Ezekiel · chapter 7 · verse 16
Ezekiel 7:16 in Kannada
ಆದರೆ ಅವರಲ್ಲಿ ತಪ್ಪಿಸಿಕೊಳ್ಳುವವರು ತಪ್ಪಿಸಿಕೊಳ್ಳುವರು; ಪ್ರತಿಯೊ ಬ್ಬರೂ ತಮ್ಮ ತಮ್ಮ ಅಕ್ರಮಗಳ ನಿಮಿತ್ತ ಗೋಳಾಡಿ ಕಣಿವೆಯಲ್ಲಿರುವ ಪಾರಿವಾಳದ ಹಾಗೆ ಪರ್ವತಗಳ ಮೇಲೆ ಇರುವರು.
Aadare avaralli tappisikolluvavaru tappisikolluvaru; pratiyo bbaroo tamma tamma akramagala nimitta golaadi kaniveyalliruva paarivaalada haage parvatagala mele iruvaru.
Ezekiel 7:16 in English
- King James Version (KJV)
- But they that escape of them shall escape, and shall be on the mountains like doves of the valleys, all of them mourning, every one for his iniquity.
- World English Bible (WEB)
- But of those who escape, they will escape and will be on the mountains like doves of the valleys, all of them moaning, everyone in his iniquity.
- American Standard Version (ASV)
- But those of them that escape shall escape, and shall be on the mountains like doves of the valleys, all of them moaning, every one in his iniquity.
- Bible in Basic English (BBE)
- And those of them who get away safely will go and be in the secret places like the doves of the valleys, all of them will come to death, every one in his sin.
- Darby Translation (DBY)
- And they that escape of them shall escape, and shall be on the mountains like doves of the valleys, all of them moaning, every one for his iniquity.
- Webster's Bible (WBS)
- But they that escape of them shall escape, and shall be on the mountains like doves of the valleys, all of them mourning, every one for his iniquity.
- Young's Literal Translation (YLT)
- And escaped away have their fugitives, And they have been on the mountains As doves of the valleys, All of them make a noising — each for his iniquity.
Read in context
- 14ಅವರು ಕಹಳೆಯನ್ನೂದಿ ಎಲ್ಲವನ್ನೂ ಸಿದ್ಧಮಾಡಿಕೊಂಡಿದ್ದಾರೆ, ಆದರೆ ಯಾರೂ ಯುದ್ಧಕ್ಕೆ ಹೋಗುವದಿಲ್ಲ; ಯಾಕಂದರೆ ಎಲ್ಲಾ ಜನ ಸಮೂಹದ ಮೇಲೆ ನನ್ನ ಕೋಪವಿದೆ.
- 15ಹೊರಗೆ ಕತ್ತಿಯೂ ಒಳಗೆ ವ್ಯಾಧಿಯೂ ಕ್ಷಾಮವೂ ಉಂಟು. ಹೊಲದಲ್ಲಿರುವವನನ್ನು ಕತ್ತಿಯು ಸಾಯಿಸುವದು; ಪಟ್ಟಣದಲ್ಲಿರುವವನನ್ನು ವ್ಯಾಧಿಯೂ ಬರವೂ ತಿಂದು ಬಿಡುವದು.
- 16ಆದರೆ ಅವರಲ್ಲಿ ತಪ್ಪಿಸಿಕೊಳ್ಳುವವರು ತಪ್ಪಿಸಿಕೊಳ್ಳುವರು; ಪ್ರತಿಯೊ ಬ್ಬರೂ ತಮ್ಮ ತಮ್ಮ ಅಕ್ರಮಗಳ ನಿಮಿತ್ತ ಗೋಳಾಡಿ ಕಣಿವೆಯಲ್ಲಿರುವ ಪಾರಿವಾಳದ ಹಾಗೆ ಪರ್ವತಗಳ ಮೇಲೆ ಇರುವರು.
- 17ಕೈಗಳೆಲ್ಲಾ ಜೋತಾಡುವವು; ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ನಿತ್ರಾಣವಾಗು ವವು.
- 18ಅವರು ತಮ್ಮಲ್ಲಿ ಗೋಣಿತಟ್ಟುಗಳನ್ನು ಕಟ್ಟಿ ಕೊಳ್ಳುವರು ಮತ್ತು ಭಯವು ಅವರನ್ನು ಮುಚ್ಚಿಬಿಡು ವದು; ಎಲ್ಲಾ ಮುಖಗಳ ಮೇಲೆ ನಾಚಿಕೆಯೂ ಅವರ ಎಲ್ಲಾ ತಲೆಗಳು ಬೋಳಾಗಿಯೂ ಇರುವವು.
Cross references
- Ezra 9:15 ಎಜ್ರನು 9:15ಇಸ್ರಾಯೇಲ್ ದೇವ ರಾಗಿರುವ ಕರ್ತನೇ, ನೀನು ನೀತಿವಂತನಾಗಿದ್ದೀ; ಇಂದಿನ ಪ್ರಕಾರ ನಾವು ತಪ್ಪಿಸಿಕೊಂಡವರಾಗಿ ಉಳಿ ದಿದ್ದೇವೆ. ಇಗೋ, ನಾವು ನಿನ್ನ ಮುಂದೆ ನಮ್ಮ ಅಪರಾಧಗಳಲ್ಲಿದ್ದೇವೆ. ಇದರ ನಿಮಿತ್ತವಾಗಿ ನಿನ್ನ ಮುಂದೆ ನಿಲ್ಲಲಾರದವರಾಗಿದ್ದೇವೆ.
- Isaiah 59:11 ಯೆಶಾಯ 59:11ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ; ಪಾರಿವಾಳಗಳ ಹಾಗೆ ಬಹಳವಾಗಿ ಮೂಲ್ಗುತ್ತೇವೆ; ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ, ಆದರೆ ಅದು ಇಲ್ಲವೇ ಇಲ್ಲ; ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.
- Isaiah 38:14 ಯೆಶಾಯ 38:14ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು.
- Isaiah 37:31 ಯೆಶಾಯ 37:31ಯೆಹೂದನ ಮನೆತನದಿಂದ ತಪ್ಪಿಸಿ ಕೊಂಡು ಉಳಿದವರು ತಿರುಗಿ ಕೆಳಗೆ ಬೇರೂರಿ ಮೇಲಕ್ಕೆ ಫಲಫಲಿಸುವರು.
- Zechariah 12:10–14 ಜೆಕರ್ಯ 12:10–14ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು. ಮೆಗಿದ್ದೋವಿನ ತಗ್ಗಿನಲ್ಲಾದ ಹದದ್ ರಿಮ್ಮೊನಿನ ಗೋಳಾಟದ ಹಾಗೆ ಆ ದಿನ ದಲ್ಲಿ ಯೆರೂಸಲೇಮಿನೊಳಗೆ ಮಹಾಗೋಳಾಟವಿ ರುವದು. ದೇಶವು ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾಗಿ ಗೋಳಾಡುವದು; ದಾವೀದನ ಮನೆಯ ಗೋತ್ರವು ಪ್ರತ್ಯೇಕ ಅವರ ಹೆಂಡತಿಯರು ಪ್ರತ್ಯೇಕ; ನಾತಾನನ ಮನೆತನದ ಗೋತ್ರವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ. ಲೇವಿಯರ ಮನೆತ ನದ ಗೋತ್ರವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ಶಿಮ್ಮಿಯನ ಗೋತ್ರವು ಪ್ರತ್ಯೇಕ, ಅವರ ಹೆಂಡತಿ ಯರು ಪ್ರತ್ಯೇಕ.ಉಳಿದ ಗೋತ್ರಗ ಳೆಲ್ಲಾ ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾ ಗಿಯೂ ಅವರ ಹೆಂಡತಿಯರು ಪ್ರತ್ಯೇಕವಾಗಿಯೂ ಗೋಳಾಡುವರು. ಉಳಿದ ಗೋತ್ರಗ ಳೆಲ್ಲಾ ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾ ಗಿಯೂ ಅವರ ಹೆಂಡತಿಯರು ಪ್ರತ್ಯೇಕವಾಗಿಯೂ ಗೋಳಾಡುವರು.
- Ezekiel 36:31 ಯೆಹೆಜ್ಕೇಲನು 36:31ಆಮೇಲೆ ನೀವು ನಿಮ್ಮ ದುರ್ಮಾರ್ಗ ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯ ಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.
- Ezekiel 6:8–9 ಯೆಹೆಜ್ಕೇಲನು 6:8–9ಆದಾಗ್ಯೂ ನೀವು ದೇಶಗಳಲ್ಲಿ ಚದರಿಹೋಗುವಾಗ ಜನಾಂಗಗಳೊಳಗೆ ಕತ್ತಿ ಬೀಸಿದಾಗ ತಪ್ಪಿಸಿಕೊಳ್ಳು ವವರು ನಿಮ್ಮಲ್ಲಿರುವ ಹಾಗೆ ಕೆಲವರನ್ನು ಉಳಿಸುತ್ತೇನೆ. ನಿಮ್ಮಲ್ಲಿ ತಪ್ಪಿಸಿಕೊಂಡವರು ತಾವು ಸೆರೆಗೆ ಒಯ್ಯಲ್ಪ ಡುವ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳು ವರು, ಯಾಕಂದರೆ ನನ್ನನ್ನು ಬಿಟ್ಟುಬಿಡುವ ಅವರ ಜಾರಹೃದಯದಿಂದಲೂ ಅವರ ದೇವರ ವಿಗ್ರಹಗಳ ಹಿಂದೆ ಜಾರತ್ವ ಮಾಡುವವರ ಕಣ್ಣುಗಳಿಂದಲೂ ಮುರಿದುಹೋದೆನು; ಅವರು ತಮ್ಮ ಅಸಹ್ಯಗಳಲ್ಲಿ ಮಾಡುವ ಕೇಡುಗಳ ನಿಮಿತ್ತ ತಮಗೆ ತಾವೇ ಹೇಸಿ ಕೊಳ್ಳುವರು.
- Jeremiah 44:14 ಯೆರೆಮೀಯ 44:14ಐಗುಪ್ತ ದೇಶದಲ್ಲಿ ವಾಸಿಸುವದಕ್ಕೆ ಹೋಗಿರುವ ಯೆಹೂದದ ಉಳಿದಿರು ವವರು ತಾವು ತಿರುಗಿಕೊಂಡು ಯೆಹೂದದಲ್ಲಿ ವಾಸಮಾಡಬೇಕೆಂದು ಮನಸ್ಸು ಮಾಡಿರುವವರಲ್ಲಿ ಒಬ್ಬನಾದರೂ ಯೆಹೂದ ದೇಶಕ್ಕೆ ತಿರುಗಿಕೊಳ್ಳು ವದಕ್ಕೆ ತಪ್ಪಿಸಿಕೊಳ್ಳುವದಿಲ್ಲ, ನಿಲ್ಲುವದಿಲ್ಲ; ಓಡಿಹೋಗುವ ವರು ಅಲ್ಲದೆ ಇನ್ಯಾರೂ ಅಲ್ಲಿಗೆ ತಿರುಗಿ ಕೊಳ್ಳುವದಿಲ್ಲ.
- Isaiah 1:9 ಯೆಶಾಯ 1:9ಸೈನ್ಯ ಗಳ ಕರ್ತನು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ಸೊದೋಮಿನ ಹಾಗೆಯೂ ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.
- Jeremiah 50:4–5 ಯೆರೆಮೀಯ 50:4–5ಆ ದಿವಸಗಳಲ್ಲಿಯೂ ಕಾಲ ದಲ್ಲಿಯೂ ಇಸ್ರಾಯೇಲಿನ ಮಕ್ಕಳು ಬರುವರು; ಅವರೂ ಯೆಹೂದನ ಮಕ್ಕಳೂ ಒಟ್ಟಾಗಿ ಕೂಡಿ ಕೊಳ್ಳುವರೆಂದು ಕರ್ತನು ಅನ್ನುತ್ತಾನೆ. ಅವರು ಅಳುತ್ತಾ ಹೋಗಿ, ತಮ್ಮ ದೇವರಾದ ಕರ್ತನನ್ನು ಹುಡುಕುವರು. ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ--ಬನ್ನಿ, ಮರೆತುಹೋಗದ ನಿತ್ಯವಾದ ಒಡಂಬಡಿಕೆಯಿಂದ ಕರ್ತನನ್ನು ಸೇರಿಸಿ ಕೊಳ್ಳೋಣ ಅನ್ನುವರು.
- Proverbs 5:11–14 ಜ್ಞಾನೋಕ್ತಿಗಳು 5:11–14ನಿನ್ನ ಮಾಂಸವೂ ದೇಹವೂ ಕ್ಷೀಣಿಸಿದಾಗ ನೀನು ಕೊನೆಯಲ್ಲಿ ಶೋಕಿಸುತ್ತಾ-- ಶಿಕ್ಷಣವನ್ನು ನಾನು ಎಷ್ಟೋ ಹಗೆಮಾಡಿದೆನು; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು. ನನ್ನ ಬೋಧ ಕರ ಸ್ವರಕ್ಕೆ ನಾನು ವಿಧೇಯನಾಗದೆ ಇಲ್ಲವೆ ಶಿಕ್ಷಕರಿಗೆ ನಾನು ಕಿವಿಗೊಡದೆ ಹೋದೆನು. ನಾನು ಕೂಟ ಮತ್ತು ಸಭೆಯ ಮಧ್ಯದಲ್ಲಿ ಹೆಚ್ಚು ಕಡಿಮೆ ಎಲ್ಲಾ ಕೇಡಿನಲ್ಲಿ ಇದ್ದೆನು ಎಂದು ಹೇಳುವಿ.
- Jeremiah 44:28 ಯೆರೆಮೀಯ 44:28ಆದರೆ ಕತ್ತಿಗೆ ತಪ್ಪಿಸಿಕೊಂಡು ಸ್ವಲ್ಪ ಜನರು ಐಗುಪ್ತದೇಶದೊಳಗಿಂದ ಯೆಹೂದ ದೇಶಕ್ಕೆ ಹಿಂತಿರುಗಿ ಹೋಗುವರು; ಆಗ ಐಗುಪ್ತ ದೇಶದಲ್ಲಿ ತಂಗುವದಕ್ಕೆ ಬಂದಿರುವ ಯೆಹೂದದ ಉಳಿದವರೆಲ್ಲಾ ನನ್ನ ಮಾತು ನಿಲ್ಲುವದೋ ಅವರ ಮಾತು ನಿಲ್ಲುವದೋ ಎಂಬದನ್ನು ತಿಳಿದುಕೊಳ್ಳುವರು.