Genesis · chapter 42 · verse 22
Genesis 42:22 in Kannada
ಆಗ ರೂಬೇನನು ಅವರಿಗೆ ಪ್ರತ್ಯುತ್ತರವಾಗಿ--ಆ ಹುಡುಗನಿಗೆ ಏನೂ ಕೇಡುಮಾಡಬೇಡಿರಿ ಎಂದು ನಾನು ನಿಮಗೆ ಹೇಳಿ ದಾಗ್ಯೂ ನೀವು ಕೇಳಲಿಲ್ಲ. ಆದದರಿಂದ ಈಗ ಇಗೋ, ಅವನ ರಕ್ತವು ನಮ್ಮ ಮೇಲೆ ಇದೆ ಅಂದನು.
Aaga roobenanu avarige pratyuttaravaagi--aa huduganige enoo kedumaadabediri endu naanu nimage heli daagyoo neevu kelalilla. Aadadarinda eega igo, avana raktavu namma mele ide andanu.
Genesis 42:22 in English
- King James Version (KJV)
- And Reuben answered them, saying, Spake I not unto you, saying, Do not sin against the child; and ye would not hear? therefore, behold, also his blood is required.
- World English Bible (WEB)
- Reuben answered them, saying, “Didn’t I tell you, saying, ‘Don’t sin against the child,’ and you wouldn’t listen? Therefore also, behold, his blood is required.”
- American Standard Version (ASV)
- And Reuben answered them, saying, Spake I not unto you, saying, Do not sin against the child; and ye would not hear? therefore also, behold, his blood is required.
- Bible in Basic English (BBE)
- And Reuben said to them, Did I not say to you, Do the child no wrong? but you gave no attention; so now, punishment has come on us for his blood.
- Darby Translation (DBY)
- And Reuben answered them, saying, Did I not speak to you, saying, Do not sin against the lad? But ye did not hearken; and now behold, his blood also is required.
- Webster's Bible (WBS)
- And Reuben answered them, saying, Did I not speak to you, saying, Do not sin against the young man; and ye would not hear? therefore behold also his blood is required.
- Young's Literal Translation (YLT)
- And Reuben answereth them, saying, 'Spake I not unto you, saying, Sin not against the lad? and ye hearkened not; and his blood also, lo, it is required.'
Read in context
- 20ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು, ನೀವು ಸಾಯದೆ ಇರುವಿರಿ ಅಂದನು. ಅವರು ಹಾಗೆಯೇ ಮಾಡಿದರು.
- 21ಆಗ ಅವರು--ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ ಅವನ ಪ್ರಾಣ ಸಂಕಟವನ್ನು ನೋಡಿಯೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು ಎಂದು ಅಂದುಕೊಂಡರು.
- 22ಆಗ ರೂಬೇನನು ಅವರಿಗೆ ಪ್ರತ್ಯುತ್ತರವಾಗಿ--ಆ ಹುಡುಗನಿಗೆ ಏನೂ ಕೇಡುಮಾಡಬೇಡಿರಿ ಎಂದು ನಾನು ನಿಮಗೆ ಹೇಳಿ ದಾಗ್ಯೂ ನೀವು ಕೇಳಲಿಲ್ಲ. ಆದದರಿಂದ ಈಗ ಇಗೋ, ಅವನ ರಕ್ತವು ನಮ್ಮ ಮೇಲೆ ಇದೆ ಅಂದನು.
- 23ಆದರೆ ಅವನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಾನೆಂದು ಅವರಿಗೆ ಗೊತ್ತಾಗಲಿಲ್ಲ; ದ್ವಿಭಾಷೆಯಿಂದ ಅವರ ಸಂಗಡ ಮಾತನಾಡಿದನು.
- 24ಆಗ ಅವನು ಅವರ ಕಡೆಯಿಂದ ಹೊರಟುಹೋಗಿ ಅತ್ತು ಮತ್ತೆ ಅವರ ಬಳಿಗೆ ಬಂದು ಅವರ ಸಂಗಡ ಮಾತನಾಡಿ ಅವರಲ್ಲಿ ಸಿಮೆಯೋನನನ್ನು ಹಿಡಿಸಿ ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿಸಿದನು..
