Galatians · chapter 5 · verse 4
Galatians 5:4 in Kannada
ನಿಮ್ಮಲ್ಲಿ ಯಾರಾದರೂ ನ್ಯಾಯ ಪ್ರಮಾಣದ ಮೂಲಕ ನೀತಿವಂತರಾಗಬೇಕೆಂದಿದ್ದರೆ ಅವರಿಗೆ ಕ್ರಿಸ್ತನಿಂದ ಯಾವ ಪ್ರಯೋಜನವೂ ಆಗುವದಿಲ್ಲ; ನೀವು ಕೃಪೆಯಿಂದ ಬಿದ್ದವರಾಗಿದ್ದೀರಿ.
Nimmalli yaaraadaroo nyaaya pramaanada moolaka neetivantaraagabekendiddare avarige kristaninda yaava prayojanavoo aaguvadilla; neevu krupeyinda biddavaraagiddeeri.
Galatians 5:4 in English
- King James Version (KJV)
- Christ is become of no effect unto you, whosoever of you are justified by the law; ye are fallen from grace.
- World English Bible (WEB)
- You are alienated from Christ, you who desire to be justified by the law. You have fallen away from grace.
- American Standard Version (ASV)
- Ye are severed from Christ, ye who would be justified by the law; ye are fallen away from grace.
- Bible in Basic English (BBE)
- You are cut off from Christ, you who would have righteousness by the law; you are turned away from grace.
- Darby Translation (DBY)
- Ye are deprived of all profit from the Christ as separated [from him], as many as are justified by law; ye have fallen from grace.
- Webster's Bible (WBS)
- Christ is become of no effect to you, whoever of you are justified by the law; ye have fallen from grace.
- Young's Literal Translation (YLT)
- ye were freed from the Christ, ye who in law are declared righteous; from the grace ye fell away;
Read in context
- 2ಇಗೋ, ಪೌಲನೆಂಬ ನಾನು ನಿಮಗೆ ಹೇಳುವದೇನಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನು ಪ್ರಯೋಜನವಿಲ್ಲ.
- 3ಯಾಕಂದರೆ ಸುನ್ನತಿ ಮಾಡಿಸಿಕೊಳ್ಳುವ ಪ್ರತಿ ಯೊಬ್ಬನು ನ್ಯಾಯಪ್ರಮಾಣವನ್ನೆಲ್ಲಾ ಕೈಕೊಳ್ಳುವ ಹಂಗಿನಲ್ಲಿದ್ದಾನೆ ಎಂದು ತಿರಿಗಿ ಪ್ರಮಾಣವಾಗಿ ಹೇಳುತ್ತೇನೆ.
- 4ನಿಮ್ಮಲ್ಲಿ ಯಾರಾದರೂ ನ್ಯಾಯ ಪ್ರಮಾಣದ ಮೂಲಕ ನೀತಿವಂತರಾಗಬೇಕೆಂದಿದ್ದರೆ ಅವರಿಗೆ ಕ್ರಿಸ್ತನಿಂದ ಯಾವ ಪ್ರಯೋಜನವೂ ಆಗುವದಿಲ್ಲ; ನೀವು ಕೃಪೆಯಿಂದ ಬಿದ್ದವರಾಗಿದ್ದೀರಿ.
- 5ನಾವಾದರೋ ಆತ್ಮನ ಮೂಲಕ ನಂಬಿಕೆಯಿಂದಾದ ನೀತಿಯ ನಿರೀಕ್ಷೆಗಾಗಿ ಎದುರು ನೋಡುತ್ತೇವೆ.
- 6ಯಾಕಂದರೆ ಯೇಸು ಕ್ರಿಸ್ತನಲ್ಲಿರುವವರಿಗೆ ಸುನ್ನತಿ ಯಾದರೂ ಪ್ರಯೋಜನವಿಲ್ಲ, ಆಗದಿದ್ದರೂ ಪ್ರಯೋ ಜನವಿಲ್ಲ. ಪ್ರೀತಿಯಿಂದ ಕೆಲಸನಡಿಸುವ ನಂಬಿಕೆ ಯಿಂದಲೇ ಪ್ರಯೋಜನವಾಗುತ್ತದೆ.
Cross references
- 2 Peter 2:20–22 2 ಪೇತ್ರನು 2:20–22ರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನಹೊಂದಿ ಲೋಕದ ಮಲಿನತ್ವ ಗಳಿಗೆ ತಪ್ಪಿಸಿಕೊಂಡವರು ತಿರಿಗಿ ಅವುಗಳಲ್ಲಿ ಸಿಕ್ಕಿ ಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿದೆ. ಅವರು ನೀತಿ ಮಾರ್ಗ ವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯಿಂದ ತೊಲಗಿ ಹೋಗುವದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಇದ್ದಿದ್ದರೆ ಮೇಲಾಗಿತ್ತು.ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿ ಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವದಕ್ಕೆ ತಿರುಗಿಕೊಂಡಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ಅವರಿಗೆ ಸಂಭವಿಸಿತು. ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿ ಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವದಕ್ಕೆ ತಿರುಗಿಕೊಂಡಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ಅವರಿಗೆ ಸಂಭವಿಸಿತು.
- Romans 9:31–32 ರೋಮಾಪುರದವರಿಗೆ 9:31–32ಆದರೆ ನ್ಯಾಯಪ್ರಮಾಣ ದಿಂದುಂಟಾದ ನೀತಿಯನ್ನು ಅನುಸರಿಸಿದ ಇಸ್ರಾಯೇ ಲ್ಯರು ನ್ಯಾಯಪ್ರಮಾಣದ ನೀತಿಯನ್ನು ಹೊಂದದೆ ಹೋಗಿದ್ದಾರೆ. ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಆಧಾರಮಾಡಿಕೊಳ್ಳದೆ ನ್ಯಾಯ ಪ್ರಮಾಣದ ಕ್ರಿಯೆಗಳನ್ನು ಆಧಾರಮಾಡಿಕೊಂಡದ್ದೇ ಕಾರಣ.ಇಗೋ, ನಾನು ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇ ನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾ ಭಂಗಪಡುವದಿಲ್ಲವೆಂತಲೂ ಬರೆದಿರುವ ಪ್ರಕಾರ ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು ಎಂಬದೇ.
- Hebrews 12:15 ಇಬ್ರಿಯರಿಗೆ 12:15ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹೋಗ ದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಕಳವಳ ಹುಟ್ಟಿಸಿ ಅದರಿಂದ ಅನೇಕರು ಅಶುದ್ಧರಾಗ ದಂತೆಯೂ
- Romans 11:6 ರೋಮಾಪುರದವರಿಗೆ 11:6ಕೃಪೆಯಿಂದಾಗಿದ್ದರೆ ಇನ್ನೆಂದಿಗೂ ಕ್ರಿಯೆಗಳಿಂದಲ್ಲ; ಇಲ್ಲವಾದರೆ ಕೃಪೆಯು ಇನ್ನೆಂದಿಗೂ ಕೃಪೆಯೇ ಅಲ್ಲ. ಕ್ರಿಯೆಗಳಿಂದಾಗಿದ್ದರೆ ಇನ್ನೆಂದಿಗೂ ಕೃಪೆಯಲ್ಲ; ಇಲ್ಲವಾದರೆ ಕ್ರಿಯೆಯು ಇನ್ನೆಂದಿಗೂ ಕ್ರಿಯೆಯಲ್ಲ.
- Galatians 2:21 ಗಲಾತ್ಯದವರಿಗೆ 2:21ನಾನು ದೇವರ ಕೃಪೆಯನ್ನು ನಿರರ್ಥಕ ಮಾಡುವದಿಲ್ಲ. ನ್ಯಾಯಪ್ರಮಾಣದಿಂದ ನೀತಿಯುಂಟಾಗುವದಾದರೆ ಕ್ರಿಸ್ತನು ಮರಣವನ್ನು ಹೊಂದಿದ್ದು ವ್ಯರ್ಥವಾಯಿತು.
- Romans 3:20 ರೋಮಾಪುರದವರಿಗೆ 3:20ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ.
- Romans 4:4–5 ರೋಮಾಪುರದವರಿಗೆ 4:4–5ಕೆಲಸ ಮಾಡಿದವನಿಗೆ ಬರುವ ಸಂಬಳವು ಕೃಪೆಯಿಂದ ದೊರಕುವಂಥದ್ದೆಂದು ಎಣಿಕೆ ಯಾಗುವದಿಲ್ಲ; ಅದು ಸಲ್ಲತಕ್ಕದ್ದೇ. ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆ ಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವದು.
- Revelation 2:5 ಪ್ರಕಟನೆ 2:5ಆದದ ರಿಂದ ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ಮಾನಸಾಂತರಪಡು. ನೀನು ಮೊದಲು ಮಾಡುತ್ತಿದ್ದ ಕ್ರಿಯೆಗಳನ್ನು ಮಾಡು. ನೀನು ಮಾನಸಾಂತರಪಡದೆ ಹೋದರೆ ನಾನು ನಿನ್ನ ಬಳಿಗೆ ಬೇಗನೆ ಬಂದು ನಿನ್ನ ದೀಪ ಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು
- Galatians 5:2 ಗಲಾತ್ಯದವರಿಗೆ 5:2ಇಗೋ, ಪೌಲನೆಂಬ ನಾನು ನಿಮಗೆ ಹೇಳುವದೇನಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನು ಪ್ರಯೋಜನವಿಲ್ಲ.
- Hebrews 6:4–6 ಇಬ್ರಿಯರಿಗೆ 6:4–6ಒಂದು ಸಾರಿ ಬೆಳಕನ್ನು ಹೊಂದಿ ಪರಲೋಕ ದಿಂದಾದ ದಾನದ ರುಚಿಯನ್ನು ನೋಡಿ ಪವಿತ್ರಾತ್ಮನಲ್ಲಿ ಪಾಲುಗಾರರಾಗಿ ಶ್ರೇಷ್ಠವಾದ ದೇವರ ವಾಕ್ಯವನ್ನೂ ಬರುವ ಲೋಕದ ಮಹತ್ವವನ್ನೂ ರುಚಿನೋಡಿ ದವರು ಬಿದ್ದು ಹೋಗುವದಾದರೆ ಅವರಲ್ಲಿ ತಿರಿಗಿ ಮಾನಸಾಂತರವನ್ನು ಹುಟ್ಟಿಸುವದು ಅಸಾಧ್ಯ; ಯಾಕಂದರೆ ಅವರು ತಮ್ಮ ಪಾಲಿಗೆ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗ ವಾಗಿ ಅವಮಾನಪಡಿಸುವವರೂ ಆಗಿದ್ದಾರೆ.
- Romans 10:3–5 ರೋಮಾಪುರದವರಿಗೆ 10:3–5ಅವರು ದೇವ ರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ. ನಂಬುವ ಪ್ರತಿಯೊಬ್ಬನು ನೀತಿವಂತನಾಗುವಂತೆ ಕ್ರಿಸ್ತನು ನ್ಯಾಯಪ್ರಮಾಣದ ಅಂತ್ಯವಾಗಿದ್ದಾನೆ. ಇದಲ್ಲದೆ-- ನ್ಯಾಯಪ್ರಮಾಣವು ಹೇಳುವವುಗಳನ್ನು ಮಾಡುವವನು ಅವುಗಳಿಂದಲೇ ಜೀವಿಸುವನು ಎಂದು ಮೋಶೆಯು ಅದರ ನೀತಿಯ ವಿಷಯವಾಗಿ ವಿವರಿಸುತ್ತಾನೆ.
- Galatians 1:6–9 ಗಲಾತ್ಯದವರಿಗೆ 1:6–9ಕ್ರಿಸ್ತನ ಕೃಪೆಯಲ್ಲಿ ನಿಮ್ಮನ್ನು ಕರೆದಾತನಿಂದ ನೀವು ಇಷ್ಟು ಬೇಗನೆ ಬೇರೆ ಸುವಾರ್ತೆಗೆ ತಿರುಗಿಕೊಂಡಿರೆಂದು ನಾನು ಆಶ್ಚರ್ಯಪಡುತ್ತೇನೆ. ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮನ್ನು ಕಳವಳಪಡಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವದಕ್ಕೆ ಪ್ರಯತ್ನಿಸುತ್ತಾರೆ. ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೆ ಸುವಾರ್ತೆಯನ್ನು ನಾವೇ ಆಗಲಿ ಪರಲೋಕದಿಂದ ಬಂದ ದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ. ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ ಎಂದು ನಾವು ಮೊದಲು ಹೇಳಿ ದಂತೆಯೇ ಈಗಲೂ ನಾನು ತಿರಿಗಿ ಹೇಳುತ್ತೇನೆ.