Genesis · chapter 36 · verse 12
Genesis 36:12 in Kannada
ತಿಮ್ನಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿ ಯಾಗಿದ್ದು ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾಳ ಕುಮಾರರು ಇವರೇ.
Timnalu esaavana maganaada eleephajanige upapatni yaagiddu amaalekanannu hettalu. Esaavana hendatiyaagidda aadaala kumaararu ivare.
Genesis 36:12 in English
- King James Version (KJV)
- And Timna was concubine to Eliphaz Esau’s son; and she bare to Eliphaz Amalek: these [were] the sons of Adah Esau’s wife.
- World English Bible (WEB)
- Timna was concubine to Eliphaz, Esau’s son; and she bore to Eliphaz Amalek. These are the descendants of Adah, Esau’s wife.
- American Standard Version (ASV)
- And Timna was concubine to Eliphaz Esau’s son; and she bare to Eliphaz Amalek: these are the sons of Adah, Esau’s wife.
- Bible in Basic English (BBE)
- And Eliphaz, the son of Esau, had connection with a woman named Timna, who gave birth to Amalek: all these were the children of Esau's wife Adah.
- Darby Translation (DBY)
- And Timna was concubine to Eliphaz Esau's son, and she bore Amalek to Eliphaz. These are the sons of Adah Esau's wife.
- Webster's Bible (WBS)
- And Timna was concubine to Eliphaz Esau's son; and she bore to Eliphaz Amalek: these [were] the sons of Adah Esau's wife.
- Young's Literal Translation (YLT)
- and Timnath hath been concubine to Eliphaz son of Esau, and she beareth to Eliphaz, Amalek; these [are] sons of Adah wife of Esau.
Read in context
- 10ಏಸಾವನ ಕುಮಾರರ ಹೆಸರುಗಳು ಯಾವವಂದರೆ: ಏಸಾವನ ಹೆಂಡತಿಯಾಗಿರುವ ಆದಾಳ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿಯಾದ ಬಾಸೆಮತಳ ಮಗನಾದ ರೆಗೂವೇಲನು.
- 11ಎಲೀಫಜನ ಮಕ್ಕಳು ಯಾರಂದರೆ: ತೇಮಾನ್ ಓಮಾರ್ ಚೆಫೋ ಗತಾಮ್ ಕೆನಜ್;
- 12ತಿಮ್ನಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿ ಯಾಗಿದ್ದು ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾಳ ಕುಮಾರರು ಇವರೇ.
- 13ರೆಗೂವೇಲನ ಮಕ್ಕಳು ಯಾರಂದರೆ: ನಹತ್ ಜೆರಹ ಶಮ್ಮಾ ಮಿಜ್ಜಾ; ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು.
- 14ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀ ಬಾಮಳ ಕುಮಾರರು ಯಾರಂದರೆ: ಆಕೆಯು ಏಸಾವನಿಗೆ ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು.
Cross references
- Deuteronomy 25:17–19 ಧರ್ಮೋಪದೇಶಕಾಂಡ 25:17–19ನೀವು ಐಗುಪ್ತವನ್ನು ಬಿಟ್ಟು ಬರುವ ಮಾರ್ಗ ನದಲ್ಲಿ ಅಮಾಲೇಕ್ಯನು ನಿನಗೆ ಮಾಡಿದ್ದನ್ನು ಜ್ಞಾಪಕ ಮಾಡಿಕೊ. ಅವನು ಮಾರ್ಗದಲ್ಲಿ ನಿನಗೆ ಎದುರು ಗೊಂಡು ದೇವರಿಗೆ ಭಯಪಡದೆ ನೀನು ಆಯಾಸವುಳ್ಳ ವನೂ ದಣಿದವನೂ ಆಗಿರುವ ಸಮಯದಲ್ಲಿ ನಿನ್ನ ಹಿಂದೆ ಬಿದ್ದ ಬಲಹೀನರೆಲ್ಲರನ್ನು ನಿನ್ನ ಹಿಂಭಾಗದಲ್ಲಿ ಸಂಹಾರಮಾಡಿದನು.ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು. ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು.
