Ezekiel · chapter 36 · verse 18
Ezekiel 36:18 in Kannada
ಆದದರಿಂದ ಅವರು ದೇಶದಲ್ಲಿ ಚೆಲ್ಲಿದ ರಕ್ತದ ನಿಮಿತ್ತವಾಗಿಯೂ ಅವರು ಅದನ್ನು ಅಶುದ್ಧಪಡಿಸಿದ ಅವರ ವಿಗ್ರಹಗಳ ನಿಮಿತ್ತವಾಗಿಯೂ ನನ್ನ ರೋಷ ವನ್ನು ಅವರ ಮೇಲೆ ಸುರಿಸಿದೆನು.
Aadadarinda avaru deshadalli chellida raktada nimittavaagiyoo avaru adannu ashuddhapadisida avara vigrahagala nimittavaagiyoo nanna rosha vannu avara mele surisidenu.
Ezekiel 36:18 in English
- King James Version (KJV)
- Wherefore I poured my fury upon them for the blood that they had shed upon the land, and for their idols [wherewith] they had polluted it:
- World English Bible (WEB)
- Therefore I poured out my wrath on them for the blood which they had poured out on the land, and because they had defiled it with their idols.
- American Standard Version (ASV)
- Wherefore I poured out my wrath upon them for the blood which they had poured out upon the land, and because they had defiled it with their idols;
- Bible in Basic English (BBE)
- So I let loose my wrath on them because of those whom they had violently put to death in the land, and because they had made it unclean with their images:
- Darby Translation (DBY)
- And I poured out my fury upon them for the blood that they had shed upon the land, and because they had defiled it with their idols.
- Webster's Bible (WBS)
- Wherefore I poured my fury upon them for the blood that they had shed upon the land, and for their idols [with which] they had polluted it:
- Young's Literal Translation (YLT)
- And I do pour out My fury upon them For the blood that they shed on the land, And with their idols they have defiled it.
Read in context
- 16ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
- 17ಮನುಷ್ಯಪುತ್ರನೇ, ಯಾವಾಗ ಇಸ್ರಾಯೇಲ್ಯರ ಮನೆತನದವರು ಸ್ವಂತ ದೇಶದಲ್ಲಿ ವಾಸಿಸಿದರೋ, ಆಗ ಅವರು ಅದನ್ನು ತಮ್ಮ ಸ್ವಂತ ಮಾರ್ಗಗಳಿಂದಲೂ ದುಷ್ಕಾರ್ಯಗಳಿಂದಲೂ ಅಶುದ್ಧ ಗೊಳಿಸಿದರು. ಅವರ ಆ ದುಷ್ಕಾರ್ಯಗಳು ನನ್ನ ಮುಂದೆ ಮುಟ್ಟಾಗಿರುವವಳ ಅಶುದ್ಧತ್ವದ ಹಾಗಿತ್ತು.
- 18ಆದದರಿಂದ ಅವರು ದೇಶದಲ್ಲಿ ಚೆಲ್ಲಿದ ರಕ್ತದ ನಿಮಿತ್ತವಾಗಿಯೂ ಅವರು ಅದನ್ನು ಅಶುದ್ಧಪಡಿಸಿದ ಅವರ ವಿಗ್ರಹಗಳ ನಿಮಿತ್ತವಾಗಿಯೂ ನನ್ನ ರೋಷ ವನ್ನು ಅವರ ಮೇಲೆ ಸುರಿಸಿದೆನು.
- 19ನಾನು ಅವರನ್ನು ಅನ್ಯಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶ ಗಳಲ್ಲಿ ಚದರಿಹೋದರು; ಅವರ ಮಾರ್ಗಗಳ ದುಷ್ಕ್ರಿ ಯೆಗಳ ಪ್ರಕಾರವಾಗಿ ಅವರಿಗೆ ನಾನು ನ್ಯಾಯ ತೀರಿಸಿದೆನು.
- 20ಅವರು ಆ ಅನ್ಯಜನಾಂಗಗಳೊಳಗೆ ಸೇರಿಕೊಂಡ ಮೇಲೆ--ಇವರೇ ಕರ್ತನ ಜನರು ಮತ್ತು ಇವರು ಆತನ ದೇಶದಿಂದ ಹೊರಟುಹೋದರು ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡುವರು.
Cross references
- 2 Chronicles 34:21 2 ಪೂರ್ವಕಾಲವೃತ್ತಾಂತ 34:21ನೀವು ಹೋಗಿ ನನಗೋಸ್ಕ ರವೂ ಇಸ್ರಾಯೇಲಿನಲ್ಲಿಯೂ ಯೆಹೂದದಲ್ಲಿಯೂ ಉಳಿದವರಿಗೋಸ್ಕರವೂ ಸಿಕ್ಕಿದ ಪುಸ್ತಕದ ಮಾತು ಗಳನ್ನು ಕುರಿತು ಕರ್ತನನ್ನು ವಿಚಾರಿಸಿರಿ. ಯಾಕಂದರೆ ನಮ್ಮ ಪಿತೃಗಳು ಈ ಪುಸ್ತಕದಲ್ಲಿ ಬರೆದ ಎಲ್ಲಾದರ ಪ್ರಕಾರ ಮಾಡಲು ಕರ್ತನ ವಾಕ್ಯವನ್ನು ಕೈಕೊಳ್ಳದೆ ಇದ್ದದರಿಂದ ನಮ್ಮ ಮೇಲೆ ಸುರಿದ ಕರ್ತನ ಕೋಪವು ದೊಡ್ಡದಾಗಿದೆ ಎಂದು ಹೇಳಿದನು.
- Ezekiel 7:8 ಯೆಹೆಜ್ಕೇಲನು 7:8ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ಉಗ್ರವನ್ನು ನಿನ್ನ ಮೇಲೆ ಸುರಿಯುವೆನು; ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಡುವೆನು; ನಾನು ನಿನ್ನ ಮಾರ್ಗಗಳ ಪ್ರಕಾರ ಮುಯ್ಯಿ ತೀರಿಸುವೆನು; ನಿನ್ನ ಎಲ್ಲಾ ಅಸಹ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
- Lamentations 2:4 ಪ್ರಲಾಪಗಳು 2:4ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಮಗಳ ಗುಡಾರದಲ್ಲಿ ಸುರಿದಿದ್ದಾನೆ.
- Lamentations 4:11 ಪ್ರಲಾಪಗಳು 4:11ಕರ್ತನು ತನ್ನ ರೋಷವನ್ನು ತೀರಿಸಿ ದ್ದಾನೆ; ಆತನು ತನ್ನ ಉಗ್ರವಾದ ಕೋಪವನ್ನು ಸುರಿದಿದ್ದಾನೆ; ಚೀಯೋನಿನಲ್ಲಿ ಹೊತ್ತಿಸಿದ ಬೆಂಕಿಯು ಅದರ ಅಸ್ತಿವಾರಗಳನ್ನು ತಿಂದುಬಿಟ್ಟಿತು.
- Jeremiah 7:20 ಯೆರೆಮೀಯ 7:20ಆದದರಿಂದ ಕರ್ತ ನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಈ ಸ್ಥಳದ ಮೇಲೆಯೂ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹೊಲದ ಮರಗಳ ಮೇಲೆಯೂ ಭೂಮಿಯ ಫಲದ ಮೇಲೆಯೂ ನನ್ನ ಕೋಪವೂ ಮತ್ತು ಉಗ್ರತೆಯೂ ಹೊಯ್ಯಲ್ಪಡುವದು; ಅದು ಉರಿಯುವದು ಆರಿಹೋಗುವದಿಲ್ಲ.
