Ezekiel · chapter 7 · verse 8
Ezekiel 7:8 in Kannada
ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ಉಗ್ರವನ್ನು ನಿನ್ನ ಮೇಲೆ ಸುರಿಯುವೆನು; ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಡುವೆನು; ನಾನು ನಿನ್ನ ಮಾರ್ಗಗಳ ಪ್ರಕಾರ ಮುಯ್ಯಿ ತೀರಿಸುವೆನು; ನಿನ್ನ ಎಲ್ಲಾ ಅಸಹ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
Eega svalpa hottinalli nanna ugravannu ninna mele suriyuvenu; nanna kopavannu ninna mele teerisibiduvenu; naanu ninna maargagala prakaara muyyi teerisuvenu; ninna ellaa asahyagala prakaara ninna mele muyyi teerisuvenu.
Ezekiel 7:8 in English
- King James Version (KJV)
- Now will I shortly pour out my fury upon thee, and accomplish mine anger upon thee: and I will judge thee according to thy ways, and will recompense thee for all thine abominations.
- World English Bible (WEB)
- Now I will shortly pour out my wrath on you, and accomplish my anger against you, and will judge you according to your ways. I will bring on you all your abominations.
- American Standard Version (ASV)
- Now will I shortly pour out my wrath upon thee, and accomplish mine anger against thee, and will judge thee according to thy ways; and I will bring upon thee all thine abominations.
- Bible in Basic English (BBE)
- Now, in a little time, I will let loose my passion on you, and give full effect to my wrath against you, judging you for your ways, and sending punishment on you for all your disgusting works.
- Darby Translation (DBY)
- Now will I soon pour out my fury upon thee, and accomplish mine anger against thee; and I will judge thee according to thy ways, and will bring upon thee all thine abominations.
- Webster's Bible (WBS)
- Now will I shortly pour out my fury upon thee, and accomplish my anger upon thee: and I will judge thee according to thy ways, and will recompense thee for all thy abominations.
- Young's Literal Translation (YLT)
- Now, shortly I pour out My fury on thee, And have completed Mine anger against thee, And judged thee according to thy ways, And set against thee all thine abominations.
Read in context
- 6ಅಂತ್ಯವು ಬಂತು. ಅಂತ್ಯವು ಬಂದು ಅದು ನಿನಗೋಸ್ಕರ ಕಾಯುತ್ತಾ ಇದೆ. ಇಗೋ, ಅದು ಬಂತು.
- 7ಓ ದೇಶದಲ್ಲಿ ವಾಸಿಸುವವನೇ, ನಿನಗಾಗಿ ಮುಂಜಾನೆ ಬಂತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು ಮತ್ತು ಪರ್ವತಗಳ ಆರ್ಭಟದ ಧ್ವನಿ ಇಲ್ಲ.
- 8ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ಉಗ್ರವನ್ನು ನಿನ್ನ ಮೇಲೆ ಸುರಿಯುವೆನು; ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಡುವೆನು; ನಾನು ನಿನ್ನ ಮಾರ್ಗಗಳ ಪ್ರಕಾರ ಮುಯ್ಯಿ ತೀರಿಸುವೆನು; ನಿನ್ನ ಎಲ್ಲಾ ಅಸಹ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
- 9ನನ್ನ ಕಣ್ಣು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸುವದೂ ಇಲ್ಲ, ನಿನ್ನ ಮಾರ್ಗಗಳಿಗೂ ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕದ್ದನ್ನು ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ಕರ್ತನಾದ ನಾನೇ ಹೊಡೆಯುತ್ತಿರುವನೆಂದು ನಿನಗೆ ತಿಳಿಯುವದು.
- 10ಇಗೋ, ಆ ದಿನವು ಬಂತು, ಮುಂಜಾನೆ ಹೊರಟುಹೋಯಿತು. ಕೋಲು ಚಿಗು ರಿತು, ಗರ್ವ ಅರಳಿತು.
Cross references
- Ezekiel 14:19 ಯೆಹೆಜ್ಕೇಲನು 14:19ಇಲ್ಲದಿದ್ದರೆ ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಅದರ ಮೇಲೆ ನನ್ನ ರೋಷ ವನ್ನು ರಕ್ತದಲ್ಲಿ ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಟ್ಟರೆ,
- Ezekiel 9:8 ಯೆಹೆಜ್ಕೇಲನು 9:8ಅವರು ಹತಮಾಡುತ್ತಿರುವಾಗ ನಾನು ಬಿಡಿಸಲ್ಪಟ್ಟೆನು. ಆಗ ನಾನು ಮೋರೆ ಕೆಳಗಾಗಿ ಬಿದ್ದು ಕೂಗಿ--ಹಾ, ದೇವರಾದ ಕರ್ತನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನು ಸುರಿಯುವದರಲ್ಲಿಯೇ ಇಸ್ರಾ ಯೇಲ್ಯರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿಯಾ ಎಂದೆನು.
- Ezekiel 20:8 ಯೆಹೆಜ್ಕೇಲನು 20:8ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು; ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ತಮ್ಮ ಕಣ್ಣುಗಳಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ; ಅವರು ಐಗುಪ್ತದ ವಿಗ್ರಹಗಳನ್ನು ಬಿಡಲಿಲ್ಲ; ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಐಗುಪ್ತದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.
- Nahum 1:6 ನಹೂಮ 1:6ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
- Ezekiel 20:21 ಯೆಹೆಜ್ಕೇಲನು 20:21ಆದಾಗ್ಯೂ ಮಕ್ಕಳು ನನಗೆ ವಿರೋಧವಾಗಿ ತಿರುಗಿ ಬಿದ್ದರು; ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ನನ್ನ ನ್ಯಾಯಗಳನ್ನು ಕೈಕೊಂಡುಮಾಡಲಿಲ್ಲ; ನನ್ನ ಸಬ್ಬತ್ತುಗಳನ್ನು ಅಪವಿತ್ರ ಪಡಿಸಿದಾಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ ನನ್ನ ಕೋಪ ವನ್ನು ಅರಣ್ಯದಲ್ಲಿ ಅವರ ಮೇಲೆ ತೀರಿಸಿಬಿಡುವೆ ನೆಂದೂ ಹೇಳಿದೆನು.
- Isaiah 42:25 ಯೆಶಾಯ 42:25ಆದದರಿಂದ ಆತನು ತನ್ನ ಯುದ್ದದ ರೌದ್ರವನ್ನು ಮತ್ತು ರೋಷಾಗ್ನಿಯನ್ನು ಅವನ ಮೇಲೆ ಸುರಿಸಿದನು. ಅದು ಅವನ ಸುತ್ತಲೂ ಉರಿಯು ಹತ್ತಿದರೂ ಅವನಿಗೆ ತಿಳಿಯಲಿಲ್ಲ; ಅದು ಅವನನ್ನು ಸುಟ್ಟರೂ ಅವನು ಮನಸ್ಸಿಗೆ ತಂದುಕೊಳ್ಳಲಿಲ್ಲ.
- Ezekiel 20:33 ಯೆಹೆಜ್ಕೇಲನು 20:33ದೇವರಾದ ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂ ದಲೂ ಚಾಚಿದ ತೋಳಿನಿಂದಲೂ ಸುರಿಸಿದ ರೋಷ ದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡಿಸು ತ್ತೇನೆ.
- Ezekiel 20:13 ಯೆಹೆಜ್ಕೇಲನು 20:13ಆದರೆ ಇಸ್ರಾಯೇಲಿನ ಮನೆತನದವರು ಅರಣ್ಯದಲ್ಲಿಯೂ ನನಗೆ ವಿರುದ್ಧ ವಾಗಿ ತಿರುಗಿಬಿದ್ದರು; ಆಜ್ಞಾವಿಧಿಗಳನ್ನು ಅನುಸರಿಸುವ ಮನುಷ್ಯನು ಬದುಕುವನು. ಅವುಗಳಲ್ಲಿ ನಡೆಯದೆ ನನ್ನ ನ್ಯಾಯಗಳನ್ನು ಅಸಡ್ಡೆ ಮಾಡಿ ನನ್ನ ಸಬ್ಬತ್ ದಿನಗಳನ್ನು ಸಹ ಬಹಳವಾಗಿ ಅಪವಿತ್ರಪಡಿಸಿದರು; ಆಗ ನಾನು ಅವರ ಮೇಲೆ ನನ್ನ ರೋಷದಿಂದ ದಹಿಸಿಬಿಡುವೆನೆಂದು ಹೇಳಿದೆನು.
- Hosea 5:10 ಹೋಶೇಯ 5:10ಯೆಹೂದದ ಪ್ರಭುಗಳು ಮೇರೆಗಳನ್ನು ಬಿಡಿಸುವವರ ಹಾಗೆ ಇದ್ದರು; ಆದದರಿಂದ ಅವರ ಮೇಲೆ ನೀರಿನ ಹಾಗೆ ನನ್ನ ಕೋಪವನ್ನು ಸುರಿಸುವೆನು.
- Revelation 14:10 ಪ್ರಕಟನೆ 14:10ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
- Jeremiah 7:20 ಯೆರೆಮೀಯ 7:20ಆದದರಿಂದ ಕರ್ತ ನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಈ ಸ್ಥಳದ ಮೇಲೆಯೂ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹೊಲದ ಮರಗಳ ಮೇಲೆಯೂ ಭೂಮಿಯ ಫಲದ ಮೇಲೆಯೂ ನನ್ನ ಕೋಪವೂ ಮತ್ತು ಉಗ್ರತೆಯೂ ಹೊಯ್ಯಲ್ಪಡುವದು; ಅದು ಉರಿಯುವದು ಆರಿಹೋಗುವದಿಲ್ಲ.
- 2 Chronicles 34:21 2 ಪೂರ್ವಕಾಲವೃತ್ತಾಂತ 34:21ನೀವು ಹೋಗಿ ನನಗೋಸ್ಕ ರವೂ ಇಸ್ರಾಯೇಲಿನಲ್ಲಿಯೂ ಯೆಹೂದದಲ್ಲಿಯೂ ಉಳಿದವರಿಗೋಸ್ಕರವೂ ಸಿಕ್ಕಿದ ಪುಸ್ತಕದ ಮಾತು ಗಳನ್ನು ಕುರಿತು ಕರ್ತನನ್ನು ವಿಚಾರಿಸಿರಿ. ಯಾಕಂದರೆ ನಮ್ಮ ಪಿತೃಗಳು ಈ ಪುಸ್ತಕದಲ್ಲಿ ಬರೆದ ಎಲ್ಲಾದರ ಪ್ರಕಾರ ಮಾಡಲು ಕರ್ತನ ವಾಕ್ಯವನ್ನು ಕೈಕೊಳ್ಳದೆ ಇದ್ದದರಿಂದ ನಮ್ಮ ಮೇಲೆ ಸುರಿದ ಕರ್ತನ ಕೋಪವು ದೊಡ್ಡದಾಗಿದೆ ಎಂದು ಹೇಳಿದನು.