Genesis · chapter 2 · verse 1
Genesis 2:1 in Kannada
ಹೀಗೆ ಆಕಾಶಗಳೂ ಭೂಮಿಯೂ ಅವುಗಳ ಸಮಸ್ತ ಸಮೂಹವೂ ಸಂಪೂರ್ಣ ವಾದವು.
Heege aakaashagaloo bhoomiyoo avugala samasta samoohavoo sampoorna vaadavu.
Genesis 2:1 in English
- King James Version (KJV)
- Thus the heavens and the earth were finished, and all the host of them.
- World English Bible (WEB)
- The heavens, the earth, and all their vast array were finished.
- American Standard Version (ASV)
- And the heavens and the earth were finished, and all the host of them.
- Bible in Basic English (BBE)
- And the heaven and the earth and all things in them were complete.
- Darby Translation (DBY)
- And the heavens and the earth and all their host were finished.
- Webster's Bible (WBS)
- Thus the heavens and the earth were finished, and all the host of them.
- Young's Literal Translation (YLT)
- And the heavens and the earth are completed, and all their host;
Read in context
- 1ಹೀಗೆ ಆಕಾಶಗಳೂ ಭೂಮಿಯೂ ಅವುಗಳ ಸಮಸ್ತ ಸಮೂಹವೂ ಸಂಪೂರ್ಣ ವಾದವು.
- 2ಏಳನೆಯ ದಿನದಲ್ಲಿ ದೇವರು ತಾನು ಮಾಡಿದ್ದ ತನ್ನ ಕೆಲಸವನ್ನು ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ತಾನು ಮಾಡಿದ್ದ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು.
- 3ದೇವರು ಏಳನೆಯ ದಿನವನ್ನು ಆಶೀರ್ವದಿಸಿ ಅದನ್ನು ಪವಿತ್ರಮಾಡಿದನು; ಯಾಕಂ ದರೆ ಆ ದಿನದಲ್ಲಿ ತಾನು ಸೃಷ್ಟಿಸಿದ ಮತ್ತು ಮಾಡಿದ ತನ್ನ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು.
Cross references
- Exodus 31:17 ವಿಮೋಚನಕಾಂಡ 31:17ನನಗೂ ಇಸ್ರಾಯೇಲ್ ಮಕ್ಕ ಳಿಗೂ ಇದೇ ಶಾಶ್ವತವಾದ ಗುರುತು. ಯಾಕಂದರೆ ಆರು ದಿವಸಗಳಲ್ಲಿ ಕರ್ತನು ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿ ಕೊಂಡು ಉಲ್ಲಾಸಗೊಂಡನು ಎಂದು ಹೇಳು ಅಂದನು.ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.
- Exodus 20:11 ವಿಮೋಚನಕಾಂಡ 20:11ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
- Psalm 33:6 ಕೀರ್ತನೆಗಳು 33:6ಕರ್ತನ ವಾಕ್ಯ ದಿಂದ ಆಕಾಶವೂ ಆತನ ಬಾಯಿಯ ಉಸುರಿನಿಂದ ಅದರ ಸೈನ್ಯವೆಲ್ಲವೂ ಉಂಟಾದವು.
- Isaiah 45:18 ಯೆಶಾಯ 45:18ಆಕಾಶಗಳನ್ನು ನಿರ್ಮಿಸಿದ ಕರ್ತನು ಇಂತೆನ್ನು ತ್ತಾನೆ--ದೇವರು ತಾನೇ ಭೂಮಿಯನ್ನು ನಿರ್ಮಿಸಿ ಅದನ್ನು ಉಂಟು ಮಾಡಿದನು. ಆತನೇ ಅದನ್ನು ಸ್ಥಾಪಿಸಿದನು; ಅದನ್ನು ವ್ಯರ್ಥವಾಗಿ ಸೃಷ್ಟಿಸದೇ ಜನ ನಿವಾಸಕ್ಕಾಗಿಯೇ ರೂಪಿಸಿದನು; ನಾನೇ ಕರ್ತನು, ಮತ್ತೊಬ್ಬನಿಲ್ಲ.
- Genesis 1:1 ಆದಿಕಾಂಡ 1:1ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.
- Isaiah 42:5 ಯೆಶಾಯ 42:5ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನು ಅದರಿಂದ ಉತ್ಪತ್ತಿ ಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ ಸಂಚರಿಸುವವರಿಗೆ ಆತ್ಮವನ್ನು ಕೊಡು ತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ--
- 2 Kings 19:15 2 ಅರಸುಗಳು 19:15ಇದಲ್ಲದೆ ಹಿಜ್ಕೀಯನು ಕರ್ತನ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಕೆರೂಬಿಗಳ ಮಧ್ಯದಲ್ಲಿ ವಾಸ ವಾಗಿರುವ ಇಸ್ರಾಯೇಲಿನ ದೇವರಾದ ಕರ್ತನೇ, ನೀನೊಬ್ಬನೇ ಭೂಮಿಯ ಎಲ್ಲಾ ರಾಜ್ಯಗಳಿಗೆ ದೇವ ರಾಗಿದ್ದೀ.
- Isaiah 45:12 ಯೆಶಾಯ 45:12ನಾನು ಭೂಮಿಯನ್ನು ಉಂಟುಮಾಡಿ, ಅದರ ಮೇಲೆ ಮನು ಷ್ಯನನ್ನು ಸೃಷ್ಟಿಸಿದೆನು; ನನ್ನ ಕೈಗಳೇ ಆಕಾಶಗಳನ್ನು ವಿಸ್ತರಿಸಿದವು ಮತ್ತು ನಾನು ಅದರ ಸೈನ್ಯಕ್ಕೆಲ್ಲಾ ಅಪ್ಪಣೆ ಕೊಟ್ಟೆನು.
- Psalm 146:6 ಕೀರ್ತನೆಗಳು 146:6ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದಾತನೇ ಎಂದೆಂದಿಗೂ ವಾಗ್ದಾನ ನೆರವೇರಿಸುತ್ತಾನೆ.
- Psalm 89:11–13 ಕೀರ್ತನೆಗಳು 89:11–13ಆಕಾಶಗಳು ನಿನ್ನವು; ಭೂಮಿಯು ಸಹ ನಿನ್ನದು; ಲೋಕವನ್ನೂ ಅದರ ಪೂರ್ಣತೆಯನ್ನೂ ನೀನು ಉಂಟುಮಾಡಿದ್ದೀ. ಉತ್ತರವನ್ನೂ ದಕ್ಷಿಣವನ್ನೂ ನೀನೇ ನಿರ್ಮಿಸಿದ್ದೀ; ತಾಬೋರೂ ಹೆರ್ಮೋನೂ ನಿನ್ನ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ. ನಿನಗೆ ಪರಾಕ್ರಮವುಳ್ಳ ತೋಳು ಉಂಟು; ಕೈ ಬಲವುಳ್ಳದ್ದು. ನಿನ್ನ ಬಲಗೈ ಉನ್ನತವಾ ದದ್ದು.
- 2 Chronicles 2:12 2 ಪೂರ್ವಕಾಲವೃತ್ತಾಂತ 2:12ಇದಲ್ಲದೆ ಹಿರಾಮನು ಕರ್ತ ನಿಗೋಸ್ಕರ ಮನೆಯನ್ನೂ ತನ್ನ ರಾಜ್ಯಕ್ಕೋಸ್ಕರ ಮನೆ ಯನ್ನೂ ಕಟ್ಟಿಸುವದಕ್ಕೆ ಅರಸನಾದ ದಾವೀದನಿಗೆ ಜ್ಞಾನವುಳ್ಳಂಥ ಬುದ್ಧಿಯನ್ನು ಗ್ರಹಿಕೆಯನ್ನು ತಿಳು ಕೊಂಡಂಥ ಮಗನನ್ನು ಕೊಟ್ಟು, ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿದ ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿಸಲ್ಪಡಲಿ.
- Psalm 33:9 ಕೀರ್ತನೆಗಳು 33:9ಆತನು ಹೇಳಲು ಆಯಿತು; ಆಜ್ಞಾಪಿಸಲು ಅದು ಸ್ಥಿರವಾಯಿತು.