Ezekiel · chapter 35 · verse 13
Ezekiel 35:13 in Kannada
ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ಕೊಚ್ಚಿದ್ದನ್ನೂ ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.
Heege nimma baayinda neevu nanage virodhavaagi kochchiddannoo nanage virodhavaagi nimma maatugalinda hechchisiddannoo naanu keliddene.
Ezekiel 35:13 in English
- King James Version (KJV)
- Thus with your mouth ye have boasted against me, and have multiplied your words against me: I have heard [them].
- World English Bible (WEB)
- You have magnified yourselves against me with your mouth, and have multiplied your words against me. I have heard it.”
- American Standard Version (ASV)
- And ye have magnified yourselves against me with your mouth, and have multiplied your words against me: I have heard it.
- Bible in Basic English (BBE)
- And you have made yourselves great against me with your mouths, increasing your words against me; and it has come to my ears.
- Darby Translation (DBY)
- And ye have magnified yourselves against me with your mouth, and have multiplied your words against me: I have heard [them].
- Webster's Bible (WBS)
- Thus with your mouth ye have boasted against me, and have multiplied your words against me: I have heard [them] .
- Young's Literal Translation (YLT)
- And ye magnify yourselves against Me with your mouth, And have made abundant against Me your words, I — I have heard.
Read in context
- 11ಆದದರಿಂದ ದೇವರಾದ ಕರ್ತನು ಹೇಳುತ್ತಾನೆ--ನನ್ನ ಜೀವದಾಣೆ, ನಾನು ನಿನ್ನ ಕೋಪದ ಪ್ರಕಾರವೂ ನೀನು ದ್ವೇಷದಿಂದ ಅವರಿಗೆ ವಿರುದ್ಧವಾಗಿ ನಡೆಸಿದ ಹೊಟ್ಟೇಕಿಚ್ಚಿನ ಪ್ರಕಾರವೂ ನಿನಗೆ ನ್ಯಾಯತೀರಿಸಿದ ಮೇಲೆ ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.
- 12ಆಗ ನಾನೇ ಕರ್ತನೆಂದು ನೀನು ತಿಳಿಯುವಿ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ--ಅವು ಹಾಳಾಗಿವೆ ನಮಗೆ ಆಹಾರವಾಗಿ ಕೊಡಲ್ಪಟ್ಟಿವೆ ಎಂದು ಹೇಳಿ ಮಾತ ನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಕೇಳಿರುವೆನೆಂದು ತಿಳಿಯುವಿ.
- 13ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ಕೊಚ್ಚಿದ್ದನ್ನೂ ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.
- 14ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾವಾಗ ಸಂಪೂರ್ಣ ಭೂಮಿಯು ಸಂತೋಷಪಡು ತ್ತದೋ ಆಗ ನಾನು ನಿನ್ನನ್ನು ಹಾಳುಮಾಡುವೆನು.ಹೇಗೆ ನೀನು ಇಸ್ರಾಯೇಲ್ಯರ ಸ್ವಾತಂತ್ರ್ಯದ ನಾಶನಕ್ಕೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಓ ಸೇಯಾರ್ ಪರ್ವತವೇ ಮತ್ತು ಸಮಸ್ತ ಎದೋಮೇಸಂಪೂರ್ಣವಾಗಿ ಹಾಳಾಗುವಿ; ಆಗ ನಾನೇ ಕರ್ತ ನೆಂದು ನಿಮಗೆ ತಿಳಿಯುವದು.
- 15ಹೇಗೆ ನೀನು ಇಸ್ರಾಯೇಲ್ಯರ ಸ್ವಾತಂತ್ರ್ಯದ ನಾಶನಕ್ಕೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಓ ಸೇಯಾರ್ ಪರ್ವತವೇ ಮತ್ತು ಸಮಸ್ತ ಎದೋಮೇಸಂಪೂರ್ಣವಾಗಿ ಹಾಳಾಗುವಿ; ಆಗ ನಾನೇ ಕರ್ತ ನೆಂದು ನಿಮಗೆ ತಿಳಿಯುವದು.
Cross references
- Daniel 11:36 ದಾನಿಯೇಲನು 11:36ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು; ತನ್ನನ್ನು ತಾನೇ ಹೆಚ್ಚಿಸಿಕೊಂಡು ತನ್ನನ್ನು ಎಲ್ಲಾ ದೇವರುಗಳಿಗೂ ದೊಡ್ಡವನನ್ನಾಗಿ ಮಾಡಿ ಕೊಂಡು ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ ರೋಷವು ತೀರುವ ವರೆಗೂ ವೃದ್ಧಿಯಾಗಿರುವನು; ಯಾಕಂದರೆ ನಿಶ್ಚಯಿ ಸಲ್ಪಟ್ಟದ್ದು ಮಾಡಲ್ಪಡಲೇ ಬೇಕಾಗುವದು.
- Ezekiel 35:12 ಯೆಹೆಜ್ಕೇಲನು 35:12ಆಗ ನಾನೇ ಕರ್ತನೆಂದು ನೀನು ತಿಳಿಯುವಿ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ--ಅವು ಹಾಳಾಗಿವೆ ನಮಗೆ ಆಹಾರವಾಗಿ ಕೊಡಲ್ಪಟ್ಟಿವೆ ಎಂದು ಹೇಳಿ ಮಾತ ನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಕೇಳಿರುವೆನೆಂದು ತಿಳಿಯುವಿ.
