Lamentations · chapter 3 · verse 22
Lamentations 3:22 in Kannada
ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.
Kartana kanikaragalindale naavu naashavaaga lilla, aatana antahkaruneyu mugiyuvadilla.
Lamentations 3:22 in English
- King James Version (KJV)
- [It is of] the LORD’s mercies that we are not consumed, because his compassions fail not.
- World English Bible (WEB)
- It is because of the LORD’s loving kindnesses that we are not consumed, because his mercies don’t fail.
- American Standard Version (ASV)
- [It is of] Jehovah’s lovingkindnesses that we are not consumed, because his compassions fail not.
- Bible in Basic English (BBE)
- It is through the Lord's love that we have not come to destruction, because his mercies have no limit.
- Darby Translation (DBY)
- It is of Jehovah's loving-kindness we are not consumed, because his compassions fail not;
- Webster's Bible (WBS)
- [It is of] the LORD'S mercies that we are not consumed, because his compassions fail not.
- Young's Literal Translation (YLT)
- The kindnesses of Jehovah! For we have not been consumed, For not ended have His mercies.
Read in context
- 20ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿ ಕೊಳ್ಳುತ್ತಾ ನನ್ನೊಳಗೆ ಕುಂದಿಹೋಗಿದೆ.
- 21ಇದನ್ನು ನಾನು ನನ್ನ ಮನಸ್ಸಿಗೆ ತರುತ್ತೇನೆ, ಆದದರಿಂದ ನನಗೆ ನಿರೀಕ್ಷೆ ಇದೆ.
- 22ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.
- 23ಅವು ಪ್ರತಿ ಮುಂಜಾನೆಯೂ ಹೊಸದಾಗಿರುವವು; ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು.
- 24ಕರ್ತನೇ ನನ್ನ ಪಾಲೆಂದು ನನ್ನ ಪ್ರಾಣವು ಹೇಳುತ್ತದೆ, ಆದದರಿಂದ ನಾನು ಆತನಲ್ಲಿ ನಿರೀಕ್ಷೆ ಇಡುತ್ತೇನೆ.
Cross references
- Psalm 86:15 ಕೀರ್ತನೆಗಳು 86:15ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.
- Luke 1:50 ಲೂಕನು 1:50ಆತನಿಗೆ ಭಯಪಡು ವವರ ಮೇಲೆ ಆತನ ಕರುಣೆಯು ತಲತಲಾಂತರ ಗಳಿಗೂ ಇರುವದು.
- Nehemiah 9:31 ನೆಹೆಮೀಯ 9:31ಆದರೂ ನೀನು ನಿನ್ನ ಅಧಿಕವಾದ ಕರುಣೆಯ ನಿಮಿತ್ತ ಅವರನ್ನು ಸಂಪೂರ್ಣ ನಾಶಮಾಡಿ ಬಿಡ ಲಿಲ್ಲ; ಅವರನ್ನು ಕೈಬಿಡಲೂ ಇಲ್ಲ. ಯಾಕಂದರೆ ನೀನು ಕೃಪೆಯೂ ಕರುಣೆಯುಳ್ಳ ದೇವರಾಗಿದ್ದೀ.
- Micah 7:18–19 ಮೀಕ 7:18–19ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ. ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ.ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
- Malachi 3:6 ಮಲಾಕಿಯ 3:6ನಾನು ಕರ್ತನು, ನಾನು ಬದಲಾಗುವದಿಲ್ಲ; ಆದದರಿಂದ ಓ ಯಾಕೋಬಿನ ಕುಮಾರರೇ, ನೀವು ನಾಶವಾಗಲಿಲ್ಲ.
- Psalm 78:38 ಕೀರ್ತನೆಗಳು 78:38ಆದಾಗ್ಯೂ ಆತನು ಅಂತಃಕರಣವುಳ್ಳವನಾಗಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಹೌದು, ಆತನು ಅನೇಕ ಸಾರಿ ತನ್ನ ಕೋಪವನ್ನು ತೋರಿಸದೆ ಕೋಪೋದ್ರೇಕವನ್ನೂ ಮಾಡಿಕೊಳ್ಳಲಿಲ್ಲ.
- Psalm 106:45 ಕೀರ್ತನೆಗಳು 106:45ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು.
- Psalm 77:8 ಕೀರ್ತನೆಗಳು 77:8ಆತನ ಕೃಪೆಯು ಸದಾಕಾಲಕ್ಕೆ ನಿಂತು ಹೋಗುತ್ತದೋ? ನಿರಂತರಕ್ಕೂ ವಾಗ್ದಾನ ತಪ್ಪಿಹೋಗುತ್ತದೋ?
- Ezra 9:8–9 ಎಜ್ರನು 9:8–9ಈಗ ನಮ್ಮ ದೇವರು, ನಮ್ಮ ಕಣ್ಣುಗಳು ಕಳೆಗೊಳ್ಳುವ ಹಾಗೆಯೂ ನಮ್ಮ ದಾಸತ್ವದಲ್ಲಿ ನಮ್ಮನ್ನು ಸ್ವಲ್ಪ ಉಜ್ಜೀವಿಸುವ ಹಾಗೆಯೂ ನಮಗಾಗಿ ಜನಶೇಷವನ್ನು ಉಳಿಸಿ ತನ್ನ ಪರಿಶುದ್ಧ ಸ್ಥಾನದಲ್ಲಿ ನಮಗೆ ಮೊಳೆಯನ್ನು ಕೊಡುವದಕ್ಕೂ ಸ್ವಲ್ಪ ಹೊತ್ತು ನಮ್ಮ ದೇವರಾಗಿರುವ ಕರ್ತನಿಂದ ನಮಗೆ ದಯವು ದೊರಕಿತು. ನಾವು ದಾಸರಾಗಿದ್ದೆವು; ಆದಾಗ್ಯೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮ ಕೈ ಬಿಟ್ಟುಬಿಡದೆ ನಮ್ಮನ್ನು ಉಜ್ಜೀವಿಸುವದಕ್ಕೂ ನಮ್ಮ ದೇವರ ಆಲಯವನ್ನು ಕಟ್ಟಿಸುವದಕ್ಕೂ ಅದರ ಹಾಳಾ ದವುಗಳನ್ನು ದುರಸ್ತು ಮಾಡುವದಕ್ಕೂ ಯೆಹೂದ ದಲ್ಲಿ ಮತ್ತು ಯೆರೂಸಲೇಮಿನಲ್ಲಿ ನಮಗೆ ಗೋಡೆ ಯನ್ನು ಕೊಡುವದಕ್ಕೂ ಪಾರಸಿಯ ಅರಸುಗಳ ಸಮ್ಮು ಖದಲ್ಲಿ ನಮ್ಮ ಮೇಲೆ ಕೃಪೆಯನ್ನು ಮುಂದುವರಿಸಿದ್ದಾನೆ.
- Ezekiel 20:8–9 ಯೆಹೆಜ್ಕೇಲನು 20:8–9ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು; ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ತಮ್ಮ ಕಣ್ಣುಗಳಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ; ಅವರು ಐಗುಪ್ತದ ವಿಗ್ರಹಗಳನ್ನು ಬಿಡಲಿಲ್ಲ; ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಐಗುಪ್ತದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು. ಆದರೆ ಅವರು ಯಾರ ಮಧ್ಯದಲ್ಲಿದ್ದರೋ ನಾನು ಯಾರ ಮುಂದೆ ಅವರನ್ನು ಐಗುಪ್ತದೇಶದಿಂದ ಹೊರಗೆ ತಂದು ನನ್ನನ್ನು ತಿಳಿಯ ಪಡಿಸಿದೆನೋ? ಆ ಅನ್ಯ ಜನಾಂಗಗಳ ಕಣ್ಣುಗಳ ಮುಂದೆ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಈ ಕೆಲಸ ಮಾಡಿದೆನು;
