Genesis · chapter 9 · verse 11
Genesis 9:11 in Kannada
ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡ ಸ್ಥಾಪಿಸುತ್ತೇನೆ. ಅದೇನಂದರೆ, ಇನ್ನು ಮೇಲೆ ಜಲಪ್ರಳಯದಿಂದ ಶರೀರಗಳಾವವೂ ನಾಶವಾಗುವದಿಲ್ಲ. ಭೂಮಿಯನ್ನು ಹಾಳುಮಾಡುವದಕ್ಕೆ ಇನ್ನು ಜಲಪ್ರಳಯವು ಇರುವ ದಿಲ್ಲ ಎಂಬದೇ.
Nanna odambadikeyannu nimma sangada sthaapisuttene. Adenandare, innu mele jalapralayadinda shareeragalaavavoo naashavaaguvadilla. Bhoomiyannu haalumaaduvadakke innu jalapralayavu iruva dilla embade.
Genesis 9:11 in English
- King James Version (KJV)
- And I will establish my covenant with you; neither shall all flesh be cut off any more by the waters of a flood; neither shall there any more be a flood to destroy the earth.
- World English Bible (WEB)
- I will establish my covenant with you: All flesh will not be cut off any more by the waters of the flood. There will never again be a flood to destroy the earth.”
- American Standard Version (ASV)
- And I will establish my covenant with you; neither shall all flesh be cut off any more by the waters of the flood; neither shall there any more be a flood to destroy the earth.
- Bible in Basic English (BBE)
- And I will make my agreement with you; never again will all flesh be cut off by the waters; never again will the waters come over all the earth for its destruction.
- Darby Translation (DBY)
- And I establish my covenant with you, neither shall all flesh be cut off any more by the waters of a flood, and henceforth there shall be no flood to destroy the earth.
- Webster's Bible (WBS)
- And I will establish my covenant with you; neither shall all flesh be cut off any more by the waters of a flood; neither shall there any more be a flood to destroy the earth.
- Young's Literal Translation (YLT)
- And I have established My covenant with you, and all flesh is not any more cut off by waters of a deluge, and there is not any more a deluge to destroy the earth.'
Read in context
- 9ಇಗೋ, ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡಲೂ ನಿಮ್ಮ ತರುವಾಯ ನಿಮ್ಮ ಸಂತತಿ ಯವರ ಸಂಗಡಲೂ
- 10ನಾವೆಯೊಳಗಿಂದ ಹೊರಗೆ ಬಂದ ಎಲ್ಲವುಗಳ ಅಂದರೆ ಭೂಮಿಯ ಎಲ್ಲಾ ಜೀವಿಗಳ ಸಹಿತ ಪಕ್ಷಿಗಳೊಂದಿಗೂ ಪಶುಗಳೊಂದಿಗೂ ಭೂಮಿಯ ಎಲ್ಲಾ ಮೃಗಗಳೊಂದಿಗೂ ನಿಮ್ಮ ಕೂಡ ಇರುವ ಎಲ್ಲಾ ಜೀವಜಂತುಗಳೊಂದಿಗೂ
- 11ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡ ಸ್ಥಾಪಿಸುತ್ತೇನೆ. ಅದೇನಂದರೆ, ಇನ್ನು ಮೇಲೆ ಜಲಪ್ರಳಯದಿಂದ ಶರೀರಗಳಾವವೂ ನಾಶವಾಗುವದಿಲ್ಲ. ಭೂಮಿಯನ್ನು ಹಾಳುಮಾಡುವದಕ್ಕೆ ಇನ್ನು ಜಲಪ್ರಳಯವು ಇರುವ ದಿಲ್ಲ ಎಂಬದೇ.
- 12ದೇವರು--ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳ ವರೆಗೆ ನಾನು ಮಾಡುವ ಒಡಂಬಡಿಕೆಗೆ ಇದೇ ಗುರುತು.
- 13ನನ್ನ ಬಿಲ್ಲು ಮೇಘಗಳಲ್ಲಿ ಇಟ್ಟಿದ್ದೇನೆ. ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವದು.
Cross references
- Isaiah 54:9 ಯೆಶಾಯ 54:9ಇದು ನನಗೆ ನೋಹನ ಕಾಲದ ಪ್ರಳಯ ದಂತಿದೆ; ನೋಹನ ಕಾಲದ ಪ್ರಳಯವು ಇನ್ನು ಭೂಮಿಯ ಮೇಲೆ ಹರಿಯಗೊಡಿಸುವದಿಲ್ಲವೆಂದು ನಾನು ಪ್ರಮಾಣಮಾಡಿದ ಹಾಗೆಯೇ ಇನ್ನು ನಿನ್ನ ಮೇಲೆ ಕೋಪಗೊಳ್ಳುವದಿಲ್ಲ ಇಲ್ಲವೇ ನಿನ್ನನ್ನು ಗದರಿಸುವದಿಲ್ಲ ಎಂದು ಪ್ರಮಾಣಮಾಡಿದ್ದೇನೆ.
- Genesis 8:21–22 ಆದಿಕಾಂಡ 8:21–22ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು. ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.
- 2 Peter 3:7 2 ಪೇತ್ರನು 3:7ಆದರೆ ಈಗಿನ ಆಕಾಶಗಳೂ ಭೂಮಿಯೂ ಅದೇ ವಾಕ್ಯದಿಂದ ಭದ್ರವಾಗಿ ಇಡಲ್ಪಟ್ಟಿದ್ದು ನ್ಯಾಯ ತೀರ್ವಿಕೆಯ ದಿನದವರೆಗೂ ಭಕ್ತಿಹೀನರ ನಾಶನಕ್ಕಾಗಿ ಬೆಂಕಿಯು ಕಾದಿಡಲ್ಪಟ್ಟಿದೆ ಎಂಬದು.
- Genesis 7:21–23 ಆದಿಕಾಂಡ 7:21–23ಆಗ ಪಶು ಪಕ್ಷಿ ಮೃಗ ಭೂಮಿಯಲ್ಲಿ ಹರಿದಾಡುವ ಕ್ರಿಮಿ ಎಲ್ಲಾ ಮನುಷ್ಯರು ಸಹಿತವಾಗಿ ಅಂತೂ ಭೂಮಿಯ ಮೇಲೆ ಚಲಿಸುವ ಎಲ್ಲಾ ಶರೀರಗಳು ಸತ್ತುಹೋದವು. ಒಣ ನೆಲದ ಮೇಲಿದ್ದಂಥ ಮೂಗಿನಲ್ಲಿ ಶ್ವಾಸವಿರುವ ವುಗಳೆಲ್ಲಾ ಸತ್ತುಹೋದವು. ಮನುಷ್ಯರೂ ಪಶು ಗಳೂ ಕ್ರಿಮಿಗಳೂ ಆಕಾಶದ ಪಕ್ಷಿಗಳೂ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳೂ ನಾಶವಾದವು. ಅವು ಭೂಮಿಯ ಮೇಲಿಂದ ಅಳಿಸಲ್ಪಟ್ಟವು. ನೋಹನೂ ಅವನ ಸಂಗಡ ನಾವೆಯಲ್ಲಿದ್ದವರೂ ಮಾತ್ರ ಜೀವದಿಂದ ಉಳಿಸಲ್ಪಟ್ಟರು.ಜಲವು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲ ವಾಯಿತು.
- 2 Peter 3:11 2 ಪೇತ್ರನು 3:11ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದ ರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು.