Ezekiel · chapter 48 · verse 29
Ezekiel 48:29 in Kannada
ನೀವು ಇಸ್ರಾಯೇಲಿನ ಗೋತ್ರ ಗಳಿಗೆ ಚೀಟು ಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಅದರ ಭಾಗಗಳು ಇವೆ. ಎಂದು ದೇವರಾದ ಕರ್ತನು ಹೇಳುತ್ತಾನೆ.
Neevu israayelina gotra galige cheetu haaki baadhyavaagi hanchikodabekaada deshavu ide; adara bhaagagalu ive. Endu devaraada kartanu heluttaane.
Ezekiel 48:29 in English
- King James Version (KJV)
- This [is] the land which ye shall divide by lot unto the tribes of Israel for inheritance, and these [are] their portions, saith the Lord GOD.
- World English Bible (WEB)
- “This is the land which you shall divide by lot to the tribes of Israel for inheritance, and these are their several portions, says the Lord GOD.
- American Standard Version (ASV)
- This is the land which ye shall divide by lot unto the tribes of Israel for inheritance, and these are their several portions, saith the Lord Jehovah.
- Bible in Basic English (BBE)
- This is the land of which distribution is to be made by the decision of the Lord, among the tribes of Israel for their heritage, and these are their heritages, says the Lord.
- Darby Translation (DBY)
- This is the land which ye shall divide by lot unto the tribes of Israel for inheritance, and these are their portions, saith the Lord Jehovah.
- Webster's Bible (WBS)
- This [is] the land which ye shall divide by lot to the tribes of Israel for inheritance, and these [are] their portions, saith the Lord GOD.
- Young's Literal Translation (YLT)
- This [is] the land that ye separate by inheritance to the tribes of Israel, and these [are] their portions — an affirmation of the Lord Jehovah.
Read in context
- 27ಜೆಬು ಲೋನ್ನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಗಾದನ ಒಂದು ಭಾಗವಾಗಿದೆ.
- 28ಗಾದನ ಮೇರೆಯ ಬಳಿಯಲ್ಲಿ ದಕ್ಷಿಣದ ಕಡೆಯಲ್ಲಿ ದಕ್ಷಿಣದ ಮೇರೆಯು ತಾಮಾರ್ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರುಗಳ ವರೆಗೂ ಮಹಾ ಸಮುದ್ರಕ್ಕೆ ಹೋಗುವ ನದಿಯ ವರೆಗೂ ಇರಬೇಕು.
- 29ನೀವು ಇಸ್ರಾಯೇಲಿನ ಗೋತ್ರ ಗಳಿಗೆ ಚೀಟು ಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಅದರ ಭಾಗಗಳು ಇವೆ. ಎಂದು ದೇವರಾದ ಕರ್ತನು ಹೇಳುತ್ತಾನೆ.
- 30ಪಟ್ಟಣದ ಹೊರಗೆ ಹೋಗುವಿಕೆಯು ಹೀಗಿರ ಬೇಕು--ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು.
- 31ಪಟ್ಟಣದ ಬಾಗಲುಗಳು ಇಸ್ರಾಯೇಲಿನ ಗೋತ್ರಗಳ ಹೆಸರುಗಳ ಪ್ರಕಾರ ಇರಬೇಕು; ಉತ್ತರಕ್ಕೆ ಮೂರು ಬಾಗಲುಗಳು; ರೂಬೇ ನನ ಬಾಗಲು ಒಂದು, ಯೆಹೂದನ ಬಾಗಲು ಒಂದು; ಲೇವಿಯ ಬಾಗಲು ಒಂದು.
Cross references
- Numbers 34:2 ಅರಣ್ಯಕಾಂಡ 34:2ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಕಾನಾನ್ ದೇಶದೊಳಗೆ ಬರುವಾಗ ನಿಮಗೆ ಸ್ವಾಸ್ತ್ಯಕ್ಕಾಗಿ ಬರುವ ಕಾನಾನ್ ದೇಶವು ಅದರ ಮೇರೆಗಳ ಪ್ರಕಾರ ಹೀಗಿರಬೇಕು.
- Joshua 13:1–21 ಯೆಹೋಶುವ 13:1–21ಯೆಹೋಶುವನು ದಿನ ತುಂಬಿದ ಮುದುಕ ನಾಗಲು ಕರ್ತನು ಅವನಿಗೆ--ನೀನು ಮುದುಕನಾಗಿ ದಿನಗಳು ಹೋದವನಾದಿ; ಆದರೆ ಸ್ವಾಧೀನಮಾಡಿಕೊಳ್ಳತಕ್ಕ ಸೀಮೆಯು ಇನ್ನು ಬಹಳ ವಾಗಿ ಇರುತ್ತದೆ. ಅದು ಯಾವದೆಂದರೆ--ಐಗು ಪ್ತಕ್ಕೆ ಎದುರಾದ ಶೀಹೋರಿನಿಂದ ಕಾನಾನ್ಯರಿಗೆ ಎಣಿಸಲ್ಪಟ್ಟದ್ದಾದ ಉತ್ತರಕ್ಕೆ ಎಕ್ರೋನಿನ ಮೇರೆಯ ವರೆಗೂ ಇರುವ ಫಿಲಿಷ್ಟಿಯರ ಮೇರೆಗಳೆಲ್ಲಾ ಗೆಷೂ ರ್ಯರ ದೇಶವೆಲ್ಲಾ, ಗಾಜದವರೂ ಅಷ್ಡೋದ್ಯರೂ ಅಷ್ಕೆಲೋನ್ಯರೂ ಗಿತ್ತಿಯರೂ ಎಕ್ರೋನಿಯರೂ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ಅವ್ವೀಯರ ಸೀಮೆ; ದಕ್ಷಿಣ ಪ್ರಾಂತ್ಯದಿಂದ ಅಮೋರಿಯರ ಮೇರೆಯಾದ ಅಫೇಕದ ವರೆಗೂ ಇರುವ ಕಾನಾನ್ಯರ ಸರ್ವ ದೇಶವು ಚೀದೋನ್ಯರಿಗೆ ಹೊಂದಿದ ಮೆಯಾರವು; ಗೆಬಾಲ್ಯರ ಪ್ರಾಂತ್ಯ; ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಹೆರ್ಮೋನ್ ಬೆಟ್ಟದ ಕೆಳಗೆ ಇರುವ ಬಾಳ್ಗಾದಿನಿಂದ ಹಾಮಾತಿನಲ್ಲಿ ಪ್ರವೇಶಿಸುವ ಸ್ಥಳದ ವರೆಗೂ ಇರುವ ಲೆಬನೋನೆಲ್ಲಾ ಇವುಗಳೇ. ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನ ವರೆಗೂ ಬೆಟ್ಟದ ದೇಶದ ಎಲ್ಲಾ ನಿವಾಸಿಗಳನ್ನೂ ಎಲ್ಲಾ ಚೀದೋನ್ಯರನ್ನೂ ನಾನು ಇಸ್ರಾಯೇಲ್ ಮಕ್ಕಳ ಎದುರಿನಿಂದ ಹೊರಡಿಸಿ ಬಿಡುವೆನು. ಆದರೆ ನಾನು ನಿನಗೆ ಹೇಳಿದ ಹಾಗೆಯೇ ನೀನು ಚೀಟುಗಳನ್ನು ಹಾಕಿ ಇಸ್ರಾಯೇಲಿಗೆ ಬಾಧ್ಯತೆಯಾಗಿ ಪಾಲಿಡಬೇಕು. ಈಗ ಈ ದೇಶವನ್ನು ಒಂಭತ್ತು ಗೋತ್ರಗಳಿಗೂ ಮನಸ್ಸೆಯ ಅರ್ಧಗೋತ್ರಕ್ಕೂ ಬಾಧ್ಯತೆಗಾಗಿ ಪಾಲು ಮಾಡಿಕೊಡು. ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ: ಅರ್ನೋನ್ ನದೀ ತೀರದಲ್ಲಿರುವ ಅರೋಯೇರ್ ನದಿಯ ಮಧ್ಯಭಾಗ ದಲ್ಲಿರುವ ಪಟ್ಟಣವು ಮೊದಲುಗೊಂಡು ದಿಬೋನಿನ ವರೆಗೆ ಮೇದೆಬದ ಸಮನಾದ ಭೂಮಿಯೂ ಹೆಷ್ಬೋನಿನಲ್ಲಿ ಆಳಿದ ಅಮೋರಿಯರ ಅರಸನಾದ ಸೀಹೋನನಿಗೆ ಅಮ್ಮೋನಿನ ಮಕ್ಕಳ ಮೇರೆಯ ವರೆಗೂ ಇದ್ದ ಸಕಲ ಪಟ್ಟಣಗಳೂ ಗಿಲ್ಯಾದೂ ಗೆಷೂರ್ಯರ ಮಾಕತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ ಅಷ್ಟರೋತಿನಲ್ಲಿಯೂ ಎದ್ರೈಯ ಲ್ಲಿಯೂ ಆಳಿದ ರಾಕ್ಷಸರಲ್ಲಿ ಮಿಕ್ಕಿದ್ದ ಬಾಷಾನಿನ ಅರಸನಾದ ಓಗನ ರಾಜ್ಯವೆಲ್ಲಾ ಸಮಸ್ತ ರಾಜ್ಯವಾದ ಬಾಷಾನೂ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ ಅವರನ್ನು ಹೊಡೆದು ಹೊರಡಿಸಿದ್ದನು. ಆದಾಗ್ಯೂ ಇಸ್ರಾಯೇಲ್ ಮಕ್ಕಳು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿ ಬಿಡಲಿಲ್ಲ; ಯಾಕಂದರೆ ಗೆಷೂರ್ಯರೂ ಮಾಕತೀಯರೂ ಈ ದಿನದ ವರೆಗೆ ಇಸ್ರಾಯೇಲಿನ ಮಧ್ಯದಲ್ಲಿ ವಾಸವಾಗಿದ್ದಾರೆ. ಆದರೆ ಮೋಶೆಯು ಲೇವಿಯರ ಗೋತ್ರಕ್ಕೆ ಮಾತ್ರ ಯಾವ ಬಾಧ್ಯತೆಯನ್ನೂ ಕೊಡಲಿಲ್ಲ; ಯಾಕಂದರೆ ಅವನು ಅವರಿಗೆ ಹೇಳಿದ ಪ್ರಕಾರ ಇಸ್ರಾಯೇಲಿನ ದೇವರಾದ ಕರ್ತನ ದಹನ ಬಲಿಗಳೇ ಅವರ ಬಾಧ್ಯತೆಯಾಗಿವೆ. ಇದಲ್ಲದೆ ಮೋಶೆಯು ರೂಬೇನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಬಾಧ್ಯತೆ ಯನ್ನು ಕೊಟ್ಟನು. ಅರ್ನೋನ್ ನದಿಯ ತೀರದ ಲ್ಲಿರುವ ಅರೋಯೇರ್ ನದಿಯ ಮಧ್ಯದಲ್ಲಿರುವ ಪಟ್ಟಣವು ಮೊದಲುಗೊಂಡು ಮೇದೆಬದ ಬಳಿ ಯಲ್ಲಿರುವ ಸಕಲ ಸಮನಾದ ಭೂಮಿಯೂ ಸಮನಾದ ಭೂಮಿಯಲ್ಲಿರುವ ಹೆಷ್ಬೋನು ಅದರ ಎಲ್ಲಾ ಪಟ್ಟಣಗಳಾದ ದೀಬೋನು, ಬಾಮೋತ್ಬಾಳ್, ಬೆತ್ಬಾಳ್ಮೆಯೋನ್, ಯಹಚಾ ಕೆದೇಮೋತ್, ಮೇಫಾಯತ್, ಕಿರ್ಯಾತಯಿಮ್, ಸಿಬ್ಮಾ, ತಗ್ಗಿನ ಬೆಟ್ಟದಲ್ಲಿರುವ ಚೆರೆತ್ಶಹರ್, ಬೇತ್ಪಗೋರ್, ಅಷ್ಡೊತ್ಪಿಸ್ಗಾ, ಬೇತ್ಯೆಶಿಮೋತ್, ಹರ್, ಸಮ ನಾದ ಭೂಮಿಯ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳಿದ ಸೀಹೋನನೆಂಬ ಅಮೋರಿಯರ ಅರಸನ ರಾಜ್ಯವೆಲ್ಲವೂ ಅವರ ಮೇರೆಗಳಾದವು. ಮೋಶೆಯು ಅವನನ್ನೂ ದೇಶದಲ್ಲಿ ಅವನ ಅಧಿಪತಿಗಳಾದಂಥ ಮಿದ್ಯಾನಿನ ಪ್ರಧಾನರಾದ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬವರನ್ನೂ ಕೊಂದುಹಾಕಿದನು.
- Numbers 34:13 ಅರಣ್ಯಕಾಂಡ 34:13ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾ ಪಿಸಿ--ನೀವು ಚೀಟಿನಿಂದ ಸ್ವಾಧೀನಪಡಿಸಿಕೊಳ್ಳ ಬೇಕಾದ ದೇಶವು ಒಂಭತ್ತುವರೆ ಗೋತ್ರಗಳಿಗೆ ಕೊಡ ಬೇಕೆಂದು ಕರ್ತನು ಆಜ್ಞಾಪಿಸಿದ ದೇಶವು ಇದೇ.
- Ezekiel 47:13–22 ಯೆಹೆಜ್ಕೇಲನು 47:13–22ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಪ್ರಕಾರ ದೇಶ ವನ್ನು ಬಾಧ್ಯವಾಗಿ ಹೊಂದುವ ಹಾಗೆ ಇದು ಮೇರೆಯಾ ಗಿದೆ; ಯೋಸೇಫನಿಗೆ ಎರಡು ಪಾಲುಗಳು ಕೊಡಲ್ಪ ಟ್ಟಿದೆ. ನೀವು ಒಬ್ಬೊಬ್ಬರೂ ಸರಿಯಾಗಿ ಅದನ್ನು ಬಾಧ್ಯವಾಗಿ ಹೊಂದಬೇಕು; ಅದನ್ನು ನಿಮ್ಮ ಪಿತೃಗಳಿಗೆ ಕೊಡುವ ಹಾಗೆ ನಾನು ಕೈ ಎತ್ತಿದ್ದೇನೆ; ಈ ದೇಶವು ನಿಮಗೆ ಬಾಧ್ಯವಾಗಿ ಬರುವದು. ಇದೇ ದೇಶದ ಮೇರೆಯು ಉತ್ತರದ ಕಡೆಗೆ ಮಹಾಸಮುದ್ರದ ಮೊದಲುಗೊಂಡು ಹೆತ್ಲೋನಿನ ಮಾರ್ಗವಾಗಿ ಚೆದಾ ದಿಗೆ ಸೇರುವ ವರೆಗೂ; ಹಮಾತ್ ಬೇರೋತವು, ದಮಸ್ಕದ ವರೆಗೂ ಹಮಾತಿನ ಮೇರೆಗೂ ಮಧ್ಯವಾಗಿ ರುವ ಸಿಬ್ರಯಿಮ್ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನನ್ನೂ ಮತ್ತು ಸಮುದ್ರದಂತಿ ರುವ ಮೇರೆ ಏನಂದರೆ ಹಾಚರೇನೂ ದಮಸ್ಕದ ಮೇರೆಯೂ ಉತ್ತರದ ಕಡೆಗಿರುವ ಹಮಾತ್ಯರದು ಹಮಾತಿನ ಮೇರೆಯೂ ಉತ್ತರದ ಕಡೆಯದಾಗಿದೆ. ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವು ಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಮೂಡಣ ಸಮುದ್ರದಿಂದ ನೀವು ಅಳೆಯಬೇಕು; ಇದೇ ಮೂಡಣ ಮೇರೆಯಾ ಗಿದೆ. ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರಿನ ವರೆಗೂ ನದಿ ಮೊದಲುಗೊಂಡು ಮಹಾಸಮು ದ್ರದ ವರೆಗೂ ಇರುವದು. ಇದೇ ದಕ್ಷಿಣ ಭಾಗದ ದಕ್ಷಿಣದ ಮೇರೆ. ಪಶ್ಚಿಮದ ಕಡೆಗೂ ಸಹ ಮೇರೆ ಯಿಂದ ಮೊದಲುಗೊಂಡು ಹಮಾತಿನ ಪ್ರದೇಶದ ವರೆಗೂ ಇರುವ ಮಹಾಸಮುದ್ರವು ಪಶ್ಚಿಮದ ಕಡೆ ಗಿದೆ, ಇದೇ ಪಶ್ಚಿಮದ ಮೇರೆ. ಹೀಗೆ ನೀವು ಈ ದೇಶವನ್ನು ಇಸ್ರಾಯೇಲ್ಯರ ಕುಲಗಳ ಪ್ರಕಾರ ಪಾಲುಮಾಡಿ ಕೊಳ್ಳಬೇಕು. ನೀವು ಅದನ್ನು ನಿಮಗೂ ನಿಮ್ಮ ಮಧ್ಯದಲ್ಲಿ ತಂಗುವಂತವರಿಗೂ ನಿಮ್ಮ ಮಧ್ಯದಲ್ಲಿ ಮಕ್ಕಳನ್ನು ಪಡೆದಂತ ಅನ್ಯಜನರಿಗೂ ಚೀಟುಹಾಕಿ ಬಾಧ್ಯವಾಗಿ ವಿಭಾಗಿಸಿ ಹಂಚಬೇಕು; ಅವರು ನಿಮಗೆ ಇಸ್ರಾಯೇಲಿನ ಮಕ್ಕಳೊಳಗೆ ಹುಟ್ಟಿದ ವರಾಗಿರಬೇಕು; ಅವರಿಗೆ ಇಸ್ರಾಯೇಲಿನ ಗೋತ್ರಗ ಳೊಳಗೆ ಬಾಧ್ಯತೆಯಾಗಬೇಕು.ಅನ್ಯರು ಯಾವಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಬಾಧ್ಯತೆ ಕೊಡಬೇಕೆಂದು ದೇವರಾದ ಕರ್ತನು ಹೇಳುತ್ತಾನೆ.