Psalms · chapter 106 · verse 41
Psalm 106:41 in Kannada
ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು.
Avarannu anyajanaangagala kaigekottanu; avara hageyavaru avarannu aalidaru.
Psalm 106:41 in English
- King James Version (KJV)
- And he gave them into the hand of the heathen; and they that hated them ruled over them.
- World English Bible (WEB)
- He gave them into the hand of the nations. Those who hated them ruled over them.
- American Standard Version (ASV)
- And he gave them into the hand of the nations; And they that hated them ruled over them.
- Bible in Basic English (BBE)
- And he gave them into the hands of the nations; and they were ruled by their haters.
- Darby Translation (DBY)
- And he gave them into the hand of the nations; and they that hated them ruled over them:
- Webster's Bible (WBS)
- And he gave them into the hand of the heathen; and they that hated them ruled over them.
- Young's Literal Translation (YLT)
- And giveth them into the hand of nations, And those hating them rule over them,
Read in context
- 39ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು.
- 40ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು
- 41ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು.
- 42ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು.
- 43ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು.
Cross references
- Judges 2:14 ನ್ಯಾಯಸ್ಥಾಪಕರು 2:14ಆದದರಿಂದ ಕರ್ತನು ಇಸ್ರಾಯೇಲಿಗೆ ವಿರೋಧ ವಾಗಿ ಉರಿಗೊಂಡು ಅವರನ್ನು ಕೊಳ್ಳೆಹೊಡೆಯುವ ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ತರುವಾಯ ಅವರು ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟನು.
- Nehemiah 9:27–38 ನೆಹೆಮೀಯ 9:27–38ಆದದರಿಂದ ನೀನು ಬಾಧಿಸುವ ವಿರೋಧಿಗಳ ಕೈಯಲ್ಲಿ ಅವರನ್ನು ಒಪ್ಪಿಸಿದಿ. ಆದರೆ ತಮ್ಮ ಇಕ್ಕಟ್ಟಿನ ಕಾಲದಲ್ಲಿ ಅವರು ನಿನ್ನನ್ನು ಕೂಗಿದಾಗ ನೀನು ಪರಲೋಕದಿಂದ ಕೇಳಿ, ನಿನ್ನ ಅಧಿಕವಾದ ಕರುಣೆಯ ಪ್ರಕಾರ ಅವರ ವೈರಿಗಳ ಕೈಯಿಂದ ರಕ್ಷಿಸುವದಕ್ಕೆ, ರಕ್ಷಕರನ್ನು ಅವರಿಗೆ ಕೊಟ್ಟಿ. ಆದರೆ ಅವರು ವಿಶ್ರಾಂತಿಯನ್ನು ಹೊಂದಿದ ತರುವಾಯ ನಿನ್ನ ಮುಂದೆ ಕೆಟ್ಟದ್ದನ್ನು ತಿರುಗಿ ಮಾಡಿದರು. ಆದ ಕಾರಣ ಅವರ ಶತ್ರುಗಳು ಅವರನ್ನು ಆಳುವ ಹಾಗೆ ಅವರ ಕೈಯಲ್ಲಿ ಅವರನ್ನು ಒಪ್ಪಿಸಿದಿ; ಆದರೆ ಅವರು ತಿರಿಗಿ ನಿನ್ನನ್ನು ಕೂಗಿದಾಗ ನೀನು ಆಕಾಶದಿಂದ ಕೇಳಿ ಅವರನ್ನು ನಿನ್ನ ಕರುಣೆಯ ಪ್ರಕಾರ ಅನೇಕ ಸಾರಿ ವಿಮೋಚನೆ ಮಾಡಿದಿ. ನೀನು ಅವರನ್ನು ನಿನ್ನ ನ್ಯಾಯಪ್ರಮಾಣಕ್ಕೆ ತಿರಿಗಿ ಬರುವ ಹಾಗೆ ಅವರಿಗೆ ವಿರೋಧವಾಗಿ ಸಾಕ್ಷಿ ಹೇಳಿದಿ. ಆದರೆ ಅವರು ಗರ್ವಪಟ್ಟು ನಿನ್ನ ಆಜ್ಞೆಗಳನ್ನು ಕೇಳದೆ ಮನುಷ್ಯರು ಯಾವವುಗಳನ್ನು ಕೈಕೊಳ್ಳುವದರಿಂದ ಬದುಕುವರೋ ಆ ನಿನ್ನ ನ್ಯಾಯಗಳಿಗೆ ವಿರೋಧವಾಗಿ ಪಾಪಮಾಡಿಹೆಗಲುಕೊಡದೆ ಕುತ್ತಿಗೆಯನ್ನು ಕಠಿಣಪಡಿಸಿಕೊಂಡು ಕೇಳದೆಹೋದರು. ನೀನು ಅನೇಕ ವರುಷ ಅವರನ್ನು ತಾಳಿಕೊಂಡಿದ್ದು ನಿನ್ನ ಪ್ರವಾದಿಗಳ ಮುಖಾಂತರ ನಿನ್ನ ಆತ್ಮನಿಂದ ಅವರಿಗೆ ವಿರೋಧವಾಗಿ ಸಾಕ್ಷಿಹೇಳಿದಿ. ಆದರೆ ಅವರು ಕಿವಿಗೊಡದೆ ಇದ್ದದ್ದರಿಂದ ನೀನು ಅವರನ್ನು ದೇಶಗಳ ಜನರ ಕೈಯಲ್ಲಿ ಒಪ್ಪಿಸಿದಿ. ಆದರೂ ನೀನು ನಿನ್ನ ಅಧಿಕವಾದ ಕರುಣೆಯ ನಿಮಿತ್ತ ಅವರನ್ನು ಸಂಪೂರ್ಣ ನಾಶಮಾಡಿ ಬಿಡ ಲಿಲ್ಲ; ಅವರನ್ನು ಕೈಬಿಡಲೂ ಇಲ್ಲ. ಯಾಕಂದರೆ ನೀನು ಕೃಪೆಯೂ ಕರುಣೆಯುಳ್ಳ ದೇವರಾಗಿದ್ದೀ. ಆದಕಾರಣ ನಮ್ಮ ದೇವರೇ, ಒಡಂಬಡಿಕೆಯನ್ನೂ ಕೃಪೆಯನ್ನೂ ಕೈಕೊಳ್ಳುವಂಥ ಮಹಾಪರಾಕ್ರಮವು ಳ್ಳಂಥ ಭಯಂಕರನಾದ ದೇವರೇ, ಅಶ್ಶೂರಿನ ಅರಸು ಗಳ ಕಾಲ ಮೊದಲುಗೊಂಡು ಇಂದಿನ ವರೆಗೆ ನಮ್ಮ ಮೇಲೆಯೂ ಅರಸುಗಳ ಮೇಲೆಯೂ ಪ್ರಧಾನರ ಮೇಲೆಯೂ ಯಾಜಕರ ಮೇಲೆಯೂ ಪ್ರವಾದಿಗಳ ಮೇಲೆಯೂ ಪಿತೃಗಳ ಮೇಲೆಯೂ ನಿನ್ನ ಸಮಸ್ತ ಜನರ ಮೇಲೆಯೂ ಬಂದ ಶ್ರಮೆಯು ನಿನಗೆ ಅಲ್ಪ ವಾಗಿ ಕಾಣಲ್ಪಡದೆ ಇರಲಿ. ಆದರೆ ನೀನು ನಮ್ಮ ಮೇಲೆ ಬರಮಾಡಿದ ಎಲ್ಲಾದರಲ್ಲಿ ನೀತಿಪರನಾಗಿದ್ದಿ. ಯಾಕಂದರೆ ನೀನು ಮಾಡಿದ್ದು ಸತ್ಯವಾದದ್ದು; ಆದರೆ ನಾವು ದುಷ್ಟರಾಗಿ ನಡೆದೆವು. ನಮ್ಮ ಅರಸುಗಳೂ ಪ್ರಧಾನರೂ ಯಾಜಕರೂ ನಮ್ಮ ಪಿತೃಗಳೂ ನಿನ್ನ ನ್ಯಾಯಪ್ರಮಾಣವನ್ನು ಕೈಕೊಳ್ಳದೆ ನಿನ್ನ ಆಜ್ಞೆಗಳನ್ನೂ ನೀನು ಅವರಿಗೆ ಸಾಕ್ಷಿಯಾಗಿ ಹೇಳಿದ ನಿನ್ನ ಸಾಕ್ಷಿಗ ಳನ್ನೂ ಆಲೈಸದೆ ಹೋದರು. ಅವರು ತಮ್ಮ ರಾಜ್ಯದಲ್ಲಿಯೂ ನೀನು ಅವರಿಗೆ ಮಾಡಿದ ಮಹಾ ಉಪಕಾರದಲ್ಲಿಯೂ ನೀನು ಅವರಿಗೆ ಕೊಟ್ಟ ವಿಸ್ತಾರ ವಾದ, ರಸವತ್ತಾದ ದೇಶದಲ್ಲಿಯೂ ನಿನ್ನನ್ನು ಸೇವಿಸ ಲಿಲ್ಲ; ತಮ್ಮ ಕೆಟ್ಟ ಕಾರ್ಯಗಳನ್ನು ಬಿಟ್ಟು ತಿರುಗಲೂ ಇಲ್ಲ. ಇಗೋ, ಈ ದಿವಸ ನಾವು ದಾಸರಾಗಿದ್ದೇವೆ; ಅದರ ಫಲವನ್ನೂ ಉತ್ತಮವಾದದ್ದನ್ನೂ ತಿನ್ನುವದಕ್ಕೆ ನೀನು ನಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಇಗೋ, ನಾವು ದಾಸರಾಗಿದ್ದೇವೆ. ನಮ್ಮ, ಪಾಪಗಳಿಗೋಸ್ಕರ ನೀನು ನಮ್ಮ ಮೇಲೆ ಇಟ್ಟ ಅರಸುಗಳಿಗೆ ಅದರ ಹುಟ್ಟುವಳಿ ಬಹಳ ಹೋಗುತ್ತದೆ. ಇದಲ್ಲದೆ ಅವರು ತಮ್ಮ ಇಚ್ಛೆಯ ಪ್ರಕಾರ ನಮ್ಮ ಶರೀರಗಳ ಮೇಲೆಯೂ ನಮ್ಮ ಪಶುಗಳ ಮೇಲೆಯೂ ಆಳುತ್ತಾರೆ; ನಾವು ಬಹು ಇಕ್ಕಟ್ಟಿನಲ್ಲಿದ್ದೇವೆ.ಇದೆಲ್ಲಾದರ ನಿಮಿತ್ತ ನಾವು ಒಡಂಬಡಿಕೆಯನ್ನು ಸ್ಥಿರಮಾಡಿ ಬರೆಯುತ್ತೇವೆ; ನಮ್ಮ ಪ್ರಧಾನರೂ ಲೇವಿಯರೂ ಯಾಜಕರೂ ಅದಕ್ಕೆ ಮುದ್ರೆ ಹಾಕುತ್ತಾರೆ ಅಂದನು. ಇದೆಲ್ಲಾದರ ನಿಮಿತ್ತ ನಾವು ಒಡಂಬಡಿಕೆಯನ್ನು ಸ್ಥಿರಮಾಡಿ ಬರೆಯುತ್ತೇವೆ; ನಮ್ಮ ಪ್ರಧಾನರೂ ಲೇವಿಯರೂ ಯಾಜಕರೂ ಅದಕ್ಕೆ ಮುದ್ರೆ ಹಾಕುತ್ತಾರೆ ಅಂದನು.
- Judges 3:12 ನ್ಯಾಯಸ್ಥಾಪಕರು 3:12ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ತಿರಿಗಿ ಕೆಟ್ಟತನ ಮಾಡಿದರು. ಅವರು ಕರ್ತನ ಮುಂದೆ ಕೆಟ್ಟತನ ಮಾಡಿದ್ದರಿಂದ ಕರ್ತನು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲ ಪಡಿಸಿದನು.
- Judges 3:8 ನ್ಯಾಯಸ್ಥಾಪಕರು 3:8ಆದದರಿಂದ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಅವರನ್ನು ಮೆಸೊಪೋತಾಮ್ಯದ ಅರಸನಾದ ಕೂಷನ್ ರಿಷಾತಯಿಮ್ ಕೈಗೆ ಮಾರಿಬಿಟ್ಟನು. ಇಸ್ರಾಯೇಲ್ ಮಕ್ಕಳು ಕೂಷನ್ರಿಷಾತಯಿಮ್ನ್ನು ಎಂಟು ವರುಷ ಸೇವಿಸಿದರು.
- Judges 4:1–2 ನ್ಯಾಯಸ್ಥಾಪಕರು 4:1–2ಆದರೆ ಏಹೂದನು ಸತ್ತತರುವಾಯ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ದೃಷ್ಟಿಯಲ್ಲಿ ಕೆಟ್ಟತನಮಾಡಿದರು. ಆದದರಿಂದ ಕರ್ತನು ಅವರನ್ನು ಹಾಚೋರಿನಲ್ಲಿ ಆಳುವ ಕಾನಾನಿನ ಅರಸನಾದ ಯಾಬೀನನ ಕೈಗೆ ಮಾರಿಬಿಟ್ಟನು. ಅವನ ಸೈನ್ಯಕ್ಕೆ ಜನಾಂಗಗಳ ಪಟ್ಟಣವಾದ ಹರೋಷೆತಿನಲ್ಲಿ ವಾಸವಾಗಿರುವ ಸೀಸೆರನು ಅಧಿಪತಿಯಾಗಿದ್ದನು.
- Deuteronomy 32:30 ಧರ್ಮೋಪದೇಶಕಾಂಡ 32:30ಅವರ ಬಂಡೆ ಅವರನ್ನು ಮಾರಿ ಕರ್ತನು ಅವರನ್ನು ಅಟ್ಟಿಬಿಟ್ಟರೆ ಒಬ್ಬನು ಹೇಗೆ ಸಾವಿರ ಮಂದಿ ಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
- Deuteronomy 28:29 ಧರ್ಮೋಪದೇಶಕಾಂಡ 28:29ಕುರುಡನು ಕತ್ತಲಲ್ಲಿ ತಡವರಿಸು ವಂತೆ ಮಧ್ಯಾಹ್ನದಲ್ಲಿ ತಡವರಿಸುತ್ತಾ ಇರುವಿ; ನಿನ್ನ ಮಾರ್ಗಗಳಲ್ಲಿ ಸಫಲವಾಗುವದಿಲ್ಲ; ನೀನು ಯಾವಾ ಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ ಸುಲಿಗೆ ಯನ್ನೂ ಅನುಭವಿಸುವವನಾಗುವಿ.
- Judges 6:1–6 ನ್ಯಾಯಸ್ಥಾಪಕರು 6:1–6ಆದರೆ ಇಸ್ರಾಯೇಲ್ ಮಕ್ಕಳು ಕರ್ತನ ದೃಷ್ಟಿಯಲ್ಲಿ ಕೆಟ್ಟತನಮಾಡಿದರು; ಆದದ ರಿಂದ ಕರ್ತನು ಅವರನ್ನು ಏಳು ವರುಷ ಮಿದ್ಯಾನ್ಯರ ಕೈಗೆ ಒಪ್ಪಿಸಿಕೊಟ್ಟನು. ಮಿದ್ಯಾನ್ಯರ ಕೈ ಇಸ್ರಾಯೇಲಿಗೆ ವಿರೋಧವಾಗಿ ಬಲವಾದದರಿಂದ ಇಸ್ರಾಯೇಲ್ ಮಕ್ಕಳು ಮಿದ್ಯಾನ್ಯರ ನಿಮಿತ್ತ ತಮಗೆ ಪರ್ವತಗಳಲ್ಲಿ ಇರುವ ಗುಹೆಗಳನ್ನೂ ಗವಿಗಳನ್ನೂ ಬಲವಾದ ಸ್ಥಾನಗಳನ್ನೂ ಮಾಡಿಕೊಂಡರು. ಇಸ್ರಾಯೇಲ್ಯರು ಬೀಜ ಬಿತ್ತಿದ ತರುವಾಯ ಮಿದ್ಯಾನ್ಯರೂ ಅಮಾಲೇ ಕ್ಯರೂ ಮೂಡಣದ ಮಕ್ಕಳೂ ಅವರಿಗೆ ವಿರೋಧವಾಗಿ ಬಂದು ದಂಡಿಳಿದು ಗಾಜಾದ ಪ್ರದೇಶದ ಮಟ್ಟಿಗೂ ಭೂಮಿಯ ಫಲವನ್ನು ಕೆಡಿಸಿಬಿಟ್ಟು ಇಸ್ರಾಯೇಲಿನಲ್ಲಿ ಆಹಾರವಾದರೂ ಕುರಿದನ ಕತ್ತೆಗಳಾದರೂ ಉಳಿಯ ಗೊಡಿಸಲಿಲ್ಲ. ಅವರು ತಮ್ಮ ಕುರಿದನಗಳೂ ಡೇರೆ ಗಳೂ ಸಹಿತವಾಗಿ ಮಿಡಿತೆಗಳ ಹಾಗೆ ಗುಂಪಾಗಿ ಬಂದರು. ಅವರಿಗೂ ಅವರ ಒಂಟೆಗಳಿಗೂ ಎಣಿಕೆ ಇರಲಿಲ್ಲ. ಹೀಗೆ ಅವರು ಅದನ್ನು ಕೆಡಿಸಿಬಿಡುವದಕ್ಕೆ ದೇಶದಲ್ಲಿ ಬಂದರು. ಆದಕಾರಣ ಇಸ್ರಾಯೇಲ್ಯರು ಮಿದ್ಯಾನ್ಯರಿಂದ ಬಹಳ ಕುಗ್ಗಿಹೋದರು. ಆಗ ಇಸ್ರಾ ಯೇಲ್ ಮಕ್ಕಳು ಕರ್ತನಿಗೆ ಕೂಗಿಕೊಂಡರು.
- Judges 10:7–18 ನ್ಯಾಯಸ್ಥಾಪಕರು 10:7–18ಆಗ ಕರ್ತನು ಇಸ್ರಾಯೇಲಿಗೆ ವಿರೋಧವಾಗಿ ಕೋಪಗೊಂಡು ಅವ ರನ್ನು ಫಿಲಿಷ್ಟಿಯರ ಕೈಗೂ ಅಮ್ಮೋನನ ಮಕ್ಕಳ ಕೈಗೂ ಮಾರಿಬಿಟ್ಟನು. ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು. ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದನಿಗೆ ಬೆನ್ಯಾವಿಾನರಿಗೆ ವಿರೋಧವಾ ಗಿಯೂ ಎಫ್ರಾಯಾಮ್ ಮನೆಗೆ ವಿರೋಧವಾಗಿಯೂ ಯುದ್ಧಮಾಡುವದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹುಸಂಕಟವಾಯಿತು. ಆಗ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಕೂಗಿ--ನಮ್ಮ ದೇವರನ್ನು ಬಿಟ್ಟು ಬಾಳನನ್ನು ಸೇವಿಸಿದ್ದರಿಂದ ನಾವು ನಿನಗೆ ವಿರೋಧವಾಗಿ ಪಾಪ ಮಾಡಿದೆವು ಅಂದರು. ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಾನು ನಿಮ್ಮನ್ನು ಐಗುಪ್ತ್ಯರ ಕೈಯೊಳಗಿಂದಲೂ ಅಮೋರಿಯರ ಕೈಯೊ ಳಗಿಂದಲೂ ಅಮ್ಮೋನನ ಮಕ್ಕಳ ಕೈಯೊಳಗಿಂದಲೂ ಫಿಲಿಷ್ಟಿಯರ ಕೈಯೊಳಗಿಂದಲೂ ತಪ್ಪಿಸಿಬಿಡಲಿಲ್ಲವೋ? ಇದಲ್ಲದೆ ಚೀದೋನ್ಯರೂ ಅಮಾಲೇಕ್ಯರೂ ಮಾವೋನ್ಯರೂ ನಿಮ್ಮನ್ನು ಬಾಧೆಪಡಿಸುವಾಗ ನೀವು ನನಗೆ ಕೂಗಿದ್ದರಿಂದ ನಾನು ನಿಮ್ಮನ್ನು ಅವರ ಕೈಗೆ ತಪ್ಪಿಸಿ ರಕ್ಷಿಸಿದೆನು. ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸಿದಿರಿ; ಆದಕಾರಣ ನಾನು ನಿಮ್ಮನ್ನು ಇನ್ನು ಮುಂದೆ ಬಿಡಿಸುವದಿಲ್ಲ. ನೀವು ಹೋಗಿ ನಿಮಗೆ ನೀವೇ ಆರಿಸಿಕೊಂಡ ದೇವರುಗಳಿಗೆ ಕೂಗಿರಿ; ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ ಅಂದನು. ಇಸ್ರಾಯೇಲ್ ಮಕ್ಕಳು ಕರ್ತ ನಿಗೆ--ನಾವು ಪಾಪಮಾಡಿದೆವು; ನೀನು ನಿನ್ನ ಕಣ್ಣು ಗಳಿಗೆ ಒಳ್ಳೇದಾಗಿ ತೋರುವದೆಲ್ಲಾ ನಮಗೆ ಮಾಡು. ಆದರೆ ಈಹೊತ್ತು ನಮ್ಮನ್ನು ರಕ್ಷಿಸು ಎಂದು ಬೇಡಿ ಕೊಂಡರು. ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು ಕರ್ತನನ್ನು ಸೇವಿಸಿ ದರು. ಆಗ ಆತನ ಮನಸ್ಸು ಇಸ್ರಾಯೇಲಿನ ಕಷ್ಟ ಕ್ಕೋಸ್ಕರ ನೊಂದುಕೊಂಡಿತು. ಅಮ್ಮೋನನ ಮಕ್ಕಳು ಏಕವಾಗಿ ಕೂಡಿಕೊಂಡು ಗಿಲ್ಯಾದಿನಲ್ಲಿ ದಂಡಿಳಿದರು. ಆದರೆ ಇಸ್ರಾಯೇಲ್ ಮಕ್ಕಳು ಏಕವಾಗಿ ಕೂಡಿ ಮಿಚ್ಪೆಯಲ್ಲಿ ದಂಡಿಳಿದರು.ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು. ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು.
- Deuteronomy 28:33 ಧರ್ಮೋಪದೇಶಕಾಂಡ 28:33ನಿನ್ನ ಭೂಮಿಯ ಫಲವನ್ನೂ ನಿನ್ನ ಎಲ್ಲಾ ಆದಾಯವನ್ನೂ ನೀನರಿಯದ ಜನವು ತಿಂದುಬಿಡುವದು; ನೀನು ಯಾವಾ ಗಲೂ ಬಲಾತ್ಕಾರವನ್ನೂ ಸಂಕಟವನ್ನೂ ಅನುಭವಿ ಸುವಿ.
- Deuteronomy 28:48 ಧರ್ಮೋಪದೇಶಕಾಂಡ 28:48ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು.
- Deuteronomy 28:25 ಧರ್ಮೋಪದೇಶಕಾಂಡ 28:25ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ.