Micah · chapter 4 · verse 1
Micah 4:1 in Kannada
ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು.
Antyadivasagalalli aaguvadenandare, kartana aalayada parvatavu bettagala tudiyalli neleyaagi guddagaliginta ettara vaagiruvadu; janagalu adara balige pravaahadante baruvaru.
Micah 4:1 in English
- King James Version (KJV)
- But in the last days it shall come to pass, [that] the mountain of the house of the LORD shall be established in the top of the mountains, and it shall be exalted above the hills; and people shall flow unto it.
- World English Bible (WEB)
- But in the latter days, it will happen that the mountain of the LORD’s temple will be established on the top of the mountains, and it will be exalted above the hills; and peoples will stream to it.
- American Standard Version (ASV)
- But in the latter days it shall come to pass, that the mountain of Jehovah’s house shall be established on the top of the mountains, and it shall be exalted above the hills; and peoples shall flow unto it.
- Bible in Basic English (BBE)
- But in the last days it will come about that the mountain of the Lord's house will be placed on the top of the mountains, and be lifted up over the hills; and peoples will be flowing to it.
- Darby Translation (DBY)
- But it shall come to pass in the end of days [that] the mountain of Jehovah's house shall be established on the top of the mountains, and shall be lifted up above the hills; and the peoples shall flow unto it.
- Webster's Bible (WBS)
- But in the last days it shall come to pass, [that] the mount of the house of the LORD shall be established on the top of the mountains, and it shall be exalted above the hills; and people shall flow to it.
- Young's Literal Translation (YLT)
- And it hath come to pass, In the latter end of the days, The mount of the house of Jehovah Is established above the top of the mounts, And it hath been lifted up above the hills, And flowed unto it have peoples.
Read in context
- 1ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು.
- 2ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು.
- 3ಆಗ ಆತನು ಅನೇಕ ಜನಗಳ ಮಧ್ಯದಲ್ಲಿ ನ್ಯಾಯತೀರಿಸಿ ದೂರದಲ್ಲಿರುವ ಬಲವಾದ ಜನಾಂಗ ಗಳಿಗೆ ತೀರ್ಪುಕೊಡುವನು; ಅವರು ತಮ್ಮ ಕತ್ತಿಗಳನ್ನು ನೇಗಲಿನ ಗುಳಗಳಾಗಿಯೂ ತಮ್ಮ ಈಟಿಗಳನ್ನು ಕುಡು ಗೋಲುಗಳಾಗಿಯೂ ಮಾಡುವರು; ಜನಾಂಗವು ಜನಾಂಗದ ಮೇಲೆ ಕತ್ತಿಯನ್ನು ಎತ್ತದು; ಯುದ್ಧಾಭ್ಯಾಸ ಇನ್ನು ಮೇಲೆ ಇರದು.
Cross references
- Isaiah 2:1–4 ಯೆಶಾಯ 2:1–4ಆಮೋಚನ ಮಗನಾದ ಯೆಶಾಯನಿಗೆ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡು ಬಂದ ದೈವೋಕ್ತಿ: ಆ ಅಂತ್ಯ ದಿನಗಳಲ್ಲಿ ಆಗುವದೇನಂದರೆ--ಕರ್ತನ ಆಲಯದ ಪರ್ವತವು ಗುಡ್ಡಗಳಿಗಿಂತ ಎತ್ತರ ವಾಗಿ ಪರ್ವತಗಳ ತುದಿಯಲ್ಲಿ ನೆಲೆಯಾಗಿರುವದು. ಎಲ್ಲಾ ಜನಾಂಗಗಳು ಅದರ ಕಡೆಗೆ ತಂಡ ತಂಡವಾಗಿ ಬರುವವು. ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು. ಆತನು ಅನೇಕ ಜನಾಂಗ ಗಳ ಮಧ್ಯದಲ್ಲಿ ನ್ಯಾಯ ತೀರಿಸಿ, ಅನೇಕ ಪ್ರಜೆಗಳನ್ನು ಗದರಿಸುವನು; ಅವರು ತಮ್ಮ ಕತ್ತಿಗಳನ್ನು ನೇಗಿಲಿನ ಗುಳಗಳನ್ನಾಗಿಯೂ ತಮ್ಮ ಈಟಿಗಳನ್ನು ಕುಡುಗೋ ಲುಗಳನ್ನಾಗಿಯೂ ಬಡಿಯುವರು; ಜನಾಂಗಕ್ಕೆ ವಿರೋ ಧವಾಗಿ ಜನಾಂಗವು ಕತ್ತಿಯನ್ನು ಎತ್ತದು; ಇಲ್ಲವೆ ಇನ್ನು ಮೇಲೆ ಯುದ್ಧಾಭ್ಯಾಸವು ಇರುವದೇ ಇಲ್ಲ.
- Jeremiah 3:17 ಯೆರೆಮೀಯ 3:17ಆ ಕಾಲದಲ್ಲಿ ಯೆರೂಸಲೇಮು ಕರ್ತನ ಸಿಂಹಾಸನವೆಂದು ಕರೆಯಲ್ಪಡುವದು; ಜನಾಂಗಗ ಳೆಲ್ಲಾ ಅದರ ಬಳಿಗೆ ಕರ್ತನ ಹೆಸರಿನ ಬಳಿಗೆ ಮತ್ತು ಯೆರೂಸಲೇಮಿನೊಳಗೆ ಕೂಡಿಸಲ್ಪಡುವವು; ಇನ್ನು ಮೇಲೆ ತಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳರು.
- Acts 2:17 ಅಪೊಸ್ತಲರ ಕೃತ್ಯಗಳು 2:17ಕಡೇ ದಿವಸಗಳಲ್ಲಿ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿಸು ವರು; ಇದಲ್ಲದೆ ನಿಮ್ಮ ಯೌವನಸ್ಥರಿಗೆ ದರ್ಶನಗಳಾ ಗುವವು; ನಿಮ್ಮ ವೃದ್ಧರಿಗೆ ಕನಸುಗಳು ಬೀಳುವವು ಎಂದು ದೇವರು ಹೇಳುತ್ತಾನೆ.
- Psalm 22:27 ಕೀರ್ತನೆಗಳು 22:27ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
- Zechariah 14:16–21 ಜೆಕರ್ಯ 14:16–21ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು. ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು. ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು. ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು. ಆ ದಿನದಲ್ಲಿ ಕುದುರೆಗಳ ಗೆಜ್ಜೆಗಳ ಮೇಲೆ ಕರ್ತನಿಗೆ ಪರಿಶುದ್ಧವು ಎಂದಿರುವದು; ಕರ್ತನ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವವು.ಹೌದು, ಯೆರೂಸಲೇಮಿ ನಲ್ಲಿಯೂ ಯೆಹೂದದಲ್ಲಿಯೂ ಇರುವ ಪ್ರತಿ ಯೊಂದು ಪಾತ್ರೆಯು ಸೈನ್ಯಗಳ ಕರ್ತನಿಗೆ ಪರಿಶುದ್ಧ ವಾಗಿರುವವು; ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳಲ್ಲಿ ತಕ್ಕೊಂಡು ಬೇಯಿಸುವರು; ಆ ದಿನದಲ್ಲಿ ಕಾನಾನ್ಯನು ಸೈನ್ಯಗಳ ಕರ್ತನ ಆಲಯದಲ್ಲಿ ಇನ್ನು ಮೇಲೆ ಇರುವದೇ ಇಲ್ಲ. ಹೌದು, ಯೆರೂಸಲೇಮಿ ನಲ್ಲಿಯೂ ಯೆಹೂದದಲ್ಲಿಯೂ ಇರುವ ಪ್ರತಿ ಯೊಂದು ಪಾತ್ರೆಯು ಸೈನ್ಯಗಳ ಕರ್ತನಿಗೆ ಪರಿಶುದ್ಧ ವಾಗಿರುವವು; ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳಲ್ಲಿ ತಕ್ಕೊಂಡು ಬೇಯಿಸುವರು; ಆ ದಿನದಲ್ಲಿ ಕಾನಾನ್ಯನು ಸೈನ್ಯಗಳ ಕರ್ತನ ಆಲಯದಲ್ಲಿ ಇನ್ನು ಮೇಲೆ ಇರುವದೇ ಇಲ್ಲ.
- Psalm 86:9 ಕೀರ್ತನೆಗಳು 86:9ಓ ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು.
- Zechariah 8:3 ಜೆಕರ್ಯ 8:3ಕರ್ತನು ಹೀಗೆ ಹೇಳುತ್ತಾನೆ--ಚೀಯೋನಿಗೆ ನಾನು ತಿರಿಗಿ ಕೊಂಡಿದ್ದೇನೆ; ಯೆರೂಸಲೇಮಿನ ಮಧ್ಯದಲ್ಲಿ ವಾಸಿಸು ವೆನು; ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೈನ್ಯಗಳ ಕರ್ತನ ಪರ್ವತವು ಪರಿಶುದ್ಧ ಪರ್ವತ ವೆಂದೂ ಕರೆಯಲ್ಪಡುವದು.
- Hosea 3:5 ಹೋಶೇಯ 3:5ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- Ezekiel 43:12 ಯೆಹೆಜ್ಕೇಲನು 43:12ಇದು ಆ ಆಲಯದ ನ್ಯಾಯಪ್ರಮಾಣವಾಗಿದೆ --ಆ ಪರ್ವತದ ಮೇಲೆಯೂ ಅದರ ಸುತ್ತಲೂ ನಿಗದಿಪಡಿಸಿದವರೆಗೂ ಎಲ್ಲವೂ ಅತ್ಯಂತ ಪರಿಶುದ್ಧ ವಾಗಿದೆ. ಇಗೋ, ಇದೇ ಆ ಆಲಯದ ನ್ಯಾಯ ಪ್ರಮಾಣವಾಗಿದೆ.
- Revelation 21:1–8 ಪ್ರಕಟನೆ 21:1–8ತರುವಾಯ ನೂತನಾಕಾಶವನ್ನೂ ನೂತನ ಭೂಮಿಯನ್ನೂ ನಾನು ಕಂಡೆನು. ಮೊದ ಲಿನ ಆಕಾಶವೂ ಮೊದಲಿನ ಭೂಮಿಯೂ ಗತಿಸಿ ಹೋದವು; ಇನ್ನು ಸಮುದ್ರವಿರುವದೇ ಇಲ್ಲ. ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವದನ್ನು ಯೋಹಾನನೆಂಬ ನಾನು ಕಂಡೆನು; ಅದು ತನ್ನ ಮದಲಿಂಗನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಸಿದ್ಧವಾಗಿತ್ತು. ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣ ವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವದೇ ಇಲ್ಲ. ಮೊದಲಿದ್ದವುಗಳೆಲ್ಲಾ ಇಲ್ಲದೆ ಹೋದವು ಎಂದು ಹೇಳಿತು. ಆಗ ಸಿಂಹಾಸ ನದ ಮೇಲೆ ಕೂತಿದ್ದಾತನು--ಇಗೋ, ಎಲ್ಲವನ್ನು ನಾನು ಹೊಸದು ಮಾಡುತ್ತೇನೆ ಅಂದನು. ಆತನು ನನಗೆ--ಈ ಮಾತುಗಳು ಸತ್ಯವಾದವುಗಳು ನಂಬ ತಕ್ಕವುಗಳೂ ಆಗಿವೆ ಎಂಬದಾಗಿ ಬರೆ ಎಂದು ನನಗೆ ಹೇಳಿದನು. ಇದಲ್ಲದೆ ಆತನು ನನಗೆ--ಎಲ್ಲಾ ಮುಗಿಯಿತು. ನಾನು ಅಲ್ಫಾವೂ ಓಮೆಗವೂ ಆದಿಯೂ ಅಂತ್ಯವೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವದ ನೀರಿನ ಬುಗ್ಗೆಯಿಂದ ನಾನು ನೀರನ್ನು ಉಚಿತವಾಗಿ ಕೊಡುವೆನು. ಜಯಹೊಂದುವವನು ಎಲ್ಲವುಗಳಿಗೆ ಬಾಧ್ಯನಾಗುವನು; ನಾನು ಅವನ ದೇವರಾಗಿರುವೆನು. ಅವನು ನನ್ನ ಮಗನಾಗಿರುವನು. ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
- Malachi 1:11 ಮಲಾಕಿಯ 1:11ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Zechariah 2:11 ಜೆಕರ್ಯ 2:11ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.