Genesis · chapter 31 · verse 3
Genesis 31:3 in Kannada
ಆಗ ಕರ್ತನು ಯಾಕೋಬನಿಗೆ--ನಿನ್ನ ತಂದೆಗಳ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ಹಿಂತಿರುಗಿ ಹೋಗು, ನಾನು ನಿನ್ನ ಸಂಗಡ ಇರುವೆನು ಅಂದನು.
Aaga kartanu yaakobanige--ninna tandegala deshakkoo ninna bandhugala baligoo hintirugi hogu, naanu ninna sangada iruvenu andanu.
Genesis 31:3 in English
- King James Version (KJV)
- And the LORD said unto Jacob, Return unto the land of thy fathers, and to thy kindred; and I will be with thee.
- World English Bible (WEB)
- The LORD said to Jacob, “Return to the land of your fathers, and to your relatives, and I will be with you.”
- American Standard Version (ASV)
- And Jehovah said unto Jacob, Return unto the land of thy fathers, and to thy kindred; and I will be with thee.
- Bible in Basic English (BBE)
- Then the Lord said to Jacob, Go back to the land of your fathers, and to your relations, and I will be with you.
- Darby Translation (DBY)
- And Jehovah said to Jacob, Return into the land of thy fathers, and to thy kindred; and I will be with thee.
- Webster's Bible (WBS)
- And the LORD said to Jacob, Return to the land of thy fathers, and to thy kindred; and I will be with thee.
- Young's Literal Translation (YLT)
- And Jehovah saith unto Jacob, 'Turn back unto the land of thy fathers, and to thy kindred, and I am with thee.'
Read in context
- 1ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತಕ್ಕೊಂಡಿದ್ದಾನೆ, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ ಎಂದು ಲಾಬಾನನ ಮಕ್ಕಳು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು.
- 2ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ ಅದು ತನ್ನ ಕಡೆಗೆ ಮೊದಲು ಇದ್ದಹಾಗೆ ಇರಲಿಲ್ಲ.
- 3ಆಗ ಕರ್ತನು ಯಾಕೋಬನಿಗೆ--ನಿನ್ನ ತಂದೆಗಳ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ಹಿಂತಿರುಗಿ ಹೋಗು, ನಾನು ನಿನ್ನ ಸಂಗಡ ಇರುವೆನು ಅಂದನು.
- 4ಯಾಕೋಬನು ರಾಹೇಲಳನ್ನೂ ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೇಕಳುಹಿಸಿ
- 5ಅವರಿಗೆ--ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದಹಾಗೆ ಈಗ ಇಲ್ಲದಿರುವದನ್ನು ನಾನು ನೋಡುತ್ತಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಸಂಗಡ ಇದ್ದನು.
Cross references
- Genesis 28:15 ಆದಿಕಾಂಡ 28:15ಇಗೋ, ನಾನು ನಿನ್ನ ಸಂಗಡ ಇದ್ದು ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ ಈ ದೇಶಕ್ಕೆ ನಿನ್ನನ್ನು ತಿರಿಗಿ ಬರಮಾಡುವೆನು. ಯಾಕಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವ ವರೆಗೆ ನಿನ್ನನ್ನು ಬಿಡುವದಿಲ್ಲ ಅಂದನು.
- Genesis 32:9 ಆದಿಕಾಂಡ 32:9ಇದಲ್ಲದೆ ಯಾಕೋಬನು ಹೇಳಿದ್ದೇ ನಂದರೆ--ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ನಿನ್ನ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ತಿರಿಗಿ ಹೋಗು, ಆಗ ನಿನಗೆ ಒಳ್ಳೇದನ್ನು ಮಾಡುವೆನು ಎಂದು ನನಗೆ ಹೇಳಿದ ಕರ್ತನೇ,
- Hebrews 13:5 ಇಬ್ರಿಯರಿಗೆ 13:5ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ.
- Genesis 31:13 ಆದಿಕಾಂಡ 31:13ನೀನು ಸ್ತಂಭವನ್ನು ಅಭಿಷೇಕಿಸಿ ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದೊಳಗಿಂದ ಹೊರಟು ನಿನ್ನ ಬಂಧುಗಳ ದೇಶಕ್ಕೆ ತಿರಿಗಿ ಹೋಗು ಅಂದನು.
- Psalm 50:15 ಕೀರ್ತನೆಗಳು 50:15ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
- Isaiah 41:10 ಯೆಶಾಯ 41:10ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
- Genesis 21:22 ಆದಿಕಾಂಡ 21:22ಆ ಕಾಲದಲ್ಲಿ ಅಬೀಮೆಲೆಕನೂ ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮ ನಿಗೆ--ನೀನು ಮಾಡುವದೆಲ್ಲದರಲ್ಲಿ ದೇವರು ನಿನ್ನ ಸಂಗಡ ಇದ್ದಾನೆ.
- Genesis 31:18 ಆದಿಕಾಂಡ 31:18ತನ್ನ ಎಲ್ಲಾ ಪಶುಗಳನ್ನೂ ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶ ದಲ್ಲಿದ್ದ ತನ್ನ ತಂದೆಯಾದ ಇಸಾಕನ ಬಳಿಗೆ ತಕ್ಕೊಂಡು ಹೋದನು.
- Genesis 28:4 ಆದಿಕಾಂಡ 28:4ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ ಅಂದನು.
- Genesis 30:25 ಆದಿಕಾಂಡ 30:25ರಾಹೇಲಳು ಯೋಸೇಫನನ್ನು ಹೆತ್ತಾಗ ಯಾಕೋಬನು ಲಾಬಾನನಿಗೆ--ನಾನು ನನ್ನ ಸ್ಥಳಕ್ಕೂ ಸ್ವದೇಶಕ್ಕೂ ಹೋಗುವ ಹಾಗೆ ನನ್ನನ್ನು ಕಳುಹಿಸಿ ಕೊಡು.
- Genesis 46:2–3 ಆದಿಕಾಂಡ 46:2–3ದೇವರು ಇಸ್ರಾಯೇಲನಿಗೆ ರಾತ್ರಿ ದರ್ಶನ ದಲ್ಲಿ ಮಾತನಾಡಿ--ಯಾಕೋಬನೇ, ಯಾಕೋಬನೇ ಅಂದನು. ಅದಕ್ಕವನು--ಇಗೋ, ಇದ್ದೇನೆ ಅಂದನು. ಆತನು ಅವನಿಗೆ--ನಿನ್ನ ತಂದೆಯ ದೇವರಾಗಿರುವ ದೇವರು ನಾನೇ. ನೀನು ಐಗುಪ್ತಕ್ಕೆ ಇಳಿದು ಹೋಗು ವದಕ್ಕೆ ಭಯಪಡಬೇಡ; ಯಾಕಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡಜನಾಂಗವಾಗ ಮಾಡುವೆನು.
- Genesis 35:1 ಆದಿಕಾಂಡ 35:1ದೇವರು ಯಾಕೋಬನಿಗೆ--ಎದ್ದು ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು; ನೀನು ನಿನ್ನ ಸಹೋದರನಾದ ಏಸಾವನೆದುರಿನಿಂದ ಓಡಿ ಹೋಗುತ್ತಿದ್ದಾಗ ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟು ಅಂದನು.