Leviticus · chapter 22 · verse 2
Leviticus 22:2 in Kannada
ಆರೋನನೊಂದಿಗೂ ಅವನ ಕುಮಾರರೊಂದಿಗೂ ಮಾತನಾಡು; ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡದಂತೆ ಇಸ್ರಾಯೇಲ್ ಮಕ್ಕಳು ನನಗೆ ಸಲ್ಲಿಸುವ ಪರಿಶುದ್ಧವಾದವುಗಳಿಂದ ಅವರು ಪ್ರತ್ಯೇಕ ವಾಗಿರಬೇಕು; ನಾನೇ ಕರ್ತನು.
Aaronanondigoo avana kumaararondigoo maatanaadu; avaru nanna parishuddha hesarannu apavitra maadadante israayel makkalu nanage sallisuva parishuddhavaadavugalinda avaru pratyeka vaagirabeku; naane kartanu.
Leviticus 22:2 in English
- King James Version (KJV)
- Speak unto Aaron and to his sons, that they separate themselves from the holy things of the children of Israel, and that they profane not my holy name [in those things] which they hallow unto me: I [am] the LORD.
- World English Bible (WEB)
- “Tell Aaron and his sons to separate themselves from the holy things of the children of Israel, which they make holy to me, and that they not profane my holy name. I am the LORD.
- American Standard Version (ASV)
- Speak unto Aaron and to his sons, that they separate themselves from the holy things of the children of Israel, which they hallow unto me, and that they profane not my holy name: I am Jehovah.
- Bible in Basic English (BBE)
- Give orders to Aaron and to his sons to keep themselves separate from the holy things of the children of Israel which they give to me, and not to make my holy name common: I am the Lord,
- Darby Translation (DBY)
- Speak unto Aaron, and to his sons, that they separate themselves from the holy things of the children of Israel, and that they profane not my holy name in the things that they hallow unto me: I am Jehovah.
- Webster's Bible (WBS)
- Speak to Aaron and to his sons, that they separate themselves from the holy things of the children of Israel, and that they profane not my holy name [in those things] which they hallow to me: I [am] the LORD.
- Young's Literal Translation (YLT)
- 'Speak unto Aaron, and unto his sons, and they are separated from the holy things of the sons of Israel, and they pollute not My holy name in what they are hallowing to Me; I [am] Jehovah.
Read in context
- 1ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ --
- 2ಆರೋನನೊಂದಿಗೂ ಅವನ ಕುಮಾರರೊಂದಿಗೂ ಮಾತನಾಡು; ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡದಂತೆ ಇಸ್ರಾಯೇಲ್ ಮಕ್ಕಳು ನನಗೆ ಸಲ್ಲಿಸುವ ಪರಿಶುದ್ಧವಾದವುಗಳಿಂದ ಅವರು ಪ್ರತ್ಯೇಕ ವಾಗಿರಬೇಕು; ನಾನೇ ಕರ್ತನು.
- 3ಅವರಿಗೆ ನೀನು ಹೀಗೆ ಹೇಳು--ನಿಮ್ಮ ಎಲ್ಲಾ ಸಂತತಿಯ ವಂಶಾವಳಿ ಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ ಅವನು ನನ್ನ ಸನ್ನಿಧಿ ಯಿಂದ ತೆಗೆದುಹಾಕಲ್ಪಡಬೇಕು; ನಾನೇ ಕರ್ತನು.
- 4ಆರೋನನ ಸಂತತಿಯವರಲ್ಲಿ ಒಬ್ಬನು ಕುಷ್ಠರೋಗಿ ಇಲ್ಲವೆ ಸ್ರಾವವುಳ್ಳವನಿದ್ದರೆ ಅವನು ಶುದ್ಧನಾಗುವ ವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
Cross references
- Leviticus 18:21 ಯಾಜಕಕಾಂಡ 18:21ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
- Deuteronomy 15:19 ಧರ್ಮೋಪದೇಶಕಾಂಡ 15:19ನಿನ್ನ ಪಶು ಕುರಿಗಳಲ್ಲಿ ಹುಟ್ಟುವ ಚೊಚ್ಚಲು ಗಂಡುಗಳನ್ನೆಲ್ಲಾ ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಮಾಡಬೇಕು; ನಿನ್ನ ಹೋರಿಯ ಚೊಚ್ಚಲಿನಿಂದ ನೀನು ಕೆಲಸಮಾಡಿಸಬಾರದು.
