Habakkuk · chapter 1 · verse 17
Habakkuk 1:17 in Kannada
ಹೀಗಿರುವದರಿಂದ ಅವರು ತಮ್ಮ ಬಲೆಯನ್ನು ಬರಿದುಮಾಡಿ ನಿತ್ಯವಾಗಿ ಜನಾಂಗ ಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ?
Heegiruvadarinda avaru tamma baleyannu baridumaadi nityavaagi janaanga galannu karunisade sadaa sanharisuttirabeko?
Habakkuk 1:17 in English
- King James Version (KJV)
- Shall they therefore empty their net, and not spare continually to slay the nations?
- World English Bible (WEB)
- Will he therefore continually empty his net, and kill the nations without mercy?
- American Standard Version (ASV)
- Shall he therefore empty his net, and spare not to slay the nations continually?
- Bible in Basic English (BBE)
- For this cause his net is ever open, and there is no end to his destruction of the nations.
- Darby Translation (DBY)
- Shall he therefore empty his net, and not spare to slay the nations continually?
- Webster's Bible (WBS)
- Shall they therefore empty their net, and not spare continually to slay the nations?
- Young's Literal Translation (YLT)
- Doth he therefore empty his net, And continually to slay nations spare not?
Read in context
- 15ಅವರನ್ನೆಲ್ಲಾ ಗಾಳದಿಂದ ಎತ್ತಿ ತಮ್ಮ ಬಲೆಯಿಂದ ಅವರನ್ನು ಹಿಡಿದು ತಮ್ಮ ಜಾಲದಿಂದ ಅವರನ್ನು ಕೂಡಿಸುತ್ತಾರೆ; ಆದದರಿಂದ ಸಂತೋಷಿಸಿ ಉಲ್ಲಾಸ ಪಡುತ್ತಾರೆ.
- 16ತಮ್ಮ ಬಲೆಗೆ ಬಲಿ ಅರ್ಪಿಸಿ ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ; ಇವುಗಳಿಂದ ಅವರ ಪಾಲು ಕೊಬ್ಬಾಗಿಯೂ ಅವರ ಆಹಾರ ಪುಷ್ಟಿ ಯುಳ್ಳದ್ದಾಗಿಯೂ ಇದೆ.ಹೀಗಿರುವದರಿಂದ ಅವರು ತಮ್ಮ ಬಲೆಯನ್ನು ಬರಿದುಮಾಡಿ ನಿತ್ಯವಾಗಿ ಜನಾಂಗ ಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ?
- 17ಹೀಗಿರುವದರಿಂದ ಅವರು ತಮ್ಮ ಬಲೆಯನ್ನು ಬರಿದುಮಾಡಿ ನಿತ್ಯವಾಗಿ ಜನಾಂಗ ಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ?
Cross references
- Isaiah 19:8 ಯೆಶಾಯ 19:8ವಿಾನು ಗಾರರು ಕೂಡಾ ದುಃಖಿಸುವರು ಮತ್ತು ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು, ನೀರಿನ ಮೇಲೆ ಬಲೆ ಬೀಸುವವರು ಕುಗ್ಗಿಹೋಗುವರು.
- Jeremiah 25:9–26 ಯೆರೆಮೀಯ 25:9–26ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ. ಇದಲ್ಲದೆ ಉಲ್ಲಾಸದ ಶಬ್ದವನ್ನೂ ಸಂತೋಷದ ಸ್ವರವನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಬೀಸುವ ಕಲ್ಲಿನ ಶಬ್ದವನ್ನೂ ದೀಪದ ಬೆಳಕನ್ನೂ ಅವರೊಳಗಿಂದ ತೆಗೆದುಹಾಕುತ್ತೇನೆ. ಈ ದೇಶವೆಲ್ಲಾ ಹಾಳಾಗಿ ವಿಸ್ಮಯಕ್ಕೆ ಗುರಿಯಾಗುವದು; ಈ ಜನಾಂಗಗಳು ಬಾಬೆಲಿನ ಅರಸನನ್ನು ಎಪ್ಪತ್ತು ವರುಷ ಸೇವಿಸುವರು. ಎಪ್ಪತ್ತು ವರುಷ ತುಂಬಿದ ಮೇಲೆ ನಾನು ಬಾಬೆಲಿನ ಅರಸನನ್ನೂ ಆ ಜನಾಂಗವನ್ನೂ ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು. ನಿಶ್ಚಯವಾಗಿ ಆ ದೇಶದ ಮೇಲೆ ನಾನು ಅದಕ್ಕೆ ವಿರೋಧವಾಗಿ ಹೇಳಿದ ನನ್ನ ಎಲ್ಲಾ ವಾಕ್ಯಗಳನ್ನೂ ಯೆರವಿಾಯನು ಜನಾಂಗ ಗಳಿಗೆ ವಿರೋಧವಾಗಿ ಪ್ರವಾದಿಸಿ ಈ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನೂ ಅವರ ಮೇಲೆ ಬರಮಾಡು ವೆನು. ಅನೇಕ ಜನಾಂಗಗಳೂ ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆ ಗಳ ಪ್ರಕಾರವೂ ಅವರ ಕೈ ಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು ಎಂದು ಕರ್ತನು ಅನ್ನುತ್ತಾನೆ. ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ. ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತ ಕದಲಿ ಹುಚ್ಚರಾಗುವರು ಅಂದನು. ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು. ಯೆರೂಸ ಲೇಮಿಗೂ ಯೆಹೂದದ ಪಟ್ಟಣಗಳಿಗೂ ಅದರ ಅರಸುಗಳಿಗೂ ಪ್ರಭುಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳುಮಾಡಿ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ಶಾಪಕ್ಕೂ ಗುರಿಮಾಡುವ ಹಾಗೆ ಕುಡಿಸಿದೆನು. ಐಗುಪ್ತದ ಅರಸನಾದ ಫರೋಹನಿಗೂ ಅವನ ಸೇವಕರಿಗೂ ಅವನ ಪ್ರಭುಗಳಿಗೂ ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ ಅರಬಿಯದ ಅರಸರೆಲ್ಲರಿಗೂ ಅರಣ್ಯದಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ ಜಿಮ್ರಿಯ ಅರಸರೆಲ್ಲರಿಗೂ ಏಲಾಮಿನ ಅರಸರೆ ಲ್ಲರಿಗೂ ಮೇದ್ಯದ ಅರಸರೆಲ್ಲರಿಗೂ ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು.
- Jeremiah 46:1–28 ಯೆರೆಮೀಯ 46:1–28ಜನಾಂಗಗಳಿಗೆ ವಿರೋಧವಾಗಿಯೂ ಐಗುಪ್ತಕ್ಕೆ ವಿರೋಧವಾಗಿಯೂ ಯೂಫ್ರೇ ಟೀಸ್ ನದಿಯ ಬಳಿಯಲ್ಲಿ ಕರ್ಕೆವಿಾಷಿನಲ್ಲಿ ಇದ್ದಂಥ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಹೊಡೆದಂಥ ಐಗುಪ್ತದ ಅರಸನಾದ ಫರೋಹನೆಕೋವಿನ ದಂಡಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಉಂಟಾದ ಕರ್ತನ ವಾಕ್ಯವು. ಗುರಾಣಿಯನ್ನೂ ಖೇಡ್ಯವನ್ನೂ ಸಿದ್ಧಮಾಡಿರಿ; ಯುದ್ಧಕ್ಕೆ ಸವಿಾಪಿಸಿರಿ; ಕುದುರೆಗಳನ್ನು ಕಟ್ಟಿರಿ; ರಾಹುತರೇ, ಎದ್ದು ಶಿರಸ್ತ್ರಾಣಗಳನ್ನಿಟ್ಟು ನಿಂತುಕೊಳ್ಳಿರಿ, ಈಟಿಗಳನ್ನು ಮೆರುಗು ಮಾಡಿರಿ, ಕವಚಗಳನ್ನು ತೊಟ್ಟು ಕೊಳ್ಳಿರಿ; ಅವರು ದಿಗಿಲುಪಟ್ಟು ಹಿಂತಿರುಗಿದ್ದನ್ನು ನಾನು ಕಂಡದ್ದೇನು? ಅವರ ಪರಾಕ್ರಮಶಾಲಿಗಳು ಬಡಿಯಲ್ಪಟ್ಟಿದ್ದಾರೆ; ಹಿಂದೆ ನೋಡದೆ ಓಡಿಹೋಗು ತ್ತಾರೆ; ಸುತ್ತಲು ಅಂಜಿಕೆ ಇದೆ ಎಂದು ಕರ್ತನು ಅನ್ನುತ್ತಾನೆ. ವೇಗಶಾಲಿಗಳು ಓಡಿಹೋಗದಿರಲಿ; ಪರಾಕ್ರಮಶಾಲಿಗಳು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿ ಬೀಳುವರು. ಹೊಳೆಗಳ ಹಾಗೆ ಕದಲುವ ನೀರುಗಳಂತಿದ್ದು ಪ್ರಳಯದ ಹಾಗೆ ಬರುವವನು ಯಾರು? ಐಗುಪ್ತವು ಪ್ರಳಯದ ಹಾಗೆ ಏರುತ್ತದೆ; ಅದರ ನೀರುಗಳು ಹೊಳೆಗಳ ಹಾಗೆ ಕದಲುತ್ತವೆ; ನಾನು ಏರುತ್ತೇನೆ, ಭೂಮಿಯನ್ನು ಮುಚ್ಚುತ್ತೇನೆ, ಪಟ್ಟಣವನ್ನೂ ಅದರ ನಿವಾಸಿಗಳನ್ನೂ ನಾಶಮಾಡುತ್ತೇನೆ ಎಂದು ಆತನು ಹೇಳುತ್ತಾನೆ. ಕುದುರೆಗಳೇ, ಬನ್ನಿರಿ; ರಥಗಳೇ, ಓಡಾಡಿರಿ; ಪರಾಕ್ರಮಶಾಲಿಗಳು ಹೊರಗೆ ಬರಲಿ; ಗುರಾಣಿಯನ್ನು ಹಿಡಿಯುವ ