Ezekiel · chapter 36 · verse 38
Ezekiel 36:38 in Kannada
ಪರಿ ಶುದ್ಧ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು; ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವವು; ನಾನೇ ಕರ್ತನೆಂದು ಅವರಿಗೆ ತಿಳಿಯುವದು.
Pari shuddha mandeya haageyoo yeroosalemina parishuddha habbagala mandeya haageyoo iruvaru; aadakaarana beedaada pattanagalu manushyara mandegalinda tumbuvavu; naane kartanendu avarige tiliyuvadu.
Ezekiel 36:38 in English
- King James Version (KJV)
- As the holy flock, as the flock of Jerusalem in her solemn feasts; so shall the waste cities be filled with flocks of men: and they shall know that I [am] the LORD.
- World English Bible (WEB)
- As the flock for sacrifice, as the flock of Jerusalem in her appointed feasts, so the waste cities will be filled with flocks of men. Then they will know that I am the LORD.’”
- American Standard Version (ASV)
- As the flock for sacrifice, as the flock of Jerusalem in her appointed feasts, so shall the waste cities be filled with flocks of men; and they shall know that I am Jehovah.
- Bible in Basic English (BBE)
- Like sheep for the offerings, like the sheep of Jerusalem at her fixed feasts, so the unpeopled towns will be made full of men: and they will be certain that I am the Lord.
- Darby Translation (DBY)
- As the holy flock, as the flock of Jerusalem in her set feasts, so shall the waste cities be filled with flocks of men: and they shall know that I [am] Jehovah.
- Webster's Bible (WBS)
- As the holy flock, as the flock of Jerusalem in her solemn feasts; so shall the waste cities be filled with flocks of men: and they shall know that I [am] the LORD.
- Young's Literal Translation (YLT)
- As a flock of holy ones, as a flock of Jerusalem, In her appointed seasons, So are the waste cities full of flocks of men, And they have known that I [am] Jehovah!'
Read in context
- 36ಆಮೇಲೆ ನಿಮ್ಮ ಸುತ್ತಲೂ ಉಳಿದಿರುವ ಅನ್ಯಜನಾಂಗಗಳು ನಶಿಸಿ ಹೋಗಿರುವ ಸ್ಥಳಗಳನ್ನು ಮತ್ತು ಹಾಳಾಗಿರುವ ಸ್ಥಳದಲ್ಲಿ ಗಿಡ ನೆಟ್ಟ ವನು ಕರ್ತನಾದ ನಾನೇ ಎಂದು ತಿಳಿಯುವರು; ಕರ್ತನಾದ ನಾನೇ ಇದನ್ನು ಹೇಳಿದ್ದೇನೆ, ನಾನೇ ಇದನ್ನು ಮಾಡುತ್ತೇನೆ.
- 37ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇದನ್ನು ಅವರಿಗೆ ಮಾಡಲು ನಾನಿನ್ನೂ ಇಸ್ರಾಯೇಲನ ಮನೆ ತನದವರಿಂದ ವಿಚಾರಿಸುವೆನು; ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.ಪರಿ ಶುದ್ಧ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು; ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವವು; ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- 38ಪರಿ ಶುದ್ಧ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು; ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವವು; ನಾನೇ ಕರ್ತನೆಂದು ಅವರಿಗೆ ತಿಳಿಯುವದು.
