Genesis · chapter 23 · verse 20
Genesis 23:20 in Kannada
ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು.
Aa holavoo adara lliruva gaviyoo hetana makkalinda abrahaamanige svanta samaadhiya svaasthyavaagi sthiramaadalpattitu.
Genesis 23:20 in English
- King James Version (KJV)
- And the field, and the cave that [is] therein, were made sure unto Abraham for a possession of a buryingplace by the sons of Heth.
- World English Bible (WEB)
- The field, and the cave that is in it, were deeded to Abraham by the children of Heth as a possession for a burial place.
- American Standard Version (ASV)
- And the field, and the cave that is therein, were made sure unto Abraham for a possession of a burying-place by the children of Heth.
- Bible in Basic English (BBE)
- And the field and the hollow rock were handed over to Abraham as his property by the children of Heth.
- Darby Translation (DBY)
- And the field and the cave that was in it were assured to Abraham for a possession of a sepulchre by the sons of Heth.
- Webster's Bible (WBS)
- And the field, and the cave that [is] in it were made sure to Abraham for a possession of a burying-place, by the sons of Heth.
- Young's Literal Translation (YLT)
- and established are the field, and the cave which [is] in it, to Abraham for a possession of a burying-place, from the sons of Heth.
Read in context
- 18ಹೇತನ ಮಕ್ಕಳ ಮುಂದೆಯೂ ಅವನ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ಸ್ಥಿರಮಾಡಲ್ಪಟ್ಟಿತು.
- 19ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಯಾದ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಹೊಲದ ಗವಿಯಲ್ಲಿ ಹೂಣಿಟ್ಟನು.ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು.
- 20ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು.
Cross references
- Ruth 4:7–10 ರೂತಳು 4:7–10ನಾನು ಬಿಡಿಸಿಕೊಳ್ಳಲಾರೆನು ಅಂದನು. ಬಿಡಿಸಿಕೊಳ್ಳು ವದರಲ್ಲಿಯೂ ಬದಲು ಮಾಡುವದರಲ್ಲಿಯೂ ಸಕಲ ಕಾರ್ಯಗಳೂ ದೃಢವಾಗುವ ಹಾಗೆ ಇಸ್ರಾಯೇಲಿನಲ್ಲಿ ಪೂರ್ವದವಾಡಿಕೆ ಏನಂದರೆ, ಒಬ್ಬನು ತನ್ನ ಕೆರವನ್ನು ತೆಗೆದು ತನ್ನ ನೆರೆಯವನಿಗೆ ಕೊಡುವನು. ಇದು ಇಸ್ರಾಯೇಲಿನಲ್ಲಿ ಸಾಕ್ಷಿಗಾದದ್ದು. ಹಾಗೆಯೇ ಆ ಬಂಧುವು ಬೋವಜನಿಗೆ--ನೀನು ನಿನಗೋಸ್ಕರ ಅದನ್ನು ಕೊಂಡುಕೋ ಎಂದು ತನ್ನ ಕೆರವನ್ನು ತೆಗೆದು ಹಾಕಿದನು. ಆಗ ಬೋವಜನು ಹಿರಿಯರಿಗೂ ಸಮಸ್ತ ಜನ ರಿಗೂ ನಾನು ಎಲೀಮೆಲೆಕನಿಗೆ ಇದ್ದ ಎಲ್ಲವನ್ನೂ ಕಿಲ್ಯೋನನಿಗೂ ಮಹ್ಲೋನನಿಗೂ ಇದ್ದ ಎಲ್ಲವನ್ನೂ ನೊವೊಮಿಯ ಕೈಯಿಂದ ಕೊಂಡುಕೊಂಡೆನು ಎಂಬ ದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. ಇದಲ್ಲದೆ ಸತ್ತವನ ಸಹೋದರರಿಂದಲೂ ಅವನ ಸ್ಥಳದ ಬಾಗಲದಿಂದಲೂ ಅವನ ಹೆಸರು ಕಡಿದು ಹಾಕಲ್ಪಡದ ಹಾಗೆ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡಲು ನಾನು ಮಹ್ಲೋನನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನಗೆ ಹೆಂಡತಿಯಾಗಿ ಕೊಂಡುಕೊಂಡೆನು.
