Genesis · chapter 19 · verse 13
Genesis 19:13 in Kannada
ಈ ಸ್ಥಳದವರ ಕೂಗು ಕರ್ತನ ಸನ್ನಿಧಿಯಲ್ಲಿ ದೊಡ್ಡದಾಗಿರುವದರಿಂದ ನಾವು ಇದನ್ನು ನಾಶಮಾಡುತ್ತೇವೆ; ಕರ್ತನು ಅದನ್ನು ನಾಶಮಾಡುವದಕ್ಕೆ ನಮ್ಮನ್ನು ಕಳುಹಿಸಿದ್ದಾನೆ ಅಂದರು.
Ee sthaladavara koogu kartana sannidhiyalli doddadaagiruvadarinda naavu idannu naashamaadutteve; kartanu adannu naashamaaduvadakke nammannu kaluhisiddaane andaru.
Genesis 19:13 in English
- King James Version (KJV)
- For we will destroy this place, because the cry of them is waxen great before the face of the LORD; and the LORD hath sent us to destroy it.
- World English Bible (WEB)
- for we will destroy this place, because the outcry against them has grown so great before the LORD that the LORD has sent us to destroy it.”
- American Standard Version (ASV)
- for we will destroy this place, because the cry of them is waxed great before Jehovah; and Jehovah hath sent us to destroy it.
- Bible in Basic English (BBE)
- For we are about to send destruction on this place, because a great outcry against them has come to the ears of the Lord; and the Lord has sent us to put an end to the town.
- Darby Translation (DBY)
- For we are going to destroy this place, because the cry of them is great before Jehovah, and Jehovah has sent us to destroy it.
- Webster's Bible (WBS)
- For we will destroy this place, because the cry of them has become great before the face of the LORD; and the LORD hath sent us to destroy it.
- Young's Literal Translation (YLT)
- for we are destroying this place, for their cry hath been great [before] the face of Jehovah, and Jehovah doth send us to destroy it.'
Read in context
- 11ಬಾಗಲಲ್ಲಿದ್ದ ಮನುಷ್ಯರನ್ನು ಕಿರಿಯರಿಂದ ಹಿರಿಯರ ವರೆಗೆ ಕುರುಡರನ್ನಾಗಿ ಮಾಡಿದರು. ಆಗ ಅವರು ಬಾಗಲನ್ನು ಕಂಡುಕೊಳ್ಳಲಾರದೆ ಬೇಸರಗೊಂಡರು.
- 12ಆ ಮನುಷ್ಯರು ಲೋಟನಿಗೆ--ಇಲ್ಲಿ ನಿನಗೆ ಇನ್ನು ಯಾರಾದರೂ ಇದ್ದಾರೋ? ಅಳಿಯಂದಿರನ್ನೂ ಕುಮಾರರನ್ನೂ ನಿನ್ನ ಕುಮಾರ್ತೆಯರನ್ನೂ ಮತ್ತು ಪಟ್ಟಣದಲ್ಲಿ ನಿನಗಿರುವ ಎಲ್ಲವನ್ನೂ ಈ ಸ್ಥಳದಿಂದ ಹೊರಗೆ ತೆಗೆದುಕೊಂಡು ಬಾ.
- 13ಈ ಸ್ಥಳದವರ ಕೂಗು ಕರ್ತನ ಸನ್ನಿಧಿಯಲ್ಲಿ ದೊಡ್ಡದಾಗಿರುವದರಿಂದ ನಾವು ಇದನ್ನು ನಾಶಮಾಡುತ್ತೇವೆ; ಕರ್ತನು ಅದನ್ನು ನಾಶಮಾಡುವದಕ್ಕೆ ನಮ್ಮನ್ನು ಕಳುಹಿಸಿದ್ದಾನೆ ಅಂದರು.
