Genesis · chapter 31 · verse 6
Genesis 31:6 in Kannada
ನಾನು ಪೂರ್ಣ ಬಲದಿಂದ ನಿಮ್ಮ ತಂದೆಯ ಸೇವೆಮಾಡಿದ್ದು ನಿಮಗೆ ತಿಳಿದಿದೆ.
Naanu poorna baladinda nimma tandeya sevemaadiddu nimage tilidide.
Genesis 31:6 in English
- King James Version (KJV)
- And ye know that with all my power I have served your father.
- World English Bible (WEB)
- You know that I have served your father with all of my strength.
- American Standard Version (ASV)
- And ye know that with all my power I have served your father.
- Bible in Basic English (BBE)
- And you have seen how I have done all in my power for your father,
- Darby Translation (DBY)
- And you know that with all my power I have served your father.
- Webster's Bible (WBS)
- And ye know that with all my power I have served your father.
- Young's Literal Translation (YLT)
- and ye — ye have known that with all my power I have served your father,
Read in context
- 4ಯಾಕೋಬನು ರಾಹೇಲಳನ್ನೂ ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೇಕಳುಹಿಸಿ
- 5ಅವರಿಗೆ--ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದಹಾಗೆ ಈಗ ಇಲ್ಲದಿರುವದನ್ನು ನಾನು ನೋಡುತ್ತಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಸಂಗಡ ಇದ್ದನು.
- 6ನಾನು ಪೂರ್ಣ ಬಲದಿಂದ ನಿಮ್ಮ ತಂದೆಯ ಸೇವೆಮಾಡಿದ್ದು ನಿಮಗೆ ತಿಳಿದಿದೆ.
- 7ಆದರೆ ನಿಮ್ಮ ತಂದೆಯು ನನಗೆ ವಂಚನೆ ಮಾಡಿ ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿ ದನು. ಆದಾಗ್ಯೂ ದೇವರು ಅವನಿಂದ ನನಗೆ ಕೇಡುಮಾಡಗೊಡಿಸಲಿಲ್ಲ.
- 8ನಿಮ್ಮ ತಂದೆ ನನಗೆ --ಚುಕ್ಕೆಯುಳ್ಳದ್ದು ನಿನ್ನ ಸಂಬಳವಾಗಿರಲಿ ಅಂದಾಗ ಮಂದೆಯೆಲ್ಲಾ ಚುಕ್ಕೆಯುಳ್ಳದ್ದೇ ಈಯಿತು; ಅವನು --ರೇಖೆಯುಳ್ಳದ್ದು ನಿನ್ನ ಸಂಬಳವಾಗಿರಲಿ ಅಂದಾಗ ಮಂದೆಯೆಲ್ಲಾ ರೇಖೆಯುಳ್ಳದ್ದನ್ನೇ ಈಯಿತು.
Cross references
- Genesis 30:29 ಆದಿಕಾಂಡ 30:29ಅದಕ್ಕೆ ಯಾಕೋಬನು ಅವನಿಗೆ--ನಾನು ನಿನಗೆ ಮಾಡಿದ ಸೇವೆಯನ್ನೂ ನಿನ್ನ ಮಂದೆಯು ನನ್ನ ಬಳಿಯಲ್ಲಿ ಹೇಗೆ ಇತ್ತೆಂಬದ್ದನ್ನೂ ನೀನು ಬಲ್ಲೆ.
- Ephesians 6:5–8 ಎಫೆಸದವರಿಗೆ 6:5–8ಸೇವಕರೇ, ಶಾರೀರಕ್ಕನುಸಾರವಾಗಿ ನಿಮ್ಮ ಯಜ ಮಾನರಾಗಿರುವವರಿಗೆ ಕ್ರಿಸ್ತನಿಗೆಂದು ಹೃದಯ ಪೂರ್ವಕವಾಗಿ ನಡುಗುತ್ತಾ ವಿಧೇಯರಾಗಿರ್ರಿ. ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಕಣ್ಣಿಗೆ ಕಾಣುವಾಗ ಮಾತ್ರ ಸೇವೆ ಮಾಡದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಹೃದಯ ಪೂರ್ವಕವಾಗಿ ನಡಿಸಿರಿ. ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆ ಮಾಡುತ್ತೇವೆಂದು ಒಳ್ಳೇ ಮನಸ್ಸಿನಿಂದ ಸೇವೆಮಾಡಿರಿ. ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬದನ್ನು ನೀವು ತಿಳಿದವರಾಗಿಯೇ ಇದ್ದೀರಿ.