- Jeremiah 32:10–14 ಯೆರೆಮೀಯ 32:10–14ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆ ಹಾಕಿ, ಸಾಕ್ಷಿಗಳನ್ನಿಟ್ಟು ಬೆಳ್ಳಿಯನ್ನು ತ್ರಾಸಿನಲ್ಲಿ ತೂಕ ಮಾಡಿ ದೆನು. ಆಗ ನಾನು ಆಜ್ಞೆ ನಿಯಮಗಳ ಪ್ರಕಾರ ಮುದ್ರೆ ಹಾಕಿದ ಕ್ರಯಪತ್ರವನ್ನೂ ತೆರೆದಿರುವದನ್ನೂ ತಕ್ಕೊಂಡೆನು. ಆ ಕ್ರಯಪತ್ರವನ್ನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆಯೂ ಕ್ರಯಪತ್ರ ದಲ್ಲಿ ರುಜು ಹಾಕಿದ ಸಾಕ್ಷಿಗಳ ಮುಂದೆಯೂ ಸೆರೆ ಮನೆಯ ಅಂಗಳದಲ್ಲಿ ಕೂತುಕೊಂಡಿದ್ದ ಯೆಹೂದ್ಯ ರೆಲ್ಲರ ಮುಂದೆಯೂ ಮಹ್ಸೇಮನ ಮಗನಾದ ನೇರೀ ಯನ ಮಗನಾದ ಬಾರೂಕನಿಗೆ ಕೊಟ್ಟೆನು. ಅವರ ಮುಂದೆ ನಾನು ಬಾರೂಕನಿಗೆ ಅಪ್ಪಣೆ ಕೊಟ್ಟದ್ದೇ ನಂದರೆ-- ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಈ ಪತ್ರಗಳನ್ನು ಅಂದರೆ ಮುದ್ರೆ ಹಾಕಿದ ಈ ಕ್ರಯಪತ್ರವನ್ನೂ ತೆರೆದಿರುವ ಈ ಪತ್ರವನ್ನೂ ತೆಗೆದು ಅವು ಬಹಳ ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.
- Genesis 50:24–25 ಆದಿಕಾಂಡ 50:24–25ಇದಲ್ಲದೆ ಯೋಸೇಫನು ತನ್ನ ಸಹೋದ ರರಿಗೆ--ನಾನು ಸತ್ತ ಮೇಲೆ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದೊಳಗಿಂದ ತಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣ ಮಾಡಿದ ದೇಶಕ್ಕೆ ಹೋಗಮಾಡುವನು ಅಂದನು. ಯೋಸೇಫನು ಇಸ್ರಾಯೇಲನ ಮಕ್ಕಳಿಗೆ--ದೇವರು ನಿಮ್ಮನ್ನು ನಿಶ್ಚಯವಾಗಿ ದರ್ಶಿಸುವನು. ಆಗ ನನ್ನ ಎಲುಬುಗಳನ್ನು ಇಲ್ಲಿಂದ ತಕ್ಕೊಂಡು ಹೋಗಬೇಕೆಂದು ಪ್ರಮಾಣ ಮಾಡಿಸಿದನು.ಯೋಸೇಫನು ನೂರ ಹತ್ತು ವರುಷದವನಾಗಿ ಸತ್ತನು. ಅವರು ಅವನಿಗೆ ಸುಗಂಧದ್ರವ್ಯವನ್ನು ಹಾಕಿ ಐಗುಪ್ತದಲ್ಲಿ ಪೆಟ್ಟಿಗೆ ಯೊಳೆಗೆ ಇಟ್ಟರು.
- Genesis 50:13 ಆದಿಕಾಂಡ 50:13ಅವನ ಕುಮಾರರು ಅವನನ್ನು ಕಾನಾನ್ ದೇಶಕ್ಕೆ ತಕ್ಕೊಂಡು ಹೋಗಿ ಅಬ್ರಹಾಮನು ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನಿ ನಿಂದ ಕೊಂಡುಕೊಂಡಿದ್ದ ಮಮ್ರೆಗೆ ಎದುರಾಗಿರುವ ಮಕ್ಪೇಲ ಹೊಲದ ಗವಿಯಲ್ಲಿ ಹೂಣಿಟ್ಟರು.
- 2 Samuel 24:24 2 ಸಮುವೇಲನು 24:24ಆದರೆ ಅರಸನು ಅರೌನನಿಗೆ--ಹಾಗಲ್ಲ; ನಿಶ್ಚಯವಾಗಿ ನಿನ್ನಿಂದ ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ; ಉಚಿತವಾಗಿ ಬಂದ ದಹನ ಬಲಿಗಳನ್ನು ನನ್ನ ದೇವರಾದ ಕರ್ತನಿಗೆ ಅರ್ಪಿ ಸೆನು ಅಂದನು. ಹೀಗೆ ದಾವೀದನು ಆ ಕಣವನ್ನೂ ಎತ್ತುಗಳನ್ನೂ ಐವತ್ತು ಶೇಕೆಲ್ ಬೆಳ್ಳಿಗೆ ಕೊಂಡು ಕೊಂಡನು.ಆಗ ದಾವೀದನು ಕರ್ತನಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು. ಹೀಗೆ ಕರ್ತನು ದೇಶಕ್ಕೋಸ್ಕರ ಬಿನ್ನಹವನ್ನು ಕೇಳಿದ್ದರಿಂದ ಇಸ್ರಾ ಯೇಲಿನ ಕಡೆಯಿಂದ ಆ ಬಾಧೆಯು ನಿಂತಿತು.
- Genesis 25:9 ಆದಿಕಾಂಡ 25:9ಅವನ ಕುಮಾರರಾದ ಇಸಾಕನೂ ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯ ನಾದ ಚೋಹರನ ಮಗನಾದ ಎಫ್ರೋನನ ಹೊಲ ದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಣಿಟ್ಟರು.
- 2 Kings 21:18 2 ಅರಸುಗಳು 21:18ಮನಸ್ಸೆಯು ತನ್ನ ಪಿತೃಗಳ ಸಂಗಡ ನಿದ್ರಿಸಿದನು ಅವನನ್ನು ಅವನ ಮನೆಯ ತೋಟವಾದ ಉಜ್ಜನ ತೋಟದಲ್ಲಿ ಹೂಣಿ ಟ್ಟರು. ಅವನ ಮಗನಾದ ಆಮೋನನು ಅವನಿಗೆ ಬದಲಾಗಿ ಅರಸನಾದನು.
- Genesis 50:5 ಆದಿಕಾಂಡ 50:5ನನ್ನ ತಂದೆ ನನಗೆ ಇಗೋ, ನಾನು ಸಾಯುತ್ತೇನೆ. ನಾನು ಕಾನಾನ್ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಹೂಣಿಡಬೇಕು ಎಂದು ನನ್ನಿಂದ ಪ್ರಮಾಣಮಾಡಿಸಿದ್ದಾನೆ. ಹೀಗಿ ರುವದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ತಿರಿಗಿ ಬರುವ ಹಾಗೆ ಅಪ್ಪಣೆಯಾಗಬೇಕು ಅಂದನು.
- Genesis 49:31–32 ಆದಿಕಾಂಡ 49:31–32ಅಲ್ಲಿ ಅಬ್ರಹಾಮನನ್ನೂ ಅವನ ಹೆಂಡತಿಯಾದ ಸಾರಳನ್ನೂ ಹೂಣಿಟ್ಟರು. ಅಲ್ಲಿ ಇಸಾಕನನ್ನೂ ಅವನ ಹೆಂಡತಿಯಾದ ರೆಬೆಕ್ಕಳನ್ನೂ ಹೂಣಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಣಿಟ್ಟೆನು. ಆ ಹೊಲವೂ ಅದರಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಕೊಂಡುಕೊಂಡದ್ದು ಅಂದನು.ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.