Genesis · chapter 12 · verse 15
Genesis 12:15 in Kannada
ಫರೋಹನ ಪ್ರಧಾ ನರು ಸಹ ಆಕೆಯನ್ನು ನೋಡಿ ಫರೋಹನ ಮುಂದೆ ಆಕೆಯನ್ನು ಹೊಗಳಲಾಗಿ ಆ ಸ್ತ್ರೀಯು ಫರೋಹನ ಮನೆಗೆ ಒಯ್ಯಲ್ಪಟ್ಟಳು.
Pharohana pradhaa naru saha aakeyannu nodi pharohana munde aakeyannu hogalalaagi aa streeyu pharohana manege oyyalpattalu.
Genesis 12:15 in English
- King James Version (KJV)
- The princes also of Pharaoh saw her, and commended her before Pharaoh: and the woman was taken into Pharaoh’s house.
- World English Bible (WEB)
- The princes of Pharaoh saw her, and praised her to Pharaoh; and the woman was taken into Pharaoh’s house.
- American Standard Version (ASV)
- And the princes of Pharaoh saw her, and praised her to Pharaoh: and the woman was taken into Pharaoh’s house.
- Bible in Basic English (BBE)
- And Pharaoh's great men, having seen her, said words in praise of her to Pharaoh, and she was taken into Pharaoh's house.
- Darby Translation (DBY)
- And the princes of Pharaoh saw her, and praised her to Pharaoh; and the woman was taken into Pharaoh's house.
- Webster's Bible (WBS)
- The princes also of Pharaoh saw her, and commended her before Pharaoh: and the woman was taken into Pharaoh's house.
- Young's Literal Translation (YLT)
- and princes of Pharaoh see her, and praise her unto Pharaoh, and the woman is taken [to] Pharaoh's house;
Read in context
- 13ನಿನ್ನ ದೆಸೆಯಿಂದ ನನಗೆ ಒಳ್ಳೆಯದಾಗಿ ನನ್ನ ಪ್ರಾಣವು ಉಳಿಯುವಂತೆ ನೀನು ನನ್ನ ಸಹೋದರಿ ಎಂದು ಹೇಳಬೇಕು ಎಂದು ಕೇಳಿಕೊಳ್ಳುತ್ತೇನೆ ಅಂದನು.
- 14ಇದಾದ ಮೇಲೆ ಅಬ್ರಾಮನು ಐಗುಪ್ತಕ್ಕೆ ಬಂದಾಗ ಐಗುಪ್ತ್ಯರು ಆ ಸ್ತ್ರೀಯು ಬಹಳ ಸೌಂದರ್ಯ ವುಳ್ಳವಳೆಂದು ನೋಡಿದರು.
- 15ಫರೋಹನ ಪ್ರಧಾ ನರು ಸಹ ಆಕೆಯನ್ನು ನೋಡಿ ಫರೋಹನ ಮುಂದೆ ಆಕೆಯನ್ನು ಹೊಗಳಲಾಗಿ ಆ ಸ್ತ್ರೀಯು ಫರೋಹನ ಮನೆಗೆ ಒಯ್ಯಲ್ಪಟ್ಟಳು.
- 16ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೇದನ್ನು ಮಾಡಿದನು. ಅವನಿಗೆ ಕುರಿಗಳೂ ಎತ್ತುಗಳೂ ಕತ್ತೆಗಳೂ ದಾಸರೂ ದಾಸಿ ಯರೂ ಹೆಣ್ಣುಕತ್ತೆಗಳೂ ಒಂಟೆಗಳೂ ದೊರೆತವು.
- 17ಆದರೆ ಕರ್ತನು ಫರೋಹನನ್ನೂ ಅವನ ಮನೆ ಯನ್ನೂ ಅಬ್ರಾಮನ ಹೆಂಡತಿಯಾದ ಸಾರಯಳಿಗಾಗಿ ಮಹಾಬಾಧೆಗಳಿಂದ ಬಾಧಿಸಿದನು.
Cross references
- Genesis 20:2 ಆದಿಕಾಂಡ 20:2ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ವಿಷಯವಾಗಿ--ಅವಳು ನನ್ನ ತಂಗಿ ಎಂದು ಹೇಳಿ ದನು. ಆದದರಿಂದ ಗೆರಾರಿನ ಅರಸನಾದ ಅಬೀಮೆಲೆ ಕನು ಸಾರಳನ್ನು ಕರೆಯಿಸಿ ತೆಗೆದುಕೊಂಡನು.
- Hosea 7:4–5 ಹೋಶೇಯ 7:4–5ಅವರೆ ಲ್ಲರೂ ವ್ಯಭಿಚಾರಿಗಳು; ರೊಟ್ಟಿಗಾರನು ಬಿಸಿಮಾಡಿದ ಒಲೆಯ ಹಾಗೆ ಇದ್ದಾರೆ, ಅವನು ಹಿಟ್ಟು ನಾದಿದ ಮೇಲೆ ಅದು ಹುಳಿಯಾಗುವ ತನಕ ಬಿಸಿಮಾಡುವ ದನ್ನು ಬಿಟ್ಟುಬಿಡುತ್ತಾನೆ. ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.
- Proverbs 29:12 ಜ್ಞಾನೋಕ್ತಿಗಳು 29:12ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ.
- Jeremiah 46:17 ಯೆರೆಮೀಯ 46:17ಐಗುಪ್ತದ ಅರಸ ನಾದ ಫರೋಹನು ನಾಶವಾದನು; ಸಮಯವನ್ನು ತಪ್ಪಿಸಿದ್ದಾನೆಂದು ಅಲ್ಲಿ ಕೂಗುತ್ತಾರೆ.
- Esther 2:2–16 ಎಸ್ತೇರಳು 2:2–16ಆಗ ಅರಸನನ್ನು ಸೇವಿಸುವ ದಾಸರು ಅವನಿಗೆ ಹೇಳಿದ್ದೇನಂದರೆ--ಅರಸನಿಗೋಸ್ಕರ ರೂಪವತಿಯಾದ ಕನ್ಯಾಸ್ತ್ರೀಯರು ಹುಡುಕಲ್ಪಡಲಿ. ರೂಪವತಿಯಾದ ಸಮಸ್ತ ಕನ್ಯಾಸ್ತ್ರೀಯರು ರಾಜ ಧಾನಿಯಾದ ಶೂಷನಿಗೆ ಸ್ತ್ರೀಯರು ಇರುವ ಅರಮ ನೆಗೆ, ಸ್ತ್ರೀಯರ ಮೇಲೆ ಕಾವಲಾಗಿ ಇರುವ ಅರಸನ ಅಧಿ ಕಾರಿಗಳಾದ ಹೇಗ್ಯನೆಂಬವನ ಕೈಗೆ ಒಪ್ಪಿಸಲ್ಪಡುವ ಹಾಗೆ ಅರಸನು ತನ್ನ ರಾಜ್ಯದ ಸಮಸ್ತ ಪ್ರಾಂತಗಳಲ್ಲಿ ಅಧಿಕಾರವನ್ನು ನೇಮಿಸಲಿ; ಅವರಿಗೆ ಶುಚಿ ಮಾಡಿ ಕೊಳ್ಳುವ ವಸ್ತುಗಳು ಕೊಡಲ್ಪಡಲಿ. ಅರಸನ ಕಣ್ಣು ಗಳಿಗೆ ಚೆನ್ನಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ ಅಂದನು. ಈ ಮಾತು ಅರಸನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಹಾಗೆಯೇ ಮಾಡಿದನು. ಆದರೆ ಶೂಷನಿನ ಅರಮನೆಯಲ್ಲಿ ಬೆನ್ಯಾವಿಾನ ನವನಾದ ಕೀಷನ ಮಗನಾದ ಶಿವ್ಗೆಾ ಮಗನಾದ ಯಾಯಾರನ ಮಗನಾದ ಮೊರ್ದೆಕೈ ಎಂಬ ಹೆಸರುಳ್ಳ ಒಬ್ಬ ಯೆಹೂದ್ಯನಿದ್ದನು. ಅವನು ಬಾಬೆಲಿನ ಅರಸ ನಾದ ನೆಬೂಕದ್ನೆಚರನು ಸೆರೆಯಾಗಿ ತಂದ ಯೆಹೂ ದದ ಅರಸನಾಗಿರುವ ಯೆಹೋಯಾಕೀನನ ಸಂಗಡ ಯೆರೂಸಲೇಮಿನಿಂದ ಸೆರೆಯಾಗಿ ಒಯ್ಯಲ್ಪಟ್ಟವರಲ್ಲಿ ಒಬ್ಬನಾಗಿದ್ದನು. ಅವನು ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರಳೆಂಬ ಹದಸ್ಸಳನ್ನು ಸಾಕಿದವನಾಗಿದ್ದನು; ಅವ ಳಿಗೆ ತಂದೆ ತಾಯಿಗಳು ಇರಲಿಲ್ಲ. ಈ ಕನ್ನಿಕೆಯು ರೂಪವತಿಯಾಗಿಯೂ ಸೌಂದರ್ಯವಂತಳಾಗಿಯೂ ಇದ್ದಳು. ಅವಳ ತಂದೆ ತಾಯಿಗಳು ಸತ್ತುಹೋದ ತರುವಾಯ ಮೊರ್ದೆಕೈ ಅವಳನ್ನು ತನ್ನ ಮಗಳ ಹಾಗೆ ತೆಗೆದುಕೊಂಡನು. ಅರಸನ ಮಾತೂ ಅವನ ಕಟ್ಟ ಳೆಯೂ ಕೇಳಿದ ತರುವಾಯ ಶೂಷನ್ ಅರಮನೆಯಲ್ಲಿ ಹೇಗೈಯ ಕೈಗೆ ಅನೇಕ ಕನ್ಯಾಸ್ತ್ರೀಯರು ಕೂಡಿಸಲ್ಪ ಡುವಾಗ ಏನಾಯಿತಂದರೆ, ಎಸ್ತೇರಳು ಅರಸನ ಮನೆಯಲ್ಲಿ ಸ್ತ್ರೀಯರ ಕಾವಲಿನವನಾದ ಹೇಗೈಯ ಕೈಗೆ ಒಪ್ಪಿಸಲ್ಪಟ್ಟಳು. ಆ ಕನ್ನಿಕೆಯು ಅವನ ದೃಷ್ಟಿಗೆ ಉತ್ತಮಳೆಂದು ಕಾಣಿಸಿದ್ದರಿಂದ ಅವನ ಸಮ್ಮುಖದಲ್ಲಿ ಅವಳಿಗೆ ದಯೆದೊರಕಿತು. ಆದಕಾರಣ ಅವನು ತ್ವರೆ ಯಾಗಿ ಶುಚಿಮಾಡುವದಕ್ಕೋಸ್ಕರ ಬೇಕಾದವುಗ ಳನ್ನೂ ಅವಳಿಗೆ ಕೊಡತಕ್ಕವುಗಳನ್ನೂ ಅರಸನ ಮನೆ ಯಿಂದ ಕೊಡತಕ್ಕ ಏಳು ಮಂದಿ ದಾಸಿಯರನ್ನೂ ಅವಳಿಗೆ ಕೊಟ್ಟನು. ಇದಲ್ಲದೆ ಸ್ತ್ರೀಯರ ಮನೆಯಲ್ಲಿ ಉತ್ತಮವಾದ ಸ್ಥಳವನ್ನು ಅವಳಿಗೂ ಅವಳ ದಾಸಿ ಯರಿಗೂ ಕೊಟ್ಟನು. ಆದರೆ ಎಸ್ತೇರಳು ತನ್ನ ಜನರಿಗೂ ತನ್ನ ಬಂಧುಗಳಿಗೂ ತಿಳಿಸದೆ ಇದ್ದಳು. ಯಾಕಂದರೆ ತಿಳಿಸಬಾರದೆಂದು ಮೊರ್ದೆಕೈ ಅವಳಿಗೆ ಆಜ್ಞಾಪಿಸಿದ್ದನು. ಆದರೆ ಎಸ್ತೇರಳ ಕ್ಷೇಮವನ್ನೂ ಅವಳಿಗೆ ಆಗುವಂಥಾದ್ದನ್ನೂ ತಿಳುಕೊಳ್ಳುವದಕ್ಕೆ ಮೊರ್ದೆಕೈ ದಿನಂಪ್ರತಿಯಲ್ಲಿ ಸ್ತ್ರೀಯರ ಮನೆಯ ಅಂಗಳದ ಮುಂದೆ ತಿರುಗಾಡುತ್ತಿದ್ದನು. ಆದರೆ ಒಬ್ಬೊಬ್ಬ ಕನ್ನಿಕೆಯು ಆರು ತಿಂಗಳು ಬೋಳ ತೈಲದಿಂದಲೂ ಆರು ತಿಂಗಳು ಸುಗಂಧಗ ಳಿಂದಲೂ ಸ್ತ್ರೀಯರು ಶುಚಿಮಾಡಿಕೊಳ್ಳತಕ್ಕವುಗ ಳಿಂದಲೂ ಶುಚಿಯಾಗುವ ದಿವಸಗಳನ್ನು ತೀರಿಸಿದರು. ಹೀಗೆಯೇ ಸ್ತ್ರೀಯರ ಮರ್ಯಾದೆಯ ಪ್ರಕಾರ ಹನ್ನೆ ರಡು ತಿಂಗಳಾದ ತರುವಾಯ ಅರಸನಾದ ಅಹಷ್ವೇ ರೋಷನ ಬಳಿಗೆ ಹೋಗಲು ಅವರವರ ಸರದಿ ಬಂತು. ಈ ಪ್ರಕಾರ ಕನ್ಯಾಸ್ತ್ರೀಯು ಅರಸನ ಬಳಿಗೆ ಪ್ರವೇ ಶಿಸುವಾಗ ಸ್ತ್ರೀಯರ ಮನೆಯೊಳಗಿಂದ ತನ್ನ ಸಂಗಡ ಅರಸನ ಮನೆಗೆ ಹೋಗಲು ಅವಳು ಏನು ಬೇಡು ವಳೋ ಅದು ಅವಳಿಗೆ ಕೊಡಲ್ಪಡುವದು. ಅವಳು ಸಾಯಂಕಾಲದಲ್ಲಿ ಪ್ರವೇಶಿಸಿ ಮಾರನೆ ದಿವಸದಲ್ಲಿ ಉಪಪತ್ನಿಗಳ ಕಾವಲಿನವನಾದಂಥ ಅರಸನ ಅಧಿಕಾರಿ ಯಾದಂಥ ಶವಷ್ಗಜನ ಕೈಗೆ ಸ್ತ್ರೀಯರ ಎರಡನೇ ಮನೆಗೆ ತಿರುಗುವಳು. ಅರಸನು ಯಾರಲ್ಲಿ ಸಂತೋಷಪಟ್ಟು ಅವಳನ್ನು ಹೆಸರಿನಿಂದ ಕರೆದರೆ ಹೊರತು ಅವಳು ಇನ್ನು ಮೇಲೆ ಅರಸನ ಬಳಿಯಲ್ಲಿ ಪ್ರವೇಶಿಸದೆ ಇರುವಳು. ತನ್ನ ಕುಮಾರ್ತೆಯಾಗಿ ತೆಗೆದುಕೊಂಡಂಥ ಮೊರ್ದೆಕೈಯ ಚಿಕ್ಕಪ್ಪನಾದ ಅಬೀಹೈಲನ ಮಗಳಾದ ಎಸ್ತೇರಳು ಅರಸನ ಬಳಿಗೆ ಹೋಗಲು ಸರದಿ ಬಂದಾಗ ಅವಳು ಸ್ತ್ರೀಯರ ಕಾವಲುಗಾರನಾದಂಥ ಅರಸನ ಮನೆವಾರ್ತೆಯವನಾದಂಥ ಹೇಗೈ ನೇಮಿಸಿದವುಗಳ ಹೊರತಾಗಿ ಮತ್ತೇನೂ ಬೇಡಲಿಲ್ಲ. ಇದಲ್ಲದೆ ಎಸ್ತೇರಳು ತನ್ನನ್ನು ನೋಡುವ ಎಲ್ಲರಿಂದ ದಯೆಹೊಂದಿದ್ದಳು. ಎಸ್ತೇರಳು ಅರಸನಾದ ಅಹಷ್ವೇರೋಷನ ಆಳಿಕೆಯ ಏಳನೇ ವರುಷದ ಹತ್ತನೇ ತಿಂಗಳಿನ ತೇಬೆತ್ ಎಂಬ ದಿವಸದಲ್ಲಿ ಅವನ ಅರಮನೆಯಲ್ಲಿ ತರಲ್ಪಟ್ಟಳು.
- Exodus 2:15 ವಿಮೋಚನಕಾಂಡ 2:15ಫರೋಹನು ಈ ಮಾತುಗಳನ್ನು ಕೇಳಿ ಮೋಶೆ ಯನ್ನು ಕೊಲ್ಲಲು ಹುಡುಕಿದನು. ಆದರೆ ಮೋಶೆಯು ಫರೋಹನ ಎದುರಿನಿಂದ ಓಡಿಹೋಗಿ ಮಿದ್ಯಾನ್ ದೇಶದಲ್ಲಿದ್ದು ಒಂದು ಬಾವಿಯ ಬಳಿಯಲ್ಲಿ ಕೂತು ಕೊಂಡನು.
- Proverbs 6:29 ಜ್ಞಾನೋಕ್ತಿಗಳು 6:29ತನ್ನ ನೆರೆಯವನ ಹೆಂಡತಿಯನ್ನು ಕೂಡುವವನು ಹೀಗೆಯೇ ಇರುವನು; ಅವಳನ್ನು ಮುಟ್ಟುವ ಯಾವನೂ ನಿರಪ ರಾಧಿಯಾಗಿ ಇರನು.
- Genesis 40:2 ಆದಿಕಾಂಡ 40:2ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿ ಕೊಂಡು
- Hebrews 13:4 ಇಬ್ರಿಯರಿಗೆ 13:4ವಿವಾಹವು ಎಲ್ಲಾದರಲ್ಲಿ ಗೌರವವಾದದ್ದೂ ಹಾಸಿಗೆಯು ನಿಷ್ಕಳಂಕವಾದದ್ದೂ ಆಗಿದೆ. ಆದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನು.
- 1 Kings 3:1 1 ಅರಸುಗಳು 3:1ಸೊಲೊಮೋನನು ಐಗುಪ್ತದ ಅರಸ ನಾದ ಫರೋಹನ ಸಂಗಡ ಬಂಧುತ್ವ ಮಾಡಿ ಫರೋಹನ ಮಗಳನ್ನು ತಕ್ಕೊಂಡನು. ಅವನು ತನ್ನ ಮನೆಯನ್ನೂ ಕರ್ತನ ಆಲಯವನ್ನೂ ಯೆರೂಸ ಲೇಮಿಗೆ ಸುತ್ತಲೂ ಗೋಡೆಯನ್ನೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.
- Psalm 105:4 ಕೀರ್ತನೆಗಳು 105:4ಕರ್ತನನ್ನೂ ಆತನ ಬಲವನ್ನೂ ಹುಡುಕಿರಿ. ಆತನ ಮುಖ ವನ್ನು ಯಾವಾಗಲೂ ಹುಡುಕಿರಿ.
- 2 Kings 18:21 2 ಅರಸುಗಳು 18:21ನೀನು ನನಗೆ ವಿರೋಧವಾಗಿ ತಿರುಗಿ ಬೀಳು ವದಕ್ಕೆ ಯಾರಲ್ಲಿ ಭರವಸ ಇಟ್ಟಿದ್ದೀ? ಇಗೋ, ನೀನು ಮುರಿದ ಬೆತ್ತದ ಕೋಲಾದ ಐಗುಪ್ತದ ಮೇಲೆ ಭರ ವಸವಾಗಿದ್ದೀ. ಅದರ ಮೇಲೆ ಮನುಷ್ಯನು ಊರಿ ಕೊಂಡರೆ ಅದು ಅವನ ಕೈಯಲ್ಲಿ ಹೊಕ್ಕು ಚುಚ್ಚುವದು. ಐಗುಪ್ತದ ಅರಸನಾದ ಫರೋಹನು ತನ್ನಲ್ಲಿ ಭರವಸ ವಾಗಿರುವ ಎಲ್ಲರಿಗೂ ಹೀಗೆಯೇ ಇದ್ದಾನೆ.