Ezekiel · chapter 9 · verse 7
Ezekiel 9:7 in Kannada
ಆತನು ಅವರಿಗೆ--ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿಸಿ, ಹೊರಡಿರಿ ಎಂದು ಹೇಳಿದನು. ಅವರು ಹೊರಟು ನಗರದಲ್ಲಿದ್ದವರನ್ನು ಹತಮಾಡಿದರು.
Aatanu avarige--aalayavannu ashuddha maadiri, hataraadavarinda angalagalannu tumbisi, horadiri endu helidanu. Avaru horatu nagaradalliddavarannu hatamaadidaru.
Ezekiel 9:7 in English
- King James Version (KJV)
- And he said unto them, Defile the house, and fill the courts with the slain: go ye forth. And they went forth, and slew in the city.
- World English Bible (WEB)
- He said to them, “Defile the house, and fill the courts with the slain. Go out!” They went out, and struck in the city.
- American Standard Version (ASV)
- And he said unto them, Defile the house, and fill the courts with the slain: go ye forth. And they went forth, and smote in the city.
- Bible in Basic English (BBE)
- And he said to them, Make the house unclean, make the open places full of dead: go forward and send destruction on the town.
- Darby Translation (DBY)
- And he said unto them, Defile the house, and fill the courts with the slain: go forth. And they went forth, and smote in the city.
- Webster's Bible (WBS)
- And he said to them, Defile the house, and fill the courts with the slain: go ye forth. And they went forth, and slew in the city.
- Young's Literal Translation (YLT)
- And they begin among the aged men who [are] before the house, and He saith unto them, 'Defile the house, and fill the courts with the wounded, go forth.' And they have gone forth and have smitten in the city.
Read in context
- 5ಅದನ್ನು ನಾನು ಕೇಳುತ್ತಿರುವಾಗ ಇತರರಿಗೆ ಅವನು ಹೇಳಿದ್ದೇನಂದರೆ --ನೀವೂ ಅವನ ಹಿಂದೆ ಪಟ್ಟಣದಲ್ಲಿ ಹಾದು ಹೋಗಿ ಹೊಡೆಯಿರಿ; ನಿಮ್ಮ ಕಣ್ಣುಗಳು ಕನಿಕರಿಸದೆ ಇರಲಿ, ಕಟಾಕ್ಷಿಸದೆಯೂ ಇರಲಿ.
- 6ವೃದ್ಧ ಯುವಕ ಯುವತಿ ಯರನ್ನು ಎಳೆಕೂಸುಗಳನ್ನು ಮತ್ತು ಹೆಂಗಸರನ್ನು ಸಂಪೂರ್ಣವಾಗಿ ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ ಅವನ ಹತ್ತಿರ ಹೋಗ ಬೇಡಿರಿ; ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ ಅಂದಾಗ, ಅವರು ಆಲಯದ ಮುಂದಿದ್ದ ಹಿರಿಯರಿಂದ ಪ್ರಾರಂಭಿಸಿದರು.
- 7ಆತನು ಅವರಿಗೆ--ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿಸಿ, ಹೊರಡಿರಿ ಎಂದು ಹೇಳಿದನು. ಅವರು ಹೊರಟು ನಗರದಲ್ಲಿದ್ದವರನ್ನು ಹತಮಾಡಿದರು.
- 8ಅವರು ಹತಮಾಡುತ್ತಿರುವಾಗ ನಾನು ಬಿಡಿಸಲ್ಪಟ್ಟೆನು. ಆಗ ನಾನು ಮೋರೆ ಕೆಳಗಾಗಿ ಬಿದ್ದು ಕೂಗಿ--ಹಾ, ದೇವರಾದ ಕರ್ತನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನು ಸುರಿಯುವದರಲ್ಲಿಯೇ ಇಸ್ರಾ ಯೇಲ್ಯರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿಯಾ ಎಂದೆನು.
- 9ಆಗ ಆತನು ನನಗೆ ಹೇಳಿದ್ದೇನಂದರೆಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ; ದೇಶವು ರಕ್ತದಿಂದ ತುಂಬಿದೆ; ಪಟ್ಟಣವು ವಕ್ರತ್ವದಿಂದ ತುಂಬಿದೆ; ಯಾಕಂದರೆ ಕರ್ತನು ಭೂಮಿಯನ್ನು ತೊರೆದುಬಿಟ್ಟಿದ್ದಾನೆ; ಕರ್ತನು ನೋಡುವದಿಲ್ಲ ಎಂದು ಅವರು ಹೇಳುತ್ತಾರೆ.
