Ezra · chapter 1 · verse 9
Ezra 1:9 in Kannada
ಅವುಗಳ ಲೆಕ್ಕವೇನಂದರೆ--ಮೂವತ್ತು ಬಂಗಾರದ ತಟ್ಟೆಗಳು, ಸಾವಿರ ಬೆಳ್ಳಿಯ ತಟ್ಟೆಗಳು, ಇಪ್ಪತ್ತೊಂಭತ್ತು ಕತ್ತಿಗಳು,
Avugala lekkavenandare--moovattu bangaarada tattegalu, saavira belliya tattegalu, ippattombhattu kattigalu,
Ezra 1:9 in English
- King James Version (KJV)
- And this [is] the number of them: thirty chargers of gold, a thousand chargers of silver, nine and twenty knives,
- World English Bible (WEB)
- This is the number of them: thirty platters of gold, one thousand platters of silver, twenty-nine knives,
- American Standard Version (ASV)
- And this is the number of them: thirty platters of gold, a thousand platters of silver, nine and twenty knives,
- Bible in Basic English (BBE)
- And this is the number of them: there were thirty gold plates, a thousand silver plates, twenty-nine knives,
- Darby Translation (DBY)
- And this is the number of them: thirty chargers of gold, a thousand chargers of silver, nine-and-twenty knives,
- Webster's Bible (WBS)
- And this [is] the number of them: thirty chargers of gold, a thousand chargers of silver, nine and twenty knives,
- Young's Literal Translation (YLT)
- And this [is] their number: dishes of gold thirty, dishes of silver a thousand, knives nine and twenty,
Read in context
- 7ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು ತನ್ನ ದೇವರುಗಳ ಮನೆಯಲ್ಲಿ ಇರಿಸಿದ್ದ ಕರ್ತನ ಆಲಯದ ಸಾಮಾನು ಗಳನ್ನು ಅರಸನಾದ ಕೋರೆಷನು ತರಿಸಿದನು.
- 8ಅವು ಗಳನ್ನು ಪಾರಸಿಯ ಅರಸನಾದ ಕೋರೆಷನು ಬೊಕ್ಕಸ ದವನಾದ ಮಿತ್ರದಾತನ ಕೈಯಿಂದ ತರಿಸಿ ಯೆಹೂದದ ಪ್ರಭುವಾದ ಶೆಷ್ಬಚ್ಚರನಿಗೆ ಎಣಿಸಿ ಕೊಟ್ಟನು.
- 9ಅವುಗಳ ಲೆಕ್ಕವೇನಂದರೆ--ಮೂವತ್ತು ಬಂಗಾರದ ತಟ್ಟೆಗಳು, ಸಾವಿರ ಬೆಳ್ಳಿಯ ತಟ್ಟೆಗಳು, ಇಪ್ಪತ್ತೊಂಭತ್ತು ಕತ್ತಿಗಳು,
- 10ಮೂವತ್ತು ಬಂಗಾರದ ದೊಡ್ಡ ಬಟ್ಟಲುಗಳು, ನಾನೂರ ಹತ್ತು ಬೆಳ್ಳಿಯ ಬಟ್ಟಲುಗಳು, ಸಾವಿರ ಬೇರೆ ಸಾಮಾನುಗಳು. ಬಂಗಾರ ಬೆಳ್ಳಿಯ ಸಾಮಾನುಗಳೆಲ್ಲಾ ಐದು ಸಾವಿರದ ನಾನೂರು ಇದ್ದವು.ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು.
- 11ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು.
Cross references
- Ezra 8:27 ಎಜ್ರನು 8:27ನೂರು ತಲಾಂತು ಬಂಗಾರವನ್ನೂ ಸಾವಿರ ಪವನು ಬೆಲೆಯುಳ್ಳ ಇಪ್ಪತ್ತು ಬಂಗಾರದ ಬಟ್ಟಲು ಗಳನ್ನು ಬಂಗಾರದ ಹಾಗೆ ಅಮೂಲ್ಯವಾದಂಥಾ ಥಳ ಥಳಿಸುವಂಥಾ ಒಳ್ಳೇ ತಾಮ್ರದ ಎರಡು ಪಾತ್ರೆಗ ಳನ್ನೂ ತೂಗಿಕೊಟ್ಟೆನು.