- Ezra 9:13–15 ಎಜ್ರನು 9:13–15ನಮ್ಮ ದುಷ್ಕರ್ಮಗಳಿಗೋಸ್ಕರವೂ ನಮ್ಮ ಮಹಾ ಅಪರಾಧಕ್ಕೋಸ್ಕರವೂ ನಮ್ಮ ಮೇಲೆ ಬಂದದ್ದೆಲ್ಲ ಬಂದ ತರುವಾಯ ನಮ್ಮ ದೇವರಾಗಿರುವ ನೀನು ನಮ್ಮ ಅಕ್ರಮಗಳಿಗೆ ತಕ್ಕಹಾಗೆ ನಮ್ಮನ್ನು ಶಿಕ್ಷಿಸದೆ ಈಗ ಇರುವ ಪ್ರಕಾರ ನಮಗೆ ವಿಮೋಚನೆಯನ್ನು ಕೊಟ್ಟ ತರುವಾಯ ನಾವು ತಿರಿಗಿ ನಿನ್ನ ಆಜ್ಞೆಗಳನ್ನು ವಿಾರಿ ಈ ಅಸಹ್ಯವಾದವುಗಳನ್ನು ಮಾಡುವ ಜನರ ಸಂಗಡ ಬಂಧುತ್ವ ಮಾಡಬಹುದೋ? ಹಾಗಾದರೆ ಉಳಿದವರೂ ತಪ್ಪಿಸಿಕೊಂಡವರೂ ಇಲ್ಲದೆ ಇರುವ ಹಾಗೆ ಹಾಳಾಗುವ ವರೆಗೂ ನೀನು ನಮ್ಮ ಮೇಲೆ ಕೋಪಮಾಡುವದಿಲ್ಲವೋ?ಇಸ್ರಾಯೇಲ್ ದೇವ ರಾಗಿರುವ ಕರ್ತನೇ, ನೀನು ನೀತಿವಂತನಾಗಿದ್ದೀ; ಇಂದಿನ ಪ್ರಕಾರ ನಾವು ತಪ್ಪಿಸಿಕೊಂಡವರಾಗಿ ಉಳಿ ದಿದ್ದೇವೆ. ಇಗೋ, ನಾವು ನಿನ್ನ ಮುಂದೆ ನಮ್ಮ ಅಪರಾಧಗಳಲ್ಲಿದ್ದೇವೆ. ಇದರ ನಿಮಿತ್ತವಾಗಿ ನಿನ್ನ ಮುಂದೆ ನಿಲ್ಲಲಾರದವರಾಗಿದ್ದೇವೆ. ಇಸ್ರಾಯೇಲ್ ದೇವ ರಾಗಿರುವ ಕರ್ತನೇ, ನೀನು ನೀತಿವಂತನಾಗಿದ್ದೀ; ಇಂದಿನ ಪ್ರಕಾರ ನಾವು ತಪ್ಪಿಸಿಕೊಂಡವರಾಗಿ ಉಳಿ ದಿದ್ದೇವೆ. ಇಗೋ, ನಾವು ನಿನ್ನ ಮುಂದೆ ನಮ್ಮ ಅಪರಾಧಗಳಲ್ಲಿದ್ದೇವೆ. ಇದರ ನಿಮಿತ್ತವಾಗಿ ನಿನ್ನ ಮುಂದೆ ನಿಲ್ಲಲಾರದವರಾಗಿದ್ದೇವೆ.
- Ezekiel 20:21–22 ಯೆಹೆಜ್ಕೇಲನು 20:21–22ಆದಾಗ್ಯೂ ಮಕ್ಕಳು ನನಗೆ ವಿರೋಧವಾಗಿ ತಿರುಗಿ ಬಿದ್ದರು; ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ನನ್ನ ನ್ಯಾಯಗಳನ್ನು ಕೈಕೊಂಡುಮಾಡಲಿಲ್ಲ; ನನ್ನ ಸಬ್ಬತ್ತುಗಳನ್ನು ಅಪವಿತ್ರ ಪಡಿಸಿದಾಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ ನನ್ನ ಕೋಪ ವನ್ನು ಅರಣ್ಯದಲ್ಲಿ ಅವರ ಮೇಲೆ ತೀರಿಸಿಬಿಡುವೆ ನೆಂದೂ ಹೇಳಿದೆನು. ಆದಾಗ್ಯೂ ನಾನು ನನ್ನ ಕೈಯನ್ನು ಹಿಂತೆಗೆದು ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ ಆ ಅನ್ಯಜನಾಂಗ ಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.