Malachi · chapter 3 · verse 13
Malachi 3:13 in Kannada
ನಿಮ್ಮ ಮಾತುಗಳು ನನಗೆ ವಿರೋಧವಾಗಿ ಬಲವಾಗಿದ್ದವೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ, ನೀವು--ನಿನಗೆ ವಿರೋಧವಾಗಿ ಇಷ್ಟೊಂದು ನಾವು ಏನು ಮಾತಾಡಿದ್ದೇವೆ ಅನ್ನುತ್ತೀರಿ.
Nimma maatugalu nanage virodhavaagi balavaagiddavendu kartanu heluttaane; aadaagyoo, neevu--ninage virodhavaagi ishtondu naavu enu maataadiddeve annutteeri.
Malachi 3:13 in English
- King James Version (KJV)
- Your words have been stout against me, saith the LORD. Yet ye say, What have we spoken [so much] against thee?
- World English Bible (WEB)
- “Your words have been harsh against me,” says the LORD. “Yet you say, ‘What have we spoken against you?’
- American Standard Version (ASV)
- Your words have been stout against me, saith Jehovah. Yet ye say, What have we spoken against thee?
- Bible in Basic English (BBE)
- Your words have been strong against me, says the Lord. And still you say, What have we said against you?
- Darby Translation (DBY)
- Your words have been stout against me, saith Jehovah; but ye say, What have we been speaking against thee?
- Webster's Bible (WBS)
- Your words have been stout against me, saith the LORD. Yet ye say, What have we spoken [so much] against thee?
- Young's Literal Translation (YLT)
- Hard against Me have been your words, Said Jehovah, and ye have said: 'What have we spoken against Thee?'
Read in context
- 11ಇದಲ್ಲದೆ ನಾನು ನಿಮ್ಮ ನಿಮಿತ್ತ ನುಂಗಿ ಬಿಡುವವನನ್ನು ಗದರಿಸುವೆನು; ಅವನು ನಿಮ್ಮ ಭೂಮಿಯ ಫಲವನ್ನು ಕೆಡಿಸನು; ಇಲ್ಲವೆ ನಿಮ್ಮ ದ್ರಾಕ್ಷೇಬಳ್ಳಿ ಹೊಲದಲ್ಲಿ ತನ್ನ ಫಲ ವನ್ನು ಕಾಲಕ್ಕೆ ಮುಂಚೆ ಉದುರಿಸಿಬಿಡುವದಿಲ್ಲವೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 12ಜನಾಂಗಗಳೆಲ್ಲಾ ನಿಮ್ಮನ್ನು ಧನ್ಯರು ಎಂದು ಕರೆಯುವರು; ಯಾಕಂದರೆ ನೀವು ರಮ್ಯವಾದ ದೇಶವಾಗುವಿರೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 13ನಿಮ್ಮ ಮಾತುಗಳು ನನಗೆ ವಿರೋಧವಾಗಿ ಬಲವಾಗಿದ್ದವೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ, ನೀವು--ನಿನಗೆ ವಿರೋಧವಾಗಿ ಇಷ್ಟೊಂದು ನಾವು ಏನು ಮಾತಾಡಿದ್ದೇವೆ ಅನ್ನುತ್ತೀರಿ.
- 14ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ.
- 15ಈಗ ನಾವು ಗರ್ವಿಷ್ಠ ರನ್ನು ಭಾಗ್ಯವಂತರೆಂದನ್ನುತ್ತೇವೆ; ಹೌದು, ದುಷ್ಟತ್ವ ಮಾಡುವವರು ಅಭಿವೃದ್ಧಿಯಾಗುತ್ತಾರೆ; ಹೌದು, ದೇವರನ್ನು ಪರೀಕ್ಷಿಸುವವರೇ ರಕ್ಷಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದೀರಿ.
Cross references
- Malachi 2:17 ಮಲಾಕಿಯ 2:17ನಿಮ್ಮ ಮಾತುಗಳಿಂದ ಕರ್ತನಿಗೆ ಬೇಸರಮಾಡಿ ದ್ದೀರಿ; ಆದಾಗ್ಯೂ--ನಾವು ಯಾವದರಲ್ಲಿ ಆತನಿಗೆ ಬೇಸರಮಾಡಿದ್ದೇವೆ ಎಂದು ಅನ್ನುತ್ತೀರಿ; ಕೆಟ್ಟದ್ದನ್ನು ಮಾಡುವವರೆಲ್ಲರೂ ಕರ್ತನ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆಂದೂ ನ್ಯಾಯದ ದೇವರು ಎಲ್ಲಿ ಎಂದೂ ನೀವು ಹೇಳುವದರಿಂದಲೇ.
- Isaiah 37:23 ಯೆಶಾಯ 37:23ನೀನು ಯಾರನ್ನು ನಿಂದಿಸಿ ದೂಷಿಸಿದ್ದೀ? ಯಾರಿಗೆ ವಿರೋಧವಾಗಿ ನಿನ್ನ ಸ್ವರವೆತ್ತಿ ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾ ಯೇಲಿನ ಪರಿಶುದ್ಧನಿಗಲ್ಲವೋ?
- Romans 9:20 ರೋಮಾಪುರದವರಿಗೆ 9:20ಆದರೆ ಓ ಮನುಷ್ಯನೇ, ದೇವರಿಗೆ ಎದುರು ಮಾತನಾಡುವದಕ್ಕೆ ನೀನು ಯಾರು? ರೂಪಿಸಲ್ಪಟ್ಟದ್ದು ರೂಪಿಸಿದವನಿಗೆ--ನನ್ನನ್ನು ಹೀಗೇಕೆ ಮಾಡಿದೆ ಎಂದು ಕೇಳುವದುಂಟೇ?
- Malachi 1:6–8 ಮಲಾಕಿಯ 1:6–8ಮಗನು ತಂದೆಯನ್ನು ದಾಸನು ಯಜಮಾನನನ್ನು ಸನ್ಮಾನಿಸುತ್ತಾನೆ; ನಾನು ತಂದೆಯಾಗಿದ್ದರೆ ನನ್ನ ಸನ್ಮಾನ ವೆಲ್ಲಿ? ನಾನು ಯಜಮಾನನಾಗಿದ್ದರೆ ನನ್ನ ಭಯವು ಎಲ್ಲಿ ಎಂದು ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರಾದ ನಿಮಗೆ ಸೈನ್ಯಗಳ ಕರ್ತನು ಹೇಳುತ್ತಾನೆ. ಆದರೆ ನೀವು--ನಿನ್ನ ಹೆಸರನ್ನು ಯಾವದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆಂದು ಹೇಳುತ್ತೀರಿ. ನನ್ನ ಬಲಿಪೀಠದ ಮೇಲೆ ಅಪವಿತ್ರವಾದ ರೊಟ್ಟಿಯನ್ನು ಅರ್ಪಿಸಿ--ಯಾವದರಲ್ಲಿ ನಿನ್ನನ್ನು ನಾವು ಅಪವಿತ್ರ ಮಾಡಿದ್ದೇವೆಂದು ಹೇಳುತ್ತೀರಿ. ಕರ್ತನ ಮೇಜು ಹೀನವಾದದ್ದೆಂದು ನೀವು ಹೇಳುವದರಿಂದಲೇ. ಇದ ಲ್ಲದೆ ನೀವು ಕುರುಡಾದದ್ದನ್ನು ಬಲಿಗಾಗಿ ಅರ್ಪಿಸಿ ದರೆ ಅದು ಕೆಟ್ಟದ್ದಲ್ಲವೋ? ಕುಂಟಾದದ್ದನ್ನೂ ರೋಗ ವುಳ್ಳದ್ದನ್ನೂ ಅರ್ಪಿಸಿದರೆ ಅದು ಕೆಟ್ಟದ್ದಲ್ಲವೋ? ಸೈನ್ಯ ಗಳ ಕರ್ತನು--ಅದನ್ನು ನಿನ್ನ ದೊರೆಗೆ ಅರ್ಪಿಸು, ಅವನು ನಿನಗೆ ಮೆಚ್ಚುವನೋ? ಇಲ್ಲವೆ ನಿನಗೆ ಮುಖ ದಾಕ್ಷಿಣ್ಯ ತೋರಿಸುವನೋ?
- 2 Thessalonians 2:4 2 ಥೆಸಲೊನೀಕದವರಿಗೆ 2:4ಅವನು ದೇವರೆಂದು ಕರೆಯ ಲ್ಪಟ್ಟಾತನನ್ನು ಇಲ್ಲವೆ ಆರಾಧನೆ ಹೊಂದುವಾತನನ್ನು ವಿರೋಧಿಸಿ ಎಲ್ಲವುಗಳ ಮೇಲೆ ತನ್ನನ್ನು ತಾನೇ ಘನತೆಗೇರಿಸಿಕೊಂಡು ದೇವರ ಹಾಗೆ ದೇವಾಲಯದಲ್ಲಿ ಕೂತುಕೊಂಡವನಾಗಿ ತಾನೇ ದೇವರಾಗಿದ್ದಾನೆಂದು ತೋರಿಸಿಕೊಳ್ಳುತ್ತಾನೆ.
- Jeremiah 8:12 ಯೆರೆಮೀಯ 8:12ಇಲ್ಲ, ಸ್ವಲ್ಪ ವಾದರೂ ನಾಚಿಕೆಪಡಲಿಲ್ಲ; ಇಲ್ಲವೆ ಅವರು ಲಜ್ಜೆ ಯನ್ನು ಅರಿಯರು. ಆದದರಿಂದ ಬೀಳುವವರೊಳಗೆ ಅವರು ಬೀಳುವರು; ಅವರು ವಿಚಾರಿಸಲ್ಪಡುವ ಕಾಲದಲ್ಲಿ ಕೆಳಗೆ ಹಾಕಲ್ಪಡು ವರು ಎಂದು ಕರ್ತನು ಹೇಳುತ್ತಾನೆ.
- Job 40:8 ಯೋಬನು 40:8ನೀನು ನನ್ನ ನ್ಯಾಯತೀರ್ವಿಕೆಯನ್ನು ತೆಗೆದುಹಾಕುವಿಯೋ? ನೀನು ನೀತಿವಂತ ನಾಗುವ ಹಾಗೆ ನನ್ನನ್ನು ಖಂಡಿಸುವಿಯೋ?
- Job 34:7–8 ಯೋಬನು 34:7–8ಯೋಬನಂತೆ ಹಾಸ್ಯವನ್ನು ನೀರಿನಂತೆ ಕುಡಿಯುವ ಪುರುಷನು ಯಾರು? ಅವನು ಅಪರಾಧ ಮಾಡು ವವರ ಸಹವಾಸದಲ್ಲಿ ಹೋಗುತ್ತಾ, ದುಷ್ಟ ಜನರ ಸಂಗಡ ನಡೆದುಕೊಳ್ಳುತ್ತಾನೆ.
- 2 Chronicles 32:14–19 2 ಪೂರ್ವಕಾಲವೃತ್ತಾಂತ 32:14–19ನನ್ನ ಪಿತೃಗಳು ನಿರ್ಮೂಲ ಮಾಡಿದ ಆ ಜನಾಂಗಗಳ ಸಮಸ್ತ ದೇವ ರುಗಳಲ್ಲಿ ನನ್ನ ಕೈಯೊಳಗಿಂದ ತನ್ನ ಜನರನ್ನು ಬಿಡಿಸಲು ಸಾಮರ್ಥ್ಯವುಳ್ಳದ್ದು ಯಾವದು? ಹಾಗಾದರೆ ನಿಮ್ಮ ದೇವರು ನನ್ನ ಕೈಯೊಳಗಿಂದ ನಿಮ್ಮನ್ನು ಹೇಗೆ ಬಿಡಿಸ ಬಹುದು? ಆದದರಿಂದ ಹಿಜ್ಕೀಯನು ನಿಮ್ಮನ್ನು ವಂಚಿಸಿ ಈ ಪ್ರಕಾರ ನಿಮ್ಮನ್ನು ಪ್ರೇರೇಪಿಸದಿರಲಿ; ಅವನ ಮಾತು ನಂಬಬೇಡಿರಿ. ಯಾಕಂದರೆ ನನ್ನ ಕೈಯೊಳಗಿಂದಲೂ ನನ್ನ ಪಿತೃಗಳ ಕೈಯೊಳಗಿಂದಲೂ ತಮ್ಮ ಜನರನ್ನು ಬಿಡಿಸಲು ಸಕಲ ಜನಾಂಗ, ರಾಜ್ಯಗಳ ದೇವರುಗಳಲ್ಲಿ ಸಾಮರ್ಥ್ಯವುಳ್ಳ ದೇವರು ಒಂದೂ ಇಲ್ಲ. ನನ್ನ ಕೈಯೊಳಗಿಂದ ನಿಮ್ಮನ್ನು ಬಿಡಿಸಲು ನಿಮ್ಮ ದೇವರು ಎಷ್ಟರವನು ಅನ್ನುತ್ತಾನೆ. ಹೀಗೆ ಅವನ ಸೇವಕರು ಇನ್ನೂ ಕರ್ತನಾದ ದೇವರಿಗೆ ವಿರೋಧ ವಾಗಿಯೂ ಆತನ ಸೇವಕನಾದ ಹೀಜ್ಕೀಯನಿಗೆ ವಿರೋ ಧವಾಗಿಯೂ ಮಾತನಾಡಿದರು. ಇದಲ್ಲದೆ ಅವನು ಇಸ್ರಾಯೇಲಿನ ದೇವರಾದ ಕರ್ತನನ್ನು ನಿಂದಿಸುವ ದಕ್ಕೂ ಆತನಿಗೆ ವಿರೋಧವಾಗಿ ಮಾತನಾಡುವದಕ್ಕೂ ಪತ್ರಗಳನ್ನು ಬರೆದನು. ಏನಂದರೆ--ಇತರ ದೇಶಗಳ ಜನಾಂಗಗಳ ದೇವರುಗಳು ತಮ್ಮ ಜನರನ್ನು ನನ್ನ ಕೈಯೊಳಗಿಂದ ಹೇಗೆ ಬಿಡಿಸಲಿಲ್ಲವೋ ಹಾಗೆಯೇ ಹಿಜ್ಕೀಯನ ದೇವರು ತನ್ನ ಜನರನ್ನು ನನ್ನ ಕೈಯೊಳಗಿಂದ ಬಿಡಿಸಲಾರನು. ಇದಲ್ಲದೆ ಅವರು ಪಟ್ಟಣ ವನ್ನು ಹಿಡಿಯುವ ಹಾಗೆ ಗೋಡೆಯ ಮೇಲೆ ಇರುವ ಯೆರೂಸಲೇಮಿನಲ್ಲಿರುವ ಜನರನ್ನು ಭಯಪಡಿಸುವ ದಕ್ಕೂ ಅವರನ್ನು ಕಳವಳಪಡಿಸುವದಕ್ಕೂ ಯೆಹೂದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿ ದರು. ಮನುಷ್ಯರ ಕೈ ಕೆಲಸವಾದ ಭೂಮಿಯ ಜನಗಳ ದೇವರುಗಳಿಗೆ ವಿರೋಧವಾಗಿ ಮಾತನಾಡಿದ ಹಾಗೆ ಯೆರೂಸಲೇಮಿನ ದೇವರಿಗೆ ವಿರೋಧವಾಗಿ ಮಾತನಾಡಿದರು.
- Exodus 5:2 ವಿಮೋಚನಕಾಂಡ 5:2ಫರೋಹನು--ನಾನು ಆತನ ಸ್ವರಕ್ಕೆ ವಿಧೇಯನಾಗಿ ಇಸ್ರಾಯೇಲ್ಯರನ್ನು ಕಳುಹಿಸಿ ಬಿಡುವಂತೆ ಆ ಕರ್ತನು ಯಾರು? ಆ ಕರ್ತನನ್ನು ನಾನರಿಯೆನು ಮತ್ತು ಇಸ್ರಾಯೇಲ್ಯರನ್ನು ಕಳುಹಿಸುವದಿಲ್ಲ ಅಂದನು.
- Malachi 2:14 ಮಲಾಕಿಯ 2:14ಆದಾಗ್ಯೂ ನೀವು--ಯಾತಕ್ಕೆ ಅನ್ನುತ್ತೀರಿ? ಕರ್ತನು ನಿನಗೂ ನೀನು ವಂಚಿಸಿದ ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿ ದ್ದನು; ಆದಾಗ್ಯೂ ಅವಳು ನಿನ್ನ ಜತೆಯವಳೂ ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದಾಳೆ.
- Isaiah 5:19 ಯೆಶಾಯ 5:19ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ಬೇಗನೆ ಮಾಡಲಿ; ನಾವು ಇಸ್ರಾ ಯೇಲಿನ ಪರಿಶುದ್ಧನ ಆಲೋಚನೆಯನ್ನು ತಿಳುಕೊ ಳ್ಳುವ ಹಾಗೆ ಅದು ಸವಿಾಪಿಸಿ ಬರಲಿ ಎಂದು ಹೇಳು ವವರಿಗೆ ಅಯ್ಯೋ!