Galatians · chapter 4 · verse 23
Galatians 4:23 in Kannada
ದಾಸಿಯಿಂದ ಹುಟ್ಟಿದವನು ಶರೀರಕ್ಕನಸುಸಾರವಾಗಿ ಹುಟ್ಟಿದನು. ಆದರೆ ಸ್ವತಂತ್ರಳಿಂದ ಹುಟ್ಟಿದವನು ವಾಗ್ದಾನದ ಮೂಲಕ ಹುಟ್ಟಿದನು.
Daasiyinda huttidavanu shareerakkanasusaaravaagi huttidanu. Aadare svatantralinda huttidavanu vaagdaanada moolaka huttidanu.
Galatians 4:23 in English
- King James Version (KJV)
- But he [who was] of the bondwoman was born after the flesh; but he of the freewoman [was] by promise.
- World English Bible (WEB)
- However, the son by the servant was born according to the flesh, but the son by the free woman was born through promise.
- American Standard Version (ASV)
- Howbeit the [son] by the handmaid is born after the flesh; but the [son] by the freewoman [is born] through promise.
- Bible in Basic English (BBE)
- Now the son by the servant-woman has his birth after the flesh; but the son by the free woman has his birth through the undertaking of God.
- Darby Translation (DBY)
- But he [that was] of the maid servant was born according to flesh, and he [that was] of the free woman through the promise.
- Webster's Bible (WBS)
- But he [who was] of the bond-woman, was born according to the flesh; but he of the free-woman [was] by promise.
- Young's Literal Translation (YLT)
- but he who [is] of the maid-servant, according to flesh hath been, and he who [is] of the free-woman, through the promise;
Read in context
- 21ನ್ಯಾಯಪ್ರಮಾಣಧೀನರಾಗುವದಕ್ಕೆ ಮನಸ್ಸುಳ್ಳ ವರೇ, ನ್ಯಾಯಪ್ರಮಾಣಕ್ಕೆ ಕಿವಿಗೊಡುವದಿಲ್ಲವೋ? ನನಗೆ ಹೇಳಿರಿ.
- 22ಯಾಕಂದರೆ ದಾಸಿಯಿಂದ ಒಬ್ಬನು, ಸ್ವತಂತ್ರಳಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಬರೆಯಲ್ಪಟ್ಟಿದೆ.
- 23ದಾಸಿಯಿಂದ ಹುಟ್ಟಿದವನು ಶರೀರಕ್ಕನಸುಸಾರವಾಗಿ ಹುಟ್ಟಿದನು. ಆದರೆ ಸ್ವತಂತ್ರಳಿಂದ ಹುಟ್ಟಿದವನು ವಾಗ್ದಾನದ ಮೂಲಕ ಹುಟ್ಟಿದನು.
- 24ಈ ಸಂಗತಿಗಳು ಉಪಮಾನವಾಗಿವೆ; ಹೇಗಂದರೆ, ಇವರು ಎರಡು ಒಡಂಬಡಿಕೆಗಳೆ, ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉತ್ಪನ್ನವಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದ್ದು; ಅದೇ ಹಾಗರ್.
- 25ಹಾಗರ್ ಅಂದರೆ ಅರಬಸ್ಥಾನದಲ್ಲಿ ಸೀನಾಯಿ ಪರ್ವತ. ಆಕೆಯು ಈಗಿನ ಯೆರೂಸಲೇಮ್ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ, ಈಕೆಯು ತನ್ನ ಮಕ್ಕಳ ಸಹಿತ ದಾಸತ್ವದಲ್ಲಿದ್ದಾಳೆ.
Cross references
- Hebrews 11:11 ಇಬ್ರಿಯರಿಗೆ 11:11ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು.
- Romans 9:7–8 ರೋಮಾಪುರದವರಿಗೆ 9:7–8ಇಲ್ಲವೆ ಅವರು ಅಬ್ರಹಾಮನ ಸಂತತಿಯವರಾದ ಕಾರಣ ಅವರೆ ಲ್ಲರೂ ಮಕ್ಕಳಲ್ಲ; ಆದರೆ--ಇಸಾಕನಲ್ಲಿಯೇ ನಿನ್ನ ಸಂತ ತಿಯು ಕರೆಯಲ್ಪಡುವದು ಎಂಬದೇ. ಅಂದರೆ--ಶರೀರ ಸಂಬಂಧವಾದ ಮಕ್ಕಳು ದೇವರ ಮಕ್ಕಳಲ್ಲ; ಆದರೆ ವಾಗ್ದಾನದ ಮಕ್ಕಳೇ ಆತನ ಸಂತತಿಯೆಂದು ಎಣಿಸಲ್ಪಟ್ಟಿದ್ದಾರೆ.
- Genesis 21:1–2 ಆದಿಕಾಂಡ 21:1–2ಕರ್ತನು ತಾನು ಹೇಳಿದ ಹಾಗೆ ಸಾರಳನ್ನು ದರ್ಶಿಸಿ ತಾನು ಹೇಳಿದಂತೆ ಸಾರಳಿಗೆ ಮಾಡಿದನು. ದೇವರು ಅಬ್ರಹಾಮನಿಗೆ ಮುಂತಿ ಳಿಸಿದ ಹಾಗೆ ಸಾರಳು ಗರ್ಭಿಣಿಯಾಗಿ ಅವನು ಮುದುಕನಾಗಿದ್ದಾಗ ಅವನಿಗೆ ಮಗನನ್ನು ಹೆತ್ತಳು.
- Galatians 4:28–29 ಗಲಾತ್ಯದವರಿಗೆ 4:28–29ಸಹೋದರರೇ, ನಾವು ಈಗ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೇವೆ. ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದನು. ಅದರಂತೆಯೇ ಈಗಲೂ ಅದೆ.
- Genesis 18:10–14 ಆದಿಕಾಂಡ 18:10–14ಆಗ ಆತನು--ಬರುವ ವರುಷ ಇದೇ ಸಮಯಕ್ಕೆ ನಿಶ್ಚಯ ವಾಗಿ ತಿರಿಗಿ ನಿನ್ನ ಬಳಿಗೆ ಬರುತ್ತೇನೆ. ಆಗ ಇಗೋ, ನಿನ್ನ ಹೆಂಡತಿಯಾದ ಸಾರಳಿಗೆ ಮಗನು ಇರುವನು ಅಂದನು. ಸಾರಳು ಆತನ ಹಿಂದೆ ಇದ್ದ ಗುಡಾರದ ಬಾಗಲಲ್ಲಿದ್ದು ಅದನ್ನು ಕೇಳಿಸಿಕೊಂಡಳು. ಇದಲ್ಲದೆ ಅಬ್ರಹಾಮನೂ ಸಾರಳೂ ದಿನ ಗತಿಸಿದವರಾಗಿ ಮುದುಕರಾಗಿದ್ದರು; ಸಾರಳಿಗೆ ಹೆಂಗಸರಿಗೆ ಆಗುವ ಕ್ರಮವು ನಿಂತುಹೋಗಿತ್ತು. ಆದದರಿಂದ ಸಾರಳು ತನ್ನೊಳಗೆ ನಕ್ಕು--ನಾನು ವೃದ್ಧಳಾಗಿದ್ದೇನೆ. ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರು ವಲ್ಲಿ ನನಗೆ ಸಂತೋಷವಾದೀತೇ? ಅಂದಳು. ಆಗ ಕರ್ತನು ಅಬ್ರಹಾಮನಿಗೆ--ನಾನು ಮುದಿಪ್ರಾಯದ ವಳಾಗಿ ಮಗುವನ್ನು ಹೆರುವದು ನಿಜವೋ ಎಂದು ಅಂದುಕೊಂಡು ಯಾಕೆ ಸಾರಳು ನಕ್ಕಳು? ಕರ್ತನಿಗೆ ಅಸಾಧ್ಯವಾದದ್ದು ಯಾವದಾದರೂ ಇದೆಯೋ? ಬರುವ ವರುಷ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ತಿರಿಗಿ ಬರುವೆನು; ಆಗ ಸಾರಳಿಗೆ ಮಗನು ಇರುವನು ಅಂದನು.
