John · chapter 10 · verse 16
John 10:16 in Kannada
ಇದಲ್ಲದೆ ಈ ಹಟ್ಟಿಗೆ ಸೇರದ ಬೇರೆ ಕುರಿಗಳು ನನಗುಂಟು; ಅವುಗಳನ್ನು ಸಹ ನಾನು ತರಬೇಕು ಮತ್ತು ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು ಮತ್ತು ಒಬ್ಬನೇ ಕುರುಬನು ಇರುವನು.
Idallade ee hattige serada bere kurigalu nanaguntu; avugalannu saha naanu tarabeku mattu avu nanna svarakke kivigoduvavu; aaga onde hindu aaguvadu mattu obbane kurubanu iruvanu.
John 10:16 in English
- King James Version (KJV)
- And other sheep I have, which are not of this fold: them also I must bring, and they shall hear my voice; and there shall be one fold, [and] one shepherd.
- World English Bible (WEB)
- I have other sheep which are not of this fold. I must bring them also, and they will hear my voice. They will become one flock with one shepherd.
- American Standard Version (ASV)
- And other sheep I have, which are not of this fold: them also I must bring, and they shall hear my voice; and they shall become one flock, one shepherd.
- Bible in Basic English (BBE)
- And I have other sheep which are not of this field: I will be their guide in the same way, and they will give ear to my voice, so there will be one flock and one keeper.
- Darby Translation (DBY)
- And I have other sheep which are not of this fold: those also I must bring, and they shall hear my voice; and there shall be one flock, one shepherd.
- Webster's Bible (WBS)
- And other sheep I have which are not of this fold: them also I must bring, and they shall hear my voice; and there shall be one fold, [and] one shepherd.
- Young's Literal Translation (YLT)
- and other sheep I have that are not of this fold, these also it behoveth me to bring, and my voice they will hear, and there shall become one flock — one shepherd.
Read in context
- 14ನಾನೇ ಒಳ್ಳೇ ಕುರುಬನು; ನನ್ನ ಕುರಿಗಳನ್ನು ನಾನು ಬಲ್ಲೆನು. ನನ್ನ ಕುರಿಗಳು ನನ್ನನ್ನು ತಿಳಿದವೆ.
- 15ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ.
- 16ಇದಲ್ಲದೆ ಈ ಹಟ್ಟಿಗೆ ಸೇರದ ಬೇರೆ ಕುರಿಗಳು ನನಗುಂಟು; ಅವುಗಳನ್ನು ಸಹ ನಾನು ತರಬೇಕು ಮತ್ತು ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು ಮತ್ತು ಒಬ್ಬನೇ ಕುರುಬನು ಇರುವನು.
- 17ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ.
- 18ಯಾವ ಮನುಷ್ಯನಾದರೂ ಅದನ್ನು ನನ್ನಿಂದ ತೆಗೆಯುವದಿಲ್ಲ; ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ನಾನು ಅದನ್ನು ಕೊಡುವದಕ್ಕೆ ನನಗೆ ಅಧಿಕಾರವಿದೆ; ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರವಿದೆ. ಈ ಅಪ್ಪಣೆಯನ್ನು ನಾನು ನನ್ನ ತಂದೆ ಯಿಂದ ಹೊಂದಿದ್ದೇನೆ ಅಂದನು.
Cross references
- Isaiah 56:8 ಯೆಶಾಯ 56:8ಇಸ್ರಾಯೇಲಿನ ತಳ್ಳಲ್ಪ ಟ್ಟವರನ್ನು ಕೂಡಿಸುವಂಥ ಕರ್ತನಾದ ದೇವರು ಹೇಳುವದೇನಂದರೆ--ನಾನು ಕೂಡಿಸಿದ ಇಸ್ರಾ ಯೇಲ್ಯರೊಂದಿಗೆ ಇನ್ನು ಹಲವರನ್ನು ಕೂಡಿಸುವೆನು ಎಂದು ಹೇಳುತ್ತಾನೆ.
- John 11:52 ಯೋಹಾನನು 11:52ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೂ ಆತನು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು.
- 1 Peter 2:25 1 ಪೇತ್ರನು 2:25ನೀವು ಕುರಿಗಳಂತೆ ದಾರಿ ತಪ್ಪಿದವರಾಗಿದ್ದೀರಿ; ಆದರೆ ಈಗ ನೀವು ತಿರಿಗಿ ನಿಮ್ಮ ಆತ್ಮಗಳ ಕುರುಬನೂ ಅಧ್ಯಕ್ಷನೂ ಆಗಿರುವಾತನ ಬಳಿಗೆ ಬಂದಿದ್ದೀರಿ.
- Ezekiel 34:23 ಯೆಹೆಜ್ಕೇಲನು 34:23ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
- Ezekiel 37:24 ಯೆಹೆಜ್ಕೇಲನು 37:24ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು; ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು ನನ್ನ ನ್ಯಾಯನಿಯಮ ಗಳನ್ನೇ ಅನುಸರಿಸುವಂತೆ ಮಾಡುವೆನು.
