Psalms · chapter 79 · verse 1
Psalm 79:1 in Kannada
ದೇವರೇ, ಅನ್ಯಜನಾಂಗಗಳು ನಿನ್ನ ಬಾಧ್ಯತೆಯೊಳಗೆ ಬಂದು, ನಿನ್ನ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.
Devare, anyajanaangagalu ninna baadhyateyolage bandu, ninna parishuddha mandiravannu apavitra maadi, yeroosalemannu haalu dibbagalaagi maadiddaare.
Psalm 79:1 in English
- King James Version (KJV)
- A Psalm of Asaph. O God, the heathen are come into thine inheritance; thy holy temple have they defiled; they have laid Jerusalem on heaps.
- World English Bible (WEB)
- A Psalm by Asaph. God, the nations have come into your inheritance. They have defiled your holy temple. They have laid Jerusalem in heaps.
- American Standard Version (ASV)
- A Psalm of Asaph. O God, the nations are come into thine inheritance; Thy holy temple have they defiled; They have laid Jerusalem in heaps.
- Bible in Basic English (BBE)
- A Psalm. Of Asaph. O God, the nations have come into your heritage; they have made your holy Temple unclean; they have made Jerusalem a mass of broken walls.
- Darby Translation (DBY)
- A Psalm of Asaph. O God, the nations are come into thine inheritance: thy holy temple have they defiled; they have laid Jerusalem in heaps.
- Webster's Bible (WBS)
- A Psalm of Asaph. O God, the heathen have come into thy inheritance; thy holy temple have they defiled; they have laid Jerusalem on heaps.
- Young's Literal Translation (YLT)
- A Psalm of Asaph. O God, nations have come into Thy inheritance, They have defiled Thy holy temple, They made Jerusalem become heaps,
Read in context
- 1ದೇವರೇ, ಅನ್ಯಜನಾಂಗಗಳು ನಿನ್ನ ಬಾಧ್ಯತೆಯೊಳಗೆ ಬಂದು, ನಿನ್ನ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.
- 2ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಪರಿಶುದ್ಧರ ಮಾಂಸ ವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿ ದ್ದಾರೆ.
- 3ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ; ಅವರನ್ನು ಹೂಣಿಡುವ ವನೊಬ್ಬನೂ ಇಲ್ಲ.
Cross references
- 2 Chronicles 36:19 2 ಪೂರ್ವಕಾಲವೃತ್ತಾಂತ 36:19ಅವರು ದೇವರ ಆಲಯವನ್ನು ಸುಟ್ಟು ಬಿಟ್ಟು ಯೆರೂಸಲೇಮಿನ ಗೋಡೆಯನ್ನು ಕೆಡವಿ ಹಾಕಿ ಅದರ ಅರಮನೆಗಳನ್ನು ಸುಟ್ಟು ಬಿಟ್ಟು ಅದರ ಬೆಲೆಯುಳ್ಳ ಸಾಮಾನುಗಳನ್ನೆಲ್ಲಾ ಕೆಡಿಸಿದರು.
- Lamentations 1:10 ಪ್ರಲಾಪಗಳು 1:10ವೈರಿಯು ಆಕೆಯ ಎಲ್ಲಾ ರಮ್ಯವಾದ ವಸ್ತುಗಳ ಮೇಲೆ ತನ್ನ ಕೈ ಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರ ಬಾರದೆಂದು ನೀನು ಆಜ್ಞಾಪಿಸಿದ ಅನ್ಯ ಜನಾಂಗಗಳು ತನ್ನ ಪರಿಶುದ್ಧ ಸ್ಥಳದಲ್ಲಿ ಸೇರಿರುವದನ್ನು ನೋಡಿದ್ದಾಳೆ.
- Psalm 74:1–4 ಕೀರ್ತನೆಗಳು 74:1–4ಓ ದೇವರೇ, ಸದಾಕಾಲಕ್ಕೆ ತಳ್ಳಿಬಿಟ್ಟದ್ದೇಕೆ? ನಿನ್ನ ಮೇವಿನ ಕುರಿಮಂದೆಗೆ ವಿರೋಧವಾಗಿ ನಿನ್ನ ಕೋಪವು ಹೊಗೆಯಾಡುವದು ಯಾಕೆ? ಪೂರ್ವದಲ್ಲಿ ನೀನು ಕೊಂಡುಕೊಂಡ ಸಭೆಯನ್ನೂ ವಿಮೋಚಿಸಿದ ಬಾಧ್ಯತೆಯ ಕೋಲನ್ನೂ ನೀನು ವಾಸಮಾಡಿದ ಈ ಚೀಯೋನ್ ಪರ್ವತವನ್ನೂ ಜ್ಞಾಪಕಮಾಡಿಕೋ. ನಿನ್ನ ಪಾದಗಳನ್ನು ಸದಾಕಾಲದ ನಾಶನಗಳಿಗೆ, ಅಂದರೆ ಶತ್ರುವು ಪರಿಶುದ್ಧ ಸ್ಥಳದಲ್ಲಿ ಎಲ್ಲವನ್ನು ಕೆಟ್ಟತನದಿಂದ ಮಾಡಿದ್ದಕ್ಕೆ ತಿರುಗಿಸು. ನಿನ್ನ ವೈರಿಗಳು ನಿನ್ನ ಸಭೆಗಳ ಮಧ್ಯದಲ್ಲಿ ಗರ್ಜಿಸುತ್ತಾರೆ; ತಮ್ಮ ಧ್ವಜಗಳನ್ನು ಗುರುತುಗಳಾಗಿ ಇಟ್ಟಿದ್ದಾರೆ.
- Micah 3:12 ಮೀಕ 3:12ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Psalm 74:7–8 ಕೀರ್ತನೆಗಳು 74:7–8ನಿನ್ನ ಪರಿಶುದ್ಧ ಆಲಯದಲ್ಲಿ ಬೆಂಕಿ ಹಚ್ಚುತ್ತಾರೆ; ನಿನ್ನ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಹೊಲೆ ಮಾಡುತ್ತಾರೆ. ಅವುಗಳನ್ನು ಒಟ್ಟಾಗಿ ಕೆಡವಿ ಬಿಡೋಣ ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ; ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಡು ತ್ತಾರೆ.
- Jeremiah 26:18 ಯೆರೆಮೀಯ 26:18ಮೋರೇಷೆತಿನವನಾದ ವಿಾಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ ಯೆಹೂದದ ಜನರಿಗೆಲ್ಲಾ ಹೇಳಿದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಚೀಯೋನು ಹೊಲದ ಹಾಗೆ ಉಳಲ್ಪಡು ವದು; ಯೆರೂಸಲೇಮು ದಿಬ್ಬಗಳಾಗುವದು; ಮಂದಿ ರದ ಬೆಟ್ಟವು ಅಡವಿಯ ಉನ್ನತ ಸ್ಥಳವಾಗುವದು.
- 2 Chronicles 36:6–7 2 ಪೂರ್ವಕಾಲವೃತ್ತಾಂತ 36:6–7ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬೆಲಿಗೆ ಒಯ್ಯುವ ಹಾಗೆ ಅವನಿಗೆ ಸಂಕೋಲೆಗಳನ್ನು ಹಾಕಿಸಿದನು. ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು.
- 2 Chronicles 36:17 2 ಪೂರ್ವಕಾಲವೃತ್ತಾಂತ 36:17ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.
- 2 Kings 25:4–10 2 ಅರಸುಗಳು 25:4–10ಪಟ್ಟಣವು ವಿಭಾಗಿಸಲ್ಪಟ್ಟಿದ್ದರಿಂದ ಸೈನ್ಯದ ಜನರೆಲ್ಲರೂ ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಬಾಗಲ ಮಾರ್ಗವಾಗಿ ಓಡಿಹೋದರು; ಆದರೆ ಅರಸನು ಬಯಲು ಮಾರ್ಗ ವಾಗಿ ಹೋದನು. ಕಸ್ದೀಯರು ಪಟ್ಟಣದ ಬಳಿಯಲ್ಲಿ ಇದ್ದದರಿಂದ ಅವರ ದಂಡು ಅರಸನನ್ನು ಹಿಂಬಾಲಿಸಿ ಯೆರಿಕೋವಿನ ಬಯಲು ಸ್ಥಳಗಳಲ್ಲಿ ಅವನನ್ನು ಹಿಡು ಕೊಂಡರು. ಅವನ ದಂಡೆಲ್ಲಾ ಅವನ ಕಡೆಯಿಂದ ಚದರಿ ಹೋಯಿತು. ಅವರು ಅರಸನನ್ನು ಹಿಡಿದು ಕೊಂಡು, ರಿಬ್ಲದಲ್ಲಿರುವ ಬಾಬೆಲಿನ ಅರಸನ ಬಳಿಗೆ ತಕ್ಕೊಂಡು ಬಂದು ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು. ಅವರು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣೆದುರಿನಲ್ಲಿಯೇ ಕೊಂದ ತರುವಾಯ ಅವನ ಕಣ್ಣುಗಳನ್ನು ಕಿತ್ತುಹಾಕಿ ಅವನಿಗೆ ಹಿತ್ತಾಳೆಯ ಬೇಡಿ ಹಾಕಿ ಅವನನ್ನು ಬಾಬೆಲಿಗೆ ತಕ್ಕೊಂಡು ಹೋದರು. ಐದನೇ ತಿಂಗಳಿನ ಏಳನೇ ದಿವಸಕ್ಕೆ ಸರಿಯಾಗಿ ಬಾಬೆಲಿನ ಅರಸನಾದ ನೆಬೂಕದ್ನೆಚರನ ಆಳ್ವಿಕೆಯ ಹತ್ತೊಂಭತ್ತನೇ ವರುಷದಲ್ಲಿ ಬಾಬೆಲಿನ ಅರಸನ ಸೇವಕ ನಾದ ಕಾವಲಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇಮಿಗೆ ಬಂದು, ಕರ್ತನ ಮನೆಯನ್ನೂ ಅರಮನೆಯನ್ನೂ ಯೆರೂಸಲೇಮಿನಲ್ಲಿರುವ ಎಲ್ಲಾ ಮನೆಗಳನ್ನೂ ಪ್ರತಿ ದೊಡ್ಡ ಮನುಷ್ಯನ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು. ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಕಸ್ದೀಯರ ಸೈನ್ಯದವರೆ ಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆ ಗಳನ್ನು ಕೆಡವಿಬಿಟ್ಟರು.
- 2 Kings 24:13 2 ಅರಸುಗಳು 24:13ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು.
- Jeremiah 52:13 ಯೆರೆಮೀಯ 52:13ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು;
- 2 Chronicles 36:3–4 2 ಪೂರ್ವಕಾಲವೃತ್ತಾಂತ 36:3–4ಐಗುಪ್ತದ ಅರಸನು ಯೆರೂಸಲೇ ಮಿನಲ್ಲಿ ಅವನನ್ನು ತೆಗೆದುಹಾಕಿ ದೇಶದಿಂದ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರ ವನ್ನೂ ದಂಡ ತಕ್ಕೊಂಡನು. ಇದಲ್ಲದೆ ಐಗುಪ್ತದ ಅರಸನು ಅವನ ಸಹೋದರನಾದ ಎಲ್ಯಾಕೀಮ ನನ್ನು ಯೆಹೂದದ ಯೆರೂಸಲೇಮಿನ ಮೇಲೆ ಅರಸ ನಾಗಿ ಮಾಡಿ ಯೆಹೋಯಾಕೀಮನೆಂಬ ಬದಲು ಹೆಸರನ್ನು ಅವನಿಗೆ ಇಟ್ಟನು. ನೆಕೋ ಅವನ ಸಹೋ ದರನಾದ ಯೆಹೋವಾಹಾಜನನ್ನು ತಕ್ಕೊಂಡು ಐಗುಪ್ತಕ್ಕೆ ಒಯ್ದನು.