- 14ಆಗ ಲೋಟನು ಹೊರಟುಹೋಗಿ ತನ್ನ ಕುಮಾರ್ತೆಯರು ಮದುವೆಯಾದ ಅಳಿಯಂದಿರ ಸಂಗಡ ಮಾತನಾಡಿ--ಎದ್ದು ಈ ಸ್ಥಳದಿಂದ ಹೊರಡಿರಿ; ಯಾಕಂದರೆ ಕರ್ತನು ಈ ಪಟ್ಟಣವನ್ನು ನಾಶ ಮಾಡುವದಕ್ಕಿದ್ದಾನೆ ಅಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಅಪಹಾಸ್ಯ ಮಾಡುವಂತೆ ಕಾಣಿಸಿಕೊಂಡನು.
- 15ಸೂರ್ಯೋದಯವಾದಾಗ ದೂತರು ಲೋಟನನ್ನು ತ್ವರೆಪಡಿಸಿ--ನೀನು ಈ ಪಟ್ಟಣದ ದುಷ್ಟತನದಿಂದ ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಇಬ್ಬರು ಕುಮಾರ್ತೆಯರನ್ನೂ ಕರಕೊಂಡು ನಡೆ ಅಂದರು.
Cross references
- Genesis 18:20 ಆದಿಕಾಂಡ 18:20ಕರ್ತನು--ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿರುವದರಿಂದಲೂ ಅವರ ಪಾಪವು ಘೋರವಾಗಿರುವದರಿಂದಲೂ
- Acts 12:23 ಅಪೊಸ್ತಲರ ಕೃತ್ಯಗಳು 12:23ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.
- Matthew 13:49–50 ಮತ್ತಾಯನು 13:49–50ಹಾಗೆಯೇ ಲೋಕಾಂತ್ಯ ದಲ್ಲಿ ಇರುವದು; ದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸುವರು. ಮತ್ತು ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು ಎಂದು ಹೇಳಿದನು.
- Jude 1:7 ಯೂದನು 1:7ಸೊದೋಮ ಗೊಮೋರ ದವರೂ ಹಾಗೆಯೇ ಅವುಗಳ ಸುತ್ತುಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಅನ್ಯ ಶರೀರವನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ಪ್ರತಿದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲ್ಪಟ್ಟಿದ್ದಾರೆ.
- Revelation 16:1–12 ಪ್ರಕಟನೆ 16:1–12ಆಗ ಆಲಯದಿಂದ ಬಂದ ಮಹಾಶಬ್ದ ವನ್ನು ಕೇಳಿದೆನು. ಅದು ಆ ಏಳು ಮಂದಿ ದೂತರಿಗೆ--ನೀವು ಹೋಗಿ ಆ ಪಾತ್ರೆಗಳ ಲ್ಲಿರುವ ದೇವರ ರೌದ್ರವನ್ನು ಭೂಮಿಯ ಮೇಲೆ ಹೊಯ್ಯಿರಿ ಎಂದು ಹೇಳಿತು. ಆಗ ಮೊದಲನೆಯವನು ಹೊರಟು ತನ್ನ ಪಾತ್ರೆ ಯಲ್ಲಿದ್ದದ್ದನ್ನು ಭೂಮಿಯ ಮೇಲೆ ಹೊಯಿದನು; ಆಗ ಮೃಗದ ಗುರುತನ್ನು ಹೊಂದಿ ಅದರ ವಿಗ್ರಹಕ್ಕೆ ಆರಾಧನೆ ಮಾಡಿದ ಮನುಷ್ಯರ ಮೇಲೆ ಕೊಳೆಯುವ ಘೋರವಾದ ಹುಣ್ಣು ಎದ್ದಿತು. ಎರಡನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸಮುದ್ರದ ಮೇಲೆ ಹೊಯಿದಾಗ ಅದು ಸತ್ತವನ ರಕ್ತದ ಹಾಗಾಯಿತು; ಸಮುದ್ರದಲ್ಲಿ ಬದುಕುವ ಪ್ರತಿಯೊಂದು ಪ್ರಾಣಿಯು ಸತ್ತಿತು. ಮೂರನೆಯ ದೂತನು ತನ್ನ ಪಾತ್ರೆಯಲ್ಲಿ ದ್ದದ್ದನ್ನು ನದಿಗಳ ಮೇಲೆಯೂ ನೀರಿನ ಬುಗ್ಗೆಗಳ ಮೇಲೆಯೂ ಹೊಯಿದನು; ಅವುಗಳ ನೀರು ರಕ್ತವಾಯಿತು. ಅಮೇಲೆ ಜಲಗಳ ದೂತನು--ಓ ಕರ್ತನೇ, ನೀನು ಇರುವಾತನೂ ಇದ್ದಾತನೂ ಬರುವಾತನೂ ಆಗಿರುವದರಿಂದ ನೀನು ಹೀಗೆ ತೀರ್ಪು ಮಾಡಿದ್ದರಲ್ಲಿ ನೀತಿ ಸ್ವರೂಪನಾಗಿದ್ದೀ. ಅವರು ಪರಿಶುದ್ಧರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ನಾನು ಕೇಳಿದೆನು. ಆಮೇಲೆ ಯಜ್ಞವೇದಿಯೊಳಗಿಂದ ಮತ್ತೊಬ್ಬನು--ಹೌದು, ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ ಎಂದು ಹೇಳುವದನ್ನು ನಾನು ಕೇಳಿದೆನು. ನಾಲ್ಕನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸೂರ್ಯನ ಮೇಲೆ ಹೊಯಿದನು. ಆಗ ಸೂರ್ಯ ನಿಗೆ ಬೆಂಕಿಯಿಂದ ಮನುಷ್ಯರನ್ನು ಕಂದಿಸುವ ಶಕ್ತಿಯು ಕೊಡಲ್ಪಟ್ಟಿತು. ಮನುಷ್ಯರು ಬಲವಾದ ಕಾವಿನಿಂದ ಕಂದಿಹೋದರೂ ಅವರು ದೇವರನ್ನು ಘನಪಡಿಸುವ ಹಾಗೆ ಮಾನಸಾಂತರ ಮಾಡಿಕೊಳ್ಳದೆ ಈ ಉಪದ್ರವ ಗಳ ಮೇಲೆ ಅಧಿಕಾರವುಳ್ಳ ದೇವರ ನಾಮವನ್ನು ದೂಷಿಸಿದರು. ಐದನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಮೃಗದ ಆಸನದ ಮೇಲೆ ಹೊಯ್ಯಲು ಅದರ ರಾಜ್ಯವು ತುಂಬಾ ಕತ್ತಲಾಯಿತು; ಜನರು ತಮಗಾದ ನೋವಿನ ದೆಸೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು ತಮ್ಮ ಕೃತ್ಯಗಳ ವಿಷಯದಲ್ಲಿ ಮಾನಸಾಂತರ ಮಾಡಿ ಕೊಳ್ಳದೆ ತಮ್ಮ ನೋವಿನ ದೆಸೆಯಿಂದಲೂ ಹುಣ್ಣುಗಳ ದೆಸೆಯಿಂದಲೂ ಪರಲೋಕದೇವರನ್ನು ದೂಷಿಸಿದರು. ಆರನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಹೊಯ್ಯಲು ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಬತ್ತಿ ಹೋಯಿತು.
- Matthew 13:41–42 ಮತ್ತಾಯನು 13:41–42ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿ ಸುವನು; ಅವರು ಆತಂಕ ಮಾಡುವ ಎಲ್ಲವುಗಳನ್ನೂ ದುಷ್ಟತನ ಮಾಡುವವರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
- James 5:4 ಯಾಕೋಬನು 5:4ಇಗೋ, ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿ ದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ; ಕೊಯಿದವರ ಕೂಗು ಸೈನ್ಯಗಳ ಕರ್ತನ ಕಿವಿಗಳಲ್ಲಿ ಬಿದ್ದಿದೆ.
- Romans 3:8–9 ರೋಮಾಪುರದವರಿಗೆ 3:8–9(ದೂಷಿಸಲ್ಪಡುವ ಪ್ರಕಾರವಾಗಿ ಯೂ ನಾವು ಹೇಳುತ್ತೇವೆಂದು ಕೆಲವರು ಅನ್ನುವ ಪ್ರಕಾರವಾಗಿಯೂ)--ಒಳ್ಳೆಯದು ಬರುವ ಹಾಗೆ ನಾವು ಕೆಟ್ಟದ್ದನ್ನು ಮಾಡೋಣವೇ? ಅಂಥವರ ದಂಡ ನೆಯು ನ್ಯಾಯವಾಗಿದೆ. ಹಾಗಾದರೆ ಏನು? ನಾವು ಅವರಿಗಿಂತಲೂ ಉತ್ತಮರಾಗಿದ್ದೇವೋ? ಇಲ್ಲವೇ ಇಲ್ಲ; ಯಾಕಂದರೆ ಯೆಹೂದ್ಯರೂ ಅನ್ಯಜನರೂ ಎಲ್ಲರೂ ಪಾಪಕ್ಕೊಳಗಾಗಿದ್ದಾರೆಂದು ಮೊದಲೇ ನಾವು ಸ್ಥಾಪಿಸಿ ದ್ದೇವಲ್ಲಾ.
- Isaiah 36:10 ಯೆಶಾಯ 36:10ಈ ದೇಶವನ್ನು ಹಾಳುಮಾಡು ವದಕ್ಕೆ ಕರ್ತನಿಲ್ಲದೆ ನಾನು ಬಂದಿದ್ದೇನೋ? ಈ ದೇಶಕ್ಕೆ ವಿರೋಧವಾಗಿ ಬಂದು ಅದನ್ನು ಹಾಳುಮಾಡಿ ಬಿಡು ಎಂದು ಕರ್ತನೇ ನನಗೆ ಆಜ್ಞಾಪಿಸಿದನು ಎನ್ನುವದು.
- Genesis 13:13 ಆದಿಕಾಂಡ 13:13ಆದರೆ ಸೊದೋಮಿನ ಮನುಷ್ಯರು ದುಷ್ಟರೂ ಕರ್ತನ ದೃಷ್ಟಿಯಲ್ಲಿ ಬಹು ಪಾಪಿಷ್ಠರೂ ಆಗಿದ್ದರು.
- Isaiah 37:36 ಯೆಶಾಯ 37:36ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.
- 1 Chronicles 21:15–16 1 ಪೂರ್ವಕಾಲವೃತ್ತಾಂತ 21:15–16ಇದ ಲ್ಲದೆ ಯೆರೂಸಲೇಮನ್ನು ನಾಶಮಾಡುವದಕ್ಕೆ ದೇವರು ದೂತನನ್ನು ಕಳುಹಿಸಿದನು. ಅವನು ನಾಶಮಾಡು ವದನ್ನು ಕರ್ತನು ನೋಡಿ ಆ ಕೇಡಿಗೋಸ್ಕರ ಪಶ್ಚಾ ತ್ತಾಪಪಟ್ಟು ನಾಶಮಾಡುವ ದೂತನಿಗೆ--ಸಾಕು; ನಿನ್ನ ಕೈಯನ್ನು ಹಿಂದೆಗೆ ಅಂದನು. ಆದರೆ ಕರ್ತನ ದೂತನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ನಿಂತಿದ್ದನು. ಆಗ ದಾವೀದನು ತನ್ನ ಕಣ್ಣುಗಳನ್ನೆತ್ತಿ ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ನಿಂತಿರುವ ಕರ್ತನ ದೂತನನ್ನು ಕಂಡನು; ಅವನ ಕೈಯಲ್ಲಿ ಯೆರೂಸ ಲೇಮಿನ ಮೇಲೆ ಚಾಚಿದ್ದ ಬಿಚ್ಚುಕತ್ತಿ ಇತ್ತು. ಆಗ ದಾವೀದನೂ ಇಸ್ರಾಯೇಲಿನ ಹಿರಿಯರೂ ಗೋಣೀ ತಟ್ಟುಗಳಿಂದ ಮುಚ್ಚಿಕೊಂಡವರಾಗಿ ಮೋರೆ ಕೆಳಗಾಗಿ ಬಿದ್ದರು.