Galatians · chapter 4 · verse 17
Galatians 4:17 in Kannada
ಅವರು ನಿಮ್ಮನ್ನು ಮೆಚ್ಚಿಸುವದಕ್ಕೆ ಆಸಕ್ತರಾಗಿದ್ದಾರೆ; ಆದರೆ ಒಳ್ಳೇ ಅಭಿಪ್ರಾಯದಿಂದ ಅಲ್ಲ; ಹೌದು, ನೀವು ತಮ್ಮನ್ನೇ ಮೆಚ್ಚಿಸುವವರಾಗಬೇಕೆಂದು ನಿಮ್ಮನ್ನು ಅಗ ಲಿಸುವದಕ್ಕೆ ಅಪೇಕ್ಷಿಸುತ್ತಾರೆ.
Avaru nimmannu mechchisuvadakke aasaktaraagiddaare; aadare olle abhipraayadinda alla; haudu, neevu tammanne mechchisuvavaraagabekendu nimmannu aga lisuvadakke apekshisuttaare.
Galatians 4:17 in English
- King James Version (KJV)
- They zealously affect you, [but] not well; yea, they would exclude you, that ye might affect them.
- World English Bible (WEB)
- They zealously seek you in no good way. No, they desire to alienate you, that you may seek them.
- American Standard Version (ASV)
- They zealously seek you in no good way; nay, they desire to shut you out, that ye may seek them.
- Bible in Basic English (BBE)
- Their interest in you is not good; but their desire is that you may be shut out, so that you may go after them.
- Darby Translation (DBY)
- They are not rightly zealous after you, but desire to shut you out [from us], that ye may be zealous after them.
- Webster's Bible (WBS)
- They zealously affect you, [but] not well; for, they would exclude you, that ye may affect them.
- Young's Literal Translation (YLT)
- they are zealous for you — [yet] not well, but they wish to shut us out, that for them ye may be zealous;
Read in context
- 15ಆಗ ನಿಮಗೆ ಆಶೀರ್ವಾದವಾಯಿತೆಂದು ನೀವು ಅಂದುಕೊಂಡಿ ರಲ್ಲಾ; ಅದು ಎಲ್ಲಿ ಹೋಯಿತು? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನಾದರೂ ಕಿತ್ತು ನನಗೆ ಕೊಡುತ್ತಿದ್ದಿ ರೆಂದು ನಿಮ್ಮನ್ನು ಕುರಿತು ನಾನು ಸಾಕ್ಷಿ ಹೇಳುತ್ತೇನೆ.
- 16ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳು ವದರಿಂದ ನಿಮಗೆ ಶತ್ರುವಾಗಿದ್ದೇನೋ?
- 17ಅವರು ನಿಮ್ಮನ್ನು ಮೆಚ್ಚಿಸುವದಕ್ಕೆ ಆಸಕ್ತರಾಗಿದ್ದಾರೆ; ಆದರೆ ಒಳ್ಳೇ ಅಭಿಪ್ರಾಯದಿಂದ ಅಲ್ಲ; ಹೌದು, ನೀವು ತಮ್ಮನ್ನೇ ಮೆಚ್ಚಿಸುವವರಾಗಬೇಕೆಂದು ನಿಮ್ಮನ್ನು ಅಗ ಲಿಸುವದಕ್ಕೆ ಅಪೇಕ್ಷಿಸುತ್ತಾರೆ.
- 18ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಒಳ್ಳೇ ವಿಷಯದಲ್ಲಿ ನೀವು ಆಸಕ್ತರಾಗಿರುವದು ಒಳ್ಳೇದು.
- 19ನನ್ನ ಚಿಕ್ಕ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಿಮಗೋಸ್ಕರ ತಿರಿಗಿ ಪ್ರಸವ ವೇದನೆಪಡುತ್ತೇನೆ.
Cross references
- 2 Corinthians 11:13–15 2 ಕೊರಿಂಥದವರಿಗೆ 11:13–15ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಯಾಕಂದರೆ ಸೈತಾನನು ಬೆಳಕಿನ ದೂತನಂತೆ ಕಾಣಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುತ್ತಾನೆ. ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸಿಕೊಳ್ಳುವದಕ್ಕೆ ಮಾರ್ಪಡಿಸಿಕೊಳ್ಳುವದು ದೊಡ್ಡ ದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.
