Genesis · chapter 5 · verse 32
Genesis 5:32 in Kannada
ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬವರು ಹುಟ್ಟಿದರು.
Nohanu ainooru varushadavanaagiddanu; nohaninda shem haam yephet embavaru huttidaru.
Genesis 5:32 in English
- King James Version (KJV)
- And Noah was five hundred years old: and Noah begat Shem, Ham, and Japheth.
- World English Bible (WEB)
- Noah was five hundred years old, then Noah became the father of Shem, Ham, and Japheth.
- American Standard Version (ASV)
- And Noah was five hundred years old: and Noah begat Shem, Ham, and Japheth.
- Bible in Basic English (BBE)
- And when Noah was five hundred years old, he became the father of Shem, Ham, and Japheth.
- Darby Translation (DBY)
- And Noah was five hundred years old, and Noah begot Shem, Ham, and Japheth.
- Webster's Bible (WBS)
- And Noah was five hundred years old: and Noah begat Shem, Ham, and Japheth.
- Young's Literal Translation (YLT)
- And Noah is a son of five hundred years, and Noah begetteth Shem, Ham, and Japheth.
Read in context
- 30ಲೆಮೆಕನಿಂದ ನೋಹನು ಹುಟ್ಟಿದ ಮೇಲೆ ಅವನ ದಿನಗಳು ಐನೂರ ತೊಂಭತೈದು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 31ಲೆಮೆಕನ ದಿನಗಳೆಲ್ಲಾ ಒಟ್ಟು ಏಳುನೂರ ಎಪ್ಪತ್ತೇಳು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬವರು ಹುಟ್ಟಿದರು.
- 32ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬವರು ಹುಟ್ಟಿದರು.
Cross references
- Genesis 10:21 ಆದಿಕಾಂಡ 10:21ಯೆಬೆರನ ಮಕ್ಕಳೆಲ್ಲರ ತಂದೆಯೂ ಹಿರಿಯನಾದ ಯೆಫೆತನ ಸಹೋದರನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.
- Genesis 6:10 ಆದಿಕಾಂಡ 6:10ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬ ಮೂವರು ಕುಮಾರರು ಹುಟ್ಟಿದರು.
- Genesis 10:1 ಆದಿಕಾಂಡ 10:1ನೋಹನ ಕುಮಾರರಾದ ಶೇಮ್ ಹಾಮ್ ಯೆಫೆತರ ವಂಶಾವಳಿಗಳು ಇವೇ. ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು.
- 1 Chronicles 1:4–28 1 ಪೂರ್ವಕಾಲವೃತ್ತಾಂತ 1:4–28ನೋಹನು, ಶೇಮನು, ಹಾಮನು, ಮತ್ತು ಯೆಫೆತನು, ಯೆಫೆತನ ಮಕ್ಕಳು--ಗೋಮೆರನು ಮಾಗೋ ಗನು ಮಾದಯನು, ಯಾವಾನನು, ತೂಬಲನು, ಮೇಷಕನು, ತೀರಾಸನು. ಗೋಮೆರನ ಮಕ್ಕಳ --ಅಷ್ಕೆನಜನು, ರೀಫತನು, ತೊಗರ್ಮನು ಯಾವಾ ನನ ಮಕ್ಕಳು -- ಎಲೀಷನು, ತಾರ್ಷೀಷನು, ಕಿತ್ತೀ ಮನು, ದೋದಾನೀಮನು. ಹಾಮನ ಮಕ್ಕಳು -- ಕೂಷನು, ಮಿಚ್ರಯಾ ಮನು, ಪೂಟನು, ಕಾನಾನನು. ಕೂಷನ ಮಕ್ಕಳು --ಸೇಬನು, ಹವೀಲನು, ಸಬ್ತನು, ರಮ್ಮನು, ಸಬ್ತೆಕನು. ರಮ್ಮನ ಮಕ್ಕಳು--ಶೆಬನು, ದೆದಾನನು. ಕೂಷನು ನಿಮ್ರೋದನನ್ನು ಪಡೆದನು; ಅವನು ಭೂಮಿಯಲ್ಲಿ ಪರಾಕ್ರಮಶಾಲಿಯಾಗಲು ಪ್ರಾರಂಭಿಸಿದನು. ಮಿಚ್ರಯಿಮ್ಯನ್ನೂ ಲೂದ್ಯರನ್ನೂ ಅನಾಮ್ಯರನ್ನೂ ಲೆಹಾಬ್ಯರನ್ನೂ ನಫ್ತುಹ್ಯರನ್ನೂ ಪತ್ರುಸ್ಯರನ್ನೂ ಕಫ್ತೋರ್ಯರನ್ನೂ ಕಸ್ಲುಹ್ಯರನ್ನೂ ಪಡೆದನು; ಕಸ್ಲುಹ್ಯರೊಳಗಿಂದ ಫಿಲಿಷ್ಟಿಯರು ಉಂಟಾದರು. ಕಾನಾನನು ತನ್ನ ಚೊಚ್ಚಲ ಮಗನಾದ ಸೀದೋನ ನನ್ನೂ ಹೇತನನ್ನೂ ಯೆಬೂಸ್ಯರನ್ನೂ ಅಮೋರ್ಯ ರನ್ನೂ ಗಿರ್ಗಾಷಿಯರನ್ನೂ ಹಿವ್ವಿಯರನ್ನೂ ಅರ್ಕಿ ಯರನ್ನೂ ಸೀನೀಯರನ್ನೂ ಅರ್ವಾದಿಯರನ್ನೂ ಚೆಮಾರಿಯರನ್ನೂ ಹಮಾತಿಯರನ್ನೂ ಪಡೆದನು. ಶೇಮನ ಮಕ್ಕಳು--ಏಲಾಮನು ಅಶ್ಯೂರನು, ಅರ್ಪಕ್ಷದನು, ಲೂದನು, ಅರಾಮನು, ಊಚನು, ಹೂಲನು, ಗೆತೆರನು, ಮೆಷಕನು. ಅರ್ಪಕ್ಷದನು ಶೆಲಹನನ್ನು ಪಡೆದನು; ಶೆಲಹನು ಏಬೆರನನ್ನು ಪಡೆ ದನು. ಏಬೆರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನಿಗೆ ಪೆಲೆಗನೆಂದು ಹೆಸರಿಡಲ್ಪಟ್ಟಿತು; ಯಾಕಂದರೆ ಅವನ ದಿವಸಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು, ಅವನ ತಮ್ಮನ ಹೆಸರು ಯೊಕ್ತಾನನು. ಯೊಕ್ತಾನನು ಅಲ್ಮೋದಾದನನ್ನೂ, ಶೇಲೆಫನನ್ನೂ, ಹಚರ್ಮಾ ವೇತನನ್ನೂ, ಯೆರಹನನ್ನೂ, ಹದೋರಾಮನನ್ನೂ, ಊಜಾಲನನ್ನೂ, ದಿಕ್ಲನನ್ನೂ, ಏಬಾಲನನ್ನೂ, ಅಬೀ ಮಾಯೇಲನನ್ನೂ, ಶೆಬಾನನ್ನೂ, ಓಫೀರನನ್ನೂ ಹವೀಲಾನನ್ನೂ, ಯೋಬಾಬನನ್ನೂ ಪಡೆದನು. ಇವ ರೆಲ್ಲರು ಯೊಕ್ತಾನನ ಮಕ್ಕಳು. ಶೇಮನು ಅರ್ಪಕ್ಷದನು, ಶೆಲಹನು, ಏಬೆ ರನು, ಪೆಲೆಗನು, ರೆಯೂ, ಸೆರೂಗನು, ನಾಹೋ ರನು, ತೆರಹನು; ಅಬ್ರಹಾಮನೆಂಬ ಅಬ್ರಾಮನು. ಅಬ್ರಹಾಮನ ಮಕ್ಕಳು -- ಇಸಾಕನು, ಇಷ್ಮಾಯೇಲನು.
- Genesis 10:32 ಆದಿಕಾಂಡ 10:32ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು.
- Genesis 9:22–27 ಆದಿಕಾಂಡ 9:22–27ಕಾನಾನನ ತಂದೆಯಾದ ಹಾಮನು ತನ್ನ ತಂದೆಯ ಬೆತ್ತಲೆತನವನ್ನು ನೋಡಿ ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿ ದನು. ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತಕ್ಕೊಂಡು ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು ಹಿಂಭಾಗವಾಗಿ ಹೋಗಿ ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಂಭಾಗವಾಗಿದ್ದ ದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ. ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚತ್ತು ತನ್ನ ಚಿಕ್ಕಮಗನು ತನಗೆ ಮಾಡಿದ್ದನ್ನು ತಿಳಿದು ಅವನು-- ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಸಹೋದರರಿಗೆ ದಾಸಾನುದಾಸನಾ ಗಿರುವನು ಅಂದನು. ಅವನು-- ಶೇಮನ ದೇವ ರಾದ ಕರ್ತನು ಸ್ತುತಿಸಲ್ಪಡಲಿ; ಕಾನಾನನು ಅವನಿಗೆ ದಾಸನಾಗಿರಲಿ. ಯೆಫೆತನನ್ನು ದೇವರು ವಿಸ್ತರಿಸಲಿ; ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ; ಕಾನಾನನು ಅವನಿಗೆ ದಾಸನಾಗಿರಲಿ ಅಂದನು.
- Genesis 9:18–19 ಆದಿಕಾಂಡ 9:18–19ನಾವೆಯೊಳಗಿನಿಂದ ಹೊರಟು ಬಂದ ನೋಹನ ಕುಮಾರರು ಯಾರಂದರೆ, ಶೇಮ್ ಹಾಮ್ ಯೆಫೆತ್; ಹಾಮನು ಕಾನಾನನ ತಂದೆಯು. ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.
- Luke 3:36 ಲೂಕನು 3:36ಇವನು ಕಯಿನಾನನ ಮಗನು; ಇವನು ಅರ್ಫಕ್ಷಾದನ ಮಗನು; ಇವನು ಶೇಮನ ಮಗನು; ಇವನು ನೋಹನ ಮಗನು; ಇವನು ಲಾಮೆಕನ ಮಗನು;
- Genesis 7:13 ಆದಿಕಾಂಡ 7:13ಅದೇ ದಿನದಲ್ಲಿ ನೋಹನೂ ಅವನ ಕುಮಾರರಾದ ಶೇಮ್ ಹಾಮ್ ಯೆಫೆತ್ ಇವರೂ ನೋಹನ ಹೆಂಡತಿಯೂ ಅವರ ಕೂಡ ಅವನ ಕುಮಾರರ ಮೂವರು ಹೆಂಡತಿಯರೂ ನಾವೆಯಲ್ಲಿ ಪ್ರವೇಶಿಸಿ ದರು.