Genesis · chapter 9 · verse 10
Genesis 9:10 in Kannada
ನಾವೆಯೊಳಗಿಂದ ಹೊರಗೆ ಬಂದ ಎಲ್ಲವುಗಳ ಅಂದರೆ ಭೂಮಿಯ ಎಲ್ಲಾ ಜೀವಿಗಳ ಸಹಿತ ಪಕ್ಷಿಗಳೊಂದಿಗೂ ಪಶುಗಳೊಂದಿಗೂ ಭೂಮಿಯ ಎಲ್ಲಾ ಮೃಗಗಳೊಂದಿಗೂ ನಿಮ್ಮ ಕೂಡ ಇರುವ ಎಲ್ಲಾ ಜೀವಜಂತುಗಳೊಂದಿಗೂ
Naaveyolaginda horage banda ellavugala andare bhoomiya ellaa jeevigala sahita pakshigalondigoo pashugalondigoo bhoomiya ellaa mrugagalondigoo nimma kooda iruva ellaa jeevajantugalondigoo
Genesis 9:10 in English
- King James Version (KJV)
- And with every living creature that [is] with you, of the fowl, of the cattle, and of every beast of the earth with you; from all that go out of the ark, to every beast of the earth.
- World English Bible (WEB)
- and with every living creature that is with you: the birds, the livestock, and every animal of the earth with you, of all that go out of the ship, even every animal of the earth.
- American Standard Version (ASV)
- and with every living creature that is with you, the birds, the cattle, and every beast of the earth with you; of all that go out of the ark, even every beast of the earth.
- Bible in Basic English (BBE)
- And with every living thing with you, all birds and cattle and every beast of the earth which comes out of the ark with you.
- Darby Translation (DBY)
- and with every living soul which is with you, fowl as well as cattle, and all the animals of the earth with you, of all that has gone out of the ark — every animal of the earth.
- Webster's Bible (WBS)
- And with every living creature that [is] with you, of the fowl, of the cattle, and of every beast of the earth with you, from all that go out of the ark, to every beast of the earth.
- Young's Literal Translation (YLT)
- and with every living creature which [is] with you, among fowl, among cattle, and among every beast of the earth with you, from all who are going out of the ark — to every beast of the earth.
Read in context
- 8ಇದಲ್ಲದೆ ದೇವರು ನೋಹನಿಗೂ ಅವನ ಸಂಗಡವಿರುವ ಅವನ ಕುಮಾರರಿಗೂ ಹೇಳಿದ್ದೇ ನಂದರೆ--
- 9ಇಗೋ, ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡಲೂ ನಿಮ್ಮ ತರುವಾಯ ನಿಮ್ಮ ಸಂತತಿ ಯವರ ಸಂಗಡಲೂ
- 10ನಾವೆಯೊಳಗಿಂದ ಹೊರಗೆ ಬಂದ ಎಲ್ಲವುಗಳ ಅಂದರೆ ಭೂಮಿಯ ಎಲ್ಲಾ ಜೀವಿಗಳ ಸಹಿತ ಪಕ್ಷಿಗಳೊಂದಿಗೂ ಪಶುಗಳೊಂದಿಗೂ ಭೂಮಿಯ ಎಲ್ಲಾ ಮೃಗಗಳೊಂದಿಗೂ ನಿಮ್ಮ ಕೂಡ ಇರುವ ಎಲ್ಲಾ ಜೀವಜಂತುಗಳೊಂದಿಗೂ
- 11ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡ ಸ್ಥಾಪಿಸುತ್ತೇನೆ. ಅದೇನಂದರೆ, ಇನ್ನು ಮೇಲೆ ಜಲಪ್ರಳಯದಿಂದ ಶರೀರಗಳಾವವೂ ನಾಶವಾಗುವದಿಲ್ಲ. ಭೂಮಿಯನ್ನು ಹಾಳುಮಾಡುವದಕ್ಕೆ ಇನ್ನು ಜಲಪ್ರಳಯವು ಇರುವ ದಿಲ್ಲ ಎಂಬದೇ.
- 12ದೇವರು--ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳ ವರೆಗೆ ನಾನು ಮಾಡುವ ಒಡಂಬಡಿಕೆಗೆ ಇದೇ ಗುರುತು.
Cross references
- Psalm 145:9 ಕೀರ್ತನೆಗಳು 145:9ಕರ್ತನು ಸರ್ವರಿಗೂ ಒಳ್ಳೆಯವನು; ಆತನ ಅಂತಃಕರಣವು ಆತನ ಎಲ್ಲಾ ಕೆಲಸಗಳ ಮೇಲೆ ಅದೆ.
- Job 41:1–34 ಯೋಬನು 41:1–34ಮೊಸಳೆಯನ್ನು ಗಾಳದಿಂದ ಎಳೆಯುವಿಯೋ? ಇಲ್ಲವೆ ಹಗ್ಗದಿಂದ ಅದರ ನಾಲಿಗೆಯನ್ನು ಅದುಮುತ್ತೀಯೋ? ಅದರ ಮೂಗಿ ನಲ್ಲಿ ಗಾಳಿ ಇಡುವಿಯೋ? ಅದರ ದವಡೆಯನ್ನು ಮುಳ್ಳಿನಿಂದ ಚುಚ್ಚುವಿಯೋ? ಅದು ನಿನಗೆ ಬಹಳ ಬಿನ್ನಹಗಳನ್ನು ಮಾಡುವದೋ? ನಿನ್ನ ಸಂಗಡ ಮೃದು ವಾದ ಮಾತು ಆಡುವದೋ? ನಿನ್ನ ಸಂಗಡ ಒಡಂಬಡಿಕೆ ಮಾಡುವದೋ? ಅದನ್ನು ಎಂದೆಂದಿಗೂ ದಾಸನಾಗಿ ತಕ್ಕೊಳ್ಳುವಿಯೋ? ಪಕ್ಷಿಯ ಹಾಗೆ ಅದರ ಸಂಗಡ ಆಡುವಿಯೋ? ನಿನ್ನ ಹುಡುಗಿಯರಿಗೋಸ್ಕರ ಅದನ್ನು ಕಟ್ಟಿಹಾಕುವಿಯೋ? ಜತೆಯವರು ಅದನ್ನು ಔತಣ ಮಾಡುವರೋ? ಅವರು ಅದನ್ನು ವರ್ತಕ ರಲ್ಲಿ ಪಾಲಿಡುವರೋ? ಅದರ ತೊಗಲನ್ನು ಮುಳ್ಳು ಗಳಿಂದ, ಅದರ ತಲೆಯನ್ನು ವಿಾನುಗಾರರ ಬಲೆ ಯಿಂದ ತುಂಬುವಿಯೋ? ಅದರ ಮೇಲೆ ನಿನ್ನ ಕೈಹಾಕು; ಯುದ್ಧವನ್ನು ನೆನಸಿಕೋ, ಹೆಚ್ಚಿನದೇನೂ ಮಾಡಬೇಡ. ಇಗೋ, ಅದರ ವಿಷಯವಾದ ನಿರೀ ಕ್ಷೆಯು ವ್ಯರ್ಥವಾದದ್ದು. ಅದನ್ನು ನೋಡುತ್ತಲೇ ಕೆಡವಲ್ಪಡುತ್ತಾನಲ್ಲಾ. ಅದನ್ನು ಕದಲಿಸುವ ಹಾಗೆ ಕಠಿಣನು ಇಲ್ಲ. ಹಾಗಾದರೆ ನನ್ನ ಮುಂದೆ ನಿಂತು ಕೊಳ್ಳುವ ಹಾಗೆ ಯಾರು ಶಕ್ತರು? ನಾನು ತಿರುಗಿ ಕೊಡುವ ಹಾಗೆ ಮೊದಲು ನನಗೆ ಕೊಟ್ಟವನಾರು? ಆಕಾಶದ ಕೆಳಗೆ ಇರುವಂಥದೆಲ್ಲಾ ನನ್ನದೇ. ನಾನು ಅದರ ಭಾಗಗಳನ್ನೂ ತ್ರಾಣವನ್ನೂ ಸನ್ನಾಹದ ಸೊಬಗನ್ನೂ ಮುಚ್ಚುವದಿಲ್ಲ. ಅದರ ಮೇಲಿನ ವಸ್ತ್ರವನ್ನು ತೆರೆಯುವವನಾರು? ಅದರ ಎರಡರಷ್ಟು ಕಡಿವಾಣದೊಂದಿಗೆ ಅದರ ಬಳಿಗೆ ಬರು ವದಕ್ಕೆ ಯಾರು ಶಕ್ತರು? ಅದರ ಮುಖದ ಕದ ಗಳನ್ನು ತೆಗೆಯುವವನಾರು? ಅದರ ಹಲ್ಲುಗಳು ಸುತ್ತಲೂ ಭಯಂಕರವಾಗಿವೆ. ಬಲವಾದ ಅದರ ಗುರಾಣಿಗಳು ಅದರ ಗರ್ವವಾಗಿವೆ; ಬತ್ತಿದ ಮುದ್ರೆಯ ಹಾಗೆ ಬಿಗಿದವೆ. ಅವು ಒಂದಕ್ಕೊಂದು ಹೊಂದಿ ಕೊಂಡಿವೆ; ಗಾಳಿಯಾದರೂ ಅವುಗಳ ಮಧ್ಯದಲ್ಲಿ ಸೇರುವದಿಲ್ಲ. ಒಂದಕ್ಕೊಂದು ಅಂಟುತ್ತವೆ; ಹಿಡು ಕೊಂಡು ಪ್ರತ್ಯೇಕವಾಗುವದಿಲ್ಲ; ಅದರ ಸೀನು ವಿಕೆಯಿಂದ ಬೆಳಕು ಹುಟ್ಟುವದು; ಅದರ ಕಣ್ಣುಗಳು ಉದಯದ ರೆಪ್ಪೆಗಳ ಹಾಗೆ ಇವೆ. ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ. ಕುದಿಯುವ ಗಡಿಗೆಯೊಳ ಗಿಂದಲೂ ಕೊಪ್ಪರಿಗೆಯೊಳಗಿಂದಲೂ ಆದ ಹಾಗೆ ಅದರ ಮೂಗಿನೊಳಗಿಂದ ಹೊಗೆ ಹಾಯುವದು. ಅದರ ಶ್ವಾಸವು ಕೆಂಡಗಳನ್ನು ಹೊತ್ತಿಸುವದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡು ವದು. ಅದರ ಕುತ್ತಿಗೆಯಲ್ಲಿ ಬಲವು ವಾಸಿಸುವದು; ಅದರ ಮುಂದೆ ದುಃಖವು ಸಂತೋಷಕ್ಕೆ ಮಾರ್ಪ ಡುವದು. ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲಲಾರವು. ಅದರ ಹೃದಯವು ಕಲ್ಲಿನ ಹಾಗೆಯೂ ಹೌದು, ಬೀಸುವ ಕಲ್ಲಿನ ಅಡಿಯ ಹಾಗೆಯೂ ಕಠಿಣವಾಗಿದೆ. ಅದು ಏಳುವಾಗ ಹೆದರುತ್ತಾರೆ; ಮುರಿಯುವ ಕಾರಣದಿಂದ ಅವರು ತಮ್ಮನ್ನು ಶುದ್ಧಿಮಾಡಿಕೊಳ್ಳು ತ್ತಾರೆ. ಅದರ ಬಳಿಯಲ್ಲಿ ಇಟ್ಟಿರುವ ಅದರ ಖಡ್ಗವು ಹಿಡಿಯಲಾರದು; ಈಟಿಯೂ ಬಾಣವೂ ಕವಚವೂ ನಿಲ್ಲವು, ಕಬ್ಬಿಣವು ಹುಲ್ಲೆಂದೂ ಹಿತ್ತಾಳೆಯು ಕೊಳೆತ ಕಟ್ಟಿಗೆ ಎಂದೂ ಅದು ಎಣಿಸುವದು. ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಹುಲ್ಲಿನ ಹಾಗೆ ಆಗುತ್ತವೆ. ಬಾಣಗಳು ಹುಲ್ಲಿನ ಹಾಗೆ ಎಣಿಸಲ್ಪಟ್ಟಿವೆ; ಭರ್ಚಿ ಕದಲಿದರೆ ಅದು ನಗುವದು. ಅದರ ಅಡಿ ಯಲ್ಲಿ ಹದವಾದ ಹರಳುಗಳು ಅವೆ; ಕೆಸರಿನ ಮೇಲೆ ಚೂಪಾದ ಮತ್ತು ಹದವಾದ ಕೋಲನ್ನು ಹರಡಿಸು ತ್ತದೆ. ಆಳವಾದ ನೀರನ್ನು ಗಡಿಗೆಯ ಹಾಗೆ ಕುದಿಯ ಮಾಡುತ್ತದೆ, ಸಮುದ್ರವನ್ನು ತೈಲದ ಪಾತ್ರೆಯ ಹಾಗೆ ಮಾಡುತ್ತದೆ. ತನ್ನ ಹಿಂದೆ ಹಾದಿ ಬೆಳಗುವಂತೆ ಅದು ಮಾಡುತ್ತದೆ. ಅಗಾಧವು ನರೆ ಕೂದಲಿನ ಹಾಗೆ ಇರುವದೆಂದು ಒಬ್ಬನು ಯೋಚಿಸುತ್ತಾನೆ. ಭೂಮಿ ಯ ಮೇಲೆ ಅದಕ್ಕೆ ಸಮಾನವಾದದ್ದು ಇಲ್ಲ; ಅದು ಭಯವಿಲ್ಲದೆ ಇರುವದಕ್ಕಾಗಿ ಮಾಡಿದ್ದು.ಉನ್ನತ ವಾದದ್ದನ್ನೆಲ್ಲಾ ಅದು ನೋಡುವದು; ಗರ್ವದ ಮಕ್ಕಳೆಲ್ಲರ ಮೇಲೆ ಅದು ಅರಸನಾಗಿದೆ ಅಂದನು. ಉನ್ನತ ವಾದದ್ದನ್ನೆಲ್ಲಾ ಅದು ನೋಡುವದು; ಗರ್ವದ ಮಕ್ಕಳೆಲ್ಲರ ಮೇಲೆ ಅದು ಅರಸನಾಗಿದೆ ಅಂದನು.
- Job 38:1–41 ಯೋಬನು 38:1–41ಆಗ ಕರ್ತನು ಯೋಬನಿಗೆ ಬಿರುಗಾಳಿ ಯೊಳಗಿಂದ ಉತ್ತರ ಕೊಟ್ಟು-- ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು? ಪುರುಷನ ಹಾಗೆ ನಡುವನ್ನು ಕಟ್ಟಿಕೋ; ನಾನು ನಿನ್ನನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು. ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆ ತಿಳಿಯಪಡಿಸು. ನಿನಗೆ ತಿಳಿದಿದ್ದರೆ ಅದರ ಅಳತೆಗಳನ್ನು ಹಾಕಿದ ವನಾರು? ಇಲ್ಲವೆ ಅದರ ಮೇಲೆ ಗೆರೆಯನ್ನೆಳೆದವರು ಯಾರು? ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು? ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು. ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು? ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ ಅದಕ್ಕೆ ನನ್ನ ನೇಮವನ್ನು ನಿರ್ಣಯಿಸಿದೆನು; ಅದಕ್ಕೆ ಅಗುಳಿಗಳನ್ನೂ ಬಾಗಲು ಗಳನ್ನೂ ಇಟ್ಟೆನು. ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು. ನಿನ್ನ ದಿವಸಗಳಾರಭ್ಯ ಬೆಳಿಗ್ಗೆಗೆ ಅಪ್ಪಣೆ ಕೊಟ್ಟಿಯೋ? ಅದು ಭೂಮಿಯ ಅಂಚುಗಳನ್ನು ಹಿಡಿಯುವ ಹಾಗೆಯೂ ದುಷ್ಟರು ಅದರೊಳಗಿಂದ ಝಾಡಿಸಲ್ಪಡುವ ಹಾಗೆಯೂ ಉದಯಕ್ಕೆ ಅದರ ಸ್ಥಳವನ್ನು ತಿಳಿಯಪಡಿಸಿದಿಯೋ? ಮುದ್ರೆಯಿಂದ ಮಣ್ಣು ಆಗುವ ಹಾಗೆ ಅದು ಮಾರ್ಪಡುತ್ತದೆ; ವಸ್ತ್ರದ ಹಾಗೆ ಅದು ನಿಂತಿರುತ್ತದೆ. ದುಷ್ಟರಿಂದ ಅವರ ಬೆಳಕು ಹಿಂತೆಗೆಯಲ್ಪಡುತ್ತದೆ. ಎತ್ತಿದ ತೋಳು ಮುರಿದು ಹೋಗುವದು. ನೀನು ಸಮುದ್ರದ ಬುಗ್ಗೆಗಳಲ್ಲಿ ಪ್ರವೇಶಿಸಿ ಇಲ್ಲವೆ ಅಗಾಧವನ್ನು ಹುಡುಕುವದರಲ್ಲಿ ನೀನು ತಿರುಗಾಡಿ ದಿಯೋ? ನಿನಗೆ ಮರಣದ ಬಾಗಲುಗಳು ತೆರೆಯ ಲ್ಪಟ್ಟವೋ? ಇಲ್ಲವೆ ಮರಣದ ನೆರಳಿನ ಬಾಗಲುಗಳನ್ನು ನೀನು ನೋಡಿದಿಯೋ? ಭೂಮಿಯ ವಿಸ್ತಾರ ಗಳವರೆಗೆ ನೀನು ಗ್ರಹಿಸಿದಿಯೋ?ಇದನ್ನೆಲ್ಲಾ ತಿಳು ಕೊಂಡರೆ ತಿಳಿಯಪಡಿಸು. ಬೆಳಕಿನ ನಿವಾಸಕ್ಕೆ ದಾರಿ ಯಾವದು? ಕತ್ತಲೆ ಯಾದರೋ ಅದರ ಸ್ಥಳವೆಲ್ಲಿದೆ? ಅದರ ಗಡಿಯ ವರೆಗೆ ಅದನ್ನು ತೆಗೆದುಕೊಳ್ಳುವಿಯೋ? ಅದರ ಮನೆಗೆ ಹೋಗುವ ಹಾದಿಗಳನ್ನು ಗ್ರಹಿಸಿದಿಯೋ? ಆಗ ಹುಟ್ಟಿದ್ದರಿಂದ ಅದು ನಿನಗೆ ತಿಳಿಯುವದೋ? ನಿನ್ನ ದಿವಸಗಳ ಲೆಕ್ಕವು ಬಹಳವಾಗಿವೆಯಲ್ಲಾ. ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿ ದಿಯೋ? ಇಲ್ಲವೆ ಆನೇಕಲ್ಲಿನ ಉಗ್ರಾಣಗಳನ್ನು ನೋಡಿದಿಯೋ? ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ. ಬೆಳಕು ಭಾಗವಾ ಗುವಂಥ, ಮೂಡಣ ಗಾಳಿ ಭೂಮಿಯ ಮೇಲೆ ಚದುರುವಂಥ, ಮಾರ್ಗವು ಯಾವದು? ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು? ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು. ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು? ಯಾವನ ಹೊಟ್ಟೆಯೊಳಗಿಂದ ನೀರು ಗಡ್ಡೆ ಹೊರಡುತ್ತದೆ? ಆಕಾಶದ ಹಿಮವನ್ನು ಹುಟ್ಟಿಸಿ ದವನಾರು? ಕಲ್ಲಿನ ಹಾಗೆ ನೀರುಗಳು ಅಡಗುತ್ತವೆ; ಅಗಾಧದ ಮೇಲ್ಭಾಗವು ಹೆಪ್ಪುಗಟ್ಟುವದು. ನೀನು ವೃಷಭ ರಾಶಿಯ ಸಿಹಿ ಪರಿಣಾಮಗ ಳನ್ನು ಬಂಧಿಸುವಿಯೋ? ಇಲ್ಲವೆ ಮೃಗಶಿರದ ಸಂಕೋ ಲೆಗಳನ್ನು ಬಿಚ್ಚಬಲ್ಲಿಯೋ? ನೀನು ರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ತರುತ್ತೀಯೋ? ಇಲ್ಲವೆ ಸಪ್ತತಾರೆಗಳನ್ನು ಅವುಗಳ ಪುತ್ರರ ಸಹಿತ ವಾಗಿ ನೀನು ನಡಿಸುತ್ತೀಯೋ? ಆಕಾಶದ ಕಟ್ಟಳೆ ಗಳನ್ನು ನೀನು ತಿಳುಕೊಳ್ಳುತ್ತೀಯೋ? ಇಲ್ಲವೆ ಅದರ ಅಧಿಕಾರವನ್ನು ಭೂಮಿಯಲ್ಲಿ ನಿರ್ಣಯಿ ಸುತ್ತೀಯೋ? ನೀರಿನ ಸಮೃದ್ಧಿಯು ನಿನ್ನನ್ನು ಮುಚ್ಚುವ ಹಾಗೆ ನಿನ್ನ ಶಬ್ದವನ್ನು ಮೋಡಗಳ ಕಡೆಗೆ ಎತ್ತುತ್ತೀಯೋ? ಮಿಂಚುಗಳು ಹೋಗಿ ಇಗೋ, ಇದ್ದೇವೆಂದು ನಿನಗೆ ಹೇಳುವ ಹಾಗೆ ನೀನು ಅವುಗಳನ್ನು ಕಳುಹಿಸುತ್ತೀ ಯೋ? ಯಾವನು ಅಂತರ್ಯದಲ್ಲಿ ಜ್ಞಾನ ಇಡು ತ್ತಾನೆ; ಇಲ್ಲವೆ ಯಾವನು ಹೃದಯಕ್ಕೆ ಗ್ರಹಿಕೆಯನ್ನು ಕೊಟ್ಟಿದ್ದಾನೆ? ಯಾವನು ಮೋಡಗಳನ್ನು ಜ್ಞಾನ ದಿಂದ ಎಣಿಸುತ್ತಾನೆ; ದೂಳಿಯು ಗಟ್ಟಿಯಾಗುತ್ತಾ ಬರುವಾಗ ಮತ್ತು ಗಡ್ಡೆಗಳು ಒಟ್ಟಾಗಿ ಅಂಟುವಾಗ ಆಕಾಶದ ಬುದ್ಧಲಿಗಳನ್ನು ಹೊಯ್ಯುವವನಾರು? ಸಿಂಹಕ್ಕೋಸ್ಕರ ನೀನು ಬೇಟೆಯಾಡುವಿಯೋ? ಇಲ್ಲವೆ ಅವು ಗುಹೆಗಳಲ್ಲಿ ಕೂತುಕೊಳ್ಳುವಾಗ, ಗವಿಯಲ್ಲಿ ಹೊಂಚಿ ಮಲಗಿರುವಾಗ, ಪ್ರಾಯದ ಸಿಂಹಗಳ ಆಶೆಯನ್ನು ಪೂರೈಸುವಿಯೋ?ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು? ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು?
- Jonah 4:11 ಯೋನ 4:11ಆ ಸೋರೇಗಿಡದ ಮೇಲೆ ಕನಿಕರ ಪಟ್ಟಿಯಲ್ಲಾ, ಹಾಗಾ ದರೆ ಎಡ ಬಲ ಕೈಗಳನ್ನು ತಿಳಿಯದವರಾದ ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು, ಬಹಳ ದನ ಗಳು ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆ ಯನ್ನು ನಾನು ಕನಿಕರಿಸಬಾರದೋ ಅಂದನು.
- Genesis 9:15–16 ಆದಿಕಾಂಡ 9:15–16ಆಗ ನಾನು ನನಗೂ ನಿಮಗೂ ದೇಹಗಳಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯೆ ಇರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಶರೀರಗಳನ್ನೆಲ್ಲಾ ನಾಶಮಾಡುವ ಜಲಪ್ರಳಯವಾ ಗುವದೇ ಇಲ್ಲ. ಆ ಬಿಲ್ಲು ಮೇಘಗಳಲ್ಲಿರುವಾಗ ದೇವರಾದ ನನಗೂ ಭೂಮಿಯ ಮೇಲಿರುವ ದೇಹಗಳುಳ್ಳ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ನಿತ್ಯವಾಗಿರುವ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಳ್ಳುವ ಹಾಗೆ ನಾನು ಅದನ್ನು ನೋಡುವೆನು ಅಂದನು.
- Psalm 36:5–6 ಕೀರ್ತನೆಗಳು 36:5–6ಓ ಕರ್ತನೇ, ಆಕಾಶದಲ್ಲಿ ನಿನ್ನ ಕರುಣೆಯು ಅದೆ; ನಿನ್ನ ನಂಬಿಗಸ್ತಿಕೆಯು ಮೇಘಗಳ ವರೆಗೆ ಮುಟ್ಟಿದೆ. ನಿನ್ನ ನೀತಿಯು ದೊಡ್ಡ ಪರ್ವತಗಳ ಹಾಗಿದೆ; ನಿನ್ನ ನ್ಯಾಯತೀರ್ಪುಗಳು ಮಹಾ ಅಗಾಧವೇ. ಓ ಕರ್ತನೇ, ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀ.
- Genesis 8:1 ಆದಿಕಾಂಡ 8:1ಆಗ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಜೀವರಾಶಿ ಗಳನ್ನೂ ಪಶುಗಳನ್ನೂ ಜ್ಞಾಪಕಮಾಡಿಕೊಂಡು ದೇವರು ಭೂಮಿಯ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.