Cross references
- 1 Kings 2:32 1 ಅರಸುಗಳು 2:32ಆಗ ಕರ್ತನು ಅವನ ತಲೆಯ ಮೇಲೆ ಅವನ ರಕ್ತಾಪರಾಧ ವನ್ನು ಬರಮಾಡುವನು. ನನ್ನ ತಂದೆಯಾದ ದಾವೀ ದನು ತಿಳಿಯದಿರುವಾಗ ಅವನು ತನಗಿಂತ ನೀತಿಯುಳ್ಳ ಉತ್ತಮರಾದ ಇಬ್ಬರ ಮೇಲೆ ಬಿದ್ದು ಅವರನ್ನು ಕತ್ತಿ ಯಿಂದ ಕೊಂದನು. ಅವರು ಯಾರಂದರೆ, ಇಸ್ರಾ ಯೇಲಿನ ಸೈನ್ಯಕ್ಕೆ ಅಧಿಪತಿಯಾಗಿದ್ದ ನೇರನ ಮಗನಾದ ಅಬ್ನೇರನೂ ಯೆಹೂದ ಸೈನ್ಯಕ್ಕೆ ಅಧಿಪತಿಯಾಗಿದ್ದ ಯೆತೆರನ ಮಗನಾದ ಅಮಾಸನೂ.
- 2 Chronicles 24:22 2 ಪೂರ್ವಕಾಲವೃತ್ತಾಂತ 24:22ಹಾಗೆಯೇ ಇವನ ತಂದೆಯಾದ ಯೆಹೋಯಾದನು ತನಗೆ ತೋರಿಸಿದ ಕೃಪೆಯನ್ನು ಜ್ಞಾಪಕಮಾಡದೆ ಅರಸನಾದ ಯೆಹೋವಾಷನು ಅವನ ಮಗನನ್ನು ಕೊಂದುಹಾಕಿದನು. ಇವನು ಸಾಯುವಾಗ--ಕರ್ತನು ನೋಡಿ ವಿಚಾರಿಸಲಿ ಎಂದು ಹೇಳಿದನು.
- Psalm 9:12 ಕೀರ್ತನೆಗಳು 9:12ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.
- Genesis 37:21–22 ಆದಿಕಾಂಡ 37:21–22ಆದರೆ ರೂಬೇನನು ಅದನ್ನು ಕೇಳಿ ಅವನನ್ನು ಅವರ ಕೈಗಳಿಂದ ತಪ್ಪಿಸಿ--ಅವನನ್ನು ಕೊಲ್ಲುವದು ಬೇಡ ಅಂದನು. ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ ತನ್ನ ತಂದೆಯ ಬಳಿಗೆ ತಿರಿಗಿ ಕರೆದುಕೊಂಡು ಹೋಗುವ ಹಾಗೆ ಅವರಿಗೆ--ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ತಗ್ಗಿನಲ್ಲಿ ಅವನನ್ನು ಹಾಕಿರಿ; ಆದರೆ ಅವನ ಮೇಲೆ ಕೈಹಾಕಬೇಡಿರಿ ಅಂದನು.
- Genesis 9:5–6 ಆದಿಕಾಂಡ 9:5–6ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು. ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.
- Luke 11:50–51 ಲೂಕನು 11:50–51ಹೀಗೆ ಜಗತ್ತಿನ ಅಸ್ತಿವಾರ ಮೊದಲುಗೊಂಡು ಸುರಿಸಲ್ಪಟ್ಟ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಉತ್ತರ ಕೊಡಬೇಕಾಗಿರುವದು. ಹೇಬೆಲನ ರಕ್ತ ಮೊದಲುಗೊಂಡು ಯಜ್ಞವೇದಿಗೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು; ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Revelation 16:9 ಪ್ರಕಟನೆ 16:9ಮನುಷ್ಯರು ಬಲವಾದ ಕಾವಿನಿಂದ ಕಂದಿಹೋದರೂ ಅವರು ದೇವರನ್ನು ಘನಪಡಿಸುವ ಹಾಗೆ ಮಾನಸಾಂತರ ಮಾಡಿಕೊಳ್ಳದೆ ಈ ಉಪದ್ರವ ಗಳ ಮೇಲೆ ಅಧಿಕಾರವುಳ್ಳ ದೇವರ ನಾಮವನ್ನು ದೂಷಿಸಿದರು.
- Luke 23:41 ಲೂಕನು 23:41ನಾವಂತೂ ನ್ಯಾಯವಾಗಿಯೇ ನಮ್ಮ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ ಅಂದನು.
- Genesis 37:29–30 ಆದಿಕಾಂಡ 37:29–30ರೂಬೇನನು ತಗ್ಗಿನ ಬಳಿಗೆ ತಿರಿಗಿ ಬಂದಾಗ ಇಗೋ, ಯೋಸೇಫನು ತಗ್ಗಿನಲ್ಲಿ ಇಲ್ಲದ್ದರಿಂದ ತನ್ನ ವಸ್ತ್ರಗಳನ್ನು ಹರಿದು ಕೊಂಡನು. ಅವನು ತನ್ನ ಸಹೋದರರ ಬಳಿಗೆ ತಿರಿಗಿಹೋಗಿ--ಆ ಮಗುವು ಇಲ್ಲವಲ್ಲಾ; ಹಾಗಾದರೆ ನಾನು ಎಲ್ಲಿಗೆ ಹೋಗಲಿ ಅಂದನು.
- Genesis 4:10 ಆದಿಕಾಂಡ 4:10ಆತನು--ನೀನು ಮಾಡಿದ್ದೇನು? ನಿನ್ನ ಸಹೋದರನ ರಕ್ತದ ಸ್ವರವು ಭೂಮಿಯಿಂದ ನನ್ನನ್ನು ಕೂಗುತ್ತದೆ.
- Ezekiel 3:18 ಯೆಹೆಜ್ಕೇಲನು 3:18ನಾನು ದುಷ್ಟನಿಗೆ--ನೀನು ನಿಶ್ಚಯವಾಗಿ ಸಾಯುವಿ ಯೆಂದು ಹೇಳುವಾಗ ನೀನು ಅವನನ್ನು ಎಚ್ಚರಿಸದೆ ಅವನನ್ನು ಬದುಕಿಸುವ ಹಾಗೆ ದುಷ್ಟನನ್ನು ಅವನ ದುಷ್ಟಮಾರ್ಗದ ವಿಷಯದಲ್ಲಿ ಎಚ್ಚರಿಸಿ ಮಾತನಾಡದೆ ಹೋದರೆ ಆ ದುಷ್ಟನು ತನ್ನ ಅಕ್ರಮದಲ್ಲೇ ಸಾಯು ವನು. ಆದರೆ ಅವನ ರಕ್ತವನ್ನು ನಿನ್ನ ಕೈಯಿಂದ ದುಷ್ಟತ್ವ ಕ್ಕಾಗಿ ನಾನು ವಿಚಾರಿಸುವೆನು.
- Acts 28:4 ಅಪೊಸ್ತಲರ ಕೃತ್ಯಗಳು 28:4ಆ ವಿಷಜಂತು ಅವನ ಕೈಯಿಂದ ಜೋತಾಡುವದನ್ನು ಆ ಅನಾಗರಿಕರು ನೋಡಿ--ಈ ಮನುಷ್ಯನು ಸಮುದ್ರದಿಂದ ತಪ್ಪಿಸಿ ಕೊಂಡರೂ ಪ್ರತೀಕಾರವು ಇವನನ್ನು ಬದುಕಗೊಡಿಸು ವದಿಲ್ಲ. ಇವನು ನಿಸ್ಸಂದೇಹವಾಗಿ ಕೊಲೆ ಪಾತಕನು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.