- Exodus 13:12 ವಿಮೋಚನಕಾಂಡ 13:12ಗರ್ಭ ತೆರೆಯುವದೆಲ್ಲಾ ಅಂದರೆ ನಿನಗಿರುವ ಪಶುಗಳಲ್ಲಿ ಮೊದಲು ಹುಟ್ಟಿದ್ದನ್ನೆಲ್ಲಾ ಪ್ರತ್ಯೇಕಿಸಬೇಕು. ಗಂಡಾದವುಗಳು ಕರ್ತನವುಗಳೇ.
- Leviticus 22:32 ಯಾಜಕಕಾಂಡ 22:32ಆದರೆ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ನಾನು ಪರಿಶುದ್ಧ ಮಾಡಲ್ಪಡುವ ಹಾಗೆ ನನ್ನ ಪರಿಶುದ್ಧವಾದ ಹೆಸರನ್ನು ಅಪವಿತ್ರಮಾಡಬಾರದು;ನಿಮಗೆ ದೇವರಾಗಿರು ವದಕ್ಕೆ ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಗೆ ತಂದವನೂ ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನೂ ನಾನೇ; ನಾನೇ ಕರ್ತನು.
- Exodus 28:38 ವಿಮೋಚನಕಾಂಡ 28:38ಇಸ್ರಾಯೇಲ್ ಮಕ್ಕಳು ತಮ್ಮ ಪರಿಶುದ್ಧ ದಾನಗಳನ್ನೆಲ್ಲಾ ಪರಿಶುದ್ಧ ಮಾಡುವ ಪರಿಶುದ್ಧ ಕಾರ್ಯಗಳ ಅಕ್ರಮವನ್ನು ಆರೋನನು ಹೊರುವ ಹಾಗೆ ಅದು ಆರೋನನ ಹಣೆಯ ಮೇಲಿರಬೇಕು. ಕರ್ತನ ಮುಂದೆ ಅವುಗಳೆಲ್ಲಾ ಅಂಗೀಕಾರವಾಗುವ ಹಾಗೆ ಅದು ಯಾವಾಗಲೂ ಅವನ ಹಣೆಯ ಮೇಲೆ ಇರಬೇಕು.
- Numbers 18:32 ಅರಣ್ಯಕಾಂಡ 18:32ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.
- Leviticus 19:12 ಯಾಜಕಕಾಂಡ 19:12ಇದಲ್ಲದೆ ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣಮಾಡಬಾರದು ನಿಮ್ಮ ದೇವರ ಹೆಸರನ್ನು ಅಪವಿತ್ರಮಾಡಬಾರದು; ನಾನೇ ಕರ್ತನು.
- Leviticus 15:31 ಯಾಜಕಕಾಂಡ 15:31ಹೀಗೆ ನೀವು ಇಸ್ರಾಯೇಲ್ ಮಕ್ಕಳನ್ನು ಅವರ ಅಶುದ್ಧತ್ವದಿಂದ ಪ್ರತ್ಯೇಕಿಸಬೇಕು; ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡದೆ ತಮ್ಮ ಅಶುದ್ಧತ್ವದಿಂದ ಸಾಯುವದಿಲ್ಲ.
- Numbers 6:3–8 ಅರಣ್ಯಕಾಂಡ 6:3–8ದ್ರಾಕ್ಷಾರಸಕ್ಕೂ ಮದ್ಯ ಪಾನಕ್ಕೂ ದೂರವಾಗಿದ್ದು ದ್ರಾಕ್ಷಾರಸದ ಹುಳಿಯನ್ನೂ ಮದ್ಯಪಾನದ ಹುಳಿಯನ್ನೂ ಕುಡಿಯದೆ ದ್ರಾಕ್ಷೆಯಿಂದ ಮಾಡಿದ ಯಾವ ಪಾನವನ್ನಾದರೂ ಕುಡಿಯದೆ, ಹಸೀದಾಗಲಿ ಒಣಗಿದ್ದಾಗಲಿ ದ್ರಾಕ್ಷೇ ಹಣ್ಣನ್ನು ತಿನ್ನದೆ ಇರಬೇಕು. ತನ್ನ ನಾಜೀರತನ ದಿವಸಗಳಲ್ಲೆಲ್ಲಾ ದ್ರಾಕ್ಷೇ ಬೀಜ ಮೊದಲುಗೊಂಡು ಸಿಪ್ಪೆಯ ವರೆಗೂ ದ್ರಾಕ್ಷೇ ಬಳ್ಳಿಯಲ್ಲಿ ಬೆಳೆದದ್ದು ಯಾವದನ್ನಾದರೂ ತಿನ್ನಬಾರದು. ಅವನ ನಾಜೀರತನ ಪ್ರಮಾಣದ ದಿವಸಗಳೆಲ್ಲಾ ಕ್ಷೌರ ಕತ್ತಿ ಅವನ ತಲೆಯ ಮೇಲೆ ಬರಬಾರದು; ಅವನು ಕರ್ತನಿಗೆ ತನ್ನನ್ನು ಪ್ರತ್ಯೇಕಿಸಿಕೊಂಡ ದಿವಸ ಗಳು ಪೂರ್ತಿಯಾಗುವ ವರೆಗೆ ಅವನು ಪರಿಶುದ್ಧನಾಗಿ ರುವನು; ಅವನು ತನ್ನ ತಲೆಯ ಕೂದಲನ್ನು ಬೆಳೆಸ ಬೇಕು. ಅವನು ಕರ್ತನಿಗೆ ತನ್ನನ್ನು ಪ್ರತ್ಯೇಕಿಸಿ ಕೊಂಡ ದಿವಸಗಳೆಲ್ಲಾ ಸತ್ತವನ ಬಳಿಗೆ ಬರಬಾರದು. ಅವನ ತಂದೆ ತಾಯಿ ಸಹೋದರ ಸಹೋದರಿ ಸತ್ತರೂ ಅವನು ಅವರಿಗೋಸ್ಕರ ಅಪವಿತ್ರನಾಗ ಬಾರದು; ಅವನ ದೇವರ ನಾಜೀರತನವು ಅವನ ತಲೆಯ ಮೇಲೆ ಇದೆ. ಅವನ ನಾಜೀರತನದ ದಿವಸ ಗಳಲ್ಲೆಲ್ಲಾ ಅವನು ಕರ್ತನಿಗೆ ಪರಿಶುದ್ಧನಾಗಿದ್ದಾನೆ.
- Leviticus 20:3 ಯಾಜಕಕಾಂಡ 20:3ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು; ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು; ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಹೊಲೆಮಾಡುವಂತೆ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟಿದ್ದಾನೆ.
- Leviticus 21:6 ಯಾಜಕಕಾಂಡ 21:6ಅವರು ತಮ್ಮ ಕರ್ತನಿಗೆ ಅಗ್ನಿಯಿಂದ ಮಾಡಿದ ಸಮರ್ಪಣೆಗಳನ್ನು ಮತ್ತು ತಮ್ಮ ದೇವರ ರೊಟ್ಟಿಯನ್ನು ಅರ್ಪಿಸುವದರಿಂದ ಅವರು ತಮ್ಮ ದೇವರ ಹೆಸರನ್ನು ಅಪವಿತ್ರಪಡಿಸದೆ ತಮ್ಮ ದೇವರಿಗೆ ಪರಿಶುದ್ಧರಾಗಿರಬೇಕು; ಆದಕಾರಣ ಅವರು ಪರಿಶುದ್ಧ ರಾಗಿರುವರು.
- Leviticus 22:3–6 ಯಾಜಕಕಾಂಡ 22:3–6ಅವರಿಗೆ ನೀನು ಹೀಗೆ ಹೇಳು--ನಿಮ್ಮ ಎಲ್ಲಾ ಸಂತತಿಯ ವಂಶಾವಳಿ ಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ ಅವನು ನನ್ನ ಸನ್ನಿಧಿ ಯಿಂದ ತೆಗೆದುಹಾಕಲ್ಪಡಬೇಕು; ನಾನೇ ಕರ್ತನು. ಆರೋನನ ಸಂತತಿಯವರಲ್ಲಿ ಒಬ್ಬನು ಕುಷ್ಠರೋಗಿ ಇಲ್ಲವೆ ಸ್ರಾವವುಳ್ಳವನಿದ್ದರೆ ಅವನು ಶುದ್ಧನಾಗುವ ವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು ಅಶುದ್ಧನಾಗಿ ಮಾಡಲ್ಪಡುವಂತೆ ಹರಿದಾಡುವ ಯಾವದನ್ನಾಗಲಿ ಇಲ್ಲವೆ ಯಾವದೇ ಅಶುದ್ಧತ್ವದಿಂದ ಅಶುದ್ಧ ಮಾಡುವ ಮನುಷ್ಯನನ್ನಾಗಲಿ ಮುಟ್ಟಿದವನು-- ಅಂಥದ್ದನ್ನು ಮುಟ್ಟಿದ ಮನುಷ್ಯನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವನು ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಳ್ಳದ ಹೊರತು ಪರಿಶುದ್ಧ ವಾದವುಗಳನ್ನು ತಿನ್ನಬಾರದು.