Genesis · chapter 31 · verse 1
Genesis 31:1 in Kannada
ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತಕ್ಕೊಂಡಿದ್ದಾನೆ, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ ಎಂದು ಲಾಬಾನನ ಮಕ್ಕಳು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು.
Namma tandege iddavugalannellaa yaakobanu takkondiddaane, namma tandegiddavugalinda ee ghanateyannellaa padediddaane endu laabaanana makkalu heluva maatugalannu yaakobanu kelidanu.
Genesis 31:1 in English
- King James Version (KJV)
- And he heard the words of Laban’s sons, saying, Jacob hath taken away all that [was] our father’s; and of [that] which [was] our father’s hath he gotten all this glory.
- World English Bible (WEB)
- Jacob heard Laban’s sons’ words, saying, “Jacob has taken away all that was our father’s. He has obtained all this wealth from that which was our father’s.”
- American Standard Version (ASV)
- And he heard the words of Laban’s sons, saying, Jacob hath taken away all that was our father’s; and of that which was our father’s hath he gotten all this glory.
- Bible in Basic English (BBE)
- Now it came to the ears of Jacob that Laban's sons were saying, Jacob has taken away all our father's property, and in this way he has got all this wealth.
- Darby Translation (DBY)
- And he heard the words of Laban's sons, saying, Jacob has taken away all that was our father's, and of what was our father's he has acquired all this glory.
- Webster's Bible (WBS)
- And he heard the words of Laban's sons, saying, Jacob hath taken away all that [was] our father's; and of [that] which [was] our father's hath he obtained all this glory.
- Young's Literal Translation (YLT)
- And he heareth the words of Laban's sons, saying, 'Jacob hath taken all that our father hath; yea, from that which our father hath, he hath made all this honour;'
Read in context
- 1ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತಕ್ಕೊಂಡಿದ್ದಾನೆ, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ ಎಂದು ಲಾಬಾನನ ಮಕ್ಕಳು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು.
- 2ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ ಅದು ತನ್ನ ಕಡೆಗೆ ಮೊದಲು ಇದ್ದಹಾಗೆ ಇರಲಿಲ್ಲ.
- 3ಆಗ ಕರ್ತನು ಯಾಕೋಬನಿಗೆ--ನಿನ್ನ ತಂದೆಗಳ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ಹಿಂತಿರುಗಿ ಹೋಗು, ನಾನು ನಿನ್ನ ಸಂಗಡ ಇರುವೆನು ಅಂದನು.
Cross references
- Ecclesiastes 4:4 ಪ್ರಸಂಗಿ 4:4ತಿರುಗಿ ಎಲ್ಲಾ ಪ್ರಯಾಸಕ್ಕಾಗಿಯೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕಾಗಿಯೂ ಮನುಷ್ಯನು ತನ್ನ ನೆರೆಯವನ ಮೇಲೆ ಅಸೂಯೆ ಪಡುತ್ತಾನೆಂದೂ ನಾನು ತಿಳುಕೊಂಡೆನು. ಇದೂ ಕೂಡ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.
- Job 31:31 ಯೋಬನು 31:31ಅವನ ಮಾಂಸದಿಂದ ನಮಗೆ ತೃಪ್ತಿ ಕೊಡುವವನಾರು ಎಂದು, ನನ್ನ ಗುಡಾರದ ಮನುಷ್ಯರು ಹೇಳಲಿಲ್ಲವೋ?
- Job 31:24–25 ಯೋಬನು 31:24–25ನಾನು ಬಂಗಾರವನ್ನು ನನ್ನ ನಿರೀಕ್ಷೆಯನ್ನಾಗಿ ಇಟ್ಟಿದ್ದರೆ, ಅಪ ರಂಜಿಗೆ--ನೀನು ನನ್ನ ಭರವಸವು ಎಂದು ಹೇಳಿದ್ದರೆ, ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ,
- Esther 5:11 ಎಸ್ತೇರಳು 5:11ಹಾಮಾನನು ತನ್ನ ಐಶ್ವರ್ಯದ ಘನವನ್ನೂ ತನ್ನ ಮಕ್ಕಳ ಹೆಚ್ಚಳವನ್ನೂ ಅರಸನು ತನ್ನನ್ನು ಯಾವದರಲ್ಲಿ ಹೆಚ್ಚಿಸಿದ್ದಾನೋ ಅರಸನ ಪ್ರಭು ಗಳ ಮೇಲೆಯೂ ಸೇವಕರ ಮೇಲೆಯೂ ತನ್ನನ್ನು ಹೇಗೆ ಎತ್ತಿದ್ದಾನೆಂದೂ ಎಲ್ಲವನ್ನೂ ಅವರಿಗೆ ವಿವರ ವಾಗಿ ಹೇಳಿದನು.
- Matthew 4:8 ಮತ್ತಾಯನು 4:8ಮತ್ತೊಮ್ಮೆ ಸೈತಾನನು ಆತನನ್ನು ಅತ್ಯುನ್ನತವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ--
- Genesis 45:13 ಆದಿಕಾಂಡ 45:13ಹೀಗಿರ ಲಾಗಿ ನೀವು ಐಗುಪ್ತದೇಶದಲ್ಲಿ ನನಗಿರುವ ಎಲ್ಲಾ ಘನವನ್ನೂ ನೀವು ನೋಡಿದ್ದೆಲ್ಲವನ್ನೂ ನನ್ನ ತಂದೆಗೆ ತಿಳಿಸಿ, ನನ್ನ ತಂದೆಯನ್ನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬನ್ನಿರಿ ಅಂದನು.
- 1 Timothy 6:4 1 ತಿಮೊಥೆಯನಿಗೆ 6:4ಅಂಥವನು ಒಂದನ್ನೂ ತಿಳಿಯದೆ ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿಯಲ್ಲಿದ್ದು ಅಹಂಕಾರಿಯಾಗಿದ್ದಾನೆ. ಇವುಗಳಿಂದ ಹೊಟ್ಟೇಕಿಚ್ಚು ಜಗಳ ದೂಷಣೆ ದುಸ್ಸಂಶಯ ಇವುಗಳು ಉಂಟಾಗುತ್ತವೆ.
- Psalm 49:16–17 ಕೀರ್ತನೆಗಳು 49:16–17ಒಬ್ಬನು ಐಶ್ವರ್ಯವಂತ ನಾದರೆ ಮತ್ತು ಅವನ ಮನೆಯ ಘನವು ದೊಡ್ಡದಾ ದರೆ ಭಯಪಡಬೇಡ. ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗನು; ಅವನ ಘನವು ಅವನ ಹಿಂದೆ ಇಳಿದು ಹೋಗದು.
- Psalm 17:14 ಕೀರ್ತನೆಗಳು 17:14ಓ ಕರ್ತನೇ, ನಿನ್ನ ಕೈಚಾಚಿ ಈ ಮನುಷ್ಯರಿಂದ ಅಂದರೆ ಜೀವನದಲ್ಲಿ ತಮ್ಮ ಪಾಲಿಗಿರುವ ಈ ಲೋಕದ ಜನರಿಂದ ನನ್ನನ್ನು ಪಾರುಮಾಡು. ಅವರ ಹೊಟ್ಟೆಯನ್ನು ಮರೆಯಾದ ನಿನ್ನ ನಿಕ್ಷೇಪದಿಂದ ತುಂಬಿಸುತ್ತೀ; ಅವರು ಮಕ್ಕಳಿಂದ ತೃಪ್ತರಾಗಿ ತಮ್ಮ ಮಿಕ್ಕ ಆಸ್ತಿಯನ್ನು ತಮ್ಮ ಶಿಶುಗಳಿಗೆ ಉಳಿಸುತ್ತಾರೆ.ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
- Titus 3:3 ತೀತನಿಗೆ 3:3ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು.
- Isaiah 5:14 ಯೆಶಾಯ 5:14ಹೀಗಿರುವದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ಮಹಿಮೆ, ಸಮೂ ಹವು, ಕೋಲಾಹಲ, ಉಲ್ಲಾಸಪಡುವದು ಇವೆಲ್ಲವೂ ಅದರಲ್ಲಿ ಬೀಳುವವು.
- 1 Peter 1:24 1 ಪೇತ್ರನು 1:24ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯನ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವದು, ಅದರ ಹೂವು ಉದುರಿ ಹೋಗು ವದು;ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.