Ezekiel · chapter 7 · verse 2
Ezekiel 7:2 in Kannada
ಮನುಷ್ಯಪುತ್ರನೇ, ದೇವರಾದ ಕರ್ತನು ಇಸ್ರಾ ಯೇಲ್ ದೇಶಕ್ಕೆ ಹೀಗೆ ಹೇಳುತ್ತಾನೆ--ಅಂತ್ಯವು ಬಂದಿದೆ; ಈ ದೇಶದ ನಾಲ್ಕು ಮೂಲೆಗಳಲ್ಲೂ ಅಂತ್ಯವು ಬಂದಿದೆ.
Manushyaputrane, devaraada kartanu israa yel deshakke heege heluttaane--antyavu bandide; ee deshada naalku moolegalalloo antyavu bandide.
Ezekiel 7:2 in English
- King James Version (KJV)
- Also, thou son of man, thus saith the Lord GOD unto the land of Israel; An end, the end is come upon the four corners of the land.
- World English Bible (WEB)
- “You, son of man, the Lord GOD says to the land of Israel, ‘An end! The end has come on the four corners of the land.
- American Standard Version (ASV)
- And thou, son of man, thus saith the Lord Jehovah unto the land of Israel, An end: the end is come upon the four corners of the land.
- Bible in Basic English (BBE)
- And you, son of man, say, This is what the Lord has said to the land of Israel: An end has come, the end has come on the four quarters of the land.
- Darby Translation (DBY)
- And thou, son of man, thus saith the Lord Jehovah unto the land of Israel: An end, the end is come upon the four corners of the land.
- Webster's Bible (WBS)
- Also, thou son of man, thus saith the Lord GOD to the land of Israel; An end, the end is come upon the four corners of the land.
- Young's Literal Translation (YLT)
- An end, come hath the end on the four corners of the land.
Read in context
- 1ಇದಾದ ಮೇಲೆ ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನೆಂದರೆ--
- 2ಮನುಷ್ಯಪುತ್ರನೇ, ದೇವರಾದ ಕರ್ತನು ಇಸ್ರಾ ಯೇಲ್ ದೇಶಕ್ಕೆ ಹೀಗೆ ಹೇಳುತ್ತಾನೆ--ಅಂತ್ಯವು ಬಂದಿದೆ; ಈ ದೇಶದ ನಾಲ್ಕು ಮೂಲೆಗಳಲ್ಲೂ ಅಂತ್ಯವು ಬಂದಿದೆ.
- 3ಈಗ ನಿನ್ನ ಮೇಲೂ ಅಂತ್ಯವು ಬಂದಿದೆ ಮತ್ತು ನನ್ನ ಕೋಪವನ್ನು ನಿನ್ನ ಮೇಲೆ ಕಳುಹಿಸುತ್ತೇನೆ; ನಿನ್ನ ಮಾರ್ಗಗಳ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
- 4ನನ್ನ ಕಣ್ಣುಗಳು ನಿನ್ನನ್ನು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸು ವದೂ ಇಲ್ಲ, ಆದರೆ ನಿನ್ನ ಮಾರ್ಗಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುತ್ತೇನೆ, ನಿನ್ನ ಅಸಹ್ಯಗಳು ನಿನ್ನ ಮಧ್ಯೆ ಇರುವವು, ನಾನೇ ಕರ್ತನೆಂದು ನಿನಗೆ ತಿಳಿಯುವದು.
Cross references
- Amos 8:2 ಆಮೋಸ 8:2ಆಗ ಅವನು--ಆಮೋಸನೇ, ಏನು ನೋಡುತ್ತಿರುವೆ ಎಂದಾಗ ನಾನು--ಮಾಗಿದ ಹಣ್ಣುಗಳ ಪುಟ್ಟಿ ಅಂದೆನು. ಆಗ ಕರ್ತನು ನನಗೆ--ನನ್ನ ಜನರಾದ ಇಸ್ರಾಯೇಲ್ಯರಿಗೆ ಅಂತ್ಯವು ಬಂತು; ನಾನು ಇನ್ನು ಮೇಲೆ ಅವರನು ದಾಟಿಹೋಗುವದಿಲ್ಲ ಎಂದು ಹೇಳಿದೆನು.
- 1 Peter 4:7 1 ಪೇತ್ರನು 4:7ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಸ್ವಸ್ಥಚಿತ್ತರಾಗಿಯೂ ಪ್ರಾರ್ಥನೆಗೆ ಎಚ್ಚರ ವಾಗಿಯೂ ಇರ್ರಿ.
- Ezekiel 7:3 ಯೆಹೆಜ್ಕೇಲನು 7:3ಈಗ ನಿನ್ನ ಮೇಲೂ ಅಂತ್ಯವು ಬಂದಿದೆ ಮತ್ತು ನನ್ನ ಕೋಪವನ್ನು ನಿನ್ನ ಮೇಲೆ ಕಳುಹಿಸುತ್ತೇನೆ; ನಿನ್ನ ಮಾರ್ಗಗಳ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
- Amos 8:10 ಆಮೋಸ 8:10ನಿಮ್ಮ ಹಬ್ಬಗಳನ್ನು ದುಃಖಕ್ಕೂ ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು; ಎಲ್ಲರೂ ಸೊಂಟಗಳಿಗೆ ಗೋಣೀತಟ್ಟನ್ನು ಕಟ್ಟಿಕೊಂಡು ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು; ಅದನ್ನು ಒಬ್ಬನೇ ಮಗನಿಗಾಗಿ ದುಃಖಿಸುವಂತೆಯೂ ಅದರ ಅಂತ್ಯವು ಕಹಿಯಾದ ದಿನವಾಗುವಂತೆಯೂ ಮಾಡುವೆನು.
- Ezekiel 7:5–6 ಯೆಹೆಜ್ಕೇಲನು 7:5–6ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಕೇಡು ಒಂದೇ ಒಂದು ಕೇಡು, ಇಗೋ, ಬಂತು. ಅಂತ್ಯವು ಬಂತು. ಅಂತ್ಯವು ಬಂದು ಅದು ನಿನಗೋಸ್ಕರ ಕಾಯುತ್ತಾ ಇದೆ. ಇಗೋ, ಅದು ಬಂತು.
- Lamentations 4:18 ಪ್ರಲಾಪಗಳು 4:18ನಾವು ನಮ್ಮ ಬೀದಿಗಳಲ್ಲಿ ಹೋಗದ ಹಾಗೆ, ಅವರು ನಮ್ಮ ಹೆಜ್ಜೆಗಳನ್ನೇ ಬೇಟೆಯಾಡುತ್ತಾರೆ; ನಮ್ಮ ಅಂತ್ಯವು ಸವಿಾಪಿಸಿತು, ನಮ್ಮ ದಿನಗಳು ತುಂಬಿದವು; ನಮ್ಮ ಅಂತ್ಯವು ಬಂದಿತು.
- Ezekiel 11:13 ಯೆಹೆಜ್ಕೇಲನು 11:13ನಾನು ಪ್ರವಾದಿಸುತ್ತಿರುವಾಗ ಆದದ್ದೇನಂದರೆ, ಬೆನಾಯನ ಮಗನಾದ ಪೆಲತ್ಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು ಗಟ್ಟಿಯಾಗಿ ಕೂಗಿ--ಹಾ, ದೇವರಾದ ಕರ್ತನೇ, ನೀನು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀಯೋ ಎಂದು ಹೇಳಿದೆನು.
- Matthew 24:6 ಮತ್ತಾಯನು 24:6ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ. ಕಳವಳಗೊಳ್ಳದಂತೆ ನೀವು ನೋಡಿಕೊಳ್ಳಿರಿ; ಯಾಕಂದರೆ ಇವೆಲ್ಲವುಗಳು ಸಂಭವಿಸುವದು ಅಗತ್ಯ; ಆದರೆ ಇದು ಇನ್ನೂ ಅಂತ್ಯವಲ್ಲ.
- 2 Chronicles 34:7 2 ಪೂರ್ವಕಾಲವೃತ್ತಾಂತ 34:7ಅವನು ಬಲಿಪೀಠಗಳನ್ನೂ ತೋಪುಗಳನ್ನೂ ಕೆಡವಿ ಹಾಕಿ ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿ ಮಾಡಿ ಇಸ್ರಾಯೇಲ್ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡಿಸಿದ ತರುವಾಯ ಯೆರೂಸಲೇಮಿಗೆ ಹಿಂತಿರುಗಿದನು.
- Lamentations 1:9 ಪ್ರಲಾಪಗಳು 1:9ಅವಳ ನೆರಿಗೆಯು ಅಶುದ್ಧವಾಗಿದೆ; ಅವಳು ತನ್ನ ಅಂತ್ಯವನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ; ಆದುದರಿಂದ ಅವಳು ಆಶ್ಚರ್ಯ ಕರವಾಗಿ ಇಳಿದು ಬಂದಳು; ಅವಳನ್ನು ಆದರಿಸುವವರು ಯಾರೂ ಇಲ್ಲ. ಓ ಕರ್ತನೇ, ನನ್ನ ಸಂಕಟವನ್ನು ನೋಡು, ಶತ್ರುವು ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
- Jeremiah 51:13 ಯೆರೆಮೀಯ 51:13ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳ ವಳೇ, ನಿನ್ನ ಅಂತ್ಯವೂ ನಿನ್ನ ದುರ್ಲಾಭದ ಅಳತೆಯೂ ಬಂತು.
- Ezekiel 21:2 ಯೆಹೆಜ್ಕೇಲನು 21:2ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖನಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾ ಯೇಲ್ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸು.