Genesis · chapter 48 · verse 3
Genesis 48:3 in Kannada
ಆಗ ಯಾಕೋಬನು ಯೋಸೇಫ ನಿಗೆ ಸರ್ವಶಕ್ತನಾದ ದೇವರು ಕಾನಾನ್ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು.
Aaga yaakobanu yosepha nige sarvashaktanaada devaru kaanaandeshada looj emballi nanage kaanisikondu nannannu aasheervadisidanu.
Genesis 48:3 in English
- King James Version (KJV)
- And Jacob said unto Joseph, God Almighty appeared unto me at Luz in the land of Canaan, and blessed me,
- World English Bible (WEB)
- Jacob said to Joseph, “God Almighty appeared to me at Luz in the land of Canaan, and blessed me,
- American Standard Version (ASV)
- And Jacob said unto Joseph, God Almighty appeared unto me at Luz in the land of Canaan, and blessed me,
- Bible in Basic English (BBE)
- And Jacob said to Joseph, God, the Ruler of all, came to me in a vision at Luz in the land of Canaan, and gave me his blessing,
- Darby Translation (DBY)
- And Jacob said to Joseph, The Almighty God appeared to me at Luz in the land of Canaan, and blessed me,
- Webster's Bible (WBS)
- And Jacob said to Joseph, God Almighty appeared to me at Luz, in the land of Canaan, and blessed me,
- Young's Literal Translation (YLT)
- And Jacob saith unto Joseph, 'God Almighty hath appeared unto me, in Luz, in the land of Canaan, and blesseth me,
Read in context
- 1ಇವುಗಳಾದ ಮೇಲೆ ಒಬ್ಬನು ಯೋಸೇಫನಿಗೆ--ಇಗೋ, ನಿನ್ನ ತಂದೆಯು ಅಸ್ವಸ್ಥ ನಾಗಿದ್ದಾನೆ ಎಂದು ಹೇಳಿದನು. ಆಗ ಅವನು ತನ್ನ ಇಬ್ಬರು ಕುಮಾರರಾದ ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಕರಕೊಂಡು ಬಂದನು.
- 2ಆಗ ಒಬ್ಬನು ಯಾಕೋಬನಿಗೆ--ಇಗೋ, ನಿನ್ನ ಮಗನಾದ ಯೋಸೇ ಫನು ನಿನ್ನ ಬಳಿಗೆ ಬರುತ್ತಾನೆ ಎಂದು ತಿಳಿಸಿದಾಗ ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕೂತುಕೊಂಡನು.
- 3ಆಗ ಯಾಕೋಬನು ಯೋಸೇಫ ನಿಗೆ ಸರ್ವಶಕ್ತನಾದ ದೇವರು ಕಾನಾನ್ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು.
- 4ಆತನು ನನಗೆ--ಇಗೋ, ನಿನ್ನನ್ನು ಅಭಿವೃದ್ಧಿಪಡಿಸಿ ಹೆಚ್ಚಿಸಿ ಜನ ಸಮೂಹವನ್ನಾಗಿ ಮಾಡಿ ನಿನ್ನ ತರುವಾಯ ಹುಟ್ಟುವ ನಿನ್ನ ಸಂತತಿಗೆ ಈ ದೇಶವನ್ನು ಶಾಶ್ವತ ಸ್ವಾಸ್ಥ್ಯವಾಗಿ ಕೊಡುತ್ತೇನೆ ಎಂದು ಹೇಳಿದನು.
- 5ಈಗ ನಾನು ನಿನ್ನ ಬಳಿಗೆ ಐಗುಪ್ತಕ್ಕೆ ಬರುವ ಮೊದಲು ಐಗುಪ್ತದಲ್ಲಿ ನಿನಗೆ ಹುಟ್ಟಿದ ಇಬ್ಬರು ಕುಮಾರರಾದ ಎಫ್ರಾಯಾಮ್ ಮನಸ್ಸೆಯರು ನನ್ನ ವರು ಮತ್ತು ಅವರು ರೂಬೇನ್ ಸಿಮೆಯೋನ್ ಇವ ರಂತೆ ನನ್ನವರಾಗಿರಬೇಕು.
Cross references
- Genesis 35:9–12 ಆದಿಕಾಂಡ 35:9–12ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ ಅವನನ್ನು ಆಶೀರ್ವದಿಸಿದನು. ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು. ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು. ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು.
- Genesis 17:1 ಆದಿಕಾಂಡ 17:1ಅಬ್ರಾಮನು ತೊಂಭತ್ತೊಂಭತ್ತು ವರುಷದವನಾದಾಗ ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಾನೇ ಸರ್ವಶಕ್ತನಾದ ದೇವರು; ನನ್ನ ಸನ್ನಿಧಿಯಲ್ಲಿ ನಡೆದು ನೀನು ಸಂಪೂರ್ಣನಾಗಿರು.
- Genesis 28:3 ಆದಿಕಾಂಡ 28:3ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನೀನು ಜನಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ,
- Exodus 6:3 ವಿಮೋಚನಕಾಂಡ 6:3ನಾನೇ ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಸರ್ವಶಕ್ತನಾದ ದೇವರೆಂಬ ನಾಮದಲ್ಲಿ ಕಾಣಿಸಿಕೊಂಡೆನು. ಆದರೆ ಯೆಹೋವ ನೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಗೋಚರ ವಾಗಲಿಲ್ಲ.
- Genesis 35:6–7 ಆದಿಕಾಂಡ 35:6–7ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನ ಸಹಿತವಾಗಿ ಕಾನಾನ್ ದೇಶದಲ್ಲಿರುವ ಲೂಜಿಗೆ ಬಂದನು, ಅದೇ ಬೇತೇಲ್. ಅಲ್ಲಿ ಅವನು ಯಜ್ಞ ವೇದಿಯನ್ನು ಕಟ್ಟಿ ತಾನು ತನ್ನ ಸಹೋದರನ ಬಳಿ ಯಿಂದ ಓಡಿಹೋದಾಗ ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.
- Genesis 28:12–19 ಆದಿಕಾಂಡ 28:12–19ಆಗ ಅವನು ಕನಸು ಕಂಡನು. ಇಗೋ, ಏಣಿಯು ಭೂಮಿಯ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದರ ತುದಿಯು ಆಕಾಶಕ್ಕೆ ಮುಟ್ಟಿತ್ತು. ಇಗೋ, ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು. ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು. ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಆಗುವದು; ನೀನು ಪಶ್ಚಿಮ ಪೂರ್ವ ಉತ್ತರ ದಕ್ಷಿಣಗಳಿಗೆ ಹರಡಿಕೊಳ್ಳುತ್ತೀ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಕುಲದವರು ಆಶೀರ್ವದಿಸಲ್ಪ ಡುವರು. ಇಗೋ, ನಾನು ನಿನ್ನ ಸಂಗಡ ಇದ್ದು ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ ಈ ದೇಶಕ್ಕೆ ನಿನ್ನನ್ನು ತಿರಿಗಿ ಬರಮಾಡುವೆನು. ಯಾಕಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವ ವರೆಗೆ ನಿನ್ನನ್ನು ಬಿಡುವದಿಲ್ಲ ಅಂದನು. ತರುವಾಯ ಯಾಕೋಬನು ನಿದ್ರೆಯಿಂದ ಎಚ್ಚತ್ತು--ನಿಶ್ಚಯವಾಗಿ ಈ ಸ್ಥಳದಲ್ಲಿ ಕರ್ತನು ಇದ್ದಾನೆ. ಇದನ್ನು ನಾನು ಅರಿಯಲಿಲ್ಲ ಅಂದನು. ಅವನು ಭಯಪಟ್ಟು--ಈ ಸ್ಥಳವು ಎಷ್ಟೋ ಭಯಂಕರ ವಾದದ್ದು; ಇದು ದೇವರ ಮನೆಯೇ ಹೊರತು ಬೇರೆಯಲ್ಲ; ಇದೇ ಪರಲೋಕದ ಬಾಗಿಲು ಅಂದನು. ಯಾಕೋಬನು ಬೆಳಿಗ್ಗೆ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಸ್ತಂಭವಾಗಿ ನೆಟ್ಟು ಅದರ ಮೇಲೆ ಎಣ್ಣೆಯನ್ನು ಹೊಯ್ದನು. ಇದಲ್ಲದೆ ಅವನು ಆ ಸ್ಥಳಕ್ಕೆ ಬೇತೇಲ್ ಎಂದು ಹೆಸರಿಟ್ಟನು. ಆದರೆ ಅದಕ್ಕಿಂತ ಮೊದಲು ಆ ಪಟ್ಟಣಕ್ಕೆ ಲೂಜ್ ಎಂದು ಹೆಸರಿತ್ತು.
- Judges 1:23 ನ್ಯಾಯಸ್ಥಾಪಕರು 1:23ಆದರೆ ಮೊದಲು ಲೂಜ್ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಪಾಳತಿ ನೋಡಲು ಯೋಸೇಫನ ಮನೆಯವರು ಕಳುಹಿಸಿದರು.
- Revelation 21:11 ಪ್ರಕಟನೆ 21:11ಅದರಲ್ಲಿ ದೇವರ ಮಹಿಮೆ ಇತ್ತು; ಪಟ್ಟಣದ ಪ್ರಕಾಶವು ಅಮೂಲ್ಯವಾದ ಕಲ್ಲಿನ ಪ್ರಕಾಶಕ್ಕೆ ಸಮಾನವಾಗಿತ್ತು; ಅದು ಸೂರ್ಯ ಕಾಂತದಂತೆ ಥಳಥಳಿಸುತ್ತಿತ್ತು.
- Hosea 12:4 ಹೋಶೇಯ 12:4ಹೌದು, ದೂತನ ಮೇಲೆ ಅವನು ಬಲಹೊಂದಿ ಜಯಿಸಿದನು; ಅವನು ಅತ್ತು ಆತನಿಗೆ ವಿಜ್ಞಾಪನೆಯನ್ನು ಸಲ್ಲಿಸಿದನು; ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು; ಅಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು.