Genesis · chapter 46 · verse 20
Genesis 46:20 in Kannada
ಯೋಸೇಫನಿಗೆ ಐಗುಪ್ತ ದೇಶದಲ್ಲಿ ಮಕ್ಕಳು ಹುಟ್ಟಿದರು: ಓನಿನ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತಳು ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಅವನಿಗೆ ಹೆತ್ತಳು.
Yosephanige aigupta deshadalli makkalu huttidaru: onina yaajakanaagiruva poteepherana magalaada aasanatalu manasseyannoo ephraayaama nannoo avanige hettalu.
Genesis 46:20 in English
- King James Version (KJV)
- And unto Joseph in the land of Egypt were born Manasseh and Ephraim, which Asenath the daughter of Poti-pherah priest of On bare unto him.
- World English Bible (WEB)
- To Joseph in the land of Egypt were born Manasseh and Ephraim, whom Asenath, the daughter of Potiphera, priest of On, bore to him.
- American Standard Version (ASV)
- And unto Joseph in the land of Egypt were born Manasseh and Ephraim, whom Asenath, the daughter of Poti-phera priest of On, bare unto him.
- Bible in Basic English (BBE)
- And Joseph had Manasseh and Ephraim in the land of Egypt, by Asenath, the daughter of Poti-phera, priest of On.
- Darby Translation (DBY)
- And to Joseph in the land of Egypt were born Manasseh and Ephraim, whom Asnath bore to him, the daughter of Potipherah the priest in On.
- Webster's Bible (WBS)
- And to Joseph in the land of Egypt were born Manasseh and Ephraim, whom Asenath the daughter of Poti-pherah priest of On bore to him.
- Young's Literal Translation (YLT)
- And born to Joseph in the land of Egypt (whom Asenath daughter of Poti-Pherah, priest of On, hath borne to him) [are] Manasseh and Ephraim.
Read in context
- 18ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಹದಿನಾರು ಮಂದಿಯಾಗಿದ್ದ ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು.
- 19ಯಾಕೋಬನ ಹೆಂಡತಿಯಾದ ರಾಹೇಲಳ ಕುಮಾರರು: ಯೋಸೇಫ್ ಬೆನ್ಯಾವಿಾನ್ ಎಂಬವರು.
- 20ಯೋಸೇಫನಿಗೆ ಐಗುಪ್ತ ದೇಶದಲ್ಲಿ ಮಕ್ಕಳು ಹುಟ್ಟಿದರು: ಓನಿನ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತಳು ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಅವನಿಗೆ ಹೆತ್ತಳು.
- 21ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್ ಅಶ್ಬೇಲ್ ಗೇರಾ ನಾಮಾನ್ ಏಹೀರೋಷ್ ಮುಪ್ಪೀಮ್ ಹುಪ್ಪೀಮ್ ಆರ್ದ ಎಂಬವರು.
- 22ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಕುಮಾರರು. ಎಲ್ಲಾ ಕೂಡಿ ಹದಿನಾಲ್ಕು ಮಂದಿ.
Cross references
- Genesis 41:50–52 ಆದಿಕಾಂಡ 41:50–52ಇದಲ್ಲದೆ ಬರಗಾಲದ ವರುಷಗಳು ಬರುವದಕ್ಕೆ ಮುಂಚೆ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಓನಿನ ಯಾಜಕನಾದ ಪೋಟೀಫೆರನ ಮಗಳಾಗಿದ್ದ ಆಸನತ್ ಅವರನ್ನು ಯೋಸೇಫನಿಗೆ ಹೆತ್ತಳು. ಚೊಚ್ಚಲ ಮಗನಿಗೆ ಯೋಸೇಫನು ಮನಸ್ಸೆ ಎಂದು ಹೆಸರಿಟ್ಟನು. ಯಾಕಂದರೆ ಅವನು--ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನೆಲ್ಲಾ ಮರೆತುಬಿಡುವಂತೆ ಮಾಡಿದನು ಅಂದನು. ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯಾಮ್ ಎಂದು ಹೆಸರಿಟ್ಟನು: ಯಾಕಂದರೆ ನಾನು ಬಾಧೆಯನ್ನನುಭವಿಸಿದ ದೇಶದಲ್ಲಿ ಫಲಭರಿತ ನಾಗುವಂತೆ ದೇವರು ಮಾಡಿದ್ದಾನೆ ಅಂದನು.
- Genesis 41:45 ಆದಿಕಾಂಡ 41:45ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಆಗ ಯೋಸೇಫನು ಐಗುಪ್ತದೇಶದಲ್ಲೆಲ್ಲಾ ಹೊರಟು ಸಂಚರಿಸಿದನು.
- Numbers 1:32–35 ಅರಣ್ಯಕಾಂಡ 1:32–35ಯೋಸೇಫನ ಮಕ್ಕಳಾದ ಎಫ್ರಾಯಾಮ್ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಎಫ್ರಾಯಾಮ್ನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತು ಸಾವಿರದ ಐದುನೂರು. ಮನಸ್ಸೆಯ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ಕರಾದವರೆಲ್ಲರೂ ಮನ ಸ್ಸೆಯ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಇನ್ನೂರು.
- Deuteronomy 33:13–17 ಧರ್ಮೋಪದೇಶಕಾಂಡ 33:13–17ಯೋಸೇಫನ ವಿಷಯವಾಗಿ--ಅವನ ದೇಶವು ಆಕಾಶದ ಅಮೂಲ್ಯವಾದವುಗಳಿಂದಲೂ ಮಂಜಿ ನಿಂದಲೂ ಕೆಳಗೆ ಮಲಗಿರುವ ಅಗಾಧದಿಂದಲೂ ಸೂರ್ಯನ ಆದಾಯದ ಅಮೂಲ್ಯವಾದ ಫಲಗಳಿಂದಲೂ ಚಂದ್ರನ ಆದಾಯದ ಅಮೂಲ್ಯವಾದ ವುಗಳಿಂದಲೂ ಪೂರ್ವಕಾಲದ ಪರ್ವತಗಳ ಮುಖ್ಯವಾದವುಗ ಳಿಂದಲೂ ನಿತ್ಯವಾದ ಬೆಟ್ಟಗಳ ಅಮೂಲ್ಯವಾದ ವುಗಳಿಂದಲೂ ಭೂಮಿಯ ಅಮೂಲ್ಯವಾದವುಗಳಿಂದಲೂ ಅದರ ಸಂಪೂರ್ಣತೆಯಿಂದಲೂ ಕರ್ತನ ಕಡೆಯಿಂದ ಆಶೀರ್ವಾದ ಹೊಂದಲಿ; ಪೊದೆಯಲ್ಲಿ ವಾಸವಾಗಿ ದ್ದಾತನ ದಯೆಯು ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕವಾದವನ ತಲೆಯ ಮೇಲೆಯೂ ಬರಲಿ. ಅವನ ಚೊಚ್ಚಲ ಹೋರಿಯಂತೆ ಅವನಿಗೆ ಪ್ರಭೆ ಇರುವದು; ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇವೆ. ಅವುಗಳಿಂದ ಜನಗಳನ್ನು ಒಟ್ಟಿಗೆ ಭೂಮಿಯ ಅಂತ್ಯಗಳ ವರೆಗೆ ನೂಕುತ್ತಾನೆ. ಇವು ಎಫ್ರಾಯಾಮನ ಹತ್ತು ಸಾವಿರಗಳೂ ಇವು ಮನಸ್ಸೆಯ ಸಹಸ್ರವೂ ಆಗಿವೆ ಎಂದು ಹೇಳಿದನು.
- 1 Chronicles 7:14–29 1 ಪೂರ್ವಕಾಲವೃತ್ತಾಂತ 7:14–29ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು. ಆದರೆ ಈ ಮಾಕೀರನು ಹುಪ್ಪೀಮನು ಶುಪ್ಪೀಮನು ಎಂಬವರ ಸಹೋದರಿಯಾದ ಮಾಕಳನ್ನು ಹೆಂಡತಿ ಯಾಗಿ ತಕ್ಕೊಂಡನು. ಅವನ ಮೊಮ್ಮಗನ ಹೆಸರು ಚೆಲೋಫಾದನು; ಈ ಚೆಲೋಫಾದನಿಗೆ ಕುಮಾರ್ತೆ ಗಳು ಇದ್ದರು. ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಪೆರೆಷೆಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್; ಇವನಿಗೆ ಊಲಾಮನು, ರೆಕೆಮನು ಎಂಬ ಹೆಸರುಳ್ಳ ಕುಮಾರ ರಿದ್ದರು. ಊಲಾಮನ ಮಗ ಬೆದಾನನು. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಕುಮಾರರು. ಅವನ ಸಹೋದರಿಯಾದ ಹಮ್ಮೋಲೆಕೆತಳು ಈಷ್ಹೋದನನ್ನೂ ಅಬೀಯೆಜೆರ ನನ್ನೂ ಮಹ್ಲನನ್ನೂ ಹೆತ್ತಳು. ಶೆವಿಾದನ ಕುಮಾ ರರು--ಅಹ್ಯಾನನು, ಶೆಕೆಮನು, ಲಿಕ್ಹೀಯು, ಅನೀಯಾಮನು. ಎಫ್ರಾಯಾಮನ ಕುಮಾರರು--ಶೂತೆಲಹನು; ಇವನ ಮಗನು ಬೆರದನು. ಇವನ ಮಗನು ತಹತನು, ಇವನ ಮಗನು ಎಲ್ಲಾದನು; ಇವನ ಮಗನು ತಹತನು. ಇವನ ಮಗನು ಜಾಬಾದನು; ಇವನ ಮಕ್ಕಳು --ಶೂತೆಲಹನು ಎಜೆರನೂ ಎಲ್ಲಾದನೂ. ಆ ದೇಶ ದಲ್ಲಿ ಹುಟ್ಟಿದ ಗತ್ನವರು ಇವರ ದನಗಳನ್ನು ಸುಲು ಕೊಳ್ಳಲು ಇಳಿದು ಬಂದಾಗ ಇವರನ್ನು ಕೊಂದು ಹಾಕಿದರು. ಅವರ ತಂದೆಯಾದ ಎಫ್ರಾಯಾಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ ಅವನ ಸಹೋದರರು ಅವನನ್ನು ಆದರಿಸಲು ಬಂದರು. ಅವನು ತನ್ನ ಹೆಂಡತಿಯನ್ನು ಕೂಡಿದಾಗ ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯನೆಂಬ ಹೆಸರಿಟ್ಟನು. ಇವನ ಕುಮಾರ್ತೆಯ ಹೆಸರು ಶೇರಳು; ಇವಳು ಮೇಲಣ ಮತ್ತು ಕೆಳಗಣ ಬೇತ್ಹೋರೋ ನನ್ನೂ, ಉಜ್ಜೇನ್ಶೇರವನ್ನೂ ಕಟ್ಟಿಸಿದಳು. ಬೆರೀಯ ಮಗನು ರೆಫಹ, ಇವನ ಮಗನು ರೆಷೆಫನು; ಇವನಮಗನು ತೆಲಹನು. ಇವನ ಮಗನು ತಹನ್, ಇವನ ಮಗನು ಲದ್ದಾನ್, ಇವನ ಮಗನು ಅವ್ಮೆಾಹೂದನು, ಇವನ ಮಗನು ಎಲೀಷಾಮನು, ಇವನ ಮಗನು ನೋನನು, ಇವನ ಮಗನು ಯೆಹೋಷುವನು. ಅವರ ಸ್ವಾಸ್ಥ್ಯಗಳೂ ನಿವಾಸಗಳೂ ಯಾವ ವೆಂದರೆ, ಬೇತೇಲೂ ಅದರ ಗ್ರಾಮಗಳೂ ಮೂಡಣ ದಿಕ್ಕಿನಲ್ಲಿ ನಾರಾನೂ ಪಡುವಣ ದಿಕ್ಕಿನಲ್ಲಿ ಗೆಜೆರೂ ಅದರ ಗ್ರಾಮಗಳೂ ಶೆಕೆಮೂ ಅದರ ಗ್ರಾಮಗಳೂ ಗಾಜವೂ ಅದರ ಗ್ರಾಮಗಳೂ ಮನಸ್ಸೆಯ ಮಕ್ಕಳ ಮೇರೆಯಲ್ಲಿರುವ ಬೇತ್ಷಾನೂ ಅದರ ಗ್ರಾಮಗಳೂ ತಾನಾಕವೂ ಅದರ ಗ್ರಾಮಗಳೂ ಮೆಗಿದ್ದೋನೂ ಅದರ ಗ್ರಾಮಗಳೂ ದೋರೂ ಅದರ ಗ್ರಾಮಗಳೂ ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಕುಮಾರರು ವಾಸವಾಗಿದ್ದರು.
- Numbers 26:28–37 ಅರಣ್ಯಕಾಂಡ 26:28–37ಕುಟುಂಬಗಳ ಪ್ರಕಾರ ಯೋಸೇಫನ ಕುಮಾ ರರು: ಮನಸ್ಸೆಯೂ ಎಫ್ರಾಯಾಮನೂ. ಮನಸ್ಸೆಯ ಕುಮಾರರು: ಮಾಕೀರನಿಂದ ಮಾಕೀರ್ಯರ ಕುಟುಂಬ. ಮಾಕೀರನು ಗಿಲ್ಯಾದನನ್ನು ಪಡೆದನು; ಗಿಲ್ಯಾದ ನಿಂದ ಗಿಲ್ಯಾದ್ಯರ ಕುಟುಂಬ; ಗಿಲ್ಯಾದನ ಕುಮಾರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ; ಅಸ್ರೀಯೇಲ ನಿಂದ ಅಸ್ರೀಯೇಲ್ಯರ ಕುಟುಂಬ; ಶೆಕೆಮನಿಂದ ಶೆಕೆಮ್ಯರ ಕುಟುಂಬ; ಶೆವಿಾದಾಯನಿಂದ ಶೆವಿಾದಾ ಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ. ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಇದ್ದರು; ಕುಮಾರ್ತೆಯರ ಹೆಸರುಗಳು. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ. ಮನಸ್ಸೆಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಐವತ್ತೆರಡು ಸಾವಿರದ ಏಳು ನೂರು ಮಂದಿ. ಕುಟುಂಬಗಳ ಪ್ರಕಾರ ಎಫ್ರಾಯಾಮನ ಕುಮಾ ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನ್ಯರ ಕುಟುಂಬ; ಶೂತೆಲಹನ ಕುಮಾರರು ಏರಾನನಿಂದ ಏರಾನ್ಯರ ಕುಟುಂಬ. ಎಫ್ರಾಯಾಮನ ಕುಮಾರರ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಐನೂರು ಮಂದಿ. ಕುಟುಂಬ ಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ.
- 1 Chronicles 5:23–26 1 ಪೂರ್ವಕಾಲವೃತ್ತಾಂತ 5:23–26ಮನಸ್ಸೆಯ ಅರ್ಧಗೋತ್ರದ ಮಕ್ಕಳು ದೇಶ ದಲ್ಲಿ ವಾಸಮಾಡಿ ಬಾಷಾನ್ ಮೊದಲುಗೊಂಡು ಬಾಳ್ಹೆರ್ಮೋನು ಸೆನೀರು ಹೆರ್ಮೋನ್ ಬೆಟ್ಟದ ವರೆಗೂ ಹಬ್ಬಿಕೊಂಡರು. ಅವರ ಪಿತೃಗಳ ಮನೆ ಯಲ್ಲಿರುವ ಯಜಮಾನರು ಯಾರಂದರೆ--ಏಫೆರನು, ಇಷ್ಷೀಯು, ಎಲೀಯೇಲನು, ಅಜ್ರಿಯೇಲನು, ಯೆರೆ ವಿಾಯನು, ಹೋದವ್ಯನು, ಯೆಹ್ತಿಯೇಲನು. ಇವರು ಪರಾಕ್ರಮಶಾಲಿಗಳಾಗಿಯೂ ಹೆಸರುಗೊಂಡವರಾ ಗಿಯೂ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಇದ್ದರು. ಆದರೆ ಅವರು ತಮ್ಮ ಪಿತೃಗಳ ದೇವರಿಗೆ ವಿರೋಧವಾಗಿ ಅಪರಾಧಮಾಡಿ ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.ಆದ ಕಾರಣ ಇಸ್ರಾಯೇಲಿನ ದೇವರು ಅಶ್ಯೂರಿನ ಅರಸ ನಾದ ಪೂಲನ ಆತ್ಮವನ್ನೂ ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರದವರನ್ನೂ ಹಲಹಕ್ಕೂ ಹಾಬೋರಿಗೂ ಹಾರಕ್ಕೂ ಗೋಜಾನ್ ನದಿಯ ಪ್ರದೇಶಕ್ಕೂ ತಕ್ಕೊಂಡುಹೋದರು. ಅವರು ಇಂದಿನ ವರೆಗೂ ಅಲ್ಲೇ ಇದ್ದಾರೆ. ಆದ ಕಾರಣ ಇಸ್ರಾಯೇಲಿನ ದೇವರು ಅಶ್ಯೂರಿನ ಅರಸ ನಾದ ಪೂಲನ ಆತ್ಮವನ್ನೂ ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರದವರನ್ನೂ ಹಲಹಕ್ಕೂ ಹಾಬೋರಿಗೂ ಹಾರಕ್ಕೂ ಗೋಜಾನ್ ನದಿಯ ಪ್ರದೇಶಕ್ಕೂ ತಕ್ಕೊಂಡುಹೋದರು. ಅವರು ಇಂದಿನ ವರೆಗೂ ಅಲ್ಲೇ ಇದ್ದಾರೆ.
- Genesis 48:13–14 ಆದಿಕಾಂಡ 48:13–14ತರುವಾಯ ಯೋಸೇಫನು ತನ್ನ ಬಲಗಡೆಯಲ್ಲಿ ಇಸ್ರಾಯೇಲನ ಎಡಗೈಗೆ ಎದುರಾಗಿ ಎಫ್ರಾಯಾಮನನ್ನೂ ತನ್ನ ಎಡಗಡೆಯಲ್ಲಿ ಇಸ್ರಾಯೇಲನ ಬಲಗೈಗೆ ಎದುರಾಗಿ ಮನಸ್ಸೆಯನ್ನೂ ನಿಲ್ಲಿಸಿ ಅವರಿಬ್ಬರನ್ನು ತನ್ನ ತಂದೆಯ ಬಳಿಗೆ ತಂದನು. ಆಗ ಇಸ್ರಾಯೇಲನು ತನ್ನ ಬಲಗೈಯನ್ನು ಚಾಚಿ ಚಿಕ್ಕವನಾದ ಎಫ್ರಾಯಾಮನ ತಲೆಯ ಮೇಲೆಯೂ ತನ್ನ ಎಡಗೈಯನ್ನು ಮನಸ್ಸೆಯ ತಲೆಯ ಮೇಲೆಯೂ ಇಟ್ಟನು. ಮನಸ್ಸೆಯು ಹಿರಿಯವನಾಗಿದ್ದರೂ ಬೇಕೆಂದೇ ಅವನು ತನ್ನ ಕೈಗಳನ್ನು ಹಾಗೆ ಇಟ್ಟನು.
- Genesis 48:4–5 ಆದಿಕಾಂಡ 48:4–5ಆತನು ನನಗೆ--ಇಗೋ, ನಿನ್ನನ್ನು ಅಭಿವೃದ್ಧಿಪಡಿಸಿ ಹೆಚ್ಚಿಸಿ ಜನ ಸಮೂಹವನ್ನಾಗಿ ಮಾಡಿ ನಿನ್ನ ತರುವಾಯ ಹುಟ್ಟುವ ನಿನ್ನ ಸಂತತಿಗೆ ಈ ದೇಶವನ್ನು ಶಾಶ್ವತ ಸ್ವಾಸ್ಥ್ಯವಾಗಿ ಕೊಡುತ್ತೇನೆ ಎಂದು ಹೇಳಿದನು. ಈಗ ನಾನು ನಿನ್ನ ಬಳಿಗೆ ಐಗುಪ್ತಕ್ಕೆ ಬರುವ ಮೊದಲು ಐಗುಪ್ತದಲ್ಲಿ ನಿನಗೆ ಹುಟ್ಟಿದ ಇಬ್ಬರು ಕುಮಾರರಾದ ಎಫ್ರಾಯಾಮ್ ಮನಸ್ಸೆಯರು ನನ್ನ ವರು ಮತ್ತು ಅವರು ರೂಬೇನ್ ಸಿಮೆಯೋನ್ ಇವ ರಂತೆ ನನ್ನವರಾಗಿರಬೇಕು.
- Genesis 48:20 ಆದಿಕಾಂಡ 48:20ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವ ದಿಸಿ--ನಿನ್ನಲ್ಲಿ ಇಸ್ರಾಯೇಲ್ ಆಶೀರ್ವದಿಸಲ್ಪಡು ವದು. ಎಫ್ರಾಯಾಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲೆಂದು ಹೇಳುವ ಹೇಳಿಕೆಯಾಗುವದು ಎಂದು ಹೇಳಿ ಎಫ್ರಾಯಾಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.
Original words (Hebrew)
- Joseph · H3130יוֹסֵף Yôwçêph
- land · H776אֶרֶץ ʼerets
- Egypt · H4714מִצְרַיִם Mitsrayim
- born · H3205יָלַד yâlad
- Manasseh · H4519מְנַשֶּׁה Mᵉnashsheh
- Ephraim · H669אֶפְרַיִם ʼEphrayim
- Asenath · H621אָסְנַת ʼÂçᵉnath
- daughter · H1323בַּת bath
- Poti-pherah · H6319פּוֹטִי פֶרַע Pôwṭîy Pheraʻ
- priest · H3548כֹּהֵן kôhên
- On · H204אוֹן ʼÔwn
- bare · H3205יָלַד yâlad