Ezekiel · chapter 48 · verse 4
Ezekiel 48:4 in Kannada
ನಫ್ತಾಲಿಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೆ ಮನಸ್ಸೆಗೆ ಒಂದು ಭಾಗ.
Naphtaaliya mereya baliyalli poorvada kadeyinda pashchimada kadeya varege manassege ondu bhaaga.
Ezekiel 48:4 in English
- King James Version (KJV)
- And by the border of Naphtali, from the east side unto the west side, a [portion for] Manasseh.
- World English Bible (WEB)
- “By the border of Naphtali, from the east side to the west side, Manasseh, one portion.
- American Standard Version (ASV)
- And by the border of Naphtali, from the east side unto the west side, Manasseh, one [portion].
- Bible in Basic English (BBE)
- And on the limit of Naphtali, from the east side to the west side: Manasseh, one part.
- Darby Translation (DBY)
- And by the border of Naphtali, from the east side unto the west side, Manasseh one.
- Webster's Bible (WBS)
- And by the border of Naphtali, from the east side to the west side, a [portion for] Manasseh.
- Young's Literal Translation (YLT)
- and by the border of Naphtali, from the east side unto the west side, Manasseh one,
Read in context
- 2ದಾನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿ ಮದ ವರೆಗೂ ಆಶೇರನಿಗೆ ಒಂದು ಭಾಗವಾಗಿದೆ.
- 3ಆಶೇರನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ನಫ್ತಾಲಿಗೆ ಒಂದು ಭಾಗವಾಗಿದೆ.
- 4ನಫ್ತಾಲಿಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೆ ಮನಸ್ಸೆಗೆ ಒಂದು ಭಾಗ.
- 5ಮನಸ್ಸೆಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಎಫ್ರಾಯಾಮ್ಗೆ ಒಂದು ಭಾಗ.
- 6ಎಫ್ರಾ ಯಾಮ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೆ ರೂಬೇನ್ಗೆ ಒಂದು ಭಾಗ.
Cross references
- Joshua 17:1–11 ಯೆಹೋಶುವ 17:1–11ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗಸಿಕ್ಕಿತು. ಯಾಕಂದರೆ ಅವನು ಯೋಸೇಫ ನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗನಾದ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದದರಿಂದ ಗಿಲ್ಯಾದು ಬಾಷಾನು ಅವನ ಪಾಲಿಗೆ ಬಂದವು; ಮನಸ್ಸೆಯ ಉಳಿದ ಮಕ್ಕಳಾದ ಅಬೀಯೇಜೆರಿನ ಮಕ್ಕಳಿಗೂ ಹೇಲೆಕನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮನ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆವಿಾದನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಬಾಧ್ಯತೆ ಉಂಟಾಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗ ನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು. ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾ ದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರರಿಲ್ಲ; ಆದರೆ ಮಹ್ಲಾ, ನೋವಾ, ಹೋಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಕುಮಾರ್ತೆ ಯರಿದ್ದರು. ಇವರು ಯಾಜಕನಾದ ಎಲ್ಲಾಜಾರನ ಬಳಿಗೂ ನೂನನ ಮಗನಾದ ಯೆಹೋಶುವನ ಬಳಿಗೂ ಪ್ರಧಾನರುಗಳ ಬಳಿಗೂ ಬಂದು ಅವರಿಗೆನಮ್ಮ ಸಹೋದರರಲ್ಲಿ ನಮಗೆ ಬಾಧ್ಯತೆಯನ್ನು ಕೊಡು ವಂತೆ ಕರ್ತನು ಮೋಶೆಗೆ ಆಜ್ಞಾಪಿಸಿದನು ಅಂದರು. ಆದದರಿಂದ ಅವರ ತಂದೆಗಳ ಸಹೋದರರ ಮಧ್ಯ ದಲ್ಲಿ ಅವರಿಗೆ ಕರ್ತನ ವಾಕ್ಯದ ಹಾಗೆಯೇ ಬಾಧ್ಯತೆ ಯನ್ನು ಕೊಟ್ಟನು. ಯೊರ್ದನಿಗೆ ಆಚೆಯಲ್ಲಿರುವ ಗಿಲ್ಯಾದೂ ಬಾಷಾನೂ ಎಂಬ ದೇಶಗಳ ಹೊರತು ಮನಸ್ಸೆಗೆ ಚೀಟಿನಲ್ಲಿ ಬಿದ್ದ ದೇಶ ಹತ್ತು ಪಾಲು ಸಿಕ್ಕಿದವು. ಇದಲ್ಲದೆ ಮನಸ್ಸೆಯ ಕುಮಾರ್ತೆಯರು ಅವನ ಕುಮಾರರಲ್ಲಿ ಬಾಧ್ಯತೆಯನ್ನು ಹೊಂದಿದರು. ಆದರೆ ಉಳಿದ ಮನಸ್ಸೆಯ ಕುಮಾರರಿಗೆ ಗಿಲ್ಯಾದ್ ದೇಶ ದೊರೆಯಿತು. ಮನಸ್ಸೆಯ ಮೇರೆ ಯಾವದಂದರೆ; ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿಗೂ ಅಲ್ಲಿಂದ ಬಲ ಪಾರ್ಶ್ವವಾಗಿ ತಪ್ಪೂಹದ ನಿವಾಸಗಳಿಗೆ ಹೋಗುವದು. ತಪ್ಪೂಹ ಭೂಮಿ ಮನಸ್ಸೆಯದಾಗಿತ್ತು. ಆದರೆ ಮನಸ್ಸೆಯ ಮೇರೆಯಲ್ಲಿರುವ ತಪ್ಪೂಹ ಎಫ್ರಾಯಾ ಮನ ಮಕ್ಕಳದ್ದಾಗಿತ್ತು. ಆ ಮೇರೆ ಕಾನಾ ನದಿಯ ದಕ್ಷಿಣಕ್ಕೆ ನದಿಯವರೆಗೂ ಇಳಿದು ಹೋಗುವದು. ಅಲ್ಲಿರುವ ಮನಸ್ಸೆಯ ಪಟ್ಟಣಗಳಲ್ಲಿ ಕೆಲವು ಪಟ್ಟಣಗಳು ಎಫ್ರಾಯಾಮನವಾಗಿದ್ದವು. ಮನಸ್ಸೆಯ ಮೇರೆಯು ನದಿಯ ಉತ್ತರಕ್ಕಿರುವ ಸಮುದ್ರದ ವರೆಗೂ ಹೋಗಿ ರುವದು. ನದಿಯ ದಕ್ಷಿಣ ಸೀಮೆ ಎಫ್ರಾಯಾಮ ನದು; ಉತ್ತರ ಸೀಮೆಯು ಮನಸ್ಸೆಯದು, ಸಮುದ್ರವು ಅದರ ಮೇರೆಯಾಗಿರುವದು. ಉತ್ತರಕ್ಕೆ ಇರುವ ಆಶೇರಿನಿಂದ ಪೂರ್ವಕ್ಕೆ ಇರುವ ಇಸ್ಸಾಕಾರನ ವರೆಗೆ ಒಟ್ಟಿಗೆ ಕೂಡಿಕೊಳ್ಳುವದು. ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದ ಲ್ಲಿಯೂ ಇರುವ ಮೂರು ಸೀಮೆಗಳಾದ ಬೇತ್ಷೆ ಯಾನ್ ಇಬ್ಲೆಯಾಮ್ ದೋರ್ ಎಂದೋರ್ ತಾನಕ್ ಮೆಗಿದ್ದೋನ್ ಅವುಗಳ ಗ್ರಾಮಗಳೂ ಇವು ಮನಸ್ಸೆ ಯವು.
- Joshua 13:29–31 ಯೆಹೋಶುವ 13:29–31ಇದಲ್ಲದೆ ಮನೆಸ್ಸೆಯ ಮಕ್ಕಳ ಅರ್ಧಗೋತ್ರಕ್ಕೆ ಮೋಶೆಯು ಅವರ ಕುಟುಂಬದ ಪ್ರಕಾರ ಸ್ವಾಸ್ತ್ಯವನ್ನು ಕೊಟ್ಟನು. ಅದು ಯಾವದಂದರೆ, ಮಹನಯಾಮಿ ನಿಂದ ಬಾಷಾನಿನ ಅರಸನಾದ ಓಗನ ಸಮಸ್ತ ರಾಜ್ಯವಾಗಿರುವ ಬಾಷಾನೆಲ್ಲವೂ ಬಾಷಾನಿನಲ್ಲಿರುವ ಯಾಯಾರಿನ ಸಮಸ್ತ ಊರುಗಳಾದ ಅರವತ್ತು ಪಟ್ಟಣಗಳೂ ಅವರ ಮೇರೆಗೆ ಒಳಗಾದವು. ಗಿಲ್ಯಾದಿ ನಲ್ಲಿ ಅರ್ಧವನ್ನೂ ಬಾಷಾನಿನಲ್ಲಿ ಅಷ್ಟರೋತ್, ಎದ್ರೈ ಎಂಬ ಓಗನ ರಾಜ್ಯದ ಪಟ್ಟಣಗಳನ್ನೂ ಮನಸ್ಸೆಯ ಮಗನಾದ ಮಾಕೀರನ ಮಕ್ಕಳಿಗೆ, ಅವರ ಕುಟುಂಬಗಳ ಪ್ರಕಾರ ಮಾಕೀರನ ಮಕ್ಕಳಲ್ಲಿ ಅರ್ಧ ಜನಕ್ಕೆ ಕೊಟ್ಟನು.
- Genesis 41:51 ಆದಿಕಾಂಡ 41:51ಚೊಚ್ಚಲ ಮಗನಿಗೆ ಯೋಸೇಫನು ಮನಸ್ಸೆ ಎಂದು ಹೆಸರಿಟ್ಟನು. ಯಾಕಂದರೆ ಅವನು--ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನೆಲ್ಲಾ ಮರೆತುಬಿಡುವಂತೆ ಮಾಡಿದನು ಅಂದನು.
- Genesis 30:22–24 ಆದಿಕಾಂಡ 30:22–24ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿ ಕೊಂಡನು. ದೇವರು ಆಕೆಯನ್ನು ಆಲೈಸಿ ಆಕೆಯ ಗರ್ಭವನ್ನು ತೆರೆದನು. ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾನೆ ಅಂದಳು. ಆಕೆಯು--ಕರ್ತನು ನನಗೆ ಮತ್ತೊಬ್ಬ ಮಗನನ್ನು ಕೂಡಿಸುವನೆಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು.
- Genesis 48:14–20 ಆದಿಕಾಂಡ 48:14–20ಆಗ ಇಸ್ರಾಯೇಲನು ತನ್ನ ಬಲಗೈಯನ್ನು ಚಾಚಿ ಚಿಕ್ಕವನಾದ ಎಫ್ರಾಯಾಮನ ತಲೆಯ ಮೇಲೆಯೂ ತನ್ನ ಎಡಗೈಯನ್ನು ಮನಸ್ಸೆಯ ತಲೆಯ ಮೇಲೆಯೂ ಇಟ್ಟನು. ಮನಸ್ಸೆಯು ಹಿರಿಯವನಾಗಿದ್ದರೂ ಬೇಕೆಂದೇ ಅವನು ತನ್ನ ಕೈಗಳನ್ನು ಹಾಗೆ ಇಟ್ಟನು. ಆಗ ಅವನು ಯೋಸೇಫನನ್ನು ಆಶೀರ್ವದಿಸಿ--ನನ್ನ ತಂದೆಗಳಾದ ಅಬ್ರಹಾಮನೂ ಇಸಾಕನೂ ಯಾವಾತನ ಮುಂದೆ ನಡಕೊಂಡರೋ ಆ ದೇವರೇ, ನಾನು ಹುಟ್ಟಿದಂದಿನಿಂದ ಇಂದಿನ ವರೆಗೆ ನನ್ನನ್ನು ಪೋಷಣೆ ಮಾಡಿದ ದೇವರು, ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ದೂತನು ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದ ನನ್ನ ತಂದೆಗಳಾದ ಅಬ್ರಹಾಮ್ ಇಸಾಕ್ ಅವರ ಹೆಸರಿನಿಂದ ಅವರು ಕರೆಯಲ್ಪಡಲಿ. ಅವರು ಭೂಮಧ್ಯದಲ್ಲಿ ಸಮೂಹವಾಗಿ ಹೆಚ್ಚಲಿ ಅಂದನು. ತನ್ನ ತಂದೆಯು ಎಫ್ರಾಯಾಮನ ತಲೆಯ ಮೇಲೆ ಬಲಗೈ ಇಟ್ಟದ್ದನ್ನು ಯೋಸೇಫನು ನೋಡಿದಾಗ ಅದು ಅವನ ದೃಷ್ಟಿಗೆ ಅಯುಕ್ತವಾಗಿತ್ತು. ಆದದರಿಂದ ಅವನು ತನ್ನ ತಂದೆಯ ಕೈಯನ್ನು ಹಿಡಿದು ಎಫ್ರಾಯಾಮನ ತಲೆಯ ಮೇಲಿಂದ ತೆಗೆದು ಮನಸ್ಸೆಯ ತಲೆಯ ಮೇಲೆ ಇಡುವದಕ್ಕಿದ್ದನು. ಯೋಸೇಫನು ತನ್ನ ತಂದೆಗೆ--ನನ್ನ ಅಪ್ಪಾ, ಹಾಗಲ್ಲ, ಇವನೇ ಚೊಚ್ಚಲ ಮಗನು. ಇವನ ತಲೆಯ ಮೇಲೆ ಬಲಗೈ ಇಡು ಅಂದನು. ಅದಕ್ಕೆ ಅವನ ತಂದೆಯು ಒಪ್ಪದೆ--ನನಗೆ ತಿಳಿಯಿತು, ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವದಲ್ಲದೆ ಅವನು ದೊಡ್ಡವನಾ ಗುವನು. ಆದಾಗ್ಯೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತ ತಿಯು ಜನಾಂಗಗಳ ಸಮೂಹವಾಗುವದು ಅಂದನು. ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವ ದಿಸಿ--ನಿನ್ನಲ್ಲಿ ಇಸ್ರಾಯೇಲ್ ಆಶೀರ್ವದಿಸಲ್ಪಡು ವದು. ಎಫ್ರಾಯಾಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲೆಂದು ಹೇಳುವ ಹೇಳಿಕೆಯಾಗುವದು ಎಂದು ಹೇಳಿ ಎಫ್ರಾಯಾಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.
- Genesis 48:5 ಆದಿಕಾಂಡ 48:5ಈಗ ನಾನು ನಿನ್ನ ಬಳಿಗೆ ಐಗುಪ್ತಕ್ಕೆ ಬರುವ ಮೊದಲು ಐಗುಪ್ತದಲ್ಲಿ ನಿನಗೆ ಹುಟ್ಟಿದ ಇಬ್ಬರು ಕುಮಾರರಾದ ಎಫ್ರಾಯಾಮ್ ಮನಸ್ಸೆಯರು ನನ್ನ ವರು ಮತ್ತು ಅವರು ರೂಬೇನ್ ಸಿಮೆಯೋನ್ ಇವ ರಂತೆ ನನ್ನವರಾಗಿರಬೇಕು.