Isaiah · chapter 40 · verse 11
Isaiah 40:11 in Kannada
ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
Aatanu tanna mandeyannu kurubanante meyi suvanu. Kurimarigalannu koodisi avugalannu tanna edegappikolluvanu elemarigalannu mellage nadisuvanu endu saaru.
Isaiah 40:11 in English
- King James Version (KJV)
- He shall feed his flock like a shepherd: he shall gather the lambs with his arm, and carry [them] in his bosom, [and] shall gently lead those that are with young.
- World English Bible (WEB)
- He will feed his flock like a shepherd. He will gather the lambs in his arm, and carry them in his bosom. He will gently lead those who have their young.
- American Standard Version (ASV)
- He will feed his flock like a shepherd, he will gather the lambs in his arm, and carry them in his bosom, [and] will gently lead those that have their young.
- Bible in Basic English (BBE)
- He will give food to his flock like a keeper of sheep; with his arm he will get it together, and will take up the lambs on his breast, gently guiding those which are with young.
- Darby Translation (DBY)
- He will feed his flock like a shepherd: he will gather the lambs with his arm, and carry them in his bosom; he will gently lead those that give suck.
- Webster's Bible (WBS)
- He will feed his flock like a shepherd: he will gather the lambs with his arm, and carry [them] in his bosom, [and] will gently lead those that are with young.
- Young's Literal Translation (YLT)
- As a shepherd His flock He feedeth, With His arm He gathereth lambs, And in His bosom He carrieth [them]: Suckling ones He leadeth.
Read in context
- 9ಶುಭಸಮಾಚಾರವನ್ನು ತಿಳಿಸುವ ಓ ಚೀಯೋನೇ, ನೀನು ಉನ್ನತಪರ್ವತವನ್ನು ಏರು; ಶುಭಸಮಾ ಚಾರವನ್ನು ತಿಳಿಸುವ ಓ ಯೆರೂಸಲೇಮೇ, ಬಲವಾಗಿ ನಿನ್ನ ಸ್ವರವನ್ನು ಎತ್ತು, ಭಯಪಡದೆ ಎತ್ತು; ಯೆಹೂದದ ಪಟ್ಟಣಗಳಿಗೆ ಇಗೋ, ನಿನ್ನ ದೇವರು ಎಂದು ಹೇಳು.
- 10ಇಗೋ, ಕರ್ತನಾದ ದೇವರು ಬಲವುಳ್ಳ ಕೈಯಿಂದ ಬರುತ್ತಾನೆ, ಆತನ ತೋಳು ತನಗೋಸ್ಕರ ಆಳುವದು. ಇಗೋ, ಆತನ ಬಹುಮಾನವು ಆತನ ಸಂಗಡಲೂ ಆತನ ಪ್ರತಿಫಲವು ಆತನ ಮುಂದೆಯೂ ಇದೆ.
- 11ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
- 12ಸಮುದ್ರ ಸಾಗರವನ್ನು ಬರಿದಾದ ತನ್ನ ಕೈಯಿಂದ ಅಳತೆ ಮಾಡಿದವನೂ ಆಕಾಶಗಳ ಮೇರೆಯನ್ನು ಗೇಣಿನಿಂದ ಅಳೆದವನೂ ಭೂಮಿಯ ದೂಳನ್ನು ಅಳತೆ ಮಾಡಿ ತಿಳುಕೊಂಡವನೂ ಬೆಟ್ಟಗಳ ಮಟ್ಟ ವನ್ನೂ ಗುಡ್ಡಗಳನ್ನೂ ತಕ್ಕಡಿಯಿಂದ ತೂಗಿದವನು ಯಾರು?
- 13ಕರ್ತನ ಆತ್ಮವನ್ನು ನಡಿಸಿದವನೂ ಇಲ್ಲವೇ ಆತನಿಗೆ ಆಲೋಚನಾಕರ್ತನಾಗಿ ಕಲಿಸಿದವನು ಯಾರು?
Cross references
- Revelation 7:17 ಪ್ರಕಟನೆ 7:17ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.
