Ezekiel · chapter 7 · verse 12
Ezekiel 7:12 in Kannada
ಕಾಲವು ಬಂತು, ದಿನವು ಸವಿಾಪ ವಾಯಿತು; ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲ ದಿರಲಿ, ಮಾರುವವನು ದುಃಖಿಸದಿರಲಿ; ಯಾಕಂದರೆ ಎಲ್ಲಾ ಜನಸಮೂಹದ ಮೇಲೆ ರೌದ್ರವಿದೆ.
Kaalavu bantu, dinavu saviాpa vaayitu; kondukolluvavanige santoshavilla dirali, maaruvavanu duhkhisadirali; yaakandare ellaa janasamoohada mele raudravide.
Ezekiel 7:12 in English
- King James Version (KJV)
- The time is come, the day draweth near: let not the buyer rejoice, nor the seller mourn: for wrath [is] upon all the multitude thereof.
- World English Bible (WEB)
- The time has come! The day draws near. Don’t let the buyer rejoice, nor the seller mourn; for wrath is on all its multitude.
- American Standard Version (ASV)
- The time is come, the day draweth near: let not the buyer rejoice, nor the seller mourn; for wrath is upon all the multitude thereof.
- Bible in Basic English (BBE)
- The time has come, the day is near: let not him who gives a price for goods be glad, or him who gets the price have sorrow:
- Darby Translation (DBY)
- The time is come, the day draweth near: let not the buyer rejoice, nor the seller mourn; for fierce anger is upon all the multitude thereof.
- Webster's Bible (WBS)
- The time is come, the day draweth near: let not the buyer rejoice, nor the seller mourn: for wrath [is] upon all the multitude thereof.
- Young's Literal Translation (YLT)
- Come hath the time, arrived hath the day, The buyer doth not rejoice, And the seller doth not become a mourner, For wrath [is] unto all its multitude.
Read in context
- 10ಇಗೋ, ಆ ದಿನವು ಬಂತು, ಮುಂಜಾನೆ ಹೊರಟುಹೋಯಿತು. ಕೋಲು ಚಿಗು ರಿತು, ಗರ್ವ ಅರಳಿತು.
- 11ಬಲಾತ್ಕಾರವು ದುಷ್ಟತ್ವದ ಕೋಲಾಗಿ ಎದ್ದಿತು; ಅವರಲ್ಲಿಯೂ ಅವರ ಜನ ಸಮೂಹದಲ್ಲಿಯೂ ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವದಿಲ್ಲ; ಅವರಿಗೋಸ್ಕರ ಗೋಳಾಟವೂ ಇರುವದಿಲ್ಲ.
- 12ಕಾಲವು ಬಂತು, ದಿನವು ಸವಿಾಪ ವಾಯಿತು; ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲ ದಿರಲಿ, ಮಾರುವವನು ದುಃಖಿಸದಿರಲಿ; ಯಾಕಂದರೆ ಎಲ್ಲಾ ಜನಸಮೂಹದ ಮೇಲೆ ರೌದ್ರವಿದೆ.
- 13ಮಾರಿ ದವನು ಇನ್ನೂ ಬದುಕಿದ್ದರೂ ಮಾರಿದ್ದರ ಬಳಿಗೆ ಹಿಂತಿರುಗುವದಿಲ್ಲ; ದರ್ಶನವು ತಿರುಗದ ಸಮಸ್ತ ಜನಸಮೂಹದ ವಿಷಯವಾಗಿದೆ. ಒಬ್ಬರೂ ತಮ್ಮ ಜೀವದ ಅಕ್ರಮದಲ್ಲಿ ಬಲಗೊಳ್ಳುವದಿಲ್ಲ.
- 14ಅವರು ಕಹಳೆಯನ್ನೂದಿ ಎಲ್ಲವನ್ನೂ ಸಿದ್ಧಮಾಡಿಕೊಂಡಿದ್ದಾರೆ, ಆದರೆ ಯಾರೂ ಯುದ್ಧಕ್ಕೆ ಹೋಗುವದಿಲ್ಲ; ಯಾಕಂದರೆ ಎಲ್ಲಾ ಜನ ಸಮೂಹದ ಮೇಲೆ ನನ್ನ ಕೋಪವಿದೆ.
Cross references
- Isaiah 5:13–14 ಯೆಶಾಯ 5:13–14ಆದಕಾರಣ ನನ್ನ ಪ್ರಜೆಯು ಜ್ಞಾನಹೀನರಾದದರಿಂದ ಅವರು ಸೆರೆಗೆ ಹೋದರು; ಅವರ ಘನವಂತರು ಹಸಿಯು ವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವದು. ಹೀಗಿರುವದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ಮಹಿಮೆ, ಸಮೂ ಹವು, ಕೋಲಾಹಲ, ಉಲ್ಲಾಸಪಡುವದು ಇವೆಲ್ಲವೂ ಅದರಲ್ಲಿ ಬೀಳುವವು.
- 1 Corinthians 7:29–31 1 ಕೊರಿಂಥದವರಿಗೆ 7:29–31ಆದರೆ ಸಹೋದರರೇ, ನಾನು ಹೇಳುವದೇ ನಂದರೆ--ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವ ರಂತೆಯೂ ಅಳುವವರು ಅಳದವರಂತೆಯೂ ಸಂತೋಷಪಡುವವರು ಸಂತೋಷಪಡದವ ರಂತೆಯೂ ಕೊಂಡುಕೊಳ್ಳುವವರು ಇಲ್ಲದವ ರಂತೆಯೂ ಲೋಕವನ್ನು ಅನುಭೋಗಿಸುವವರು ಅದನ್ನು ದುರುಪಯೋಗ ಮಾಡದವರಂತೆಯೂ ಇರಬೇಕು; ಯಾಕಂದರೆ ಈ ಲೋಕದ ಆಡಂಬರವು ಗತಿಸಿಹೋಗುತ್ತದೆ.
- Isaiah 24:1–2 ಯೆಶಾಯ 24:1–2ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ. ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೂ ದಾಸನಿಗೆ ಹೇಗೋ ಹಾಗೆಯೇ ಅವನ ಯಜಮಾನನಿಗೆ, ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ತರುವ ವನಿಗೆ; ಬಡ್ಡಿಕೊಡುವವನಿಗೆ ಹೇಗೋ ಹಾಗೆಯೇ ತಕ್ಕೊಳ್ಳುವವನಿಗೆ ಆಗುವದು.
- Ezekiel 6:11–12 ಯೆಹೆಜ್ಕೇಲನು 6:11–12ದೇವರಾದ ಕರ್ತನು ಹೇಳುವದೇನಂದರೆ; ನಿನ್ನ ಕೈಯಿಂದ ಬಡಿದು ನಿನ್ನ ಪಾದದಿಂದ ತುಳಿದು ಹೇಳ ಬೇಕಾದದ್ದೇನಂದರೆ--ಮನೆಯವರ ಸಮಸ್ತ ಕೆಟ್ಟ ಅಸಹ್ಯಗಳೇ ಅಯ್ಯೋ, ಅವರು ಕತ್ತಿಯಿಂದಲೂ ಬರ ದಿಂದಲೂ ಮತ್ತು ವ್ಯಾಧಿಗಳಿಂದಲೂ ಬೀಳುವರು. ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು; ಹತ್ತಿರದಲ್ಲಿರುವವನು ಕತ್ತಿಯಿಂದ ಬೀಳುವನು; ಉಳಿದು ಮುತ್ತಿಗೆಯಲ್ಲಿರುವವನು ಬರದಿಂದ ಸಾಯುವನು; ಹೀಗೆ ನಾನು ಅವರ ಮೇಲೆ ನನ್ನ ಉಗ್ರತೆಯನ್ನು ತೀರಿಸಿಕೊಳ್ಳುವೆನು.
- Jeremiah 32:7–8 ಯೆರೆಮೀಯ 32:7–8ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾದ ಹನಮೇಲನು ನಿನ್ನ ಬಳಿಗೆ ಬಂದು--ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಅದನ್ನು ಕೊಂಡುಕೊಳ್ಳುವ ಹಾಗೆ ವಿಮೋಚಿಸುವ ಅಧಿಕಾರ ನಿನಗುಂಟು ಎಂದು ಹೇಳುವನು. ಹಾಗೆಯೇ ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕರ್ತನ ವಾಕ್ಯದ ಪ್ರಕಾರ ನನ್ನ ಬಳಿಗೆ ಸೆರೆಮನೆಯ ಅಂಗಳಕ್ಕೆಬಂದು--ಬೆನ್ಯಾವಿಾನನ ದೇಶದ ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ, ಬಾಧ್ಯದ ಅಧಿಕಾರವೂ ವಿಮೋಚನೆಯೂ ನಿನ್ನದು; ಅದನ್ನು ನಿನಗೋಸ್ಕರ ಕೊಂಡುಕೋ ಎಂದು ಬೇಡಿಕೊಂಡು ಹೇಳಿದನು. ಆಗ ಅದು ಕರ್ತನ ವಾಕ್ಯವೆಂದು ನಾನು ತಿಳುಕೊಂಡೆನು.
- Ezekiel 7:10 ಯೆಹೆಜ್ಕೇಲನು 7:10ಇಗೋ, ಆ ದಿನವು ಬಂತು, ಮುಂಜಾನೆ ಹೊರಟುಹೋಯಿತು. ಕೋಲು ಚಿಗು ರಿತು, ಗರ್ವ ಅರಳಿತು.
- Ezekiel 7:5–7 ಯೆಹೆಜ್ಕೇಲನು 7:5–7ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಕೇಡು ಒಂದೇ ಒಂದು ಕೇಡು, ಇಗೋ, ಬಂತು. ಅಂತ್ಯವು ಬಂತು. ಅಂತ್ಯವು ಬಂದು ಅದು ನಿನಗೋಸ್ಕರ ಕಾಯುತ್ತಾ ಇದೆ. ಇಗೋ, ಅದು ಬಂತು. ಓ ದೇಶದಲ್ಲಿ ವಾಸಿಸುವವನೇ, ನಿನಗಾಗಿ ಮುಂಜಾನೆ ಬಂತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು ಮತ್ತು ಪರ್ವತಗಳ ಆರ್ಭಟದ ಧ್ವನಿ ಇಲ್ಲ.
- James 5:8–9 ಯಾಕೋಬನು 5:8–9ನೀವೂ ದೀರ್ಘಶಾಂತಿಯಿಂದಿರ್ರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಯಾಕಂದರೆ ಕರ್ತನ ಪ್ರತ್ಯ ಕ್ಷತೆಯು ಹತ್ತಿರವಾಯಿತು. ಸಹೋದರರೇ, ನೀವು ಒಬ್ಬರನ್ನೊಬ್ಬರು ದ್ವೇಷಿಸಬೇಡಿರಿ; ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಲಿನ ಮುಂದೆಯೇ ನಿಂತಿದ್ದಾನೆ.
- Ezekiel 7:13–14 ಯೆಹೆಜ್ಕೇಲನು 7:13–14ಮಾರಿ ದವನು ಇನ್ನೂ ಬದುಕಿದ್ದರೂ ಮಾರಿದ್ದರ ಬಳಿಗೆ ಹಿಂತಿರುಗುವದಿಲ್ಲ; ದರ್ಶನವು ತಿರುಗದ ಸಮಸ್ತ ಜನಸಮೂಹದ ವಿಷಯವಾಗಿದೆ. ಒಬ್ಬರೂ ತಮ್ಮ ಜೀವದ ಅಕ್ರಮದಲ್ಲಿ ಬಲಗೊಳ್ಳುವದಿಲ್ಲ. ಅವರು ಕಹಳೆಯನ್ನೂದಿ ಎಲ್ಲವನ್ನೂ ಸಿದ್ಧಮಾಡಿಕೊಂಡಿದ್ದಾರೆ, ಆದರೆ ಯಾರೂ ಯುದ್ಧಕ್ಕೆ ಹೋಗುವದಿಲ್ಲ; ಯಾಕಂದರೆ ಎಲ್ಲಾ ಜನ ಸಮೂಹದ ಮೇಲೆ ನನ್ನ ಕೋಪವಿದೆ.
- Jeremiah 32:24–25 ಯೆರೆಮೀಯ 32:24–25ಇಗೋ, ಪರ್ವತಗಳು ಪಟ್ಟಣದ ಬಳಿಗೆ ಅದನ್ನು ಹಿಡಿಯುವ ಹಾಗೆ ಬಂದಿವೆ; ಪಟ್ಟಣವು ಅದಕ್ಕೆ ವಿರೋಧವಾಗಿ ಯುದ್ಧ ಮಾಡುವ ಕಸ್ದೀಯರ ಕೈಯಲ್ಲಿ ಕತ್ತಿ, ಕ್ಷಾಮ, ಜಾಡ್ಯಗಳ ಮೂಲಕವಾಗಿ ಒಪ್ಪಿಸಲ್ಪಟ್ಟಿದೆ; ನೀನು ಹೇಳಿದ್ದು ಉಂಟಾಯಿತು; ಇಗೋ, ನೀನು ಅದನ್ನು ನೋಡುತ್ತೀ. ಆದರೂ ಓ ಕರ್ತನಾದ ದೇವರೇ, ನೀನು ನನಗೆ--ಹೊಲವನ್ನು ಹಣಕ್ಕೆ ಕೊಂಡುಕೋ; ಸಾಕ್ಷಿಗಳನ್ನು ಇಡು ಎಂದು ಹೇಳಿದ್ದೀ; ಆದಾಗ್ಯೂ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಟ್ಟಿದೆಯಲ್ಲಾ?