- Revelation 14:10 ಪ್ರಕಟನೆ 14:10ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
- Ezekiel 14:19 ಯೆಹೆಜ್ಕೇಲನು 14:19ಇಲ್ಲದಿದ್ದರೆ ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಅದರ ಮೇಲೆ ನನ್ನ ರೋಷ ವನ್ನು ರಕ್ತದಲ್ಲಿ ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಟ್ಟರೆ,
- Jeremiah 44:6 ಯೆರೆಮೀಯ 44:6ಆದದರಿಂದ ನನ್ನ ಉರಿಯೂ ನನ್ನ ಕೋಪವೂ ಹೊಯ್ಯಲ್ಪಟ್ಟು, ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಉರಿಯಿತು; ಅವು ಈ ಹೊತ್ತಿನಂತೆ ಹಾಳೂ ಬೀಡೂ ಆದವು.
- 2 Chronicles 34:26 2 ಪೂರ್ವಕಾಲವೃತ್ತಾಂತ 34:26ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ--ನೀನು ಕೇಳಿದ ಮಾತುಗ ಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--
- Ezekiel 21:31 ಯೆಹೆಜ್ಕೇಲನು 21:31ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರದ ಬೆಂಕಿಯನ್ನು ನಿನ್ನ ಮೇಲೆ ಊದಿ ನಾಶಪಡಿಸುವದರಲ್ಲಿ ಗಟ್ಟಿಗರಾದಂಥ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸು ವೆನು.ನೀನು ಅಗ್ನಿಗೆ ಆಹುತಿಯಾಗುವ ಸೌದೆಯಾ ಗುವಿ, ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವದು; ನೀನು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲವೆಂದು ಕರ್ತನಾದ ನಾನೇ ಹೇಳಿದ್ದೇನೆ.
- Ezekiel 23:37 ಯೆಹೆಜ್ಕೇಲನು 23:37ಹೇಗಂದರೆ, ಅವರು ವ್ಯಭಿಚಾರ ಮಾಡಿದ್ದಾರೆ, ರಕ್ತವು ಅವರ ಕೈಗಳಲ್ಲಿ ಅದೆ; ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಕೊಟ್ಟಿದ್ದಾರೆ.
- Ezekiel 16:36–38 ಯೆಹೆಜ್ಕೇಲನು 16:36–38ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಅಸಹ್ಯವು ಸುರಿಯಲ್ಪಟ್ಟ ಕಾರಣ ದಿಂದಲೂ ನಿನ್ನ ಬೆತ್ತಲೆತನವು ಪ್ರಕಟವಾಗುವಂತೆ ನಿನ್ನ ಪ್ರಿಯರ ಸಂಗಡ ಮಾಡಿದ ವ್ಯಭಿಚಾರದಿಂದಲೂ ನಿನ್ನ ಎಲ್ಲಾ ಅಸಹ್ಯವಾದ ವಿಗ್ರಹಗಳಿಂದಲೂ ನೀನು ಅವರಿಗೆ ಕೊಟ್ಟ ನಿನ್ನ ಮಕ್ಕಳ ರಕ್ತದಿಂದಲೂ ಇಗೋ, ನೀನು ಆನಂದ ಪಟ್ಟವರೊಂದಿಗೆ ಪ್ರೀತಿ ಮಾಡಿದವರೆ ಲ್ಲರನ್ನೂ ಹಗೆಮಾಡಿದವರೆಲ್ಲರನ್ನೂ ಸಹ ಕೂಡಿಸು ವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ ಅವರಿಗೆ ನಿನ್ನ ಬೆತ್ತಲೆಯನ್ನು ಪ್ರಕಟಪಡಿಸು ವೆನು. ಆಗ ಅವರು ನಿನ್ನ ಬೆತ್ತಲೆಯನ್ನು ನೋಡುವರು. ದಾಂಪತ್ಯವನ್ನು ಮುರಿದು ರಕ್ತ ಸುರಿಸುವಂಥ ಹೆಂಗಸರಿಗೆ ವಿಧಿಸುವಂಥ ತಕ್ಕ ದಂಡನೆಗಳನ್ನು ನಿನಗೂ ವಿಧಿಸಿ, ಕೋಪೋದ್ರೇಕದಿಂದಲೂ ರೋಷಾವೇಶ ದಿಂದಲೂ ನಿನಗೆ ರಕ್ತವನ್ನು ಸುರಿಸುವೆನು.