- Psalm 23:1–6 ಕೀರ್ತನೆಗಳು 23:1–6ಕರ್ತನು ನನ್ನ ಕುರುಬನು; ಕೊರತೆಪಡೆನು. ಆತನು ಹಸರುಗಾವಲುಗಳಲ್ಲಿ ನನ್ನನ್ನು ತಂಗುವಂತೆ ಮಾಡುತ್ತಾನೆ. ಶಾಂತವಾದ ನೀರುಗಳ ಪಕ್ಕದಲ್ಲಿ ನನ್ನನ್ನು ನಡಿಸುತ್ತಾನೆ. ನನ್ನ ಪ್ರಾಣವನ್ನು ಪುನರ್ಜೀವಿಸ ಮಾಡುತ್ತಾನೆ. ನೀತಿಯ ದಾರಿಗಳಲ್ಲಿ ತನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸುತ್ತಾನೆ. ಹೌದು, ನಾನು ಮರಣದ ನೆರಳಿನ ಕಣಿವೆಯಲ್ಲಿ ನಡೆದರೂ ಕೇಡಿಗೆ ಭಯಪಡೆನು; ಯಾಕಂದರೆ ನೀನು ನನ್ನ ಸಂಗಡ ಇದ್ದೀ; ನಿನ್ನ ಕೋಲೂ ದೊಣ್ಣೆಯೂ ನನ್ನನ್ನು ಆದರಿಸುತ್ತವೆ. ನನ್ನ ವೈರಿಗಳ ಎದುರಿನಲ್ಲಿ ನನ್ನ ಮುಂದೆ ಮೇಜನ್ನು ಸಿದ್ಧಮಾಡುತ್ತೀ; ನೀನು ನನ್ನ ತಲೆಯನ್ನು ಎಣ್ಣೆಯಿಂದ ಅಭಿಷೇಕಿಸುತ್ತೀ; ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.ನಿಶ್ಚಯವಾಗಿ ಒಳ್ಳೇತನವೂ ಕರುಣೆಯೂ ನನ್ನ ಜೀವನದ ದಿವಸ ಗಳಲ್ಲೆಲ್ಲಾ ನನ್ನನ್ನು ಹಿಂಬಾಲಿಸುವವು; ನಾನು ಕರ್ತನ ಮನೆಯಲ್ಲಿ ಎಂದೆಂದಿಗೂ ವಾಸಮಾಡುವೆನು. ನಿಶ್ಚಯವಾಗಿ ಒಳ್ಳೇತನವೂ ಕರುಣೆಯೂ ನನ್ನ ಜೀವನದ ದಿವಸ ಗಳಲ್ಲೆಲ್ಲಾ ನನ್ನನ್ನು ಹಿಂಬಾಲಿಸುವವು; ನಾನು ಕರ್ತನ ಮನೆಯಲ್ಲಿ ಎಂದೆಂದಿಗೂ ವಾಸಮಾಡುವೆನು.
- Micah 5:4 ಮೀಕ 5:4ಆತನು ಕರ್ತನ ಬಲದಲ್ಲಿಯೂ ತನ್ನ ದೇವರಾದ ಕರ್ತನ ಹೆಸರಿನಲ್ಲಿ ಘನತೆಯಲ್ಲಿಯೂ ನಿಂತುಕೊಂಡು ಮೇಯಿಸುವನು; ಮತ್ತು ಅವರು ನೆಲೆಯಾಗಿರುವರು, ಈಗ ಆತನು ಭೂಮಿಯ ಅಂತ್ಯಗಳ ಮಟ್ಟಿಗೂ ದೊಡ್ಡವನಾಗಿ ರುವನು.
