Ezekiel · chapter 44 · verse 8
Ezekiel 44:8 in Kannada
ನೀವು ನನ್ನ ಪರಿಶುದ್ಧವಾದ ಜವಾಬ್ದಾರಿಯನ್ನು ಕೈಗೊಳ್ಳದೆ ಬೇರೆಯವರನ್ನು ಕಾಯುವದಕ್ಕೆ ನಿಮ್ಮ ಪರಿ ಶುದ್ದ ಸ್ಥಳದಲ್ಲಿ ಇರಿಸಿದ್ದೀರಿ.
Neevu nanna parishuddhavaada javaabdaariyannu kaigollade bereyavarannu kaayuvadakke nimma pari shudda sthaladalli irisiddeeri.
Ezekiel 44:8 in English
- King James Version (KJV)
- And ye have not kept the charge of mine holy things: but ye have set keepers of my charge in my sanctuary for yourselves.
- World English Bible (WEB)
- You have not performed the duty of my holy things; but you have set performers of my duty in my sanctuary for yourselves.”
- American Standard Version (ASV)
- And ye have not kept the charge of my holy things; but ye have set keepers of my charge in my sanctuary for yourselves.
- Bible in Basic English (BBE)
- And you have not taken care of my holy things; but you have put them as keepers to take care of my work in my holy place.
- Darby Translation (DBY)
- And ye have not kept the charge of my holy things, but have set keepers of my charge in my sanctuary for yourselves.
- Webster's Bible (WBS)
- And ye have not kept the charge of my holy things: but ye have set keepers of my charge in my sanctuary for yourselves.
- Young's Literal Translation (YLT)
- and ye have not kept the charge of My holy things, and ye set [them] for keepers of My charge in My sanctuary for you.
Read in context
- 6ತಿರುಗಿ ಬೀಳುವ ಇಸ್ರಾಯೇಲನ ಮನೆತನದವರಿಗೆ ನೀನು ಹೇಳಬೇಕಾ ದದ್ದೇನಂದರೆ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ಎಲ್ಲಾ ಅಸಹ್ಯಗಳನ್ನು ಸಾಕುಮಾಡಿರಿ;
- 7ಅವು ಗಳಲ್ಲಿ ನೀವು ನನ್ನ ರೊಟ್ಟಿಯನ್ನೂ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವಾಗ ನಿಮ್ಮ ಎಲ್ಲಾ ಅಸಹ್ಯಗಳಿ ಗೋಸ್ಕರ ನನ್ನ ಒಡಂಬಡಿಕೆಯನ್ನು ವಿಾರುವಂಥ ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿ ಯಿಲ್ಲದಂಥ ಪರಕೀಯರನ್ನು ನನ್ನ ಪರಿಶುದ್ಧಸ್ಥಳಕ್ಕೆ ಕರೆತಂದು ನನ್ನ ಆಲಯವನ್ನು ಅಪವಿತ್ರಪಡಿಸಿದಿರಿ;
- 8ನೀವು ನನ್ನ ಪರಿಶುದ್ಧವಾದ ಜವಾಬ್ದಾರಿಯನ್ನು ಕೈಗೊಳ್ಳದೆ ಬೇರೆಯವರನ್ನು ಕಾಯುವದಕ್ಕೆ ನಿಮ್ಮ ಪರಿ ಶುದ್ದ ಸ್ಥಳದಲ್ಲಿ ಇರಿಸಿದ್ದೀರಿ.
- 9ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಹೃದಯದಲ್ಲಿಯೂ ಶರೀರದ ಲ್ಲಿಯೂ ಸುನ್ನತಿಯಿಲ್ಲದ ಯಾವೊಬ್ಬ ಪರಕೀಯನೂ ಇಸ್ರಾಯೇಲಿನ ಮಕ್ಕಳೊಳಗಿರುವ ಯಾವೊಬ್ಬ ಅಪರಿಚಿತನೂ ನನ್ನ ಪರಿಶುದ್ಧಸ್ಥಳದೊಳಗೆ ಪ್ರವೇಶಿಸ ಬಾರದು.
- 10ಇಸ್ರಾಯೇಲ್ಯರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿ ಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರು ಸಹ ತಮ್ಮ ಅಕ್ರಮಗಳನ್ನು ಹೊರುವರು.
Cross references
- Leviticus 22:2–33 ಯಾಜಕಕಾಂಡ 22:2–33ಆರೋನನೊಂದಿಗೂ ಅವನ ಕುಮಾರರೊಂದಿಗೂ ಮಾತನಾಡು; ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡದಂತೆ ಇಸ್ರಾಯೇಲ್ ಮಕ್ಕಳು ನನಗೆ ಸಲ್ಲಿಸುವ ಪರಿಶುದ್ಧವಾದವುಗಳಿಂದ ಅವರು ಪ್ರತ್ಯೇಕ ವಾಗಿರಬೇಕು; ನಾನೇ ಕರ್ತನು. ಅವರಿಗೆ ನೀನು ಹೀಗೆ ಹೇಳು--ನಿಮ್ಮ ಎಲ್ಲಾ ಸಂತತಿಯ ವಂಶಾವಳಿ ಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ ಅವನು ನನ್ನ ಸನ್ನಿಧಿ ಯಿಂದ ತೆಗೆದುಹಾಕಲ್ಪಡಬೇಕು; ನಾನೇ ಕರ್ತನು. ಆರೋನನ ಸಂತತಿಯವರಲ್ಲಿ ಒಬ್ಬನು ಕುಷ್ಠರೋಗಿ ಇಲ್ಲವೆ ಸ್ರಾವವುಳ್ಳವನಿದ್ದರೆ ಅವನು ಶುದ್ಧನಾಗುವ ವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು ಅಶುದ್ಧನಾಗಿ ಮಾಡಲ್ಪಡುವಂತೆ ಹರಿದಾಡುವ ಯಾವದನ್ನಾಗಲಿ ಇಲ್ಲವೆ ಯಾವದೇ ಅಶುದ್ಧತ್ವದಿಂದ ಅಶುದ್ಧ ಮಾಡುವ ಮನುಷ್ಯನನ್ನಾಗಲಿ ಮುಟ್ಟಿದವನು-- ಅಂಥದ್ದನ್ನು ಮುಟ್ಟಿದ ಮನುಷ್ಯನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವನು ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಳ್ಳದ ಹೊರತು ಪರಿಶುದ್ಧ ವಾದವುಗಳನ್ನು ತಿನ್ನಬಾರದು. ಸೂರ್ಯನು ಮುಳು ಗಿದಾಗ ಅವನು ಶುದ್ಧನಾಗಿರುವನು, ತರುವಾಯ ಅವನು ಪರಿಶುದ್ಧವಾದವುಗಳನ್ನು ತಿನ್ನಲಿ, ಅದು ಅವನಿಗೆ ಆಹಾರ. ತನ್ನನ್ನು ಹೊಲೆಮಾಡಿಕೊಳ್ಳದಂತೆ ತನ್ನಷ್ಟಕ್ಕೆ ತಾನೇ ಸತ್ತಿರುವದನ್ನಾಗಲಿ ಇಲ್ಲವೆ ಮೃಗಗಳಿಂದ ಹರಿಯಲ್ಪಟ್ಟದ್ದನ್ನಾಗಲಿ ತಿನ್ನಬಾರದು; ನಾನೇ ಕರ್ತನು. ಆದದರಿಂದ ಅವರು ಅದನ್ನು ಅಪವಿತ್ರಪಡಿಸಿದರೆ ಅದರ ನಿಮಿತ್ತವಾಗಿ ಪಾಪವನ್ನು ಹೊತ್ತು ಸಾಯದಂತೆ ನನ್ನ ವಿಧಿಗಳನ್ನು ಕೈಕೊಳ್ಳಬೇಕು. ಅವರನ್ನು ಶುದ್ಧೀಕರಿಸುವ ಕರ್ತನು ನಾನೇ. ಪರಿಶುದ್ಧವಾದದ್ದನ್ನು ಪರಕೀಯನು ತಿನ್ನಬಾರದು. ಯಾಜಕನ ಪ್ರವಾಸಿಯಾಗಲಿ ಇಲ್ಲವೆ ಕೂಲಿ ಆಳಾಗಲಿ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು. ಆದರೆ ಯಾಜಕನು ಯಾವನನ್ನಾದರೂ ತನ್ನ ಹಣದಿಂದ ಕೊಂಡುಕೊಂಡರೆ ಅವನು ಅದರಲ್ಲಿ ತಿನ್ನಬೇಕು, ಅವನ ಮನೆಯಲ್ಲಿ ಹುಟ್ಟಿದವನು ತಿನ್ನಲಿ; ಅವರು ಅವನ ಆಹಾರವನ್ನು ತಿನ್ನಲಿ. ಯಾಜಕನ ಮಗಳು ಒಬ್ಬ ಪರಕೀಯನನ್ನು ಮದುವೆಯಾದರೆ ಅವಳು ಸಮ ರ್ಪಣೆಯಾದ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು. ಯಾಜಕನ ಮಗಳು ವಿಧವೆಯಾಗಿದ್ದರೆ ಇಲ್ಲವೆ ಬಿಡಲ್ಪಟ್ಟವಳಾಗಿದ್ದರೆ ಮತ್ತು ಮಕ್ಕಳಿಲ್ಲದವಳಾಗಿ ತನ್ನ ಯೌವನದಲ್ಲಿದ್ದಂತೆಯೇ ತನ್ನ ತಂದೆಯ ಮನೆಗೆ ಹಿಂದಿರುಗಿದವಳಾಗಿದ್ದರೆ ಅವಳು ತನ್ನ ತಂದೆಯ ಆಹಾರದಲ್ಲಿ ತಿನ್ನಲಿ; ಆದರೆ ಪರಕೀಯನು ಅದರಲ್ಲಿ ತಿನ್ನಬಾರದು. ಇದಲ್ಲದೆ ಒಬ್ಬನು ತಪ್ಪಾಗಿ ಪರಿಶುದ್ಧ ವಾದದ್ದನ್ನು ತಿಂದರೆ ಅವನು ಅದರ ಐದನೇ ಪಾಲನ್ನು ಕೂಡಿಸಿ ಪರಿಶುದ್ಧವಾದದ್ದನ್ನು ಯಾಜಕನಿಗೆ ಕೊಡ ಬೇಕು. ಇಸ್ರಾಯೇಲ್ ಮಕ್ಕಳು ಕರ್ತನಿಗೆ ಅರ್ಪಿ ಸುವ ಪರಿಶುದ್ಧವಾದವುಗಳನ್ನು ಅವರು ಅಪವಿತ್ರ ಮಾಡಬಾರದು. ಇಲ್ಲವೆ ಅವರು ಪರಿಶುದ್ಧವಾದವು ಗಳನ್ನು ತಿನ್ನುವದರಿಂದ ತಮ್ಮ ಮೇಲೆ ಅತಿಕ್ರಮದ ಅಪರಾಧವನ್ನು ಹೊತ್ತುಕೊಳ್ಳದಿರಲಿ; ಅವರನ್ನು ಶುದ್ಧೀಕರಿಸುವ ಕರ್ತನು ನಾನೇ. ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಆರೋನನೊಂದಿಗೂ ಅವನ ಕುಮಾರರೊಂದಿಗೂ ಇಸ್ರಾಯೇಲ್ ಎಲ್ಲಾ ಮಕ್ಕ ಳೊಂದಿಗೂ ಮಾತನಾಡಿ ಅವರಿಗೆ ಹೇಳಬೇಕಾದ ದ್ದೇನಂದರೆ--ಇಸ್ರಾಯೇಲ್ ಮನೆತನದವರಲ್ಲಾಗಲಿ ಇಸ್ರಾಯೇಲ್ಯರ ಪರಕೀಯರಲ್ಲಾಗಲಿ ಯಾವನಾದರೂ ತನ್ನ ಎಲ್ಲಾ ಪ್ರಮಾಣಗಳ ನಿಮಿತ್ತವಾಗಿ ಕಾಣಿಕೆಯನ್ನು ದಹನಬಲಿಯಾಗಿ ಕರ್ತನಿಗೆ ಅರ್ಪಿಸುವ ಉಚಿತವಾದ ಅರ್ಪಣೆಗಳಲ್ಲಿ ನೀವು ನಿಮ್ಮ ಸ್ವಇಚ್ಛೆಯಿಂದ ಪಶುಗಳೊಳಗೆ ಕುರಿಗಳೊಳಗೆ ಇಲ್ಲವೆ ಮೇಕೆಗಳೊಳಗೆ ದೋಷವಿಲ್ಲದ ಗಂಡಾಗಿರುವದನ್ನು ಅರ್ಪಿಸಬೇಕು; ಆದರೆ ದೋಷವಿರುವ ಯಾವದನ್ನೂ ಸಮರ್ಪಿಸ ಬಾರದು; ಅದು ನಿಮಗೋಸ್ಕರ ಅಂಗೀಕಾರವಾಗು ವದಿಲ್ಲ. ತನ್ನ ಪ್ರಮಾಣವನ್ನು ಪೂರೈಸುವ ಹಾಗೆ ಯಾವನಾದರೂ ಸಮಾಧಾನದ ಬಲಿಗಳ ಯಜ್ಞ ಸಮರ್ಪಣೆಯನ್ನಾಗಲಿ ಪಶುಗಳನ್ನಾಗಲಿ ಕುರಿಗಳ ನ್ನಾಗಲಿ ಉಚಿತವಾದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸುವದಾದರೆ ಅದು ಅಂಗೀಕಾರಕ್ಕೆ ಪರಿಪೂರ್ಣ ವುಳ್ಳದ್ದಾಗಿರಬೇಕು; ಅದರೊಳಗೆ ಯಾವ ದೋಷವು ಇರಬಾರದು. ಕುರುಡಾದದ್ದು, ಮುರಿದದ್ದು, ಅಂಗ ಹೀನವಾದದ್ದು, ಬೊಕ್ಕೆಯುಳ್ಳದ್ದು, ತುರಿಯುಳ್ಳದ್ದು, ಇಲ್ಲವೆ ಹುರುಕುಳ್ಳದ್ದು ಇವುಗಳನ್ನು ನೀವು ಕರ್ತನಿಗೆ ಸಮರ್ಪಿಸಲೂಬಾರದು ಮತ್ತು ಅವುಗಳಿಂದ ಯಜ್ಞ ವೇದಿಯ ಮೇಲೆ ದಹನಬಲಿಯಾಗಿ ಕರ್ತನಿಗೆ ಸಮರ್ಪಿಸಲೂಬಾರದು. ಹೋರಿಯಾಗಲಿ ಇಲ್ಲವೆ ಕುರಿಮರಿಯಾಗಲಿ ಅದಕ್ಕೆ ಹೆಚ್ಚಾದ ಅಂಗವಿರುವ ದಾಗಿದ್ದರೆ ಇಲ್ಲವೆ ಅದರ ಅಂಗಗಳಲ್ಲಿ ಕೊರತೆ ಯಿರುವದಾಗಿದ್ದರೆ ಅದನ್ನು ಉಚಿತ ಕಾಣಿಕೆಯಾಗಿ ಅರ್ಪಿಸಬಹುದು; ಆದರೆ ಪ್ರಮಾಣಕ್ಕಾಗಿ ಅದು ಅಂಗೀಕಾರವಾಗುವದಿಲ್ಲ. ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವದನ್ನೂ ಕರ್ತನಿಗೆ ಸಮರ್ಪಿಸಬಾರದು. ಅಲ್ಲದೆ ನಿಮ್ಮ ದೇಶದೊಳಗಿರುವ ಅಂಥ ಯಾವ ಸಮರ್ಪಣೆ ಯನ್ನಾ ದರೂ ನೀವು ಸಮರ್ಪಿಸಬಾರದು. ಇದಲ್ಲದೆ ಪರಕೀಯನ ಕೈಯೊಳಗಿಂದಲೂ ಅಂಥವುಗಳಲ್ಲಿ ಯಾವದನ್ನಾದರೂ ನಿಮ್ಮ ದೇವರಿಗೆ ರೊಟ್ಟಿಯಾಗಿ ಅರ್ಪಿಸಬಾರದು. ಅವರ ನೀತಿಭ್ರಷ್ಠತೆಯೂ ದೋಷ ಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರ ವಾಗಿ ಅಂಗೀಕಾರವಾಗುವದಿಲ್ಲ. ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ-- ಹೋರಿಯನ್ನಾಗಲಿ ಕುರಿಯನ್ನಾಗಲಿ ಇಲ್ಲವೆ ಆಡನ್ನಾಗಲಿ ತಂದಾಗ ಏಳು ದಿವಸಗಳ ವರೆಗೆ ಅದು ತನ್ನ ತಾಯಿಯ ಬಳಿಯಲ್ಲಿ ಇರಲಿ. ಎಂಟನೆಯ ದಿನದಿಂದ ಅದು ಕರ್ತನಿಗೆ ದಹನಬಲಿಯಾಗಿ ಅಂಗೀ ಕಾರವಾಗಿರುವದು. ಹಸುವನ್ನಾಗಲಿ ಕುರಿಯನ್ನಾಗಲಿ ಅದರ ಮರಿಯೊಂದಿಗೆ ಎರಡನ್ನೂ ಒಂದೇ ದಿನದಲ್ಲಿ ವಧಿಸಬಾರದು. ನೀವು ಕೃತಜ್ಞತೆಯ ಯಜ್ಞಾರ್ಪಣೆಯನ್ನು ಸಮರ್ಪಿಸುವಾಗ ನಿಮ್ಮ ಸ್ವಇಷ್ಟದಿಂದ ಅರ್ಪಿಸಿರಿ. ಅದೇ ದಿನದಲ್ಲಿ ಅದನ್ನು ತಿನ್ನಬೇಕು. ಅದರಲ್ಲಿ ಯಾವದನ್ನೂ ಮಾರನೆಯ ದಿನದ ವರೆಗೆ ಉಳಿಸ ಬಾರದು; ನಾನೇ ಕರ್ತನು. ಆದದರಿಂದ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ನಾನೇ ಕರ್ತನು. ಆದರೆ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ನಾನು ಪರಿಶುದ್ಧ ಮಾಡಲ್ಪಡುವ ಹಾಗೆ ನನ್ನ ಪರಿಶುದ್ಧವಾದ ಹೆಸರನ್ನು ಅಪವಿತ್ರಮಾಡಬಾರದು;ನಿಮಗೆ ದೇವರಾಗಿರು ವದಕ್ಕೆ ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಗೆ ತಂದವನೂ ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನೂ ನಾನೇ; ನಾನೇ ಕರ್ತನು. ನಿಮಗೆ ದೇವರಾಗಿರು ವದಕ್ಕೆ ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಗೆ ತಂದವನೂ ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನೂ ನಾನೇ; ನಾನೇ ಕರ್ತನು.
- Numbers 18:3–5 ಅರಣ್ಯಕಾಂಡ 18:3–5ಅವರು ನಿನ್ನ ಅಪ್ಪಣೆಯನ್ನೂ ಗುಡಾರವೆಲ್ಲಾದರ ಅಪ್ಪಣೆಯನ್ನೂ ಕಾಪಾಡಬೇಕು. ಪರಿಶುದ್ಧ ಸ್ಥಳದ ಸಾಮಾನುಗಳಿಗೂ ಬಲಿಪೀಠಕ್ಕೂ ಮಾತ್ರ ಅವರೂ ನೀವೂ ಸಾಯದ ಹಾಗೆ ಅವರು ಸವಿಾಪಕ್ಕೆ ಬರಬಾರದು. ಆದರೆ ಅವರು ನಿನ್ನ ಸಹಾಯಕರಾಗಿದ್ದು ಗುಡಾರದ ಎಲ್ಲಾ ಸೇವೆಗೋಸ್ಕರ ಸಭೆಯ ಗುಡಾರದ ಅಪ್ಪಣೆಯನ್ನು ಕಾಪಾಡಬೇಕು; ಪರಕೀಯನು ನಿಮ್ಮ ಸವಿಾಪಕ್ಕೆ ಬರ ಬಾರದು. ಇಸ್ರಾಯೇಲ್ ಮಕ್ಕಳ ಮೇಲೆ ಇನ್ನು ಮುಂದೆ ಎಂದಿಗೂ ರೌದ್ರವು ಬಾರದಹಾಗೆ ಪರಿಶುದ್ಧ ಸ್ಥಳದ ಆಜ್ಞೆಯನ್ನೂ ಬಲಿಪೀಠದ ಆಜ್ಞೆಯನ್ನೂ ನೀವು ಕಾಪಾಡಬೇಕು.
