Galatians · chapter 4 · verse 5
Galatians 4:5 in Kannada
ನ್ಯಾಯಪ್ರಮಾಣಾಧೀನರನ್ನು ವಿಮೋಚಿಸುವದಕ್ಕೂ ನಾವು ದತ್ತುಪುತ್ರರ ಸ್ವೀಕಾರವನ್ನು ಹೊಂದುವಂತೆಯೂ ಕಳುಹಿಸಿಕೊಟ್ಟನು.
Nyaayapramaanaadheenarannu vimochisuvadakkoo naavu dattuputrara sveekaaravannu honduvanteyoo kaluhisikottanu.
Galatians 4:5 in English
- King James Version (KJV)
- To redeem them that were under the law, that we might receive the adoption of sons.
- World English Bible (WEB)
- that he might redeem those who were under the law, that we might receive the adoption as children.
- American Standard Version (ASV)
- that he might redeem them that were under the law, that we might receive the adoption of sons.
- Bible in Basic English (BBE)
- That he might make them free who were under the law, and that we might be given the place of sons.
- Darby Translation (DBY)
- that he might redeem those under law, that we might receive sonship.
- Webster's Bible (WBS)
- To redeem them that were under the law, that we might receive the adoption of sons.
- Young's Literal Translation (YLT)
- that those under law he may redeem, that the adoption of sons we may receive;
Read in context
- 3ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ ಲೋಕದ ಮೂಲ ಪಾಠಗಳಿಗೆ ಅಧೀನರಾಗಿದ್ದೆವು.
- 4ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ
- 5ನ್ಯಾಯಪ್ರಮಾಣಾಧೀನರನ್ನು ವಿಮೋಚಿಸುವದಕ್ಕೂ ನಾವು ದತ್ತುಪುತ್ರರ ಸ್ವೀಕಾರವನ್ನು ಹೊಂದುವಂತೆಯೂ ಕಳುಹಿಸಿಕೊಟ್ಟನು.
- 6ನೀವು ಪುತ್ರ ರಾಗಿರುವದರಿಂದ--ಅಪ್ಪಾ, ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮನನ್ನು ದೇವರು ನಿಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು.
- 7ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ, ಮಗನಾಗಿದ್ದೀ; ಮಗನೆಂದ ಮೇಲೆ ಕ್ರಿಸ್ತನ ಮೂಲಕ ದೇವರಿಗೆ ಬಾಧ್ಯನೂ ಆಗಿದ್ದೀ.
Cross references
- Hebrews 9:15 ಇಬ್ರಿಯರಿಗೆ 9:15ಈ ಕಾರಣದಿಂದ ಮೊದಲನೇ ಒಡಂಬಡಿಕೆಯ ಅಧೀನದಲ್ಲಿದ್ದ ಅಕ್ರಮಗಳ ವಿಮೋಚನೆಗಾಗಿ ಕರೆಯಲ್ಪ ಟ್ಟವರು ನಿತ್ಯಬಾಧ್ಯತೆಯ ವಾಗ್ದಾನವನ್ನು ಹೊಂದು ವದಕ್ಕೆ ಮರಣದ ಮೂಲಕ ಆತನು ಹೊಸ ಒಡಂಬಡಿ ಕೆಗೆ ಮಧ್ಯಸ್ಥನಾಗಿದ್ದಾನೆ.
- Ephesians 1:5 ಎಫೆಸದವರಿಗೆ 1:5ಆತನು ತನ್ನ ಚಿತ್ತದ ದಯಾ ಪೂರ್ವಕವಾದ ಆನಂದಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನಗೋಸ್ಕರ ದತ್ತುಪುತ್ರ ಸ್ವೀಕಾರ ಮಾಡುವಂತೆ ಮೊದಲೇ ಸಂಕಲ್ಪಿಸಿ.
- 1 Peter 1:18–20 1 ಪೇತ್ರನು 1:18–20ನಿಮ್ಮ ತಂದೆ ಗಳಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿ ಹೋಗುವ ಬೆಳ್ಳಿ ಬಂಗಾರದಿಂದಲ್ಲ; ಆದರೆ ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯ ರಕ್ತ ದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ. ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟು ಈ ಅಂತ್ಯ ಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.
- Ephesians 1:7 ಎಫೆಸದವರಿಗೆ 1:7ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು.
- Hebrews 9:12 ಇಬ್ರಿಯರಿಗೆ 9:12ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು.
- Galatians 3:13 ಗಲಾತ್ಯದವರಿಗೆ 3:13ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ ಮಾಡಲ್ಪಟ್ಟು ನ್ಯಾಯಪ್ರಮಾಣದ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಯಾಕಂದರೆ--ಮರಕ್ಕೆ ತೂಗಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಬರೆದದೆಯಲ್ಲಾ.
- Revelation 5:9 ಪ್ರಕಟನೆ 5:9ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ;
- Galatians 3:26 ಗಲಾತ್ಯದವರಿಗೆ 3:26ನೀವೆಲ್ಲರು ಕ್ರಿಸ್ತ ಯೇಸು ವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಮಕ್ಕಳಾಗಿ ದ್ದೀರಿ.
- Galatians 4:7 ಗಲಾತ್ಯದವರಿಗೆ 4:7ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ, ಮಗನಾಗಿದ್ದೀ; ಮಗನೆಂದ ಮೇಲೆ ಕ್ರಿಸ್ತನ ಮೂಲಕ ದೇವರಿಗೆ ಬಾಧ್ಯನೂ ಆಗಿದ್ದೀ.
- Romans 8:23 ರೋಮಾಪುರದವರಿಗೆ 8:23ಇದು ಮಾತ್ರವಲ್ಲದೆ ಆತ್ಮನ ಪ್ರಥಮ ಫಲವನ್ನು ಹೊಂದಿದ ನಾವು ಸಹ ದತ್ತುಪುತ್ರ ಸ್ವೀಕಾರವನ್ನು ಅಂದರೆ ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೊಡುತ್ತಾ ನಮ್ಮೊಳಗೆ ನಾವೇ ಮೂಲ್ಗುತ್ತೇವೆ.
- Colossians 1:13–20 ಕೊಲೊಸ್ಸೆಯವರಿಗೆ 1:13–20ಆತನು (ದೇವರು) ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡಿಸಿ ತನ್ನ ಪ್ರಿಯಕುಮಾರನ ರಾಜ್ಯ ದೊಳಗೆ ಸೇರಿಸಿದನು. ಆತನಲ್ಲಿ (ಆ ಕುಮಾರನಲ್ಲಿ) ಆತನ ರಕ್ತದ ಮೂಲಕ ನಮಗೆ ವಿಮೋಚನೆಯು ಅಂದರೆ ಪಾಪಪರಿಹಾರವು ಉಂಟಾಯಿತು. ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಪ್ರತಿಯೊಂದು ಸೃಷ್ಟಿಗೆ ಜ್ಯೇಷ್ಠನೂ ಆಗಿದ್ದಾನೆ. ಭೂಪರಲೋಕ ಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನ ಗಳಾಗಲಿ ಇಲ್ಲವೆ ಪ್ರಭುತ್ವಗಳಾಗಲಿ ಇಲ್ಲವೆ ದೊರೆ ತನಗಳಾಗಲಿ ಇಲ್ಲವೆ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನಿಂದಲೂ ಆತನಿ ಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು. ಆತನು ಎಲ್ಲದಕ್ಕೂ ಮೊದಲು ಇದ್ದಾತನು; ಆತನು ಸಮಸ್ತಕ್ಕೂ ಆಧಾರನಾಗಿದ್ದಾನೆ. ಸಭೆಯೆಂಬ ದೇಹಕ್ಕೆ ಆತನು ಶಿರಸ್ಸಾಗಿದ್ದಾನೆ. ಆತನೇ ಆದಿಯಾಗಿದ್ದು ಎಲ್ಲಾದರಲ್ಲಿ ಪ್ರಮುಖನಾಗಿರುವಂತೆ ಆತನು ಸತ್ತವರೊಳಗಿಂದ ಬಂದ ಜ್ಯೇಷ್ಠನೂ ಆಗಿದ್ದಾನೆ. ಆತನಲ್ಲಿ ಸರ್ವ ಸಂಪೂರ್ಣತೆಯು ವಾಸವಾಗಿರುವದು ತಂದೆಗೆ ಇಷ್ಟ ವಾಗಿತ್ತು. ಆತನ ಶಿಲುಬೆಯ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಆತನಿಂದ ಭೂಪರ ಲೋಕಗಳಲ್ಲಿರುವ ಎಲ್ಲವುಗಳನ್ನು ಆತನ ಮೂಲಕ ತನಗೆ ಸಂಧಾನಪಡಿಸಿಕೊಂಡನು.
- John 1:12 ಯೋಹಾನನು 1:12ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು.