Genesis · chapter 33 · verse 19
Genesis 33:19 in Kannada
ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆಯಾದ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡು ಕೊಂಡನು.ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.
Avanu tanna gudaaragalannu haakida bhoomiyannu shekemina tandeyaada hamorana makkala kaiyinda nooru naanyagalige kondu kondanu.alli yajnyavediyannu kattisi adakke elelohe israayel endu hesarittanu.
Genesis 33:19 in English
- King James Version (KJV)
- And he bought a parcel of a field, where he had spread his tent, at the hand of the children of Hamor, Shechem’s father, for an hundred pieces of money.
- World English Bible (WEB)
- He bought the parcel of ground where he had spread his tent, at the hand of the children of Hamor, Shechem’s father, for one hundred pieces of money.
- American Standard Version (ASV)
- And he bought the parcel of ground, where he had spread his tent, at the hand of the children of Hamor, Shechem’s father, for a hundred pieces of money.
- Bible in Basic English (BBE)
- And for a hundred bits of money he got from the children of Hamor, the builder of Shechem, the field in which he had put up his tents.
- Darby Translation (DBY)
- And he bought the portion of the field where he had spread his tent, of the hand of the sons of Hamor, Shechem's father, for a hundred kesitahs.
- Webster's Bible (WBS)
- And he bought a part of a field, where he had spread his tent, at the hand of the children of Hamor, Shechem's father, for a hundred pieces of money.
- Young's Literal Translation (YLT)
- and he buyeth the portion of the field where he hath stretched out his tent, from the hand of the sons of Hamor, father of Shechem, for a hundred kesitah;
Read in context
- 17ಯಾಕೋ ಬನು ಪ್ರಯಾಣಮಾಡಿ ಸುಕ್ಕೋತಿಗೆ ಹೋಗಿ ಮನೆಯನ್ನು ಕಟ್ಟಿಸಿಕೊಂಡನು; ಇದಲ್ಲದೆ ತನ್ನ ಮಂದೆಗಳಿಗೆ ಹಟ್ಟಿಗಳನ್ನು ಮಾಡಿಸಿದನು. ಆದದರಿಂದ ಆ ಸ್ಥಳಕ್ಕೆ ಸುಕ್ಕೋತ್ ಎಂದು ಹೆಸರಾಯಿತು.
- 18ಯಾಕೋಬನು ಪದ್ದನ್ ಅರಾಮಿನಿಂದ ಬಂದು ಕಾನಾನ್ ದೇಶದ ಶೆಕೆಮಿನಲ್ಲಿರುವ ಸಾಲೆಮ್ ಪಟ್ಟಣಕ್ಕೆ ಬಂದು ಪಟ್ಟಣದ ಮುಂದೆ ತನ್ನ ಗುಡಾರಗಳನ್ನು ಹಾಕಿದನು.
- 19ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆಯಾದ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡು ಕೊಂಡನು.ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.
- 20ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.
Cross references
- Acts 7:16 ಅಪೊಸ್ತಲರ ಕೃತ್ಯಗಳು 7:16ಅವರನ್ನು ಶೇಕೆಮಿಗೆ ತೆಗೆದುಕೊಂಡು ಹೋಗಿ ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ಅಬ್ರಹಾಮನು ಹಣಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು.
- John 4:5 ಯೋಹಾನನು 4:5ಆಗ ಯಾಕೋ ಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸವಿಾಪದಲ್ಲಿರುವ ಸುಖರ್ ಎಂಬ ಸಮಾರ್ಯದ ಪಟ್ಟಣಕ್ಕೆ ಆತನು ಬಂದನು.
- Joshua 24:32 ಯೆಹೋಶುವ 24:32ಇದ ಲ್ಲದೆ ಇಸ್ರಾಯೇಲ್ ಮಕ್ಕಳು ಐಗುಪ್ತದಿಂದ ತಂದ ಯೋಸೇಫನ ಎಲುಬುಗಳನ್ನು ಅವರು ಶೆಕೆಮಿನಲ್ಲಿ ಯಾಕೋಬನು ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ನೂರು ಬೆಳ್ಳಿನಾಣ್ಯಗಳಿಗೆ ಕೊಂಡು ಕೊಂಡಿದ್ದ, ಯೋಸೇಫನ ಮಕ್ಕಳಿಗೆ ಬಾಧ್ಯತೆ ಯಾದ, ನೆಲದ ಭಾಗದಲ್ಲಿ ಹೂಣಿಟ್ಟರು.ಆರೋ ನನ ಮಗನಾದ ಎಲೀಯಾಜರನು ಸತ್ತನು; ಅವ ನನ್ನು ಅವನ ಮಗನಾದ ಫೀನೆಹಾಸನಿಗೆ ಎಫ್ರಾ ಯಾಮ್ ಬೆಟ್ಟದ ದೇಶದಲ್ಲಿ ಕೊಡಲ್ಪಟ್ಟ ಗುಡ್ಡದಲ್ಲಿ ಹೂಣಿಟ್ಟರು.
- Genesis 34:2–31 ಆದಿಕಾಂಡ 34:2–31ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗನಾದ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಕೂಡಿ ಅಶುದ್ಧ ಮಾಡಿದನು. ಅವನ ಮನಸ್ಸು ಯಾಕೋಬನ ಮಗಳಾದ ದೀನಳನ್ನು ಅಂಟಿಕೊಂಡಿತ್ತು. ಅವನು ಆ ಹುಡುಗಿಯನ್ನು ಪ್ರೀತಿಮಾಡಿ ಆಕೆಯೊಂದಿಗೆ ದಯೆ ಯಿಂದ ಮಾತನಾಡಿದನು. ಶೆಕೆಮನು ತನ್ನ ತಂದೆ ಯಾದ ಹಮೋರನಿಗೆ--ಈ ಹುಡುಗಿಯನ್ನು ನನಗೆ ಹೆಂಡತಿಯಾಗಿರುವಂತೆ ತಕ್ಕೋ ಅಂದನು. ಯಾಕೋ ಬನು ತನ್ನ ಮಗಳಾದ ದೀನಳನ್ನು ಶೆಕೆಮನು ಅಶುದ್ಧ ಮಾಡಿದನೆಂದು ಕೇಳಿದಾಗ ಅವನ ಮಕ್ಕಳು ದನಗಳ ಸಂಗಡ ಹೊಲದಲ್ಲಿದ್ದರು. ಅವರು ಬರುವ ವರೆಗೆ ಯಾಕೋಬನು ಸುಮ್ಮನಿದ್ದನು. ಆಗ ಶೆಕೆಮನ ತಂದೆಯಾದ ಹಮೋರನು ಹೊರಗೆ ಯಾಕೋಬನ ಸಂಗಡ ಮಾತನಾಡುವದಕ್ಕೆ ಬಂದನು. ಯಾಕೋಬನ ಮಕ್ಕಳು ಅದನ್ನು ಕೇಳಿದಾಗ ಅವರು ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ ಇಸ್ರಾಯೇಲಿ ನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ ಆ ಮನುಷ್ಯರು ವ್ಯಸನಪಟ್ಟು ಬಹಳ ಉರಿಗೊಂಡರು. ಅದು ಹಾಗೆ ಆಗಬಾರದಾಗಿತ್ತು. ಹಮೋರನು ಅವರಿಗೆ--ನನ್ನ ಮಗನಾದ ಶೆಕೆಮನ ಮನಸ್ಸು ನಿಮ್ಮ ಮಗಳಿಗಾಗಿ ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ; ನೀವು ನಮ್ಮೊಂದಿಗೆ ಮದುವೆ ಗಳನ್ನು ಮಾಡಿರಿ; ನಿಮ್ಮ ಕುಮಾರ್ತೆಯರನ್ನು ನಮಗೆ ಕೊಡಿರಿ, ನಮ್ಮ ಕುಮಾರ್ತೆಯರನ್ನು ನೀವು ತಕ್ಕೊಳ್ಳಿರಿ. ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ; ದೇಶವು ನಿಮ್ಮ ಮುಂದೆ ಇದೆ. ನೀವು ವಾಸಿಸಿ ಅದರಲ್ಲಿ ವ್ಯಾಪಾರಮಾಡಿ ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ ಅಂದನು. ಶೆಕೆಮನು ಆಕೆಯ ತಂದೆಗೂ ಸಹೋದರರಿಗೂ ಹೇಳಿದ್ದೇನಂದರೆ--ನಿಮ್ಮ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಲಿ; ನೀವು ನನಗೆ ಹೇಳಿದ್ದನ್ನು ನಾನು ನಿಮಗೆ ಕೊಡುವೆನು. ತೆರವನ್ನೂ ಕಾಣಿಕೆಯನ್ನೂ ಯಥೇಚ್ಛವಾಗಿ ನನ್ನನ್ನು ಕೇಳಿರಿ. ನೀವು ಹೇಳುವ ಪ್ರಕಾರ ಕೊಡುವೆನು. ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ ಅಂದನು. ಆಗ ಯಾಕೋಬನ ಮಕ್ಕಳು ಶೆಕೆಮನಿಗೂ ಅವನ ತಂದೆಯಾದ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಅವನು ತಮ್ಮ ತಂಗಿಯಾದ ದೀನಳನ್ನು ಅಶುದ್ಧಮಾಡಿದ್ದನು. ಯಾಕೋಬನ ಮಕ್ಕಳು ಅವರಿಗೆ--ನಾವು ಈ ಕಾರ್ಯವನ್ನು ಮಾಡಲಾರೆವು, ಸುನ್ನತಿಯಿಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು, ಅದು ನಮಗೆ ಅವಮಾನ. ಆದರೆ ನೀವು ನಮ್ಮ ಹಾಗಿದ್ದು ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿಮಾಡಿಸಿಕೊಂಡರೆ ಮಾತ್ರ ನಾವು ಒಪ್ಪುವೆವು. ನಮ್ಮ ಕುಮಾರ್ತೆಯರನ್ನು ನಿಮಗೆ ಕೊಟ್ಟು ನಿಮ್ಮ ಕುಮಾರ್ತೆಯರನ್ನು ತಕ್ಕೊಳ್ಳುವೆವು. ಇದಲ್ಲದೆ ನಾವು ನಿಮ್ಮಲ್ಲಿ ವಾಸಮಾಡಿ ಒಂದೇ ಜನಾಂಗವಾಗುವೆವು; ಆದರೆ ನೀವು ನಮ್ಮ ಮಾತನ್ನು ಕೇಳಿ ಸುನ್ನತಿಮಾಡಿಸಿಕೊಳ್ಳದೆ ಹೋದರೆ ನಮ್ಮ ಮಗಳನ್ನು ನಾವು ತೆಗೆದುಕೊಂಡು ಹೋಗಿ ಬಿಡುತ್ತೇವೆ ಎಂದು ಹೇಳಿದರು. ಅವರ ಮಾತುಗಳು ಹಮೋರನಿಗೂ ಅವನ ಮಗನಾದ ಶೆಕೆಮನಿಗೂ ಮೆಚ್ಚಿಕೆಯಾದವುಗಳಾಗಿ ಕಂಡವು. ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ ಆ ಕಾರ್ಯವನ್ನು ಮಾಡು ವದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು. ಆಗ ಹಮೋರನೂ ಅವನ ಮಗನಾದ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ-- ಈ ಮನುಷ್ಯರು ನಮ್ಮ ಸಂಗಡ ಸಮಾಧಾನ ವಾಗಿದ್ದಾರೆ; ಆದದರಿಂದ ಅವರು ದೇಶದಲ್ಲಿ ವಾಸಮಾಡಿ ಅದರಲ್ಲಿ ವ್ಯಾಪಾರಮಾಡಲಿ. ಇಗೋ, ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಕುಮಾರ್ತೆಯರನ್ನು ನಮಗೆ ಹೆಂಡತಿಯರನ್ನಾಗಿ ತಕ್ಕೊಳ್ಳೋಣ ನಮ್ಮ ಕುಮಾರ್ತೆಯರನ್ನು ಅವರಿಗೆ ಕೊಡೋಣ. ಅವರು ಸುನ್ನತಿಮಾಡಿಸಿಕೊಂಡ ಪ್ರಕಾರ ನಮ್ಮಲ್ಲಿ ಗಂಡಸರೆಲ್ಲಾ ಸುನ್ನತಿಮಾಡಿಸಿ ಕೊಂಡರೆ ಮಾತ್ರ ಆ ಮನುಷ್ಯರು ನಮ್ಮ ಸಂಗಡ ವಾಸಮಾಡುವದಕ್ಕೂ ಒಂದೇ ಜನಾಂಗವಾಗುವದಕ್ಕೂ ಒಪ್ಪುವರು. ಅವರ ಮಂದೆಗಳೂ ಸಂಪತ್ತೂ ದನಗಳೆಲ್ಲಾ ನಮ್ಮವುಗಳಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಿಸುವರು ಅಂದರು. ಆಗ ಪಟ್ಟಣದ ದ್ವಾರದಲ್ಲಿ ಹೋಗುವವರೆಲ್ಲಾ ಹಮೋರನೂ ಅವನ ಮಗನಾದ ಶೆಕೆಮನೂ ಹೇಳಿದ ಮಾತುಗಳನ್ನು ಕೇಳಿ ಅವನ ಪಟ್ಟಣ ದ್ವಾರದಲ್ಲಿ ಹೋಗುವ ಎಲ್ಲಾ ಗಂಡಸರು ಸುನ್ನತಿಮಾಡಿಸಿಕೊಂಡರು. ಮೂರನೆಯ ದಿನದಲ್ಲಿ ಅವರಿಗೆ ನೋವು ಉಂಟಾದಾಗ ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ ದೀನಳ ಸಹೋದರರಾದ ಸಿಮೆಯೋನನೂ ಲೇವಿಯೂ ತಮ್ಮ ತಮ್ಮ ಕತ್ತಿಗಳನ್ನು ತಕ್ಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದುಹಾಕಿದರು. ಹಮೋರನನ್ನೂ ಅವನ ಮಗ ನಾದ ಶೆಕೆಮನನ್ನೂ ಕತ್ತಿಯಿಂದ ಕೊಂದುಹಾಕಿ ದೀನಳನ್ನು ಶೆಕೆಮನ ಮನೆಯಿಂದ ತಕ್ಕೊಂಡು ಹೊರಗೆ ಹೋದರು. ತಮ್ಮ ಸಹೋದರಿಯನ್ನು ಅಶುದ್ಧ ಮಾಡಿದ್ದರಿಂದ ಯಾಕೋಬನ ಮಕ್ಕಳು ಕೊಂದವರ ಬಳಿಗೆ ಬಂದು ಕೊಳ್ಳೆಹೊಡೆದರು. ಅವರ ಕುರಿ, ದನ, ಕತ್ತೆಗಳನ್ನು ಪಟ್ಟಣದಲ್ಲಿಯೂ ಹೊಲದಲ್ಲಿಯೂ ಇದ್ದವುಗಳೆಲ್ಲವನ್ನು ತಕ್ಕೊಂಡರು. ಅವರ ಎಲ್ಲಾ ಆಸ್ತಿಯನ್ನೂ ಅವರ ಎಲ್ಲಾ ಚಿಕ್ಕಮಕ್ಕಳನ್ನೂ ಅವರ ಹೆಂಡತಿಯರನ್ನೂ ಸೆರೆಹಿಡಿದು