- Jeremiah 29:23 ಯೆರೆಮೀಯ 29:23ಅವರು ತಮ್ಮ ನೆರೆಯವರ ಹೆಂಡತಿಯರ ಸಂಗಡ ವ್ಯಭಿಚಾರ ಮಾಡಿ ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ ಇಸ್ರಾಯೇಲಿನಲ್ಲಿ ನೀಚತನವನ್ನು ನಡಿಸಿದರು; ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆಂದು ಕರ್ತನು ಅನ್ನುತ್ತಾನೆ.
- Isaiah 36:20 ಯೆಶಾಯ 36:20ಈ ದೇಶಗಳ ಎಲ್ಲಾ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ ಕರ್ತನು ಯೆರೂಸಲೇಮನ್ನು ನನ್ನ ಕೈಯಿಂದ ಬಿಡಿಸು ವನೋ ಅನ್ನುತ್ತಾನೆ ಎಂದು ಹೇಳಿದನು.
- 1 Samuel 2:3 1 ಸಮುವೇಲನು 2:3ಇನ್ನು ಮೇಲೆ ಗರ್ವದಿಂದ ಮಾತನಾಡಬೇಡಿರಿ. ನಿಮ್ಮ ಬಾಯಿಂದ ಕಠಿಣ ಮಾತು ಹೊರಡಬಾರದು. ಯಾಕಂದರೆ ಕರ್ತನು ತಿಳುವಳಿಕೆಯುಳ್ಳ ದೇವರು. ಆತನಿಂದ ಕ್ರಿಯೆಗಳು ತೂಗಲ್ಪಡುತ್ತವೆ.
- Revelation 13:5–6 ಪ್ರಕಟನೆ 13:5–6ಬಡಾಯಿ ಮಾತುಗಳನ್ನೂ ದೂಷಣೆಯ ಮಾತು ಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು. ನಾಲ್ವತ್ತೆರಡು ತಿಂಗಳುಗಳವರೆಗೆ ಮುಂದುವರಿಯುವ ಹಾಗೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಆಗ ಅದು ದೇವರ ಹೆಸರನ್ನೂ ಆತನ ಗುಡಾರವನ್ನೂ ಪರಲೋಕದಲ್ಲಿ ವಾಸವಾಗಿರುವವರನ್ನೂ ದೂಷಿಸಿ ದ್ದಲ್ಲದೆ ದೇವರಿಗೆ ವಿರೋಧವಾದ ದೂಷಣೆಗೆ ತನ್ನ ಬಾಯಿಯನ್ನು ತೆರೆಯಿತು.
- Job 35:16 ಯೋಬನು 35:16ಆದದರಿಂದ ಯೋಬನು ವ್ಯರ್ಥವಾಗಿ ಬಾಯಿ ತೆರೆದು ತಿಳುವಳಿಕೆ ಇಲ್ಲದೆ ನುಡಿಗಳನ್ನು ಹೆಚ್ಚಿಸುತ್ತಾನೆ.
- Job 34:37 ಯೋಬನು 34:37ತನ್ನ ಪಾಪಕ್ಕೆ ದ್ರೋಹ ವನ್ನು ಕೂಡಿಸುತ್ತಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರೋಧವಾಗಿ ತನ್ನ ಮಾತು ಗಳನ್ನು ಅಧಿಕಮಾಡುತ್ತಾನೆ.
- Isaiah 37:10 ಯೆಶಾಯ 37:10ನೀನು ನಂಬುವ ದೇವರು, ಯೆರೂಸಲೇಮು ಅಶ್ಶೂರದ ಅರಸನಿಗೆ ವಶವಾಗುವದಿಲ್ಲವೆಂದು ಹೇಳಿ ನಿನ್ನನ್ನು ಮೋಸಗೊಳಿಸಾನು;
- Malachi 3:13 ಮಲಾಕಿಯ 3:13ನಿಮ್ಮ ಮಾತುಗಳು ನನಗೆ ವಿರೋಧವಾಗಿ ಬಲವಾಗಿದ್ದವೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ, ನೀವು--ನಿನಗೆ ವಿರೋಧವಾಗಿ ಇಷ್ಟೊಂದು ನಾವು ಏನು ಮಾತಾಡಿದ್ದೇವೆ ಅನ್ನುತ್ತೀರಿ.
- Jude 1:15 ಯೂದನು 1:15ಎಲ್ಲರಿಗೆ ನ್ಯಾಯ ತೀರಿಸುವದಕ್ಕೂ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಆಡಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರಿಗೆ ಮನದಟ್ಟು ಮಾಡುವದಕ್ಕೂ ಬಂದನು ಎಂಬ ದಾಗಿ ಪ್ರವಾದಿಸಿದನು.
- 2 Chronicles 32:19 2 ಪೂರ್ವಕಾಲವೃತ್ತಾಂತ 32:19ಮನುಷ್ಯರ ಕೈ ಕೆಲಸವಾದ ಭೂಮಿಯ ಜನಗಳ ದೇವರುಗಳಿಗೆ ವಿರೋಧವಾಗಿ ಮಾತನಾಡಿದ ಹಾಗೆ ಯೆರೂಸಲೇಮಿನ ದೇವರಿಗೆ ವಿರೋಧವಾಗಿ ಮಾತನಾಡಿದರು.