- Ezekiel 34:23 ಯೆಹೆಜ್ಕೇಲನು 34:23ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
- John 10:11–16 ಯೋಹಾನನು 10:11–16ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. ಆದರೆ ಕೂಲಿಯವನು ಕುರುಬನಲ್ಲವಾದದ ರಿಂದಲೂ ಕುರಿಗಳು ತನ್ನವುಗಳಲ್ಲವಾದದರಿಂದಲೂ ತೋಳ ಬರುವದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ; ಆಗ ತೋಳವು ಕುರಿಗಳನ್ನು ಹಿಡಿದು ಕೊಂಡು ಅವುಗಳನ್ನು ಚದರಿಸುತ್ತದೆ. ಕೂಲಿಯವನು ಕೂಲಿಯವನೇ ಆಗಿರುವದರಿಂದ ಕುರಿಗಳಿಗೋಸ್ಕರ ಚಿಂತಿಸದೆ ಓಡಿ ಹೋಗುತ್ತಾನೆ. ನಾನೇ ಒಳ್ಳೇ ಕುರುಬನು; ನನ್ನ ಕುರಿಗಳನ್ನು ನಾನು ಬಲ್ಲೆನು. ನನ್ನ ಕುರಿಗಳು ನನ್ನನ್ನು ತಿಳಿದವೆ. ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ. ಇದಲ್ಲದೆ ಈ ಹಟ್ಟಿಗೆ ಸೇರದ ಬೇರೆ ಕುರಿಗಳು ನನಗುಂಟು; ಅವುಗಳನ್ನು ಸಹ ನಾನು ತರಬೇಕು ಮತ್ತು ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು ಮತ್ತು ಒಬ್ಬನೇ ಕುರುಬನು ಇರುವನು.
- Ezekiel 34:12–14 ಯೆಹೆಜ್ಕೇಲನು 34:12–14ಕುರುಬನು ಚದರಿದ್ದ ತನ್ನ ಕುರಿಗಳ ಮಧ್ಯದಲ್ಲಿ ಇರುವ ದಿನದಲ್ಲಿ ತನ್ನ ಮಂದೆಯನ್ನು ಹುಡುಕುವ ಪ್ರಕಾರ ನಾನು ನನ್ನ ಕುರಿಗಳನ್ನು ಹುಡುಕಿ ಕಾರ್ಮುಗಿಲಿನ ದಿನದಲ್ಲಿ ಚದರಿ ಹೋದ ಅವುಗಳನ್ನು ಎಲ್ಲಾ ಸ್ಥಳಗಳಿಂದ ಬಿಡಿಸುವೆನು. ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳ ಸ್ವಂತ ದೇಶಕ್ಕೆ ತರುವೆನು. ಇಸ್ರಾಯೇಲಿನ ಪರ್ವತಗಳ ಮೇಲೆ ನದಿಗಳಲ್ಲಿ ನಿವಾಸಿಸುವ ಎಲ್ಲಾ ದೇಶಗಳಲ್ಲಿ ಮೇಯಿಸುವೆನು. ನಾನು ಒಳ್ಳೇ ಮೇವಿನಲ್ಲಿ ಅವು ಗಳನ್ನು ಮೇಯಿಸುವೆನು; ಇಸ್ರಾಯೇಲಿನ ಎತ್ತರವಾದ ಪರ್ವತಗಳಲ್ಲಿ ಅವುಗಳ ಮಂದೆಯು ಇರುವದು. ಅವುಗಳು ಆ ಒಳ್ಳೆಯ ಮಂದೆಯಲ್ಲಿ ಮಲಗಿ ಇಸ್ರಾ ಯೇಲಿನ ಪರ್ವತಗಳ ಮೇಲೆ ಪುಷ್ಟಿಯುಳ್ಳ ಮೇವನ್ನು ಮೇಯುವವು.
- 1 Peter 2:25 1 ಪೇತ್ರನು 2:25ನೀವು ಕುರಿಗಳಂತೆ ದಾರಿ ತಪ್ಪಿದವರಾಗಿದ್ದೀರಿ; ಆದರೆ ಈಗ ನೀವು ತಿರಿಗಿ ನಿಮ್ಮ ಆತ್ಮಗಳ ಕುರುಬನೂ ಅಧ್ಯಕ್ಷನೂ ಆಗಿರುವಾತನ ಬಳಿಗೆ ಬಂದಿದ್ದೀರಿ.
- Isaiah 49:9–10 ಯೆಶಾಯ 49:9–10ನೀನು ಬಂದಿ ಸಲ್ಪಟ್ಟವರಿಗೆ--ಹೊರಗೆ ಹೋಗಿರಿ, ಕತ್ತಲೆಯಲ್ಲಿರು ವವರಿಗೆ--ನಿಮ್ಮನ್ನು ತೋರ್ಪಡಿಸಿಕೊಳ್ಳಿರಿ ಎಂದು ಹೇಳಬಹುದು. ಅವರು ದಾರಿಗಳಲ್ಲಿ ಮೇಯಿಸುವರು, ಅವರ ಎಲ್ಲಾ ಎತ್ತರವಾದ ಪ್ರದೇಶಗಳು ಕೂಡ ಅವ ರಿಗೆ ಹುಲ್ಲುಗಾವಲಾಗಿರುವವು. ಅವರಿಗೆ ಹಸಿವೆ ಯಾಗಲಿ ಬಾಯಾರಿಕೆಯಾಗಲಿ ಇರವು. ಇಲ್ಲವೆ ಝಳವೂ ಬಿಸಿಲೂ ಬಡಿಯವು; ಯಾಕಂದರೆ ಅವ ರನ್ನು ಕರುಣಿಸುವಾತನು ಅವರನ್ನು ನಡೆಸುತ್ತಾ ನೀರು ಕ್ಕುವ ಒರತೆಗಳ ಬಳಿಗೆ ತರುವನು.
- Ezekiel 34:31 ಯೆಹೆಜ್ಕೇಲನು 34:31ನನ್ನ ಕುರಿಗಳೂ ನನ್ನ ಮೇವಿನ ಮಂದೆಯೂ ಆಗಿರುವ ನೀವು ನರಪ್ರಾಣಿಗಳು. ನಾನು ನಿಮ್ಮ ದೇವರು ಎಂದು ದೇವರಾದ ಕರ್ತನು ಹೇಳುತ್ತಾನೆ.
- John 21:15–17 ಯೋಹಾನನು 21:15–17ಅವರು ಊಟಮಾಡಿದ ಮೇಲೆ ಯೇಸು ಸೀಮೋನ ಪೇತ್ರನಿಗೆ--ಯೋನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತ ನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇ ನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ ಆತನು ತಿರಿಗಿ ಎರಡನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ--ನನ್ನ ಕುರಿಗಳನ್ನು ಮೇಯಿಸು ಎಂದು ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ
- Psalm 78:71–72 ಕೀರ್ತನೆಗಳು 78:71–72ತನ್ನ ಪ್ರಜೆಯಾದ ಯಾಕೋಬನ್ನೂ ಭಾದ್ಯತೆಯಾದ ಇಸ್ರಾಯೇಲನ್ನೂ ಮೇಯಿಸುವ ಹಾಗೆ, ಅವನನ್ನು ಕುರಿಮರಿಗಳ ಹಿಂಡಿ ನಿಂದ ತಂದನು.ಆತನು ತನ್ನ ಹೃದಯದ ಯಥಾ ರ್ಥತ್ವದ ಪ್ರಕಾರ ಅವರನ್ನು ಮೇಯಿಸಿ ತನ್ನ ಹಸ್ತ ಕೌಶಲ್ಯದಿಂದ ಅವರನ್ನು ನಡಿಸಿದನು. ಆತನು ತನ್ನ ಹೃದಯದ ಯಥಾ ರ್ಥತ್ವದ ಪ್ರಕಾರ ಅವರನ್ನು ಮೇಯಿಸಿ ತನ್ನ ಹಸ್ತ ಕೌಶಲ್ಯದಿಂದ ಅವರನ್ನು ನಡಿಸಿದನು.
- Psalm 80:1 ಕೀರ್ತನೆಗಳು 80:1ಯೋಸೇಫ್ಯರನ್ನು ಮಂದೆಯಂತೆ ನಡಿಸುವಾತನೇ, ಇಸ್ರಾಯೇಲ್ಯರ ಕುರುಬನೇ, ಕಿವಿಗೊಡು; ಕೆರೂಬಿಗಳ ಮಧ್ಯದಲ್ಲಿ ವಾಸಿಸುವಾತನೇ, ಪ್ರಕಾಶಿಸು.