Ezekiel · chapter 7 · verse 3
Ezekiel 7:3 in Kannada
ಈಗ ನಿನ್ನ ಮೇಲೂ ಅಂತ್ಯವು ಬಂದಿದೆ ಮತ್ತು ನನ್ನ ಕೋಪವನ್ನು ನಿನ್ನ ಮೇಲೆ ಕಳುಹಿಸುತ್ತೇನೆ; ನಿನ್ನ ಮಾರ್ಗಗಳ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
Eega ninna meloo antyavu bandide mattu nanna kopavannu ninna mele kaluhisuttene; ninna maargagala prakaara ninage nyaayateerisuttene. Ninna ellaa asahyagaligoskara ninna mele muyyi teerisuvenu.
Ezekiel 7:3 in English
- King James Version (KJV)
- Now [is] the end [come] upon thee, and I will send mine anger upon thee, and will judge thee according to thy ways, and will recompense upon thee all thine abominations.
- World English Bible (WEB)
- Now the end is on you, and I will send my anger on you, and will judge you according to your ways. I will bring on you all your abominations.
- American Standard Version (ASV)
- Now is the end upon thee, and I will send mine anger upon thee, and will judge thee according to thy ways; and I will bring upon thee all thine abominations.
- Bible in Basic English (BBE)
- Now the end has come on you, and I will send my wrath on you, judging you for your ways, I will send punishment on you for all your disgusting acts.
- Darby Translation (DBY)
- Now is the end upon thee; and I will send mine anger upon thee, and will judge thee according to thy ways, and will bring upon thee all thine abominations.
- Webster's Bible (WBS)
- Now [is] the end [come] upon thee, and I will send my anger upon thee, and will judge thee according to thy ways, and will recompense upon thee all thy abominations.
- Young's Literal Translation (YLT)
- Now [is] the end unto thee, And I have sent Mine anger upon thee, And judged thee according to thy ways, And set against thee all thine abominations.
Read in context
- 1ಇದಾದ ಮೇಲೆ ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನೆಂದರೆ--
- 2ಮನುಷ್ಯಪುತ್ರನೇ, ದೇವರಾದ ಕರ್ತನು ಇಸ್ರಾ ಯೇಲ್ ದೇಶಕ್ಕೆ ಹೀಗೆ ಹೇಳುತ್ತಾನೆ--ಅಂತ್ಯವು ಬಂದಿದೆ; ಈ ದೇಶದ ನಾಲ್ಕು ಮೂಲೆಗಳಲ್ಲೂ ಅಂತ್ಯವು ಬಂದಿದೆ.
- 3ಈಗ ನಿನ್ನ ಮೇಲೂ ಅಂತ್ಯವು ಬಂದಿದೆ ಮತ್ತು ನನ್ನ ಕೋಪವನ್ನು ನಿನ್ನ ಮೇಲೆ ಕಳುಹಿಸುತ್ತೇನೆ; ನಿನ್ನ ಮಾರ್ಗಗಳ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
- 4ನನ್ನ ಕಣ್ಣುಗಳು ನಿನ್ನನ್ನು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸು ವದೂ ಇಲ್ಲ, ಆದರೆ ನಿನ್ನ ಮಾರ್ಗಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುತ್ತೇನೆ, ನಿನ್ನ ಅಸಹ್ಯಗಳು ನಿನ್ನ ಮಧ್ಯೆ ಇರುವವು, ನಾನೇ ಕರ್ತನೆಂದು ನಿನಗೆ ತಿಳಿಯುವದು.
- 5ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಕೇಡು ಒಂದೇ ಒಂದು ಕೇಡು, ಇಗೋ, ಬಂತು.
Cross references
- Ezekiel 18:30 ಯೆಹೆಜ್ಕೇಲನು 18:30ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ.
