Genesis · chapter 42 · verse 20
Genesis 42:20 in Kannada
ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು, ನೀವು ಸಾಯದೆ ಇರುವಿರಿ ಅಂದನು. ಅವರು ಹಾಗೆಯೇ ಮಾಡಿದರು.
Nimma tammanannu nanna balige karatanniri. Aaga nimma maatugalu satyavendu drudhavaaguvavu, neevu saayade iruviri andanu. Avaru haageye maadidaru.
Genesis 42:20 in English
- King James Version (KJV)
- But bring your youngest brother unto me; so shall your words be verified, and ye shall not die. And they did so.
- World English Bible (WEB)
- Bring your youngest brother to me; so will your words be verified, and you won’t die.” They did so.
- American Standard Version (ASV)
- and bring your youngest brother unto me; so shall your words be verified, and ye shall not die. And they did so.
- Bible in Basic English (BBE)
- And come back to me with your youngest brother, so that your words may be seen to be true, and you will not be put to death. This is what you are to do.
- Darby Translation (DBY)
- and bring your youngest brother to me, in order that your words be verified, and that ye may not die. And they did so.
- Webster's Bible (WBS)
- But bring your youngest brother to me; so shall your words be verified, and ye shall not die. And they did so.
- Young's Literal Translation (YLT)
- and your young brother ye bring unto me, and your words are established, and ye die not;' and they do so.
Read in context
- 18ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ--ಇದನ್ನು ಮಾಡಿ ಬದುಕಿರಿ, ಯಾಕಂದರೆ ನಾನು ದೇವರಿಗೆ ಭಯಪಡುವವನಾ ಗಿದ್ದೇನೆ.
- 19ನೀವು ಸತ್ಯವಂತರಾಗಿದ್ದರೆ ನಿಮ್ಮ ಸಹೋದರರಲ್ಲಿ ಒಬ್ಬನು ನೀವು ಇದ್ದ ಸೆರೆಮನೆಯಲ್ಲಿ ಬಂಧಿಸಲ್ಪಡಲಿ. ಆದರೆ ನೀವು ನಿಮ್ಮ ಮನೆಗಳ ಕ್ಷಾಮಕ್ಕೆ ಧಾನ್ಯವನ್ನು ತಕ್ಕೊಂಡು ಹೋಗಿರಿ.
- 20ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು, ನೀವು ಸಾಯದೆ ಇರುವಿರಿ ಅಂದನು. ಅವರು ಹಾಗೆಯೇ ಮಾಡಿದರು.
- 21ಆಗ ಅವರು--ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ ಅವನ ಪ್ರಾಣ ಸಂಕಟವನ್ನು ನೋಡಿಯೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು ಎಂದು ಅಂದುಕೊಂಡರು.
- 22ಆಗ ರೂಬೇನನು ಅವರಿಗೆ ಪ್ರತ್ಯುತ್ತರವಾಗಿ--ಆ ಹುಡುಗನಿಗೆ ಏನೂ ಕೇಡುಮಾಡಬೇಡಿರಿ ಎಂದು ನಾನು ನಿಮಗೆ ಹೇಳಿ ದಾಗ್ಯೂ ನೀವು ಕೇಳಲಿಲ್ಲ. ಆದದರಿಂದ ಈಗ ಇಗೋ, ಅವನ ರಕ್ತವು ನಮ್ಮ ಮೇಲೆ ಇದೆ ಅಂದನು.
Cross references
- Genesis 44:23 ಆದಿಕಾಂಡ 44:23ಆಗ ನೀನು ನಿನ್ನ ದಾಸರಿಗೆ--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು ಎಂದು ನೀನು ಹೇಳಿದಿ.
- Genesis 43:5 ಆದಿಕಾಂಡ 43:5ಅವನನ್ನು ಕಳುಹಿಸದೆ ಹೋದರೆ ನಾವು ಹೋಗುವದಿಲ್ಲ; ಯಾಕಂದರೆ ಆ ಮನುಷ್ಯನು--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಬಾರದು ಎಂದು ನಮಗೆ ಹೇಳಿದ್ದಾನೆ ಅಂದನು.
- Genesis 42:34 ಆದಿಕಾಂಡ 42:34ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ, ಆಗ ನೀವು ಗೂಢಚಾರರಲ್ಲವೆಂದೂ ಯಥಾರ್ಥ ರೆಂದೂ ತಿಳುಕೊಂಡು ನಿಮ್ಮ ಸಹೋದರನನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು ಎಂದು ಹೇಳಿದನು ಅಂದರು.
- Genesis 42:15 ಆದಿಕಾಂಡ 42:15ನೀವು ಪರೀಕ್ಷಿಸಲ್ಪಡುವದು ಹೇಗಂದರೆ--ನಿಮ್ಮ ತಮ್ಮನನ್ನು ಇಲ್ಲಿಗೆ ತಾರದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಗೆ ಹೋಗಬಾರದು.
- Genesis 6:22 ಆದಿಕಾಂಡ 6:22ಹಾಗೆಯೇ ನೋಹನು ಮಾಡಿದನು; ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು.
- Genesis 43:19 ಆದಿಕಾಂಡ 43:19ಆಗ ಅವರು ಯೋಸೇಫನ ಮನೆಯ ಉಗ್ರಾಣಿಕನ ಬಳಿಗೆ ಹೋಗಿ ಮನೆಯ ಬಾಗಲಿನ ಮುಂದೆ ಅವನ ಸಂಗಡ ಮಾತನಾಡಿ--
- John 2:5 ಯೋಹಾನನು 2:5ಆತನ ತಾಯಿಯು ಸೇವಕರಿಗೆ--ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ ಅಂದಳು.
- Genesis 42:26 ಆದಿಕಾಂಡ 42:26ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಅಲ್ಲಿಂದ ಹೋಗಿಬಿಟ್ಟರು.