- Titus 2:9–10 ತೀತನಿಗೆ 2:9–10ಸೇವಕರು ತಮ್ಮ ಸ್ವಂತ ಯಾಜಮಾನರಿಗೆ ವಿಧೇಯರಾಗಿದ್ದು ಎಲ್ಲವು ಗಳಲ್ಲಿ ಅವರನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡುತ್ತಾ ಎದುರು ಮಾತನ್ನಾಡದೆ ಯಾವದನ್ನೂ ಕದ್ದಿಟ್ಟು ಕೊಳ್ಳದೆ ಪೂರಾ ನಂಬಿಗಸ್ತರೆಂದು ತೋರಿಸಿಕೊಂಡು ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯ ಗಳಲ್ಲಿ ಅಲಂಕಾರವಾಗಿರಬೇಕೆಂದು ಎಚ್ಚರಿಸು.
- Genesis 31:38–42 ಆದಿಕಾಂಡ 31:38–42ಈ ಇಪ್ಪತ್ತು ವರುಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ ಮೇಕೆಗಳೂ ಕಂದು ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ. ಮೃಗಗಳಿಂದ ಕೊಲ್ಲಲ್ಪಟ್ಟವುಗಳನ್ನು ನಿನ್ನ ಬಳಿಗೆ ತಾರದೆ ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡಿ. ಹಗಲಲ್ಲಿ ಬಿಸಿಲಿ ನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು. ನಿದ್ರೆ ನನ್ನ ಕಣ್ಣುಗಳಿಗೆ ತಪ್ಪಿಹೋಯಿತು, ಈ ಸ್ಥಿತಿಯಲ್ಲಿ ನಾನಿದ್ದೆನು. ನಿನ್ನ ಇಬ್ಬರು ಕುಮಾರ್ತೆಯರಿಗಾಗಿ ಹದಿನಾಲ್ಕು ವರುಷ, ನಿನ್ನ ಮಂದೆಗಳಿಗೋಸ್ಕರ ಆರು ವರುಷ, ಈ ಪ್ರಕಾರ ಇಪ್ಪತ್ತು ವರುಷ ನಿನ್ನ ಮನೆಯಲ್ಲಿ ಇದ್ದು ಸೇವೆಮಾಡಿದೆನು; ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದಿ. ಅಬ್ರಹಾಮನ ದೇವರೂ ನನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ ನಿಜವಾಗಿಯೂ ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದಿ; ನನ್ನ ಬಾಧೆ ಯನ್ನೂ ನನ್ನ ಕೈ ಕಷ್ಟವನ್ನೂ ದೇವರು ನೋಡಿ ನಿನ್ನೆ ರಾತ್ರಿ ನಿನ್ನನ್ನು ಗದರಿಸಿದನು ಅಂದನು.
- Colossians 3:22–25 ಕೊಲೊಸ್ಸೆಯವರಿಗೆ 3:22–25ಸೇವಕರೇ, ಶಾರೀರಕವಾದ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯ ರಾಗಿರ್ರಿ; ಮನುಷ್ಯರನ್ನು ಮೆಚ್ಚುಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆ ಮಾಡದೆ ದೇವರಿಗೆ ಭಯಪಡುವ ವರಾಗಿ ಸರಳ ಹೃದಯದಿಂದ ಕೆಲಸಮಾಡಿರಿ. ನೀವು ಯಾವದನ್ನು ಮಾಡಿದರೂ ಅದನ್ನು ಮನುಷ್ಯರಿ ಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ; ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವರೆಂದು ತಿಳಿದಿದ್ದೀರಲ್ಲಾ. ಯಾಕಂದರೆ ನೀವು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿದ್ದೀರಿ.ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ಅದರಲ್ಲಿ ಪಕ್ಷಪಾತವಿಲ್ಲ. ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ಅದರಲ್ಲಿ ಪಕ್ಷಪಾತವಿಲ್ಲ.
- 1 Peter 2:18 1 ಪೇತ್ರನು 2:18ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಭಯದಿಂದ ಅಧೀನ ರಾಗಿರ್ರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯ ರಾಗಿರ್ರಿ.