- Matthew 14:8 ಮತ್ತಾಯನು 14:8ಅವಳು ತನ್ನ ತಾಯಿಯಿಂದ ಮೊದಲೇ ಕಲಿಸಲ್ಪಟ್ಟವಳಾಗಿ-- ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಪರಾ ತಿನಲ್ಲಿ ಇಲ್ಲಿಯೇ ನನಗೆ ಕೊಡು ಎಂದು ಹೇಳಿದಳು.
- Matthew 10:29–31 ಮತ್ತಾಯನು 10:29–31ಒಂದು ಕಾಸಿಗೆ ಎರಡು ಗುಬ್ಬಿಗಳು ಮಾರಲ್ಪಡುತ್ತವಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವದಿಲ್ಲ. ಆದರೆ ನಿಮ್ಮ ತಲೆಯ ಕೂದಲುಗಳೆಲ್ಲಾ ಲೆಕ್ಕಿಸಲ್ಪಟ್ಟಿವೆ. ನೀವು ಬಹಳ ಗುಬ್ಬಿಗಳಿಗಿಂತ ಬಹು ಬೆಲೆಯುಳ್ಳವರಾಗಿದ್ದೀರಿ. ಆದದರಿಂದ ಭಯಪಡಬೇಡಿರಿ.
- 2 Chronicles 4:11 2 ಪೂರ್ವಕಾಲವೃತ್ತಾಂತ 4:11ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾ ಮನು ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊ ಮೋನನಿಗೆ ಮಾಡಬೇಕಾದ ಕಾರ್ಯವನ್ನು ಮಾಡಿ ತೀರಿಸಿದನು.
- 2 Chronicles 24:14 2 ಪೂರ್ವಕಾಲವೃತ್ತಾಂತ 24:14ಅವರು ಅದನ್ನು ಮುಗಿಸಿದ ಮೇಲೆ ಮಿಕ್ಕ ಹಣವನ್ನು ಅರ ಸನ ಮುಂದೆಯೂ ಯೆಹೋಯಾದನ ಮುಂದೆಯೂ ತಂದರು. ಅದರಿಂದ ಕರ್ತನ ಆಲಯಕ್ಕೋಸ್ಕರ ಬಂಗಾ ರದ ಬೆಳ್ಳಿಪಾತ್ರೆಗಳಾದ ಸೇವೆಯ ಪಾತ್ರೆಗಳೂ ಅರ್ಪಣೆಯ ಪಾತ್ರೆಗಳೂ ಸೌಟುಗಳೂ ಮಾಡಲ್ಪ ಟ್ಟವು. ಯೆಹೋಯಾದನ ಸಮಸ್ತ ದಿವಸಗಳಲ್ಲಿ ಯಾವಾಗಲೂ ಕರ್ತನ ಆಲಯದಲ್ಲಿ ದಹನಬಲಿ ಗಳನ್ನು ಅರ್ಪಿಸಿದರು.
- Numbers 7:13 ಅರಣ್ಯಕಾಂಡ 7:13ಅವನ ಅರ್ಪಣೆ ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರದ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
- Numbers 7:19–89 ಅರಣ್ಯಕಾಂಡ 7:19–89ಅವನು ಅರ್ಪಿಸಿದ ಅರ್ಪಣೆ ಏನಂದರೆ, ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯನ್ನೂ ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂವಾರನ ಮಗನಾದ ನೆತನೇಲನ ಅರ್ಪಣೆಯು. ಮೂರನೆ ದಿವಸದಲ್ಲಿ ಜೆಬುಲೂನನ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗನಾದ ಎಲೀಯಾಬನು ಅರ್ಪಿಸಿದ್ದು. ಅವನ ಅರ್ಪಣೆ ಏನಂದರೆ-- ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಹೇಲೋನನ ಮಗನಾದ ಎಲೀಯಾಬನ ಅರ್ಪಣೆಯು. ನಾಲ್ಕನೇ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾ ನನಾಗಿರುವ ಶೆದೇಯೂರನ ಮಗನಾದ ಎಲೀಚೂ ರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರು ಷದ ಐದು ಕುರಿಮರಿಗಳೂ. ಇದು ಶೆದೇಯೂರನ ಮಗನಾದ ಎಲೀಚೂರನ ಅರ್ಪಣೆಯು. ಐದನೇ ದಿನದಲ್ಲಿ ಸಿಮೆಯೋನ ಮಕ್ಕಳಿಗೆ ಪ್ರಧಾನನಾಗಿರುವ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಅರ್ಪಿಸಿದನು. ಅವನ ಅರ್ಪ ಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂರಿಷದ್ದೈ ಯನ ಮಗನಾದ ಶೆಲುವಿಾಯೇಲನ ಅರ್ಪಣೆಯು. ಆರನೇ ದಿನದಲ್ಲಿ ಗಾದನ ಮಕ್ಕಳಿಗೆ ಪ್ರಧಾನ ನಾಗಿರುವ ದೆಗೂವೇಲನ ಮಗನಾದ ಎಲ್ಯಾಸಾಫನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ದೆಗೂವೇಲನ ಮಗನಾದ ಎಲ್ಯಾಸಾಫನ ಅರ್ಪಣೆಯು. ಏಳನೇ ದಿನದಲ್ಲಿ ಎಫ್ರಾಯಾಮ್ ಮಕ್ಕಳಿಗೆ ಪ್ರಧಾನನಾದ ಅವ್ಮೆಾಹೂದನ ಮಗನಾದ ಎಲೀಷಾಮನು ಅರ್ಪಿಸಿದನು. ಅವನ ಅರ್ಪಣೆ ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಹೂದನ ಮಗನಾದ ಎಲೀಷಾಮನ ಅರ್ಪಣೆಯು. ಎಂಟನೇ ದಿನದಲ್ಲಿ ಮನಸ್ಸೆ ಮಕ್ಕಳಿಗೆ ಪ್ರಧಾನನಾದ ಪೆದಾಚೂರನ ಮಗನಾದ ಗವ್ಲೆಾ ಯೇಲ್ ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ,--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಪೆದಾಚೂರನ ಮಗನಾದ ಗವ್ಲೆಾಯೇಲನ ಅರ್ಪಣೆಯು. ಒಂಭತ್ತನೇ ದಿನದಲ್ಲಿ ಬೆನ್ಯಾವಿಾನನ ಮಕ್ಕಳಿಗೆ ಪ್ರಧಾನನಾದ ಗಿದ್ಯೋನಿಯ ಮಗನಾದ ಅಬೀದಾ ನನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಗಿದ್ಯೋನಿಯ ಮಗನಾದ ಅಬೀದಾನನ ಅರ್ಪಣೆಯು. ಹತ್ತನೆಯ ದಿನದಲ್ಲಿ ದಾನನ ಮಕ್ಕಳಿಗೆ ಪ್ರಧಾನ ನಾದ ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನ ಅರ್ಪಣೆಯು. ಹನ್ನೊಂದನೆಯ ದಿನದಲ್ಲಿ ಆಶೇರನ ಮಕ್ಕಳಿಗೆ ಪ್ರಧಾನನಾದ ಒಕ್ರಾನನ ಮಗನಾದ ಪಗೀಯೇಲನು ಅರ್ಪಿಸಿದನು. ಅವನ ಆರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ ಇದು ಒಕ್ರಾನನ ಮಗನಾದ ಪಗೀ ಯೇಲನ ಅರ್ಪಣೆಯು. ಹನ್ನೆರಡನೆ ದಿನದಲ್ಲಿ ನಫ್ತಾಲಿ ಮಕ್ಕಳಿಗೆ ಪ್ರಧಾನ ನಾದ ಏನಾನನ ಮಗನಾದ ಅಹೀರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಏನಾನನ ಮಗನಾದ ಅಹೀರನ ಅರ್ಪಣೆಯು. ಇದು ಬಲಿಪೀಠದ ಪ್ರತಿಷ್ಠೆಯು: ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು ಬೆಳ್ಳಿಯ ಹನ್ನೆರಡು ತಟ್ಟೆಗಳೂ ಬೆಳ್ಳಿಯ ಹನ್ನೆರಡು ಬಟ್ಟಲುಗಳೂ ಬಂಗಾರದ ಹನ್ನೆರಡು ಚಮಚಗಳೂ. ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು ನೂರ ಮೂವತ್ತು ಶೇಕೆಲು. ಒಂದೊಂದು ಬಟ್ಟಲಿಗೆ ಎಪ್ಪತ್ತು, ಬೆಳ್ಳಿಯ ಎಲ್ಲಾ ವಸ್ತುಗಳಿಗೆ ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎರಡು ಸಾವಿರದ ನಾಲ್ಕು ನೂರು. ಧೂಪ ತುಂಬಿದ್ದ ಹನ್ನೆರಡು ಬಂಗಾರದ ಚಮಚಗಳು, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಒಂದೊಂದಕ್ಕೆ ಹತ್ತು, ಮತ್ತು ಚಮಚಗಳ ಬಂಗಾರವೆಲ್ಲಾ ನೂರ ಇಪ್ಪತ್ತು ಶೇಕೆಲ್; ದಹನ ಬಲಿಗಾಗಿ ಇರುವ ಹೋರಿಗಳು ಹನ್ನೆರಡು, ಟಗರು ಗಳು ಹನ್ನೆರಡು, ಮೊದಲನೇ ವರುಷದ ಕುರಿಮರಿಗಳು ಹನ್ನೆರಡು, ಅವುಗಳೊಂದಿಗೆ ಆಹಾರ ಸಮರ್ಪಣೆ; ಮತ್ತು ಪಾಪದ ಬಲಿಗಾಗಿ ಆಡುಮರಿಗಳು ಹನ್ನೆ ರಡು, ಸಮಾಧಾನದ ಅರ್ಪಣೆಯ ಬಲಿಗಾಗಿರುವ ಎತ್ತುಗಳೆಲ್ಲಾ ಇಪ್ಪತ್ತನಾಲ್ಕು, ಟಗರುಗಳು ಅರವತ್ತು, ಹೋತಗಳು ಅರವತ್ತು, ಮೊದಲನೇ ವರುಷದ ಕುರಿಮರಿಗಳು ಅರವತ್ತು. ಅದನ್ನು ಅಭಿಷೇಕಿಸಿದ ತರು ವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆಯು ಇದಾಗಿತ್ತು ಎಂಬದೇ.ಇದಲ್ಲದೆ ಮೋಶೆಯು ದೇವರ ಸಂಗಡ ಮಾತನಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿ ಸಿದಾಗ ಅವನು ಸಾಕ್ಷಿಯ ಮಂಜೂಷದ ಮೇಲೆ ಇರುವ ಕೃಪಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವವನ ಧ್ವನಿ ಯನ್ನು ಕೇಳಿದನು. ಹೀಗೆ ಆತನು ಅವನ ಸಂಗಡ ಮಾತನಾಡಿದನು. ಇದಲ್ಲದೆ ಮೋಶೆಯು ದೇವರ ಸಂಗಡ ಮಾತನಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿ ಸಿದಾಗ ಅವನು ಸಾಕ್ಷಿಯ ಮಂಜೂಷದ ಮೇಲೆ ಇರುವ ಕೃಪಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವವನ ಧ್ವನಿ ಯನ್ನು ಕೇಳಿದನು. ಹೀಗೆ ಆತನು ಅವನ ಸಂಗಡ ಮಾತನಾಡಿದನು.
- 1 Kings 7:50 1 ಅರಸುಗಳು 7:50ಅಪರಂಜಿಯ ತಂಬಿಗೆಗಳು, ಕತ್ತರಿಗಳು, ಸಲಿಕೆಗಳು, ಸೌಟುಗಳು, ಅಗ್ನಿ ಪಾತ್ರೆಗಳು, ಮಹಾಪರಿಶುದ್ಧ ಸ್ಥಳ ವಾದ ಒಳಗಿನ ಮನೆಯ ಕದಗಳಿಗೋಸ್ಕರವೂ ಮಂದಿ ರವೆಂಬ ಮನೆಯ ಕದಗಳಿಗೋಸ್ಕರವೂ ಬಂಗಾರದ ಕೀಲುಗಳನ್ನೆಲ್ಲಾ ಮಾಡಿಸಿದನು.ಹೀಗೆ ಅರಸನಾ ಗಿರುವ ಸೊಲೊಮೋನನು ಕರ್ತನ ಮನೆಗೋಸ್ಕರ ಮಾಡಿಸಿದ ಕೆಲಸವೆಲ್ಲಾ ತೀರಿಸಿದ ನಂತರ ತನ್ನ ತಂದೆ ಯಾದ ದಾವೀದನು ಪ್ರತಿಷ್ಟೆಮಾಡಿದ ಬೆಳ್ಳಿಯನ್ನೂ ಚಿನ್ನವನ್ನೂ ಸಾಮಾನುಗಳನ್ನೂ ತಕ್ಕೊಂಡು ಬಂದು ಕರ್ತನ ಮನೆಯ ಉಗ್ರಾಣಗಳಲ್ಲಿ ಇಟ್ಟನು.
- 2 Chronicles 4:8 2 ಪೂರ್ವಕಾಲವೃತ್ತಾಂತ 4:8ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
- 2 Chronicles 4:21–22 2 ಪೂರ್ವಕಾಲವೃತ್ತಾಂತ 4:21–22ಅವುಗಳ ದೀಪಗಳನ್ನೂ ಹೂವು ಗಳನ್ನೂ ದೀಪಗಳ ಚಿಮಟೆಗಳನ್ನೂ ಬಂಗಾರದಿಂದ ಅಂದರೆ ನಿರ್ಮಲವಾದ ಬಂಗಾರದಿಂದ ಮಾಡಿಸಿ ದನು; ಕತ್ತರಿಗಳನ್ನೂ ಬೋಗುಣಿಗಳನ್ನೂ ಸೌಟು ಗಳನ್ನೂ ಅಗ್ನಿಪಾತ್ರೆಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.ಇದಲ್ಲದೆ ಆಲಯ ಪ್ರವೇಶದ ಸ್ಥಳವೂ ಅತಿಪರಿಶುದ್ಧ ಸ್ಥಾನಕ್ಕೋಸ್ಕರವಾಗಿರುವ ಅದರ ಅಂತರಂಗದ ಬಾಗಲುಗಳೂ ಮಂದಿರದ ಮನೇ ಬಾಗಲುಗಳೂ ಬಂಗಾರದವುಗಳಾಗಿದ್ದವು. ಇದಲ್ಲದೆ ಆಲಯ ಪ್ರವೇಶದ ಸ್ಥಳವೂ ಅತಿಪರಿಶುದ್ಧ ಸ್ಥಾನಕ್ಕೋಸ್ಕರವಾಗಿರುವ ಅದರ ಅಂತರಂಗದ ಬಾಗಲುಗಳೂ ಮಂದಿರದ ಮನೇ ಬಾಗಲುಗಳೂ ಬಂಗಾರದವುಗಳಾಗಿದ್ದವು.