Ezra · chapter 9 · verse 10
Ezra 9:10 in Kannada
ಹಾಗಾದರೆ ನನ್ನ ದೇವರೇ, ಇದರ ತರುವಾಯ ನಾವು ಏನು ಹೇಳೋಣ? ಪ್ರವಾದಿಗಳಾದ ನಿನ್ನ ಸೇವಕರ ಮುಖಾಂತರ ನೀನು ಆಜ್ಞಾಪಿಸಿದ ನಿನ್ನ ಆಜ್ಞೆಗಳನ್ನು ತೊರೆದಿದ್ದೇವೆ.
Haagaadare nanna devare, idara taruvaaya naavu enu helona? Pravaadigalaada ninna sevakara mukhaantara neenu aajnyaapisida ninna aajnyegalannu torediddeve.
Ezra 9:10 in English
- King James Version (KJV)
- And now, O our God, what shall we say after this? for we have forsaken thy commandments,
- World English Bible (WEB)
- “Now, our God, what shall we say after this? For we have forsaken your commandments,
- American Standard Version (ASV)
- And now, O our God, what shall we say after this? for we have forsaken thy commandments,
- Bible in Basic English (BBE)
- And now, O our God, what are we to say after this? for we have not kept your laws,
- Darby Translation (DBY)
- And now, what shall we say, our God, after this? for we have forsaken thy commandments,
- Webster's Bible (WBS)
- And now, O our God, what shall we say after this? for we have forsaken thy commandments,
- Young's Literal Translation (YLT)
- 'And now, what do we say, O our God, after this? for we have forsaken Thy commands,
Read in context
- 8ಈಗ ನಮ್ಮ ದೇವರು, ನಮ್ಮ ಕಣ್ಣುಗಳು ಕಳೆಗೊಳ್ಳುವ ಹಾಗೆಯೂ ನಮ್ಮ ದಾಸತ್ವದಲ್ಲಿ ನಮ್ಮನ್ನು ಸ್ವಲ್ಪ ಉಜ್ಜೀವಿಸುವ ಹಾಗೆಯೂ ನಮಗಾಗಿ ಜನಶೇಷವನ್ನು ಉಳಿಸಿ ತನ್ನ ಪರಿಶುದ್ಧ ಸ್ಥಾನದಲ್ಲಿ ನಮಗೆ ಮೊಳೆಯನ್ನು ಕೊಡುವದಕ್ಕೂ ಸ್ವಲ್ಪ ಹೊತ್ತು ನಮ್ಮ ದೇವರಾಗಿರುವ ಕರ್ತನಿಂದ ನಮಗೆ ದಯವು ದೊರಕಿತು.
- 9ನಾವು ದಾಸರಾಗಿದ್ದೆವು; ಆದಾಗ್ಯೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮ ಕೈ ಬಿಟ್ಟುಬಿಡದೆ ನಮ್ಮನ್ನು ಉಜ್ಜೀವಿಸುವದಕ್ಕೂ ನಮ್ಮ ದೇವರ ಆಲಯವನ್ನು ಕಟ್ಟಿಸುವದಕ್ಕೂ ಅದರ ಹಾಳಾ ದವುಗಳನ್ನು ದುರಸ್ತು ಮಾಡುವದಕ್ಕೂ ಯೆಹೂದ ದಲ್ಲಿ ಮತ್ತು ಯೆರೂಸಲೇಮಿನಲ್ಲಿ ನಮಗೆ ಗೋಡೆ ಯನ್ನು ಕೊಡುವದಕ್ಕೂ ಪಾರಸಿಯ ಅರಸುಗಳ ಸಮ್ಮು ಖದಲ್ಲಿ ನಮ್ಮ ಮೇಲೆ ಕೃಪೆಯನ್ನು ಮುಂದುವರಿಸಿದ್ದಾನೆ.
- 10ಹಾಗಾದರೆ ನನ್ನ ದೇವರೇ, ಇದರ ತರುವಾಯ ನಾವು ಏನು ಹೇಳೋಣ? ಪ್ರವಾದಿಗಳಾದ ನಿನ್ನ ಸೇವಕರ ಮುಖಾಂತರ ನೀನು ಆಜ್ಞಾಪಿಸಿದ ನಿನ್ನ ಆಜ್ಞೆಗಳನ್ನು ತೊರೆದಿದ್ದೇವೆ.
- 11ನೀನು ಹೇಳಿದ್ದುನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ದೇಶವು ಆ ದೇಶಗಳ ಜನರ ಹೊಲಸಿನಿಂದ ಮೈಲಿಗೆಯಾದ ದೇಶವಾಗಿದೆ. ಅವರು ತಮ್ಮ ಅಸಹ್ಯಗಳಿಂದಲೂ ಹೊಲೆಯಿಂದಲೂ ಅದನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಯ ವರೆಗೂ ತುಂಬಿಸಿದ್ದಾರೆ.
- 12ಆದದರಿಂದ ನೀವು ಪ್ರಬಲವಾಗಿ ದೇಶದ ಒಳ್ಳೇ ದನ್ನು ತಿಂದು ಅದನ್ನು ಎಂದಿಗೂ ನಿಮ್ಮ ಮಕ್ಕಳಿಗೆ ಸ್ವಾಸ್ಥ್ಯವಾಗಿ ಕೊಡುವ ಹಾಗೆ ನೀವು ನಿಮ್ಮ ಕುಮಾರ್ತೆ ಯರನ್ನು ಅವರ ಕುಮಾರರಿಗೆ ಕೊಡಬೇಡಿರಿ; ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೆ ತಕ್ಕೊಳ್ಳ ಬೇಡಿರಿ. ಇಲ್ಲವೆ ಅವರ ಸಮಾಧಾನವನ್ನೂ ಅವರ ಮೇಲನ್ನೂ ಎಂದಿಗೂ ಬಯಸಬೇಡಿರಿ ಎಂಬದು.
Cross references
- Genesis 44:16 ಆದಿಕಾಂಡ 44:16ಯೆಹೂದನು--ನಾವು ನಮ್ಮ ಒಡೆಯ ನಿಗೆ ಏನು ಹೇಳೋಣ? ಏನು ಮಾತನಾಡೋಣ? ಹೇಗೆ ನಮ್ಮನ್ನು ನಾವು ನಿರ್ದೋಷಿಗಳೆಂದು ತೋರಿಸಿ ಕೊಳ್ಳೋಣ? ನಿನ್ನ ದಾಸರ ಪಾಪವನ್ನು ದೇವರು ಕಂಡುಕೊಂಡಿದ್ದಾನೆ. ಇಗೋ, ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನೂ ನಾವೂ ನಮ್ಮ ಒಡೆಯ ನಿಗೆ ದಾಸರಾಗಿದ್ದೇವೆ ಅಂದನು.
- Joshua 7:8 ಯೆಹೋಶುವ 7:8ಓ ಕರ್ತನೇ, ಈಗ ನಾನೇನು ಹೇಳಲಿ? ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಬೆನ್ನು ತಿರುಗಿಸಿದ್ದಾರಲ್ಲಾ.
- Romans 3:19 ರೋಮಾಪುರದವರಿಗೆ 3:19ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು.
- Daniel 9:4–16 ದಾನಿಯೇಲನು 9:4–16ನಾನು ಕರ್ತನಾದ ನನ್ನ ದೇವರಿಗೆ ಪ್ರಾರ್ಥಿಸಿ ಮತ್ತು ಅರಿಕೆಮಾಡಿ--ಓ ಕರ್ತನೇ, ಅತಿ ಭಯಂಕರ ವಾದ ಮಹಾ ದೇವರೇ, ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಒಡಂಬಡಿಕೆ ಯನ್ನೂ ಕೃಪೆಯನ್ನೂ ತೋರಿಸಿ ಕಾಪಾಡುವಾತನೇ, ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ. ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ. ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ. ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ. ನಾವು ಆತನಿಗೆ ವಿರುದ್ಧ ವಾಗಿ ತಿರುಗಿಬಿದ್ದಿದ್ದರೂ ಕರ್ತನಾದ ನಮ್ಮ ದೇವರ ಕರುಣೆಯೂ ಮತ್ತು ಕ್ಷಮೆಯೂ ನಮಗಿದೆ. ನಾವು ನಮ್ಮ ದೇವರಾದ ಕರ್ತನ ಸ್ವರಕ್ಕೆ ಕಿವಿಗೊಡದೆ ಆತನು ನಮ್ಮ ಮುಂದೆ ಇಟ್ಟ ಆತನ ಸೇವಕರಾದ ಪ್ರವಾದಿಗಳ ನ್ಯಾಯಪ್ರಮಾಣದಂತೆ ನಡೆಯಲಿಲ್ಲ. ಹೌದು, ಎಲ್ಲಾ ಇಸ್ರಾಯೇಲ್ಯರು ನಿನ್ನ ನ್ಯಾಯ ಪ್ರಮಾಣವನ್ನು ವಿಾರಿ ನಿನ್ನ ಸ್ವರಕ್ಕೆ ಕಿವಿಗೊಡದೆ ತೊಲಗಿದ್ದದರಿಂದ ಶಾಪವು ದೇವರ ಸೇವಕನಾದ ಮೋಶೆಯು ನ್ಯಾಯ ಪ್ರಮಾಣದಲ್ಲಿ ಬರೆದ ಆಣೆಯು, ಆತನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ ನಮ್ಮ ಮೇಲೆ ಹೊಯ್ಯಲ್ಪಟ್ಟಿದೆ. ಆತನು ನಮಗೂ ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾನು ಹೇಳಿದ ಮಾತುಗಳನ್ನು ನೆರವೇರಿಸಿ; ನಮ್ಮ ಮೇಲೆ ದೊಡ್ಡ ಕೇಡು ಬರುವ ಹಾಗೆ ಮಾಡಿದ್ದಾನೆ; ಯೆರೂಸಲೇಮಿನಲ್ಲಿ ನಡೆದ ಹಾಗೆ ಪೂರ್ಣ ಆಕಾಶದ ಕೆಳಗೆಲ್ಲಾ (ಭೂಮಂಡಲದ ಮೇಲೆ) ಎಲ್ಲಿಯೂ ನಡೆಯಲಿಲ್ಲ. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಈ ಕೇಡು ನಮ್ಮ ಮೇಲೆ ಬಂತು, ಆದಾಗ್ಯೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿನ್ನ ಸತ್ಯವನ್ನು ತಿಳಿದುಕೊಳ್ಳುವ ಹಾಗೆ, ನಮ್ಮ ದೇವರಾದ ಕರ್ತನ ಮುಂದೆ ನಾವು ಪ್ರಾರ್ಥನೆ ಗಳನ್ನು ಮಾಡಲಿಲ್ಲ. ಆದದರಿಂದ ಕರ್ತನು ಕೇಡಿ ಗಾಗಿ ಕಾದುಕೊಂಡು ಅದನ್ನು ನಮ್ಮ ಮೇಲೆ ತಂದಿ ದ್ದಾನೆ. ನಮ್ಮ ದೇವರಾದ ಕರ್ತನು ತಾನು ಮಾಡುವ ಎಲ್ಲಾ ಕೆಲಸಗಳಲ್ಲೂ ನೀತಿವಂತನೇ; ನಾವಾದರೋ ಆತನ ಸ್ವರಕ್ಕೆ ವಿಧೇಯರಾಗಲಿಲ್ಲ. ಆದರೆ ಈಗ, ಓ ನಮ್ಮ ದೇವರಾದ ಕರ್ತನೇ, ನಿನ್ನ ಭುಜಬಲವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡಾತನೇ, ನಾವು ಪಾಪಮಾಡಿ ಕೆಟ್ಟವರಾಗಿ ನಡೆದುಕೊಂಡಿದ್ದೇವೆ. ಓ ಕರ್ತನೇ, ನಿನ್ನ ಎಲ್ಲಾ ನೀತಿಗಳ ಪ್ರಕಾರ ನಾನು ನಿನ್ನನ್ನು ಬೇಡುತ್ತೇನೆ. ನಿನ್ನ ಕೋಪವು ನಿನ್ನ ಉಗ್ರತೆಯೂ ನಿನ್ನ ಪಟ್ಟಣವಾದ ಯೆರೂಸಲೇಮಿನಿಂದಲೂ ನಿನ್ನ ಪರಿಶುದ್ಧ ಪರ್ವತ ದಿಂದಲೂ ತಿರುಗಿಸಲ್ಪಡಲಿ. ಯಾಕಂದರೆ ನಮ್ಮ ಪಾಪ ಗಳ ನಿಮಿತ್ತದಿಂದಲೂ ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮೂ ಮತ್ತು ನಿನ್ನ ಜನರೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿರು ವೆವಲ್ಲಾ.
- Lamentations 3:22 ಪ್ರಲಾಪಗಳು 3:22ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.