- Genesis 17:15–19 ಆದಿಕಾಂಡ 17:15–19ಇದಲ್ಲದೆ ದೇವರು ಅಬ್ರಹಾಮನಿಗೆ--ನಿನ್ನ ಹೆಂಡತಿಯಾದ ಸಾರಯಳ ವಿಷಯದಲ್ಲಾದರೋ ಆಕೆಯನ್ನು ಸಾರಯಳೆಂದು ಕರೆಯಬೇಡ; ಅವಳ ಹೆಸರು ಸಾರಾ. ಆಕೆಯನ್ನು ನಾನು ಆಶೀರ್ವದಿ ಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಹೌದು, ಜನಾಂಗಗಳ ತಾಯಿಯಾ ಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ಜನರ ಅರಸರು ಹುಟ್ಟುವರು ಅಂದನು. ಆಗ ಅಬ್ರಹಾಮನು ಅಡ್ಡಬಿದ್ದು ನಕ್ಕು-ನೂರು ವರುಷ ದವನಿಗೆ ಮಗುವು ಹುಟ್ಟುವದುಂಟೇ? ತೊಂಭತ್ತು ವರುಷದವಳಾದ ಸಾರಳು ಹೆರುವದುಂಟೇ ಎಂದು ತನ್ನ ಹೃದಯದಲ್ಲಿ ಅಂದುಕೊಂಡನು. ಅಬ್ರಹಾ ಮನು ದೇವರಿಗೆ--ಇಷ್ಮಾಯೇಲನು ನಿನ್ನ ಎದುರಿನಲ್ಲಿ ಬದುಕಲಿ ಅಂದನು. ಅದಕ್ಕೆ ದೇವರು--ನಿಶ್ಚಯ ವಾಗಿ ನಿನ್ನ ಹೆಂಡತಿಯಾದ ಸಾರಳು ನಿನಗೆ ಮಗನನ್ನು ಹೆರುವಳು. ಅವನಿಗೆ ಇಸಾಕನೆಂದು ಹೆಸರಿಡಬೇಕು. ಅವನ ಸಂಗಡಲೂ ತರುವಾಯ ಹುಟ್ಟುವ ಅವನ ಸಂತತಿಯವರ ಸಂಗಡಲೂ ನನ್ನ ಶಾಶ್ವತವಾದ ಒಡಂಬಡಿಕೆಯನ್ನು ಸ್ಥಾಪಿಸುವೆನು.
- Romans 4:18–21 ರೋಮಾಪುರದವರಿಗೆ 4:18–21ಅವನು ತಾನು ಅನೇಕ ಜನಾಂಗಗಳಿಗೆ ತಂದೆಯಾಗಿ ರುವನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ--ನಿನ್ನ ಸಂತಾನವು ಹೀಗಾಗುವದು ಎಂದು ಹೇಳಲ್ಪಟ್ಟಂತೆ ನಿರೀಕ್ಷಿಸಿ ನಂಬಿದನು. ಅವನು ಹೆಚ್ಚು ಕಡಿಮೆ ನೂರುವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದನು; ಆದಾಗ್ಯೂ ಅವನು ಅಪನಂಬಿಕೆಯಿಂದ ಚಂಚಲನಾಗಲಿಲ್ಲ. ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ; ಆದರೆ ದೇವರನ್ನು ಘನಪಡಿಸುವವನಾಗಿ ದೃಢನಂಬಿಕೆಯುಳ್ಳ ವನಾದನು. ಆತನು ತನ್ನ ವಾಗ್ದಾನವನ್ನು ನೆರವೇರಿ ಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟನು.
- Romans 10:8 ರೋಮಾಪುರದವರಿಗೆ 10:8ಆದರೆ ಅದು ಏನು ಹೇಳುತ್ತದೆ? ವಾಕ್ಯವು ನಿನ್ನ ಸವಿಾಪದಲ್ಲಿಯೂ ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಎಂದು ಅನ್ನುತ್ತದೆ; ಅದೇನಂದರೆ--ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.