Cross references
- Ezekiel 7:20–22 ಯೆಹೆಜ್ಕೇಲನು 7:20–22ಅವನ ಆಭರಣದ ಸೌಂದರ್ಯವಾ ದರೋ ಅವನು ಅದನ್ನು ಘನತೆಗಾಗಿ ಇಟ್ಟನು. ಆದರೆ ಅವರು ತಮ್ಮ ಅಸಹ್ಯಗಳ ವಿಗ್ರಹಗಳನ್ನೂ ಹೇಸಿಗೆ ಗಳನ್ನೂ ಅದರಲ್ಲಿ ಮಾಡಿದ್ದರಿಂದ ಅದನ್ನು ನಾನು ಅವರಿಂದ ದೂರಮಾಡಿದ್ದೇನೆ. ನಾನು ಅದನ್ನು ಅಪರಿಚಿತರ ಕೈಗೆ ಕೊಳ್ಳೆಯಾಗಿಯೂ ಭೂಮಿಯ ದುಷ್ಟರಿಗೆ ಸೂರೆಯಾಗಿಯೂ ಒಪ್ಪಿಸುವೆನು ಮತ್ತು ಅವರು ಅದನ್ನು ಅಪವಿತ್ರಪಡಿಸುವರು. ನನ್ನ ಮುಖವನ್ನು ನಾನು ಅವರ ಕಡೆಯಿಂದ ತಿರುಗಿಸುವೆನು; ನನ್ನ ರಹಸ್ಯ ಸ್ಥಳವನ್ನು ಅಪವಿತ್ರಪಡಿಸುವರು. ದರೋಡೆ ಕೋರರು ಅದರಲ್ಲಿ ಸೇರಿ ಅದನ್ನು ಅಪವಿತ್ರ ಪಡಿಸುವರು.
- 2 Chronicles 36:17 2 ಪೂರ್ವಕಾಲವೃತ್ತಾಂತ 36:17ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.
- Luke 13:1 ಲೂಕನು 13:1ಇದಲ್ಲದೆ ಪಿಲಾತನು ಗಲಿಲಾಯದವರ ರಕ್ತವನ್ನು ಅವರ ಬಲಿಗಳೊಂದಿಗೆ ಬೆರಸಿದ ವಿಷಯವನ್ನು ಆತನಿಗೆ ತಿಳಿಸಿದ ಕೆಲವರು ಆ ಸಮಯ ದಲ್ಲಿ ಅಲ್ಲಿದ್ದರು.
- Lamentations 2:4–7 ಪ್ರಲಾಪಗಳು 2:4–7ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಮಗಳ ಗುಡಾರದಲ್ಲಿ ಸುರಿದಿದ್ದಾನೆ. ಕರ್ತನು ಶತ್ರುವಿನಂತೆ ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾನೆ; ಆತನು ಅವನ ಅರಮನೆಗಳನ್ನೆಲ್ಲಾ ನುಂಗಿಬಿಟ್ಟಿದ್ದಾನೆ, ಆತನು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾನೆ; ಯೆಹೂದದ ಮಗಳ ದುಃಖವನ್ನೂ ಪ್ರಲಾಪವನ್ನೂ ಹೆಚ್ಚಿಸಿದ್ದಾನೆ. ಆತನು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾನೆ. ಆತನು ತನ್ನ ಸಭಾಸ್ಥಾನಗಳನ್ನು ನಾಶಮಾಡಿದ್ದಾನೆ; ಕರ್ತನು ಚೀಯೋನಿನಲ್ಲಿ ಪವಿತ್ರ ಹಬ್ಬಗಳನ್ನೂ ಸಬ್ಬತ್ತನ್ನೂ ಮರೆತುಬಿಡುವಂತೆ ಮಾಡಿದ್ದಾನೆ, ತನ್ನ ಕೋಪದ ಉರಿಯಲ್ಲಿ ಅರಸನನ್ನೂ ಯಾಜಕನನ್ನೂ ತುಚ್ಛೀಕರಿ ಸಿದ್ದಾನೆ. ಕರ್ತನು ತನ್ನ ಯಜ್ಞವೇದಿಯನ್ನು ತಳ್ಳಿಬಿಟ್ಟಿ ದ್ದಾನೆ; ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯಪಡಿಸಿದ್ದಾನೆ; ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ ಅವರು ಕರ್ತನ ಆಲಯದಲ್ಲಿ ಶಬ್ದಮಾಡಿದ್ದಾರೆ.
- Psalm 79:1–3 ಕೀರ್ತನೆಗಳು 79:1–3ದೇವರೇ, ಅನ್ಯಜನಾಂಗಗಳು ನಿನ್ನ ಬಾಧ್ಯತೆಯೊಳಗೆ ಬಂದು, ನಿನ್ನ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ. ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಪರಿಶುದ್ಧರ ಮಾಂಸ ವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿ ದ್ದಾರೆ. ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ; ಅವರನ್ನು ಹೂಣಿಡುವ ವನೊಬ್ಬನೂ ಇಲ್ಲ.