Isaiah · chapter 5 · verse 13
Isaiah 5:13 in Kannada
ಆದಕಾರಣ ನನ್ನ ಪ್ರಜೆಯು ಜ್ಞಾನಹೀನರಾದದರಿಂದ ಅವರು ಸೆರೆಗೆ ಹೋದರು; ಅವರ ಘನವಂತರು ಹಸಿಯು ವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವದು.
Aadakaarana nanna prajeyu jnyaanaheenaraadadarinda avaru serege hodaru; avara ghanavantaru hasiyu varu, haage janasamoohavu baayaarikeyinda onaguvadu.
Isaiah 5:13 in English
- King James Version (KJV)
- Therefore my people are gone into captivity, because [they have] no knowledge: and their honourable men [are] famished, and their multitude dried up with thirst.
- World English Bible (WEB)
- Therefore my people go into captivity for lack of knowledge. Their honorable men are famished, and their multitudes are parched with thirst.
- American Standard Version (ASV)
- Therefore my people are gone into captivity for lack of knowledge; and their honorable men are famished, and their multitude are parched with thirst.
- Bible in Basic English (BBE)
- For this cause my people are taken away as prisoners into strange countries for need of knowledge: and their rulers are wasted for need of food, and their loud-voiced feasters are dry for need of water.
- Darby Translation (DBY)
- Therefore my people are led away captive from lack of knowledge, and their nobility die of famine, and their multitude are parched with thirst.
- Webster's Bible (WBS)
- Therefore my people have gone into captivity, because [they have] no knowledge: and their honorable men [are] famished, and their multitude dried up with thirst.
- Young's Literal Translation (YLT)
- Therefore my people removed without knowledge, And its honourable ones are famished, And its multitude dried up of thirst.
Read in context
- 11ಮದ್ಯಪಾನವನ್ನು ಅತಿಯಾಗಿ ಕುಡಿಯಲು ಬೆಳ ಗಿನ ಜಾವದಲ್ಲಿ ಎದ್ದು ರಾತ್ರಿಯ ವರೆಗೂ ದ್ರಾಕ್ಷಾ ರಸದಿಂದ ಅಮಲೇರಿದವರಾಗಿ ಕಾಲ ಕಳೆಯುವವರಿಗೆ ಅಯ್ಯೋ!
- 12ಅವರ ಹಬ್ಬಗಳಲ್ಲಿ ಕಿನ್ನರಿ, ವೀಣೆ, ದಮ್ಮಡಿ, ಕೊಳಲು ದ್ರಾಕ್ಷಾರಸವು ಇರುವವು; ಆದರೆ ಕರ್ತನ ಕೆಲಸವನ್ನು ಅವರು ಲಕ್ಷಿಸರು ಇಲ್ಲವೆ ಆತನ ಕೈಕೆಲಸವನ್ನು ಆಲೋಚಿಸುವದಿಲ್ಲ.
- 13ಆದಕಾರಣ ನನ್ನ ಪ್ರಜೆಯು ಜ್ಞಾನಹೀನರಾದದರಿಂದ ಅವರು ಸೆರೆಗೆ ಹೋದರು; ಅವರ ಘನವಂತರು ಹಸಿಯು ವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವದು.
- 14ಹೀಗಿರುವದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ಮಹಿಮೆ, ಸಮೂ ಹವು, ಕೋಲಾಹಲ, ಉಲ್ಲಾಸಪಡುವದು ಇವೆಲ್ಲವೂ ಅದರಲ್ಲಿ ಬೀಳುವವು.
- 15ಮನುಷ್ಯನು ತಗ್ಗಿಸಲ್ಪಡು ವನು ಬಲಿಷ್ಠ ಮನುಷ್ಯನು ಕುಗ್ಗಿಸಲ್ಪಡುವನು. ಅಹಂಭಾವದ ಕಣ್ಣುಗಳು ಕಂಗೆಡುವವು.
Cross references
- Hosea 4:6 ಹೋಶೇಯ 4:6ನನ್ನ ಜನರು ತಿಳುವಳಿ ಕೆಯ ಕೊರತೆಯಿಂದ ನಾಶವಾಗಿದ್ದಾರೆ; ಆದಕಾರಣ ನೀನು ತಿಳುವಳಿಕೆಯನ್ನು ತಳ್ಳಿಬಿಟ್ಟದ್ದರಿಂದ ನಾನು ಸಹ ನನಗೆ ಯಾಜಕನಾಗದಂತೆ ನಿನ್ನನ್ನು ತಳ್ಳಿಬಿಡುತ್ತೇನೆ; ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು.
- Isaiah 1:3 ಯೆಶಾಯ 1:3ಎತ್ತು ತನ್ನ ಯಜಮಾನನನ್ನು ಮತ್ತು ಕತ್ತೆಯು ತನ್ನ ಒಡೆ ಯನ ಕೊಟ್ಟಿಗೆಯನ್ನು ತಿಳಿದಿರುವವು; ಆದರೆ ಇಸ್ರಾ ಯೇಲಿಗೆ ತಿಳಿದಿಲ್ಲ; ನನ್ನ ಜನರು ಆಲೋಚಿಸುವ ದಿಲ್ಲ.
- Isaiah 27:11 ಯೆಶಾಯ 27:11ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿ ಯಲ್ಪಡುವವು, ಹೆಂಗಸರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು; ಅದು ವಿವೇಕವುಳ್ಳ ಜನ ವಲ್ಲ. ಆದದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವದಿಲ್ಲ. ಅವರನ್ನು ರೂಪಿಸಿದಾತನು ಅವರನ್ನು ಕರುಣಿಸುವದಿಲ್ಲ.
- Isaiah 1:7 ಯೆಶಾಯ 1:7ನಿಮ್ಮ ದೇಶವು ಹಾಳಾಗಿದೆ; ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟುಹೋಗಿವೆ; ನಿಮ್ಮ ಭೂಮಿಯನ್ನು ಅನ್ಯರು ನಿಮ್ಮೆದುರಿಗೆ ನುಂಗಿ ಬಿಡು ತ್ತಿದ್ದಾರೆ. ಅದು ಅನ್ಯರಿಂದ ಕೆಡವಲ್ಪಟ್ಟಂತೆ ಹಾಳಾ ಗಿದೆ.
- Romans 1:28 ರೋಮಾಪುರದವರಿಗೆ 1:28ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.
- John 3:19–20 ಯೋಹಾನನು 3:19–20ಆ ತೀರ್ಪು ಏನಂದರೆ, ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕ್ರಿಯೆಗಳು ಕೆಟ್ಟವುಗಳಾ ಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು. ಕೆಟ್ಟದ್ದನ್ನು ಮಾಡುವ ಪ್ರತಿ ಯೊಬ್ಬನು ತನ್ನ ಕೃತ್ಯಗಳು ಖಂಡಿಸಲ್ಪಟ್ಟಾವೆಂದು ಬೆಳಕನ್ನು ಹಗೆಮಾಡುತ್ತಾನೆ ಮತ್ತು ಬೆಳಕಿಗೆ ಬರುವದಿಲ್ಲ.
- Lamentations 4:9 ಪ್ರಲಾಪಗಳು 4:9ಕತ್ತಿಯಿಂದ ಹತರಾದವರು ಹಸಿವೆ ಯಿಂದ ಹತರಾದವರಿಗಿಂತ ಲೇಸು, ಇವರು ಭೂಫಲ ಗಳಿಲ್ಲದೆ ಕ್ಷಾಮದಿಂದ ತಿವಿಯಲ್ಪಟ್ಟು ಕ್ಷೀಣಿಸಿ ಹೋಗುತ್ತಾರೆ.
- Jeremiah 8:7 ಯೆರೆಮೀಯ 8:7ಹೌದು, ಆಕಾಶ ದಲ್ಲಿ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿ ಯುತ್ತದೆ; ಪಾರಿವಾಳವೂ ಬಾನಕ್ಕಿಯೂ ಕೊಕ್ಕರೆಯೂ ತಾವು ಬರತಕ್ಕ ಸಮಯವನ್ನು ಗಮನಿಸುತ್ತವೆ. ಆದರೆ ನನ್ನ ಜನರು ಕರ್ತನ ನ್ಯಾಯ ತೀರ್ಪನ್ನು ಅರಿಯರು.
- Lamentations 4:4–5 ಪ್ರಲಾಪಗಳು 4:4–5ಮೊಲೆಕೂಸಿನ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ, ಎಳೆಕೂಸುಗಳು ರೊಟ್ಟಿ ಕೇಳುತ್ತವೆ; ಆದರೆ ಅವರಿಗೆ ಯಾರೂ ಕೊಡುವದಿಲ್ಲ. ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ.
- 2 Peter 3:5 2 ಪೇತ್ರನು 3:5ಅವರು ಇದನ್ನು ಬೇಕೆಂದು ತಿಳಿಯಲಾರರು; ಅದೇನಂದರೆ ಪೂರ್ವದಲ್ಲಿದ್ದ ಆಕಾಶಗಳೂ ನೀರಿನ ಹೊರಗೆ ಮತ್ತು ನೀರಿನ ಒಳಗೆ ನಿಂತಿರುವ ಭೂಮಿಯೂ ದೇವರ ವಾಕ್ಯದಿಂದ ಉಂಟಾಗಿ
- Matthew 23:16–27 ಮತ್ತಾಯನು 23:16–27ಕುರುಡರಾದ ಮಾರ್ಗದರ್ಶಕರೇ, ನಿಮಗೆ ಅಯ್ಯೋ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಅನ್ನುತ್ತೀರಿ; ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಸಾಲಗಾರನು ಎಂದು ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಚಿನ್ನವೋ ಇಲ್ಲವೆ ಚಿನ್ನವನ್ನು ಪಾವನ ಮಾಡುವ ದೇವಾಲಯವೋ? ಯಾರಾದರೂ ಯಜ್ಞವೇದಿಯ ಮೇಲೆ ಆಣೆಯಿಡುವದಾದರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅವನು ಅಪರಾಧಿ ಯೆಂದೂ ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಕಾಣಿಕೆಯೋ ಇಲ್ಲವೆ ಕಾಣಿಕೆಯನ್ನು ಪಾವನಮಾಡುವ ಯಜ್ಞವೇದಿಯೋ? ಆದದರಿಂದ ಯಜ್ಞವೇದಿಯ ಮೇಲೆ ಆಣೆಯಿಡು ವವನು ಅದರ ಮೇಲೆಯೂ ಅದರಲ್ಲಿರುವಂಥವುಗಳ ಮೇಲೆಯೂ ಆಣೆಯಿಡುವವನಾಗಿದ್ದಾನೆ. ದೇವಾ ಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಯೂ ಆದರಲ್ಲಿ ವಾಸಿಸುವಾತನ ಮೇಲೆಯೂ ಆಣೆ ಯಿಡುವವನಾಗಿದ್ದಾನೆ. ಪರಲೋಕದ ಮೇಲೆ ಆಣೆ ಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಕೂತಿರುವಾತನ ಮೇಲೆಯೂ ಆಣೆಯಿಡುವವನಾಗಿದ್ದಾನೆ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮರುಗ ಸೋಪು ಜೀರಿಗೆ ಗಳಲ್ಲಿ ದಶಮ ಭಾಗವನ್ನು ಸಲ್ಲಿಸುತ್ತೀರಿ. ಆದರೆ ನ್ಯಾಯ ಪ್ರಮಾಣದ ತೀರ್ಪು ಕರುಣೆ ನಂಬಿಕೆ ಎಂಬ ಈ ಪ್ರಾಮುಖ್ಯವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗ ಳೊಂದಿಗೆ ಆ ಬೇರೆಯವುಗಳನೂ ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೇ ಸೋಸುವವರು ಮತ್ತು ಒಂಟೇ ನುಂಗುವವರು. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗ ವನ್ನು ಶುಚಿಮಾಡು; ಆಗ ಅವುಗಳ ಹೊರ ಭಾಗವೂ ಶುಚಿಯಾಗುವದು. ಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸುಣ್ಣಾ ಹಚ್ಚಿದ ಸಮಾಧಿ ಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ; ಆದರೆ ಒಳಗೆ ಸತ್ತವರ ಎಲುಬು ಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರು ತ್ತವೆ.
- Jeremiah 14:3 ಯೆರೆಮೀಯ 14:3ಅವರ ಶ್ರೇಷ್ಠರು ತಮ್ಮ ಚಿಕ್ಕವರನ್ನು ನೀರಿಗೆ ಕಳುಹಿಸುತ್ತಾರೆ; ಇವರು ಬಾವಿಗಳಿಗೆ ಬರುತ್ತಾರೆ; ಆದರೆ ನೀರು ಸಿಕ್ಕಲಿಲ್ಲ; ಬರೀ ಪಾತ್ರೆಗಳುಳ್ಳ ವರಾಗಿ ತಿರುಗಿಕೊಳ್ಳುತ್ತಾರೆ; ಅವರು ನಾಚಿಕೆಪಟ್ಟು ದಿಗ್ಭ್ರಮೆಗೊಂಡವರಾಗಿ ತಮ್ಮ ತಲೆಗಳನ್ನು ಮುಚ್ಚಿ ಕೊಂಡರು.