- Ephesians 2:13–18 ಎಫೆಸದವರಿಗೆ 2:13–18ಈಗಲಾ ದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸವಿಾಪಸ್ಥ ರಾದಿರಿ. ನಿಮ್ಮನ್ನೂ ನಮ್ಮನ್ನೂ ಒಂದು ಮಾಡಿದ ಆತನೇ ನಮ್ಮ ಸಮಾಧಾನವಾಗಿ ನಮ್ಮಿಬ್ಬರನ್ನು ಅಗಲಿ ಸಿದ ಅಡ್ಡಗೋಡೆಯನ್ನು ಆತನು ಕೆಡವಿಹಾಕಿದನು. ಆತನು ಇದ್ದ ದ್ವೇಷವನ್ನು ಅಂದರೆ ಶಾಸನಗಳ ಆಜ್ಞೆಗಳುಳ್ಳ ನ್ಯಾಯಪ್ರಮಾಣವನ್ನು ತನ್ನ ಶರೀರದ ಮೂಲಕ ರದ್ದುಗೊಳಿಸಿ ಸಮಾಧಾನ ಮಾಡುವವನಾಗಿ ಉಭಯರನ್ನು ತನ್ನಲ್ಲಿ ಒಬ್ಬ ನೂತನ ಪುರಷನನ್ನಾಗಿ ಮಾಡಿದನು. ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಅದರಿಂದ ಉಭಯರನ್ನು ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನ ಪಡಿಸಿದ್ದಾನೆ. ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು. ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು.
- 1 Peter 2:10 1 ಪೇತ್ರನು 2:10ಮೊದಲು ನೀವು ಪ್ರಜೆಯಾಗಿರಲಿಲ್ಲ, ಈಗ ದೇವರ ಪ್ರಜೆ ಯಾಗಿದ್ದೀರಿ; ಮೊದಲು ಕರುಣೆ ಹೊಂದಿರಲಿಲ್ಲ, ಈಗ ಕರುಣೆ ಹೊಂದಿದವರಾಗಿದ್ದೀರಿ.
- John 6:37 ಯೋಹಾನನು 6:37ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರು ವರು; ನನ್ನ ಬಳಿಗೆ ಬರುವವನನ್ನು ನಾನು ಹೊರಗೆ ತಳ್ಳಿಬಿಡುವದೇ ಇಲ್ಲ.
- Revelation 3:20 ಪ್ರಕಟನೆ 3:20ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟ ಮಾಡುವನು.
- Romans 15:9–13 ರೋಮಾಪುರದವರಿಗೆ 15:9–13ಈ ಕಾರಣದಿಂದ ನಾನು ಅನ್ಯಜನಗಳ ಮಧ್ಯದಲ್ಲಿ ನಿನ್ನನು ಅರಿಕೆ ಮಾಡಿ ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದು ಬರೆದಿರುವ ಪ್ರಕಾರ ಅನ್ಯಜನಗಳು ದೇವರ ಕರುಣೆಗಾಗಿ ಆತನನ್ನು ಮಹಿಮೆಪಡಿಸುವರು. ಆತನು ತಿರಿಗಿ--ಅನ್ಯಜನರೇ, ಆತನ ಜನರೊಂದಿಗೆ ಸಂತೋಷಿಸಿರಿ ಎಂದು ಹೇಳುತ್ತಾನೆ. ತಿರಿಗಿ--ಎಲ್ಲಾ ಅನ್ಯಜನರೇ, ಕರ್ತನನ್ನು ಸ್ತುತಿಸಿರಿ; ಎಲ್ಲಾ ಜನರೇ, ಆತನನ್ನು ಕೊಂಡಾಡಿರಿ ಅನ್ನುತ್ತಾನೆ. ತಿರಿಗಿ ಯೆಶಾಯನು--ಇಷಯನ ಅಂಕುರದವನು ಎದ್ದು ಅನ್ಯ ಜನಾಂಗಗಳ ಮೇಲೆ ಆಡಳಿತ ಮಾಡುವನು; ಅನ್ಯ ಜನರು ಆತನಲ್ಲಿ ನಂಬಿಕೆಯಿಡುವರು ಅಂದನು. ನಿರೀಕ್ಷೆಗೆ ಆಧಾರನಾದ ದೇವರು ಪವಿತ್ರಾತ್ಮನ ಬಲದಿಂದ ನೀವು ನಿರೀಕ್ಷೆಯಲ್ಲಿ ಅಭಿವೃದ್ಧಿ ಹೊಂದು ವಂತೆ ನಂಬಿಕೆಯಿಂದುಂಟಾದ ಸಂತೋಷ ಸಮಾಧಾನಗಳಿಂದ ನಿಮ್ಮನ್ನು ತುಂಬಿಸಲಿ.
- John 10:27 ಯೋಹಾನನು 10:27ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ, ನಾನು ಅವುಗಳನ್ನು ಬಲ್ಲೆನು; ಅವು ನನ್ನನ್ನು ಹಿಂಬಾಲಿಸುತ್ತವೆ.
- John 10:11 ಯೋಹಾನನು 10:11ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.