Cross references
- Acts 2:5–11 ಅಪೊಸ್ತಲರ ಕೃತ್ಯಗಳು 2:5–11ಆಕಾಶದ ಕೆಳಗಿರುವ ಪ್ರತಿಯೊಂದು ಜನಾಂಗದವರೊಳಗಿಂದ (ಬಂದಿದ್ದ) ಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸ ಮಾಡುತ್ತಿದ್ದರು ಆಗ ಈ ಶಬ್ದವು ಬಹು ದೂರದವರೆಗೆ ಕೇಳಿಸಿದ್ದರಿಂದ ಜನಸಮೂಹವು ಕೂಡಿ ಬಂದು ಪ್ರತಿಯೊಬ್ಬನು ತನ್ನ ತನ್ನ ಸ್ವಭಾಷೆಯಲ್ಲಿ ಅವರು ಮಾತನಾಡಿದ್ದನ್ನು ಕೇಳಿ ಭ್ರಮೆಗೊಂಡರು. ಅವರು ಆಶ್ಚರ್ಯಪಟ್ಟು ಬೆರ ಗಾಗಿ--ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ? ಹಾಗಾದರೆ ಪ್ರತಿಯೊ ಬ್ಬನು ನಮ್ಮ ಸ್ವಂತ ಹುಟ್ಟುಭಾಷೆಯಲ್ಲಿ ಮಾತನಾಡು ವದನ್ನು ನಾವು ಕೇಳುವದು ಹೇಗೆ? ಪಾರ್ಥ್ಯರೂ ಮೇದ್ಯರೂ ಎಲಾಮ್ಯರೂ ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ, ಫ್ರುಗ್ಯ, ಪಂಫುಲ್ಯ, ಐಗುಪ್ತದಲ್ಲಿದ್ದವರು, ಕುರೇನದ ಮಗ್ಗುಲಲ್ಲಿ ರುವ ಲಿಬ್ಯದ ಪ್ರಾಂತ್ಯದವರು, ರೋಮದ ಪ್ರವಾಸಿ ಗಳು, ಯೆಹೂದ್ಯರು, ಯೆಹೂದ್ಯ ಮತಾವಲಂಬಿಗಳು, ಕ್ರೇತ್ಯರು ಮತ್ತು ಅರಬಿಯರು ಆಗಿರುವ ನಾವು ನಮ್ಮ ಭಾಷೆಗಳಲ್ಲಿ ದೇವರ ಮಹತ್ಕಾರ್ಯಗಳನ್ನು ಇವರು ಹೇಳುವದನ್ನು ಕೇಳುತ್ತೇವೆ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
- John 10:16 ಯೋಹಾನನು 10:16ಇದಲ್ಲದೆ ಈ ಹಟ್ಟಿಗೆ ಸೇರದ ಬೇರೆ ಕುರಿಗಳು ನನಗುಂಟು; ಅವುಗಳನ್ನು ಸಹ ನಾನು ತರಬೇಕು ಮತ್ತು ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು ಮತ್ತು ಒಬ್ಬನೇ ಕುರುಬನು ಇರುವನು.
- 1 Kings 8:63 1 ಅರಸುಗಳು 8:63ಸೊಲೊಮೋನನು ಕರ್ತನಿಗೆ ಅರ್ಪಿಸಿದ ಸಮಾ ಧಾನದ ಬಲಿಗಳಿಗೋಸ್ಕರ ಇಪ್ಪತ್ತೆರಡು ಸಾವಿರ ಎತ್ತು ಗಳನ್ನೂ ಲಕ್ಷದ ಇಪ್ಪತ್ತು ಸಾವಿರ ಕುರಿಗಳನ್ನೂ ಅರ್ಪಿಸಿದನು. ಹೀಗೆಯೇ ಅರಸನೂ ಇಸ್ರಾಯೇಲಿನ ಸಮಸ್ತ ಮಕ್ಕಳೂ ಕರ್ತನ ಮಂದಿರವನ್ನು ಪ್ರತಿಷ್ಠೆ ಮಾಡಿದರು.
- Ezekiel 36:33–35 ಯೆಹೆಜ್ಕೇಲನು 36:33–35ದೇವ ರಾದ ಕರ್ತನು ಹೀಗೆ ಹೇಳುತ್ತಾನೆ; ನಾನು ನಿಮ್ಮ ಎಲ್ಲಾ ಅಕ್ರಮಗಳಿಂದ ನಿಮ್ಮನ್ನು ಶುದ್ಧಮಾಡುವ ಆ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸು ವೆನು; ಹಾಳಾಗಿರುವ ಸ್ಥಳಗಳೂ ಸಹ ಕಟ್ಟಲ್ಪಡುವವು. ದೇಶವು ಅಲ್ಲಿ ಹಾದುಹೋಗುವ ಜನರೆಲ್ಲರ ಮುಂದೆ ಬೀಡಾಗಿ ಕಾಣದೆ ಉಳುಮೆಗೊಂಡಿರುವದು. ಹಾಳಾಗಿದ್ದ ಈ ದೇಶವು ಏದೆನಿನ ಉದ್ಯಾನವನದ ಹಾಗಾಯಿತೆಂದು ಮತ್ತು ಹಾಳಾಗಿ ಬಿದ್ದುಹೋಗಿ ಬೀಡಾಗಿ ನಶಿಸಿ ಹೋಗಿರುವ ಪಟ್ಟಣಗಳು ನಾಡಾಗಿ ಕೋಟೆಗಳಿಂದಲೂ ನಿವಾಸಿಗಳಿಂದಲೂ ತುಂಬಿವೆ ಎಂದು ಹೇಳುವರು.
- Zechariah 8:19–23 ಜೆಕರ್ಯ 8:19–23ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾಲ್ಕನೇ ತಿಂಗಳಿನ ಉಪವಾಸವು, ಐದನೆ ಯದು, ಏಳನೆಯದು, ಹತ್ತನೆಯದು, ಯೆಹೂದದ ಮನೆತನದವರಿಗೆ ಸಂತೋಷವೂ ಸಂಭ್ರಮವೂ ಆನಂದವಾದ ಹಬ್ಬಗಳೂ ಆಗುವವು; ಆದರೆ ಸತ್ಯ ವನ್ನೂ ಸಮಾಧಾನವನ್ನೂ ಪ್ರೀತಿಮಾಡಿರಿ. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು; ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು. ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
- Revelation 7:4–9 ಪ್ರಕಟನೆ 7:4–9ಮುದ್ರೆ ಹೊಂದಿದವರ ಸಂಖ್ಯೆಯನ್ನು ನಾನು ಕೇಳಿದೆನು; ಇಸ್ರಾಯೇಲ್ಯನ ಮಕ್ಕಳ ಗೋತ್ರದವರಲ್ಲಿ ಮುದ್ರೆಯನ್ನು ಹೊಂದಿದವರು ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ. ಯೂದನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ರೂಬೇನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಗಾದನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಅಷೇರನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ನೆಫ್ತಲೀಮನ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಮನಸ್ಸೆಯ ಗೋತ್ರದವ ರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಸಿಮೆ ಯೋನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ಲೇವಿಯ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಇಸ್ಸಾಕಾರನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಜೆಬುಲೂನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಯೋಸೇಫನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಬೆನ್ಯಾವಿಾನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡುಸಾವಿರ. ಇದಾದ ಮೇಲೆ ಇಗೋ, ನಾನು ನೋಡಲಾಗಿ ಸಮಸ್ತ ಜನಾಂಗ ಕುಲ ಪ್ರಜೆ ಭಾಷೆಗಳೊಳಗಿಂದ ಯಾರೂ ಎಣಿಸಲಾಗದಂತ ಮಹಾ ಸಮೂಹವು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡವರಾಗಿ ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಸಿಂಹಾಸನದ ಮುಂದೆಯೂ ಕುರಿಮರಿಯಾದಾತನ ಮುಂದೆಯೂ
- Exodus 34:23 ವಿಮೋಚನಕಾಂಡ 34:23ವರುಷಕ್ಕೆ ಮೂರುಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಕರ್ತನಾದ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು.
- Ezekiel 34:31 ಯೆಹೆಜ್ಕೇಲನು 34:31ನನ್ನ ಕುರಿಗಳೂ ನನ್ನ ಮೇವಿನ ಮಂದೆಯೂ ಆಗಿರುವ ನೀವು ನರಪ್ರಾಣಿಗಳು. ನಾನು ನಿಮ್ಮ ದೇವರು ಎಂದು ದೇವರಾದ ಕರ್ತನು ಹೇಳುತ್ತಾನೆ.
- Jeremiah 31:27–28 ಯೆರೆಮೀಯ 31:27–28ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಇಸ್ರಾಯೇಲಿನ ಮನೆಯನ್ನೂ ಯೆಹೂದನ ಮನೆಯನ್ನೂ ಮನುಷ್ಯನ ಸಂತತಿಯಿಂದಲೂ ಮೃಗದ ಸಂತತಿಯಿಂದಲೂ ಬಿತ್ತು ವೆನು. ನಾನು ಕೀಳುವದಕ್ಕೂ ಮುರಿಯುವದಕ್ಕೂ ಕೆಡವುದಕ್ಕೂ ನಾಶಮಾಡು ವದಕ್ಕೂ ಕುಗ್ಗಿಸುವದಕ್ಕೂ ಅವರ ವಿಷಯ ಹೇಗೆ ಎಚ್ಚರವಾಗಿದ್ದೆನೋ ಹಾಗೆಯೇ ಕಟ್ಟುವದಕ್ಕೂ ನೆಡು ವದಕ್ಕೂ ಅವರನ್ನು ಕಾಯುವೆ ನೆಂದು ಕರ್ತನು ಅನ್ನುತ್ತಾನೆ.