- Exodus 17:8–16 ವಿಮೋಚನಕಾಂಡ 17:8–16ತರುವಾಯ ಅಮಾಲೇಕ್ಯರು ಬಂದು ರೆಫೀದೀಮಿ ನಲ್ಲಿ ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದರು. ಆಗ ಮೋಶೆಯು ಯೆಹೋಶುವನಿಗೆ--ನೀನು ನಮ ಗಾಗಿ ಮನುಷ್ಯರನ್ನು ಆರಿಸಿಕೊಂಡು ಅಮಾಲೇಕ್ಯರ ಸಂಗಡ ಯುದ್ಧಮಾಡುವದಕ್ಕೆ ಹೊರಟುಹೋಗು; ನಾಳೆ ನಾನು ದೇವರ ಕೋಲನ್ನು ಕೈಯಲ್ಲಿ ಹಿಡಿದು ಕೊಂಡು ಗುಡ್ಡದ ಮೇಲೆ ನಿಂತುಕೊಳ್ಳುವೆನು ಅಂದನು. ಮೋಶೆಯು ತನಗೆ ಹೇಳಿದಂತೆ ಯೆಹೋಶುವನು ಅಮಾಲೇಕ್ಯರೊಂದಿಗೆ ಯುದ್ಧಮಾಡಿದನು. ಮೋಶೆ ಯೂ ಆರೋನನೂ ಹೂರನೂ ಗುಡ್ಡದ ಮೇಲೆ ಏರಿಹೋದರು. ಮೋಶೆಯು ತನ್ನ ಕೈಯನ್ನು ಎತ್ತಿದಾಗ ಇಸ್ರಾಯೇಲ್ಯರು ಜಯಿಸಿದರು. ಅವನು ತನ್ನ ಕೈಯನ್ನು ಇಳಿಸಿದಾಗ ಅಮಾಲೇಕ್ಯರು ಜಯಿಸಿದರು. ಆದರೆ ಮೋಶೆಯ ಕೈಗಳು ಭಾರವಾಗಿರಲಾಗಿ ಅವರು ಒಂದು ಕಲ್ಲನ್ನು ತಂದು ಅವನ ಕೆಳಗೆ ಇಟ್ಟಾಗ ಅವನು ಅದರ ಮೇಲೆ ಕೂತುಕೊಂಡನು. ಆರೋನನೂ ಹೂರನೂ ಒಬ್ಬನು ಒಂದು ಕಡೆಯಲ್ಲಿಯೂ ಇನ್ನೊಬ್ಬನು ಇನ್ನೊಂದು ಕಡೆಯಲ್ಲಿಯೂ ಅವನ ಕೈಗಳಿಗೆ ಆಧಾರ ಕೊಟ್ಟರು. ಹೀಗೆ ಸೂರ್ಯನು ಮುಳುಗುವ ವರೆಗೆ ಅವನ ಕೈಗಳು ಇಳಿಯದೇ ಇದ್ದವು. ಯೆಹೋಶು ವನು ಅಮಾಲೇಕ್ಯನನ್ನೂ ಅವನ ಜನರನ್ನೂ ಕತ್ತಿಯಿಂದ ಸೋಲಿಸಿದನು. ಆಗ ಕರ್ತನು ಮೋಶೆಗೆ--ಇದನ್ನು ಜ್ಞಾಪಕಾರ್ಥ ವಾಗಿ ಪುಸ್ತಕದಲ್ಲಿ ಬರೆ; ನಾನು ಅಮಾಲೇಕ್ಯರ ನೆನಪು ಆಕಾಶದ ಕೆಳಗೆ ಇರದಂತೆ ಸಂಪೂರ್ಣವಾಗಿ ಅಳಿಸಿ ಬಿಡುವೆನು. ಇದನ್ನು ತಿರಿಗಿ ಯೆಹೋಶುವನಿಗೆ ಹೇಳು ಅಂದನು. ಇದಾದ ಮೇಲೆ ಮೋಶೆಯು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ನಿಸ್ಸಿ ಎಂದು ಹೆಸರಿಟ್ಟನು.ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು. ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು.
- 1 Samuel 15:2–9 1 ಸಮುವೇಲನು 15:2–9ಸೈನ್ಯ ಗಳ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲ್ಯರು ಐಗುಪ್ತದಿಂದ ಬರುವಾಗ ಅಮಾಲೇಕ್ಯರು ಅವರ ಮಾರ್ಗಕ್ಕೆ ಅಡ್ಡಗಟ್ಟಿದ್ದು ನಾನು ನೆನಸಿಕೊಂಡಿ ದ್ದೇನೆ. ಈಗ ನೀನು ಹೋಗಿ ಆ ಅಮಾಲೇಕ್ಯರನ್ನು ಹೊಡೆದು ಅವರಿಗೆ ಇದ್ದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿ ಅವರನ್ನು ಕನಿಕರಿಸದೆ ಪುರುಷರನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಮೊಲೆ ಕೂಸುಗಳನ್ನೂ ದನ ಕುರಿ ಒಂಟೆ ಕತ್ತೆಗಳನ್ನೂ ಕೊಂದುಹಾಕು ಎಂಬದು. ಆಗ ಸೌಲನು ತೆಲಾಯಾಮಿನಲ್ಲಿ ಜನರನ್ನು ಕೂಡಿಸಿ ಲೆಕ್ಕ ಮಾಡಿದನು. ಇಸ್ರಾಯೇಲ್ಯರ ಕಾಲ್ಬಲವು ಎರಡು ಲಕ್ಷ ಜನವೂ ಯೆಹೂದನ ಮನುಷ್ಯರು ಹತ್ತು ಸಾವಿರ ಜನರೂ ಇದ್ದರು. ಸೌಲನು ಅಮಾಲೇಕ್ಯರ ಪಟ್ಟಣ ದವರೆಗೂ ಬಂದು ತಗ್ಗಿನಲ್ಲಿ ಹೊಂಚಿಹಾಕಿದ್ದನು. ಕೇನ್ಯರಿಗೆ ಅವನು ಹೇಳಿದ್ದೇನಂದರೆ--ಇಸ್ರಾಯೇ ಲ್ಯರು ಐಗುಪ್ತದಿಂದ ಬಂದಾಗ ನೀವು ಅವರೆಲ್ಲರಿಗೆ ದಯೆ ತೋರಿಸಿದ್ದರಿಂದ ನಾನು ನಿಮ್ಮನ್ನು ಅಮಾಲೇಕ್ಯರ ಸಂಗಡ ನಾಶಮಾಡದ ಹಾಗೆ ನೀವು ಅವರ ಮಧ್ಯ ದಲ್ಲಿಂದ ಹೊರಟು ಹೋಗಿರಿ ಅಂದನು. ಹಾಗೆಯೇ ಕೇನ್ಯರು ಅಮಾಲೇಕ್ಯರ ಮಧ್ಯದಿಂದ ಹೊರಟು ಹೋದರು. ಆಗ ಸೌಲನು ಹವೀಲಾದಿಂದ ಐಗುಪ್ತಕ್ಕೆ ಎದುರಾಗಿರುವ ಶೂರಿಗೆ ಹೋಗುವ ಮೇರೆಯ ವರೆಗೂ ಇದ್ದ ಅಮಾಲೇಕ್ಯರನ್ನು ಹೊಡೆದು ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದನು. ಆದರೆ ಸಮಸ್ತ ಜನರನ್ನು ಕತ್ತಿಯಿಂದ ಸಂಪೂರ್ಣ ನಾಶಮಾಡಿದನು. ಸೌಲನು ಮತ್ತು ಜನರು ಅಗಾಗನನ್ನೂ ಪಶುಕುರಿಗಳಲ್ಲಿ ಮೇಲ್ತರವಾದ ವುಗಳನ್ನೂ ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದನು. ಆದರೆ ತಿರಸ್ಕರಿಸಲ್ಪಡತಕ್ಕ ಕನಿಷ್ಠವಾದವು ಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.
- Genesis 36:22 ಆದಿಕಾಂಡ 36:22ಲೋಟಾನನ ಕುಮಾರರು ಯಾರಂದರೆ: ಹೋರಿ ಹೇಮಾಮ್ ಲೋಟಾನನ ಸಹೋದರಿ ಯಾದ ತಿಮ್ನಾ.
- Numbers 24:18–20 ಅರಣ್ಯಕಾಂಡ 24:18–20ಎದೋಮು ಸ್ವಾಸ್ತ್ಯವಾಗುವದು; ಸೇಯಾರು ತನ್ನ ಶತ್ರುಗಳಿಗೆ ಸ್ವಾಸ್ತ್ಯವಾಗುವದು; ಮತ್ತು ಇಸ್ರಾಯೇಲು ಪರಾಕ್ರಮ ಕಾರ್ಯ ಮಾಡುವದು, ಯಾಕೋಬನೊಳಗಿಂದ ಒಬ್ಬನು ಬಂದು ಆಳುವನು; ಅವನು ಪಟ್ಟಣದಲ್ಲಿ ಉಳಿದದ್ದನ್ನು ನಾಶಮಾಡುವನು ಎಂದು ಹೇಳಿದನು. ತರುವಾಯ ಅವನು ಅಮಾಲೇಕ್ಯರನ್ನು ನೋಡಿ ಸಾಮ್ಯರೂಪವಾಗಿ--ಜನಾಂಗಗಳಲ್ಲಿ ಮೊದಲನೆ ಯವನೇ ಅಮಾಲೇಕ್ಯನು; ಆದರೆ ಅವನ ಅಂತ್ಯವು ಸದಾಕಾಲಕ್ಕೆ ನಾಶವಾಗುವದು ಅಂದನು.
- Deuteronomy 23:7 ಧರ್ಮೋಪದೇಶಕಾಂಡ 23:7ಎದೋಮ್ಯನನ್ನು ಅಸಹ್ಯಿಸಬೇಡ; ಅವನು ನಿನ್ನ ಸಹೋದರನು; ಐಗುಪ್ತ್ಯನನ್ನು ಅಸಹ್ಯಿಸಬೇಡ; ಅವನ ದೇಶದಲ್ಲಿ ನೀನು ಪರವಾಸಿಯಾಗಿದ್ದಿ.
- Genesis 14:7 ಆದಿಕಾಂಡ 14:7ಅವರು ಹಿಂತಿರುಗಿ ಕಾದೇಶ್ ಎಂಬ ಎನ್ಮಿಷ್ಪಾಟಿಗೆ ಬಂದು ಅಮಾಲೆಕ್ಯರ ಎಲ್ಲಾ ಬೈಲನ್ನು ಹಚಚೋನ್ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಸಂಹರಿಸಿದರು.
- 1 Chronicles 1:36 1 ಪೂರ್ವಕಾಲವೃತ್ತಾಂತ 1:36ಎಲೀಫಜನ ಮಕ್ಕಳು -- ತೇಮಾನನು, ಓಮಾರನು, ಜೆಫೀ, ಗತಾಮನು, ಕೆನಜನು, ತಿಮ್ನಳು, ಅಮಾಲೇಕನು.
Original words (Hebrew)
- Timna · H8555תִּמְנָע Timnâʻ
- concubine · H6370פִּילֶגֶשׁ pîylegesh
- Eliphaz · H464אֱלִיפַז ʼĔlîyphaz
- Esau’s · H6215עֵשָׂו ʻÊsâv
- son · H1121בֵּן bên
- bare · H3205יָלַד yâlad
- Eliphaz · H464אֱלִיפַז ʼĔlîyphaz
- Amalek · H6002עֲמָלֵק ʻĂmâlêq
- sons · H1121בֵּן bên
- Adah · H5711עָדָה ʻÂdâh
- Esau’s · H6215עֵשָׂו ʻÊsâv
- wife · H802אִשָּׁה ʼishshâh