Ezekiel · chapter 7 · verse 24
Ezekiel 7:24 in Kannada
ಆದ ಕಾರಣ ನಾನು ಅನ್ಯಜನಾಂಗಗಳಲ್ಲಿ ಕೆಟ್ಟವರನ್ನು ತರುತ್ತೇನೆ ಮತ್ತು ಅವರು ಅವರ ಮನೆಗಳನ್ನು ವಶ ಪಡಿಸಿಕೊಳ್ಳುವರು; ನಾನು ಬಲಿಷ್ಠರ ಅಟ್ಟಹಾಸವನ್ನು ನಿಲ್ಲಿಸುತ್ತೇನೆ ಮತ್ತು ಅವರ ಪರಿಶುದ್ಧ ಸ್ಥಳಗಳು ಅಪವಿತ್ರವಾಗುವವು.
Aada kaarana naanu anyajanaangagalalli kettavarannu taruttene mattu avaru avara manegalannu vasha padisikolluvaru; naanu balishthara attahaasavannu nillisuttene mattu avara parishuddha sthalagalu apavitravaaguvavu.
Ezekiel 7:24 in English
- King James Version (KJV)
- Wherefore I will bring the worst of the heathen, and they shall possess their houses: I will also make the pomp of the strong to cease; and their holy places shall be defiled.
- World English Bible (WEB)
- Therefore I will bring the worst of the nations, and they will possess their houses. I will also make the pride of the strong to cease. Their holy places will be profaned.
- American Standard Version (ASV)
- Wherefore I will bring the worst of the nations, and they shall possess their houses: I will also make the pride of the strong to cease; and their holy places shall be profaned.
- Bible in Basic English (BBE)
- For this reason I will send the worst of the nations and they will take their houses for themselves: I will make the pride of their strength come to an end; and their holy places will be made unclean.
- Darby Translation (DBY)
- Therefore will I bring the worst of the nations, and they shall possess their houses; and I will make the pride of the strong to cease; and their sanctuaries shall be profaned.
- Webster's Bible (WBS)
- Wherefore I will bring the worst of the heathen, and they shall possess their houses: I will also make the pomp of the strong to cease, and their holy places shall be defiled.
- Young's Literal Translation (YLT)
- And I have brought in the wicked of the nations, And they have possessed their houses, And I have caused to cease the excellency of the strong, And polluted have been those sanctifying them.
Read in context
- 22ನನ್ನ ಮುಖವನ್ನು ನಾನು ಅವರ ಕಡೆಯಿಂದ ತಿರುಗಿಸುವೆನು; ನನ್ನ ರಹಸ್ಯ ಸ್ಥಳವನ್ನು ಅಪವಿತ್ರಪಡಿಸುವರು. ದರೋಡೆ ಕೋರರು ಅದರಲ್ಲಿ ಸೇರಿ ಅದನ್ನು ಅಪವಿತ್ರ ಪಡಿಸುವರು.
- 23ಒಂದು ಸರಪಳಿಯನ್ನು ಮಾಡು; ಯಾಕಂದರೆ ದೇಶವು ರಕ್ತಾಪರಾಧದಿಂದ ತುಂಬಿದೆ ಮತ್ತು ನಗರವು ಹಿಂಸೆಯಿಂದ ತುಂಬಿದೆ.
- 24ಆದ ಕಾರಣ ನಾನು ಅನ್ಯಜನಾಂಗಗಳಲ್ಲಿ ಕೆಟ್ಟವರನ್ನು ತರುತ್ತೇನೆ ಮತ್ತು ಅವರು ಅವರ ಮನೆಗಳನ್ನು ವಶ ಪಡಿಸಿಕೊಳ್ಳುವರು; ನಾನು ಬಲಿಷ್ಠರ ಅಟ್ಟಹಾಸವನ್ನು ನಿಲ್ಲಿಸುತ್ತೇನೆ ಮತ್ತು ಅವರ ಪರಿಶುದ್ಧ ಸ್ಥಳಗಳು ಅಪವಿತ್ರವಾಗುವವು.
- 25ನಾಶವು ಬರುತ್ತದೆ ಮತ್ತು ಅವರು ಸಮಾಧಾನವನ್ನು ಹುಡುಕುತ್ತಾರೆ; ಆದರೆ ಅದು ಇರುವದಿಲ್ಲ.
- 26ಕೇಡಿನ ಮೇಲೆ ಕೇಡು ಬರು ವದು; ಸುದ್ದಿಯ ಮೇಲೆ ಸುದ್ದಿ ಬರುವದು. ಆಗ ಅವರು ಪ್ರವಾದಿಯ ದರ್ಶನವನ್ನು ಹುಡುಕುವರು. ಆದರೆ ನ್ಯಾಯಪ್ರಮಾಣವು ಯಾಜಕರನ್ನೂ ಆಲೋ ಚನೆಯು ಪೂರ್ವಿಕರನ್ನೂ ಬಿಟ್ಟು ನಾಶವಾಗುವದು.ಅರಸನು ದುಃಖಿಸುವನು, ಪ್ರಧಾನನು ನಿರ್ಗತಿಕನಾ ಗುವನು; ದೇಶದ ಜನರ ಕೈಗಳು ತೊಂದರೆಗೊಳ್ಳು ವವು; ಅವರ ಮಾರ್ಗಗಳ ಪ್ರಕಾರ ಅವರ ಹಾಗೆಯೇ ಮಾಡುವೆನು; ಅವರ ನ್ಯಾಯಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. ನಾನೇ ಕರ್ತನೆಂದು ಅವರಿಗೆ ತಿಳಿಯುವದು.
Cross references
- Ezekiel 28:7 ಯೆಹೆಜ್ಕೇಲನು 28:7ಇಗೋ, ನಾನು ನಿನ್ನ ಮೇಲೆ ಭಯಂಕರ ವಾದ ಜನಾಂಗಗಳ ಅಪರಿಚಿತರನ್ನು ತರುತ್ತೇನೆ; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ವಿರುದ್ಧವಾಗಿ ಕತ್ತಿಯನ್ನು ಹಿರಿಯುವರು; ನಿನ್ನ ಪ್ರಕಾಶವನ್ನು ಕೆಡಿಸುವರು.
- Ezekiel 21:31 ಯೆಹೆಜ್ಕೇಲನು 21:31ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರದ ಬೆಂಕಿಯನ್ನು ನಿನ್ನ ಮೇಲೆ ಊದಿ ನಾಶಪಡಿಸುವದರಲ್ಲಿ ಗಟ್ಟಿಗರಾದಂಥ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸು ವೆನು.ನೀನು ಅಗ್ನಿಗೆ ಆಹುತಿಯಾಗುವ ಸೌದೆಯಾ ಗುವಿ, ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವದು; ನೀನು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲವೆಂದು ಕರ್ತನಾದ ನಾನೇ ಹೇಳಿದ್ದೇನೆ.
- Psalm 106:41 ಕೀರ್ತನೆಗಳು 106:41ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು.
- Ezekiel 33:28 ಯೆಹೆಜ್ಕೇಲನು 33:28ನಾನು ಈ ದೇಶವನ್ನು ಹಾಳುಪಾಳು ಮಾಡುವೆನು. ಅದರ ಬಲದ ಮಹತ್ತು ತೀರಿಹೋಗುವದು. ಇಸ್ರಾಯೇಲಿನ ಪರ್ವತಗಳು ಹಾದುಹೋಗುವವರಿಲ್ಲದೆ ಹಾಳಾಗು ವವು.
- Ezekiel 24:21 ಯೆಹೆಜ್ಕೇಲನು 24:21ಇಸ್ರಾಯೇಲ್ಯರ ಮನೆ ತನದವರೊಂದಿಗೆ ಮಾತನಾಡಿ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು--ಇಗೋ, ನಾನು ನನ್ನ ಪರಿಶುದ್ಧ ಸ್ಥಳವನ್ನೂ ನಿಮ್ಮ ಬಲದ ಶ್ರೇಷ್ಠತ್ವವನ್ನೂ ನಿಮ್ಮ ನೇತ್ರಾನಂದಕರವಾದದ್ದನ್ನೂ ನಿಮ್ಮ ಮನಸ್ಸು ಅಭಿಲಾಷಿಸುವದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಕುಮಾರರೂ ಕುಮಾರ್ತೆಯರೂ ಕತ್ತಿಯಿಂದ ಬೀಳುವರು.
- Jeremiah 6:12 ಯೆರೆಮೀಯ 6:12ಅವರ ಮನೆಗಳೂ ಹೊಲಗಳೂ ಹೆಂಡತಿಯರೂ ಸಹಿತವಾಗಿ ಬೇರೊಬ್ಬ ರಿಗೆ ಆಗುವವು; ದೇಶದ ನಿವಾಸಿಗಳ ಮೇಲೆ ನನ್ನ ಕೈ ಚಾಚುವೆನು ಎಂದು ಕರ್ತನು ಅನ್ನುತ್ತಾನೆ.
- Jeremiah 12:12 ಯೆರೆಮೀಯ 12:12ಅರಣ್ಯದಲ್ಲಿರುವ ಎಲ್ಲಾ ಉನ್ನತ ಸ್ಥಳಗಳ ಮೇಲೆ ಕೆಡಿಸುವವರು ಬಂದಿದ್ದಾರೆ; ಕರ್ತನ ಕತ್ತಿಯು ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ತಿಂದು ಬಿಡುತ್ತದೆ ಯಾವ ಮನುಷ್ಯನಿಗೂ ಸಮಾಧಾನವಿಲ್ಲ.
- Ezekiel 21:2 ಯೆಹೆಜ್ಕೇಲನು 21:2ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖನಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾ ಯೇಲ್ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸು.
- Lamentations 5:2 ಪ್ರಲಾಪಗಳು 5:2ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ ನಮ್ಮ ಮನೆಗಳು ಅನ್ಯರಿಗೂ ವಶ ವಾದವು.
- Habakkuk 1:6–10 ಹಬಕ್ಕೂಕ 1:6–10ಇಗೋ, ನಾನು ಕಸ್ದೀಯರನ್ನು ಎಬ್ಬಿಸುತ್ತೇನೆ; ಅದು ಕಹಿಯಾದ ತೀವ್ರವಾದ ಜನಾಂಗವು; ತಮ್ಮದಲ್ಲದ ನಿವಾಸಗಳನ್ನು ವಶಮಾಡಿ ಕೊಳ್ಳುವದಕ್ಕೆ ವಿಶಾಲ ವಾದ ದೇಶದಲ್ಲಿ ಹಾದುಹೋಗುವದು. ಅವರು ಭಯಂಕರವಾದವರು ಮತ್ತು ಕ್ರೂರವಾದವರು; ಅವರ ನ್ಯಾಯವೂ ಘನತೆಯೂ ಅವರಿಂದಲೇ ಹೊರಡುತ್ತವೆ. ಅವರ ಕುದುರೆಗಳು ಸಹ ಚಿರತೆಗಳಿಗಿಂತ ವೇಗ ವಾಗಿಯೂ ಸಂಜೆಯ ತೋಳಗಳಿಗಿಂತ ಚುರುಕಾ ಗಿಯೂ ಅವೆ; ಅವರ ಕುದುರೆ ಸವಾರರು ತಾವೇ ಹರಡಿಕೊಳ್ಳುವರು; ಅವರ ಸವಾರರು ದೂರದಿಂದ ಬರುವರು; ತಿನ್ನುವದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿಬರುವರು. ಅವರೆಲ್ಲರು ಹಿಂಸಿಸುವದಕ್ಕೆ ಬರುವರು; ಅವರ ಮುಖಗಳು ಮೂಡಣ ಗಾಳಿ ಯಂತೆಯೇ ತಿಂದುಬಿಡುವವು; ಸೆರೆಯವರನ್ನು ಮರ ಳಿನ ಹಾಗೆ ಕೂಡಿಸುವರು. ಅವರು ಅರಸರನ್ನು ಧಿಕ್ಕರಿಸುವರು; ಪ್ರಧಾನರು ಅವರಿಗೆ ಪರಿಹಾಸ್ಯ ಮಾಡುವರು. ಕೋಟೆಗಳಿಗೆಲ್ಲಾ ಕುಚೋದ್ಯ ಮಾಡು ವರು. ಮಣ್ಣನ್ನು ಕುಪ್ಪೆಮಾಡಿ ಅದನ್ನು ಹಿಡಿಯುವರು.
- Isaiah 5:14 ಯೆಶಾಯ 5:14ಹೀಗಿರುವದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ಮಹಿಮೆ, ಸಮೂ ಹವು, ಕೋಲಾಹಲ, ಉಲ್ಲಾಸಪಡುವದು ಇವೆಲ್ಲವೂ ಅದರಲ್ಲಿ ಬೀಳುವವು.
- 2 Chronicles 7:19–20 2 ಪೂರ್ವಕಾಲವೃತ್ತಾಂತ 7:19–20ಆದರೆ ನೀವು ಹಿಂದಿರುಗಿ ನಾನು ನಿಮ್ಮ ಮುಂದೆ ಇಟ್ಟ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ತೊರೆದು ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಾನು ಅವರಿಗೆ ಕೊಟ್ಟ ನನ್ನ ದೇಶದೊಳಗಿಂದ ಅವರನ್ನು ನಿರ್ಮೂಲ ಮಾಡುವೆನು. ಇದಲ್ಲದೆ ನನ್ನ ಹೆಸರಿಗೋಸ್ಕರ ನಾನು ಪರಿಶುದ್ಧ ಮಾಡಿದ ಈ ಆಲ ಯವನ್ನು ನನ್ನ ಸಮ್ಮುಖದಿಂದ ತಳ್ಳಿ ಅದನ್ನು ಸಮಸ್ತ ಜನಗಳಲ್ಲಿ ಗಾದೆಯಾಗಿಯೂ ಹಾಸ್ಯವಾಗಿಯೂ ಮಾಡುವೆನು.