- Jeremiah 30:19 ಯೆರೆಮೀಯ 30:19ಅವುಗಳೊಳಗಿಂದ ಕೃತಜ್ಞತಾ ಸ್ತೋತ್ರವೂ ಸಂತೋ ಷಪಡುವವರ ಸ್ವರವೂ ಹೊರಡುವದು; ಅವರನ್ನು ಅಭಿವೃದ್ಧಿಮಾಡುವೆನು; ಅವರು ಕೊಂಚವಾಗಿರರು, ಅವರು ಅಲ್ಪವಾಗದ ಹಾಗೆ ಅವರಿಗೆ ಘನವನ್ನು ಕೊಡುವೆನು.
- 2 Chronicles 7:8 2 ಪೂರ್ವಕಾಲವೃತ್ತಾಂತ 7:8ಅದೇ ಕಾಲ ದಲ್ಲಿ ಸೊಲೊಮೋನನು ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತ ನದಿಯ ವರೆಗೆ ಇರುವ ಮಹಾ ಸಭೆಯಾದ ಸಮಸ್ತ ಇಸ್ರಾಯೇಲ್ಯರು ಏಳು ದಿವಸ ಹಬ್ಬವನ್ನು ಮಾಡಿದರು.
- 2 Chronicles 30:21–27 2 ಪೂರ್ವಕಾಲವೃತ್ತಾಂತ 30:21–27ಯೆರೂಸಲೇಮಿನಲ್ಲಿದ್ದ ಇಸ್ರಾಯೇಲಿನ ಮಕ್ಕಳು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಇದಲ್ಲದೆ ಲೇವಿ ಯರೂ ಯಾಜಕರೂ ಮಹಾಶಬ್ದದ ವಾದ್ಯಗಳಿಂದ ಕರ್ತನಿಗೆ ಹಾಡಿ ಪ್ರತಿ ದಿನದಲ್ಲಿಯೂ ಕರ್ತನನ್ನು ಸ್ತುತಿಸಿದರು. ಇದಲ್ಲದೆ ಹಿಜ್ಕೀಯನು ಕರ್ತನ ಉತ್ತ ಮವಾದ ಬೋಧನೆಯನ್ನು ಬೋಧಿಸಿದ ಸಮಸ್ತ ಲೇವಿ ಯರಿಗೆ ಸಮಾಧಾನವಾಗಿ ಮಾತನಾಡಿದನು. ಅವರು ಹಬ್ಬವನ್ನು ಏಳು ದಿನಗಳ ಪರ್ಯಂತರ ಭೋಜನ ಮಾಡುತ್ತಾ ಸಮಾಧಾನದ ಬಲಿಗಳನ್ನು ಅರ್ಪಿಸುತ್ತಾ ತಮ್ಮ ಪಿತೃಗಳ ದೇವರಾದ ಕರ್ತನಿಗೆ ಅರಿಕೆಮಾಡುತ್ತಾ ಆಚರಿಸಿದ್ದರು. ಆದರೆ ಸಮೂಹವೆಲ್ಲಾ ಮತ್ತೂ ಏಳು ದಿವಸ ಆಚರಿಸುವದಕ್ಕೆ ಯೋಚಿಸಿಕೊಂಡ ಮೇಲೆ ಏಳು ದಿವಸಗಳು ಸಂತೋಷವಾಗಿ ಆಚರಿಸಿದರು. ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪರಿಶುದ್ಧ ಮಾಡಿ ಕೊಂಡರು. ಯೆಹೂದದ ಸಭೆಯವರೆ ಲ್ಲರೂ ಯಾಜಕರೂ ಲೇವಿಯರೂ ಇಸ್ರಾಯೇಲಿನಿಂದ ಬಂದ ಸಮಸ್ತ ಸಭೆಯೂ ಇಸ್ರಾಯೇಲಿನ ದೇಶದಿಂದ ಬಂದ ಪರದೇಶಿಗಳೂ ಯೆಹೂದದಲ್ಲಿ ವಾಸವಾಗಿರುವವರೂ ಸಂತೋಷಪಟ್ಟರು. ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನ ಕಾಲ ಮೊದಲುಗೊಂಡು ಯೆರೂ ಸಲೇಮಿನಲ್ಲಿ ಇದರ ಹಾಗೆ ನಡೆದಿರಲಿಲ್ಲವಾದದ ರಿಂದ ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು.ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು. ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು.