೆಯೂ ಮತ್ತು ಸಭೆಗಳ ಯಜಮಾನರು ನೆಟ್ಟ ಮೊಳೆಗಳ ಹಾಗೆಯೂ ಒಬ್ಬ ಕುರುಬನಿಂದ ಕೊಡಲ್ಪ ಟ್ಟಿವೆ.
- Isaiah 55:3–4 ಯೆಶಾಯ 55:3–4ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು. ಇಗೋ ನಾನು ಅವನನ್ನು ಜನಗಳಿಗೆ ಸಾಕ್ಷಿಯನ್ನಾಗಿಯೂ ಅವರಿಗೆ ನಾಯಕನನ್ನಾಗಿಯೂ ಅಧಿಪತಿಯನ್ನಾ ಗಿಯೂ ಕೊಟ್ಟೆನು.
- Jeremiah 23:4–6 ಯೆರೆಮೀಯ 23:4–6ಅವರನ್ನು ಮೇಯಿಸತಕ್ಕ ಕುರುಬರನ್ನು ಅವರ ಮೇಲೆ ಇಡುತ್ತೇನೆ; ಅವರು ಇನ್ನು ಮೇಲೆ ಭಯಪಡುವದೇ ಇಲ್ಲ, ಅಂಜುವದಿಲ್ಲ, ಕೊರತೆಪಡುವದಿಲ್ಲ ಎಂದು ಕರ್ತನು ಅನ್ನುತ್ತಾನೆ. ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ದಾವೀದನಿಗೆ ನೀತಿಯುಳ್ಳ ಚಿಗುರನ್ನು ಎಬ್ಬಿಸುತ್ತೇನೆ; ಅರಸನು ರಾಜ್ಯವಾಳಿ ವೃದ್ಧಿಯಾಗುವನು; ಭೂಮಿಯಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸು ವನು. ಅವನ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡು ವದು; ಇಸ್ರಾಯೇಲು ಭದ್ರವಾಗಿ ವಾಸಿಸುವದು; ಆತನು ಕರೆಯಲ್ಪಡುವ ಹೆಸರು ಯಾವದಂದರೆ--ನಮ್ಮ ನೀತಿಯು ಕರ್ತನೇ.
- 1 Peter 5:4 1 ಪೇತ್ರನು 5:4ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.
- Revelation 22:16 ಪ್ರಕಟನೆ 22:16ಯೇಸುವೆಂಬ ನಾನು ಸಭೆಗಳಲ್ಲಿ ಇವುಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವದಕ್ಕೋಸ್ಕರ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ಬೇರೂ ಸಂತತಿಯೂ ಉದಯದ ಪ್ರಕಾಶವುಳ್ಳ ನಕ್ಷತ್ರವೂ ಆಗಿದ್ದೇನೆ.
- Isaiah 11:1 ಯೆಶಾಯ 11:1ಇಷಯನ ಬುಡದಿಂದ ಒಂದು ಕೊಂಬೆ ಒಡೆಯುವದು ಅದರ ಬೇರಿನಿಂದ ಕೊಂಬೆ ಯು ಬೆಳೆಯುವದು.
- Zechariah 13:7 ಜೆಕರ್ಯ 13:7ಓ ಕತ್ತಿಯೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ, ಎಚ್ಚರವಾಗು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಕುರುಬನನ್ನು ಹೊಡೆ, ಆಗ ಕುರಿಗಳು ಚದರಿ ಹೋಗುವವು; ಆದರೆ ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು ಎಂದು ಹೇಳುತ್ತಾನೆ.