- Ezekiel 5:13 ಯೆಹೆಜ್ಕೇಲನು 5:13ಈ ಪ್ರಕಾರ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ನನ್ನ ಉರಿಯನ್ನು ಅವರ ಮೇಲೆ ಶಾಂತಪಡಿಸಿ, ಸಮಾಧಾನ ಹೊಂದು ವೆನು; ಹೀಗೆ ನಾನು ನನ್ನ ಉರಿಯನ್ನು ಅವರ ಮೇಲೆ ತೀರಿಸಿದ ತರುವಾಯ ಕರ್ತನಾದ ನಾನು ನನ್ನ ಉದ್ದೇಶ ಪೂರ್ವಕವಾಗಿ ಮಾಡಿದ್ದೇನೆಂದು ಅವರಿಗೆ ಗೊತ್ತಾಗು ವದು.
- Ezekiel 16:38 ಯೆಹೆಜ್ಕೇಲನು 16:38ದಾಂಪತ್ಯವನ್ನು ಮುರಿದು ರಕ್ತ ಸುರಿಸುವಂಥ ಹೆಂಗಸರಿಗೆ ವಿಧಿಸುವಂಥ ತಕ್ಕ ದಂಡನೆಗಳನ್ನು ನಿನಗೂ ವಿಧಿಸಿ, ಕೋಪೋದ್ರೇಕದಿಂದಲೂ ರೋಷಾವೇಶ ದಿಂದಲೂ ನಿನಗೆ ರಕ್ತವನ್ನು ಸುರಿಸುವೆನು.
- Ezekiel 7:8–9 ಯೆಹೆಜ್ಕೇಲನು 7:8–9ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ಉಗ್ರವನ್ನು ನಿನ್ನ ಮೇಲೆ ಸುರಿಯುವೆನು; ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಡುವೆನು; ನಾನು ನಿನ್ನ ಮಾರ್ಗಗಳ ಪ್ರಕಾರ ಮುಯ್ಯಿ ತೀರಿಸುವೆನು; ನಿನ್ನ ಎಲ್ಲಾ ಅಸಹ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುವೆನು. ನನ್ನ ಕಣ್ಣು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸುವದೂ ಇಲ್ಲ, ನಿನ್ನ ಮಾರ್ಗಗಳಿಗೂ ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕದ್ದನ್ನು ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ಕರ್ತನಾದ ನಾನೇ ಹೊಡೆಯುತ್ತಿರುವನೆಂದು ನಿನಗೆ ತಿಳಿಯುವದು.
- Ezekiel 33:20 ಯೆಹೆಜ್ಕೇಲನು 33:20ಆದರೂ ನೀವು ಕರ್ತನ ಮಾರ್ಗ ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾಯೇಲಿನ ಮನೆತನ ದವರೇ, ನಿಮ್ಮಲ್ಲಿ ಪ್ರತಿಯೊಬ್ಬರಿಗೆ ನಿಮ್ಮ ಮಾರ್ಗಗಳ ಪ್ರಕಾರ ನಾನು ನ್ಯಾಯ ತೀರಿಸುವೆನು.
- Ezekiel 6:12–13 ಯೆಹೆಜ್ಕೇಲನು 6:12–13ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು; ಹತ್ತಿರದಲ್ಲಿರುವವನು ಕತ್ತಿಯಿಂದ ಬೀಳುವನು; ಉಳಿದು ಮುತ್ತಿಗೆಯಲ್ಲಿರುವವನು ಬರದಿಂದ ಸಾಯುವನು; ಹೀಗೆ ನಾನು ಅವರ ಮೇಲೆ ನನ್ನ ಉಗ್ರತೆಯನ್ನು ತೀರಿಸಿಕೊಳ್ಳುವೆನು. ಆಮೇಲೆ ನೀವು ಅವರಲ್ಲಿ ಹತವಾದ ಮನುಷ್ಯರು ಅವರಲ್ಲಿರುವಾಗ ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಯಜ್ಞವೇದಿಗಳ ಸುತ್ತ ಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸುರಾದ ಮರದ ಕೆಳಗೂ ಪ್ರತಿ ಯೊಂದು ದಪ್ಪವಾದ ಓಕ್ ಮರದ ಕೆಳಗಡೆಯೂ ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವದರಲ್ಲಿಯೂ ನಾನೇ ಕರ್ತನೆಂದು ತಿಳಿಯು ವಿರಿಹೀಗೆ ನಾನು ನನ್ನ ಕೈಯನ್ನು ಅವರ ಮೇಲೆ ಚಾಚಿ ಅವರ ದೇಶವನ್ನು ನಾಶಮಾಡುವೆನು. ಹೌದು, ಅವರ ಎಲ್ಲಾ ನಿವಾಸಸ್ಥಳಗಳನ್ನು ದಿಬ್ಲದ ಅರಣ್ಯ ಕ್ಕಿಂತಲೂ ಹೆಚ್ಚಾಗಿ ಹಾಳುಮಾಡುವೆನು; ನಾನೇ ಕರ್ತನೆಂದು ಅವರು ತಿಳಿದುಕೊಳ್ಳುವರು.
- Ezekiel 7:27 ಯೆಹೆಜ್ಕೇಲನು 7:27ಅರಸನು ದುಃಖಿಸುವನು, ಪ್ರಧಾನನು ನಿರ್ಗತಿಕನಾ ಗುವನು; ದೇಶದ ಜನರ ಕೈಗಳು ತೊಂದರೆಗೊಳ್ಳು ವವು; ಅವರ ಮಾರ್ಗಗಳ ಪ್ರಕಾರ ಅವರ ಹಾಗೆಯೇ ಮಾಡುವೆನು; ಅವರ ನ್ಯಾಯಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Ezekiel 36:19 ಯೆಹೆಜ್ಕೇಲನು 36:19ನಾನು ಅವರನ್ನು ಅನ್ಯಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶ ಗಳಲ್ಲಿ ಚದರಿಹೋದರು; ಅವರ ಮಾರ್ಗಗಳ ದುಷ್ಕ್ರಿ ಯೆಗಳ ಪ್ರಕಾರವಾಗಿ ಅವರಿಗೆ ನಾನು ನ್ಯಾಯ ತೀರಿಸಿದೆನು.
- Revelation 20:12–13 ಪ್ರಕಟನೆ 20:12–13ಇದಲ್ಲದೆ ಸತ್ತವರಾದ ಚಿಕ್ಕವರೂ ದೊಡ್ಡವರೂ ದೇವರ ಮುಂದೆ ನಿಂತಿರುವದನ್ನು ನಾನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಜೀವಗ್ರಂಥವೆಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.
- Ezekiel 34:20–22 ಯೆಹೆಜ್ಕೇಲನು 34:20–22ಆದದರಿಂದ ದೇವರಾದ ಕರ್ತನು ನಿಮಗೆ ಹೀಗೆ ಹೇಳುತ್ತಾನೆ-- ಇಗೋ, ನಾನು, ನಾನೇ ಕೊಬ್ಬಿದ ದನಕ್ಕೂ ಮತ್ತು ಬಡಕಲಾದ ದನಕ್ಕೂ ನಡುವೆ ನ್ಯಾಯತೀರಿಸುತ್ತೇನೆ. ನೀವು ಅವುಗಳನ್ನು ಪಕ್ಕೆ ಮತ್ತು ಹೆಗಲುಗಳಿಂದ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಮಂದೆಯನ್ನು ದೂರ ಚದುರಿಸಿ ಬಿಟ್ಟಿರಿ. ಆದದರಿಂದ ನಾನು ನನ್ನ ಮಂದೆಯನ್ನು ಕಾಪಾಡುತ್ತೇನೆ; ಅವು ಎಂದೆಂದೂ ಕೊಳ್ಳೆಯಾಗು ವದಿಲ್ಲ; ನಾನು ದನಗಳ ಮತ್ತು ಪಶುಗಳ ಮಧ್ಯೆ ನ್ಯಾಯತೀರಿಸುವೆನು.
- Ezekiel 11:10–11 ಯೆಹೆಜ್ಕೇಲನು 11:10–11ನೀವು ಕತ್ತಿಯ ಮೂಲಕ ಬೀಳುವಿರಿ; ನಾನು ನಿಮ್ಮ ಇಸ್ರಾಯೇಲಿನ ಮೇರೆಯಲ್ಲಿ ನ್ಯಾಯತೀರಿಸುವೆನು; ಆಗ ನಾನೇ ಕರ್ತನೆಂದು ನಿಮಗೆ ತಿಳಿಯುವದು. ಈ ಪಟ್ಟಣವು ನಿಮ್ಮ ಹಂಡೆ ಯಾಗುವದಿಲ್ಲ, ನೀವು ಅದರ ಮಧ್ಯದಲ್ಲಿ ಮಾಂಸ ವಾಗುವದಿಲ್ಲ; ಆದರೆ ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ನ್ಯಾಯತೀರಿ ಸುವೆನು.
- Ezekiel 6:3–7 ಯೆಹೆಜ್ಕೇಲನು 6:3–7ಇಸ್ರಾಯೇ ಲಿನ ಪರ್ವತಗಳೇ, ದೇವರಾದ ಕರ್ತನ ವಾಕ್ಯವನ್ನು ಕೇಳಿರಿ; ದೇವರಾದ ಕರ್ತನು ಪರ್ವತಗಳಿಗೂ ಗುಡ್ಡ ಗಳಿಗೂ ನದಿಗಳಿಗೂ ಕಣಿವೆಗಳಿಗೂ ಹೀಗೆ ಹೇಳು ತ್ತಾನೆ--ಇಗೋ, ನಾನು, ನಾನೇ ನಿಮ್ಮ ಮೇಲೆ ಕತ್ತಿ ಯನ್ನು ತಂದು ನಿಮ್ಮ ಎತ್ತರ ಸ್ಥಳಗಳನ್ನು (ಮೇಡುಗ ಳನ್ನು) ನಾಶಮಾಡುತ್ತೇನೆ. ನಿಮ್ಮ ಯಜ್ಞವೇದಿಗಳು ಹಾಳಾಗುವವು; ನಿಮ್ಮ ಪ್ರತಿಮೆಗಳು ಮುರಿಯಲ್ಪಡು ವವು; ನಿಮ್ಮಲ್ಲಿ ಹತರಾದ ಮನುಷ್ಯರನ್ನು ನಿಮ್ಮ ವಿಗ್ರ ಹಗಳ ಮುಂದೆ ನಾನು ಬಿಸಾಡುವೆನು. ಇಸ್ರಾ ಯೇಲನ ಮಕ್ಕಳ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಯಜ್ಞವೇದಿಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿಬಿಡುವೆನು. ನಿಮ್ಮ ನಗರದಲ್ಲಿ ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳುಮಾಡಲ್ಪಡುವವು; ಎತ್ತರವಾದ ಸ್ಥಳಗಳೂ ನಾಶ ಮಾಡಲ್ಪಡುವವು; ಹೀಗೆ ನಿಮ್ಮ ಯಜ್ಞವೇದಿಗಳು ನಾಶವಾಗಿಯೂ ಹಾಳಾಗಿಯೂ ಹೋಗುವವು. ನಿಮ್ಮ ವಿಗ್ರಹಗಳು ಒಡೆಯಲ್ಪಟ್ಟು ಇಲ್ಲದಂತಾಗುವವು. ನೀವು ರೂಪಿಸಿದ ಪ್ರತಿಮೆಗಳು ಕಡಿದುಹಾಕಲ್ಪಟ್ಟು ಅಳಿಸ ಲ್ಪಡುವವು. ಹತವಾದವರು ನಿಮ್ಮ ಮಧ್ಯದಲ್ಲಿ ಬೀಳು ವರು, ಆಗ ನೀವು ನಾನೇ ಕರ್ತನೆಂದು ತಿಳಿಯುವಿರಿ.