Ezekiel · chapter 34 · verse 26
Ezekiel 34:26 in Kannada
ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿ ಸುವೆನು, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯಾಗುವದು;
Avarannoo nanna parvatagala suttana pradeshagalannoo aasheervadi suvenu, kaalakke sariyaagi maleyannu surisuvenu; divyaasheervaadada maleyaaguvadu;
Ezekiel 34:26 in English
- King James Version (KJV)
- And I will make them and the places round about my hill a blessing; and I will cause the shower to come down in his season; there shall be showers of blessing.
- World English Bible (WEB)
- I will make them and the places around my hill a blessing. I will cause the shower to come down in its season. There will be showers of blessing.
- American Standard Version (ASV)
- And I will make them and the places round about my hill a blessing; and I will cause the shower to come down in its season; there shall be showers of blessing.
- Bible in Basic English (BBE)
- And I will give the rain at the right time, and I will make the shower come down at the right time; there will be showers of blessing.
- Darby Translation (DBY)
- And I will make them and the places round about my hill a blessing; and I will cause the shower to come down in its season: there shall be showers of blessing.
- Webster's Bible (WBS)
- And I will make them and the places around my hill a blessing; and I will cause the shower to come down in its season; there shall be showers of blessing.
- Young's Literal Translation (YLT)
- And I have given them, and the suburbs of my hill, a blessing, And caused the shower to come down in its season, Showers of blessing they are.
Read in context
- 24ಕರ್ತನಾದ ನಾನೇ ಅವುಗಳಿಗೆ ದೇವರಾಗಿರುವೆನು; ಮತ್ತು ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವನೆಂದು ಕರ್ತನಾದ ನಾನೇ ಅದನ್ನು ಮಾತಾಡಿದ್ದೇನೆ;
- 25ಅವರ ಸಂಗಡ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಕೆಟ್ಟ ಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು; ಅವರು ನಿರ್ಭಯವಾಗಿ ಅರಣ್ಯಗಳಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.
- 26ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿ ಸುವೆನು, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯಾಗುವದು;
- 27ಬಯಲಿನ ಮರವು ಅದರ ಫಲವನ್ನು ಕೊಡುವದು, ಭೂಮಿಯು ಅದರ ಆದಾಯವನ್ನು ಕೊಡುವದು, ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು; ನಾನೇ ಅದರ ನೊಗದ ಬಂಧನಗಳನ್ನು ಬಿಡಿಸಿ ಅವರಿಂದ ಸೇವೆ ಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಕರ್ತನೆಂದು ಅವರು ತಿಳಿಯುವರು;
- 28ಅವರು ಇನ್ನು ಮೇಲೆ ಅನ್ಯಜನಾಂಗಗಳಿಗೆ ಕೊಳ್ಳೆಯಾಗು ವದಿಲ್ಲ; ಭೂಮಿಯ ಮೃಗಗಳು ಅವರನ್ನು ತಿನ್ನುವದಿಲ್ಲ; ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯ ವಾಗಿ ವಾಸಿಸುವರು.
Cross references
- Deuteronomy 28:12 ಧರ್ಮೋಪದೇಶಕಾಂಡ 28:12ಕರ್ತನು ಆಕಾಶ ವೆಂಬ ತನ್ನ ಒಳ್ಳೆ ಉಗ್ರಾಣವನ್ನು ನಿನಗೆ ತೆರೆದು ನಿನ್ನ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು ನಿನ್ನ ಕೈಕೆಲಸವನ್ನೆಲ್ಲಾ ಆಶೀರ್ವದಿಸುವನು; ನೀನು ಸಾಲ ತಕ್ಕೊಳ್ಳದೆ ಬಹಳ ಜನಾಂಗಗಳಿಗೆ ಸಾಲ ಕೊಡುವಿ.
- Isaiah 44:3 ಯೆಶಾಯ 44:3ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು.
- Leviticus 26:4 ಯಾಜಕಕಾಂಡ 26:4ನಿಮಗೆ ಮಳೆಯನ್ನು ತಕ್ಕಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವದು. ಹೊಲದ ಮರಗಳು ಅವುಗಳ ಫಲವನ್ನು ಕೊಡುವವು.
- Psalm 68:9 ಕೀರ್ತನೆಗಳು 68:9ಓ ದೇವರೇ, ನೀನು ಸಮೃದ್ಧಿಯಾಗಿ ಮಳೆಯನ್ನು ಸುರಿಸಿದಿ; ಇದರಿಂದ ದಣಿದ ನಿನ್ನ ಬಾಧ್ಯ ತೆಯನ್ನು ನೀನು ಸ್ಥಿರಪಡಿಸಿದಿ.
- Genesis 12:2 ಆದಿಕಾಂಡ 12:2ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ.
- Zechariah 8:13 ಜೆಕರ್ಯ 8:13ಆಗುವದೇನಂದರೆ, ಓ ಯೆಹೂದದ ಮನೆತನದವರೇ, ಇಸ್ರಾಯೇಲಿನ ಮನೆತನದವರೇ, ನೀವು ಜನಾಂಗಗಳಲ್ಲಿ ಶಾಪವಾಗಿದ್ದ ಪ್ರಕಾರ ನಾನು ನಿಮ್ಮನ್ನು ರಕ್ಷಿಸುವೆನು ಮತ್ತು ನೀವು ಆಶೀರ್ವಾದವಾಗಿರುವಿರಿ; ಭಯಪಡಬೇಡಿರಿ; ನಿಮ್ಮ ಕೈಗಳು ಬಲವಾಗಿರಲಿ.
- Psalm 133:3 ಕೀರ್ತನೆಗಳು 133:3ಚೀಯೋನಿನ ಪರ್ವತಗಳ ಮೇಲೆ ಬೀಳುವ ಹೆರ್ಮೋನಿನ ಮಂಜಿನ ಹಾಗೆಯೂ ಅದೆ; ಅಲ್ಲಿ ಕರ್ತನು ಆಶೀರ್ವಾದವನ್ನೂ ಯುಗಯುಗಕ್ಕಿರುವ ಜೀವವನ್ನೂ ಆಜ್ಞಾಪಿಸಿದ್ದಾನೆ.
- Isaiah 19:24 ಯೆಶಾಯ 19:24ಆ ದಿನದಲ್ಲಿ ಇಸ್ರಾಯೇಲು ಐಗುಪ್ತ್ಯರ ಸಂಗ ಡಲೂ ಅಶ್ಶೂರ್ಯರ ಸಂಗಡಲೂ ಮೂರನೆಯ ದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವದು.ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು.
- Deuteronomy 11:13–15 ಧರ್ಮೋಪದೇಶಕಾಂಡ 11:13–15ಹಾಗಾದರೆ ನಾನು ಈಹೊತ್ತು ನಿಮಗೆ ಆಜ್ಞಾಪಿಸುವ ನನ್ನ ಆಜ್ಞೆಗಳನ್ನು ನೀವು ಲಕ್ಷ್ಯಕೊಟ್ಟು ಕೇಳಿ ನಿಮ್ಮ ದೇವರಾದ ಕರ್ತನನ್ನು ಪ್ರೀತಿಮಾಡಿ ನಿಮ್ಮ ಪೂರ್ಣ ಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಆತನಿಗೆ ಸೇವೆಮಾಡಿದರೆ ನೀನು ನಿನ್ನ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಕೂಡಿಸುವ ಹಾಗೆ ನಿಮ್ಮ ಭೂಮಿಗೆ ಅದರ ತಕ್ಕ ಕಾಲದಲ್ಲಿ ಮಳೆಯನ್ನೂ ಮುಂಗಾರು ಹಿಂಗಾರುಗಳನ್ನೂ ಕೊಡುವೆನು. ನಿನ್ನ ಪಶುಗಳಿಗೆ ಹುಲ್ಲನ್ನು ನಿನ್ನ ಹೊಲದಲ್ಲಿ ಕೊಡುವೆನು; ನೀನು ತಿಂದು ತೃಪ್ತಿಯಾಗುವಿ.
- Malachi 3:10 ಮಲಾಕಿಯ 3:10ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Micah 4:1–2 ಮೀಕ 4:1–2ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು. ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು.
- Isaiah 56:7 ಯೆಶಾಯ 56:7ನನ್ನ ಪರಿಶುದ್ಧ ಪರ್ವತಕ್ಕೆ ತರುತ್ತೇನೆ; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವ ನ್ನುಂಟು ಮಾಡುವೆನು; ನನ್ನ ಯಜ್ಞವೇದಿಯ ಮೇಲೆ ಅವರು ಅರ್ಪಿಸುವ ದಹನಬಲಿಗಳೂ, ಯಜ್ಞಗಳೂ ನನಗೆ ಒಪ್ಪಿಗೆಯಾಗುವವು; ಯಾಕಂದರೆ ನನ್ನ ಆಲ ಯವು ಸಮಸ್ತ ಜನಗಳಿಗೆ ಪ್ರಾರ್ಥನಾಲಯವು ಎಂದು ಕರೆಯಲ್ಪಡುವದು.