- Romans 16:18 ರೋಮಾಪುರದವರಿಗೆ 16:18ಅಂಥವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿ ಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪ ಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
- 2 Peter 2:3 2 ಪೇತ್ರನು 2:3ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತು ಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸ ಬೇಕೆಂದಿರುವರು. ಅಂಥವರಿಗೆ ಬಹಳ ಕಾಲದಿಂದಿದ್ದ ತೀರ್ಪು ತಡವಾಗುವದಿಲ್ಲ. ಅವರಿಗಾಗುವ ನಾಶನವು ತೂಕಡಿಸುವದಿಲ್ಲ.
- 1 Corinthians 4:8 1 ಕೊರಿಂಥದವರಿಗೆ 4:8ಈಗಾಗಲೇ ನೀವು ತೃಪ್ತರಾದಿರಿ, ಈಗಾಗಲೇ ಐಶ್ವರ್ಯವಂತರಾದಿರಿ, ನಾವಿಲ್ಲದೆ ನೀವು ಅರಸರಂತೆ ಆಳಿದಿರಿ; ನೀವು ಆಳುವಂತೆ ದೇವರು ಮಾಡಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೆವು.
- Matthew 23:15 ಮತ್ತಾಯನು 23:15ಕಪಟಿಗಳಾದ ಫರಿಸಾಯರೇ, ಶಾಸ್ತ್ರಿಗಳೇ, ನಿಮಗೆ ಅಯ್ಯೋ! ಒಬ್ಬನನ್ನು ಮತಾಂತರ ಮಾಡು ವದಕ್ಕೆ ನೀವು ಸಮುದ್ರವನ್ನೂ ಭೂಮಿಯನ್ನೂ ಸುತ್ತುತ್ತೀರಿ; ಮತಾಂತರ ಮಾಡಿದ ಮೇಲೆ ಅವನನ್ನು ನಿಮಗಿಂತಲೂ ಎರಡರಷ್ಟು ನರಕದ ಮಗನನ್ನಾಗಿ ಮಾಡುತ್ತೀರಿ.
- Romans 10:2 ರೋಮಾಪುರದವರಿಗೆ 10:2ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದದ್ದಲ್ಲ.
- 2 Peter 2:18 2 ಪೇತ್ರನು 2:18ತಪ್ಪಾದ ಮಾರ್ಗದಲ್ಲಿ ಜೀವಿಸುವವರಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಹೆಚ್ಚಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.
- Philippians 2:21 ಫಿಲಿಪ್ಪಿಯವರಿಗೆ 2:21ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡು ತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ.
- Galatians 6:12–13 ಗಲಾತ್ಯದವರಿಗೆ 6:12–13ಶರೀರದಲ್ಲಿ ಅಂದವಾಗಿ ಕಾಣಬೇಕೆಂದು ಇಷ್ಟಪಡು ವವರೆಲ್ಲರೂ ತಮಗೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ಹಿಂಸೆಯಾಗಬಾರದೆಂಬದಕ್ಕಾಗಿಯೇ ಸುನ್ನತಿಮಾಡಿಸಿ ಕೊಳ್ಳಬೇಕೆಂದು ನಿಮ್ಮನ್ನು ಬಲಾತ್ಕರಿಸುತ್ತಾರೆ. ಸುನ್ನತಿ ಮಾಡಿಸಿಕೊಳ್ಳುವ ತಾವಾದರೊ ನ್ಯಾಯಪ್ರಮಾಣ ವನ್ನು ಕೈಕೊಂಡು ನಡೆಯುವದಿಲ್ಲ. ಆದರೆ ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳ ಪಡುವದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.
- 2 Corinthians 11:3 2 ಕೊರಿಂಥದವರಿಗೆ 11:3ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಹೇಗೆ ಮೋಸ ಹೋದಳೋ ಹಾಗೆಯೇ ನಿಮ್ಮ ಮನಸ್ಸುಗಳು ಕ್ರಿಸ್ತನ ವಿಷಯದಲ್ಲಿರಬೇಕಾದ ಸರಳತೆಯನ್ನು ಬಿಟ್ಟು ಕೆಟ್ಟು ಹೋದೀತೆಂದು ನನಗೆ ಭಯವುಂಟು.
- 1 Corinthians 4:18 1 ಕೊರಿಂಥದವರಿಗೆ 4:18ನಾನು ನಿಮ್ಮ ಬಳಿಗೆ ಬರುವದಿಲ್ಲವೇನೋ ಎಂದು ಕೆಲವರು ಉಬ್ಬಿಕೊಂಡಿದ್ದಾರೆ.
- 1 Corinthians 11:2 1 ಕೊರಿಂಥದವರಿಗೆ 11:2ಸಹೋದರರೇ, ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ಒಪ್ಪಿಸಿಕೊಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.