ಮನೆಯಲ್ಲಿದದ್ದೆ ಲ್ಲವನ್ನೂ ಅವರು ಕೊಳ್ಳೆಹೊಡೆದರು. ಆಗ ಯಾಕೋಬನು ಸಿಮೆಯೋನನಿಗೂ ಲೇವಿಗೂ ಹೇಳಿದ್ದೇನಂದರೆ--ನೀವು ನನ್ನನ್ನು ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಕಳವಳಪಡಿ ಸಿದಿರಿ; ನಾನು ಸ್ವಲ್ಪ ಮಂದಿಯುಳ್ಳವನು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ಕೊಲ್ಲುವರು. ಆಗ ನಾನೂ ನನ್ನ ಮನೆಯವರೂ ನಾಶವಾಗುವೆವು ಅಂದನು.ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು. ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು.
- Genesis 49:30–32 ಆದಿಕಾಂಡ 49:30–32ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲ ದಲ್ಲಿರುವಂಥ, ಅಬ್ರಹಾಮನು ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಣಿಡಿರಿ. ಅಲ್ಲಿ ಅಬ್ರಹಾಮನನ್ನೂ ಅವನ ಹೆಂಡತಿಯಾದ ಸಾರಳನ್ನೂ ಹೂಣಿಟ್ಟರು. ಅಲ್ಲಿ ಇಸಾಕನನ್ನೂ ಅವನ ಹೆಂಡತಿಯಾದ ರೆಬೆಕ್ಕಳನ್ನೂ ಹೂಣಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಣಿಟ್ಟೆನು. ಆ ಹೊಲವೂ ಅದರಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಕೊಂಡುಕೊಂಡದ್ದು ಅಂದನು.ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.
- Genesis 23:17–20 ಆದಿಕಾಂಡ 23:17–20ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲದಲ್ಲಿರುವ ಎಫ್ರೋ ನನ ಹೊಲವೂ ಆ ಹೊಲದಲ್ಲಿರುವ ಗವಿಯೂ ಆ ಹೊಲದ ಸುತ್ತಲೂ ಇರುವ ಎಲ್ಲಾ ಮರಗಳೂ ಹೇತನ ಮಕ್ಕಳ ಮುಂದೆಯೂ ಅವನ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ಸ್ಥಿರಮಾಡಲ್ಪಟ್ಟಿತು. ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಯಾದ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಹೊಲದ ಗವಿಯಲ್ಲಿ ಹೂಣಿಟ್ಟನು.ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು. ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು.
Original words (Hebrew)
- bought · H7069קָנָה qânâh
- parcel · H2513חֶלְקָה chelqâh
- field · H7704שָׂדֶה sâdeh
- spread · H5186נָטָה nâṭâh
- tent · H168אֹהֶל ʼôhel
- hand · H3027יָד yâd
- children · H1121בֵּן bên
- Hamor · H2544חֲמוֹר Chămôwr
- Shechem’s · H7927שְׁכֶם Shᵉkem
- father · H1אָב ʼâb
- hundred · H3967מֵאָה mêʼâh
- money · H7192קְשִׂיטָה qᵉsîyṭâh