- Ezra 8:24–30 ಎಜ್ರನು 8:24–30ನಾನು ಯಾಜಕರ ಪ್ರಮುಖರಲ್ಲಿ ಹನ್ನೆರಡು ಮಂದಿಯಾಗಿರುವ ಶೆರೆಬ್ಯನನ್ನೂ ಹಷಬ್ಯನನ್ನೂ ಅವರ ಸಂಗಡ ಅವರ ಸಹೋದರರಲ್ಲಿ ಹತ್ತು ಮಂದಿಯನ್ನೂ ಪ್ರತ್ಯೇಕಿಸಿ ಅರಸನೂ ಅವನ ಸಲಹೆಗಾರರೂ ಅವನ ಪ್ರಧಾನರೂ ಅಲ್ಲಿದ್ದ ಎಲ್ಲಾ ಇಸ್ರಾಯೇಲ್ಯರೂ ನಮ್ಮ ದೇವರ ಆಲಯಕ್ಕೆ ಅರ್ಪಿಸಿದ ಕಾಣಿಕೆಯಾದ ಬೆಳ್ಳಿಯನ್ನೂ ಬಂಗಾರವನ್ನೂ ಸಾಮಾನುಗಳನ್ನೂ ಅವರಿಗೆ ತೂಗಿ ಕೊಟ್ಟೆನು. ಅವರ ಕೈಯಲ್ಲಿ ನಾನು ಆರುನೂರ ಐವತ್ತು ತಲಾಂತು ಬೆಳ್ಳಿಯನ್ನೂ ನೂರು ತಲಾಂತು ತೂಕವಾದ ಬೆಳ್ಳಿಯ ಪಾತ್ರೆಗ ಳನ್ನೂ ನೂರು ತಲಾಂತು ಬಂಗಾರವನ್ನೂ ಸಾವಿರ ಪವನು ಬೆಲೆಯುಳ್ಳ ಇಪ್ಪತ್ತು ಬಂಗಾರದ ಬಟ್ಟಲು ಗಳನ್ನು ಬಂಗಾರದ ಹಾಗೆ ಅಮೂಲ್ಯವಾದಂಥಾ ಥಳ ಥಳಿಸುವಂಥಾ ಒಳ್ಳೇ ತಾಮ್ರದ ಎರಡು ಪಾತ್ರೆಗ ಳನ್ನೂ ತೂಗಿಕೊಟ್ಟೆನು. ನಾನು ಅವರಿಗೆ--ನೀವು ಕರ್ತನಿಗೆ ಪರಿಶುದ್ಧರಾಗಿದ್ದೀರಿ. ಈ ಸಾಮಾನುಗಳು ಹಾಗೆಯೇ ಪರಿಶುದ್ಧವು. ಈ ಬೆಳ್ಳಿ ಬಂಗಾರವು ನಿಮ್ಮ ತಂದೆಗಳ ದೇವರಾಗಿರುವ ಕರ್ತನಿಗೆ ಉಚಿತಾರ್ಥ ವಾದ ಅರ್ಪಣೆಯಾಗಿದೆ. ನೀವು ಯೆರೂಸಲೇಮಿ ನಲ್ಲಿ ಕರ್ತನ ಆಲಯದ ಕೊಠಡಿಗಳೊಳಗೆ ಯಾಜಕರ ಲೇವಿಯರ ಪ್ರಧಾನರ ಮುಂದೆಯೂ ಇಸ್ರಾಯೇಲ್ ಪಿತೃಗಳ ಪ್ರಧಾನರ ಮುಂದೆಯೂ ತೂಗುವ ವರೆಗೆ ಜಾಗ್ರತೆಯಾಗಿ ಕಾಪಾಡಿರಿ ಅಂದನು. ಹಾಗೆಯೇ ಯಾಜಕರೂ ಲೇವಿಯರೂ ತೂಕದ ಹಾಗೆ ಬೆಳ್ಳಿಯನ್ನೂ ಬಂಗಾರವನ್ನೂ ಪಾತ್ರೆಗಳನ್ನೂ ಯೆರೂಸಲೇಮಿನಲ್ಲಿರುವ ನಮ್ಮ ದೇವರ ಆಲಯಕ್ಕೆ ತೆಗೆದುಕೊಂಡು ಬಂದರು.
- 2 Timothy 4:1 2 ತಿಮೊಥೆಯನಿಗೆ 4:1ಆದದರಿಂದ ದೇವರ ಮುಂದೆಯೂ ಆತನ ಬರೋಣದಲ್ಲಿ ಮತ್ತು ಆತನ ರಾಜ್ಯ ದಲ್ಲಿ ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವ ಕರ್ತನಾದ ಯೇಸು ಕ್ರಿಸ್ತನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ--
- Acts 7:53 ಅಪೊಸ್ತಲರ ಕೃತ್ಯಗಳು 7:53ದೇವದೂತರ ಮೂಲಕ ನೇಮಕವಾದ ನ್ಯಾಯ ಪ್ರಮಾಣವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸಲಿಲ್ಲ ಎಂದು ಹೇಳಿದನು.
- 1 Chronicles 23:32 1 ಪೂರ್ವಕಾಲವೃತ್ತಾಂತ 23:32ಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.
- Ezekiel 44:14 ಯೆಹೆಜ್ಕೇಲನು 44:14ಆದರೆ ನಾನು ಅವರನ್ನು ಆಲಯದ ಎಲ್ಲಾ ಸೇವೆ ಗೋಸ್ಕರವೂ ಅದರಲ್ಲಿ ಮಾಡುವಂತ ಎಲ್ಲವುಗಳಿ ಗೋಸ್ಕರವೂ ಆಲಯದ ಕಾರ್ಯಗಳನ್ನು ನೋಡಿ ಕೊಳ್ಳುವವರನ್ನಾಗಿ ಮಾಡುವೆನು.
- 1 Timothy 6:13 1 ತಿಮೊಥೆಯನಿಗೆ 6:13ಎಲ್ಲರನ್ನು ಬದುಕಿಸುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಶ್ರೇಷ್ಠ ಅರಿಕೆಯನ್ನು ಸಾಕ್ಷೀಕರಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ--
- Ezekiel 44:16 ಯೆಹೆಜ್ಕೇಲನು 44:16ಇವರು ನನ್ನ ಪರಿಶುದ್ಧ ಸ್ಥಳವನ್ನು ಪ್ರವೇಶಿಸಿ, ನನಗೆ ಸೇವೆ ಮಾಡು ವದಕ್ಕಾಗಿ ನನ್ನ ಮೇಜಿನ ಬಳಿಗೆ ಬರುವರು ಅವರು ನನ್ನ ಕಾಯಿದೆಯನ್ನು ಕೈಕೊಳ್ಳುವರು.
- Ezekiel 40:45–46 ಯೆಹೆಜ್ಕೇಲನು 40:45–46ಅವನು ನನಗೆ ಹೇಳಿದ್ದೇ ನಂದರೆ--ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು. ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಯಜ್ಞವೇದಿಯ ಮೇಲ್ವಿಚಾರಕರಾದ ಯಾಜಕ ರದು. ಚಾದೋಕನ ಕುಮಾರರಾದ ಇವರು ಲೇವಿಯ ಕುಮಾರ ರಲ್ಲಿ ಕರ್ತನ ಸನ್ನಿಧಿಯ ಸೇವಕರಾಗಿದ್ದಾರೆ.
- Numbers 18:7 ಅರಣ್ಯಕಾಂಡ 18:7ಆದದರಿಂದ ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ಪರದೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವವನ್ನು ದಾನದ ಸೇವೆಯಾಗಿ ನಿಮಗೆ ಕೊಟ್ಟಿದ್ದೇನೆ. ಪರಕೀಯನು ಸವಿಾಪಕ್ಕೆ ಬಂದರೆ ಸಾಯಬೇಕು ಎಂದು ಹೇಳಿದನು.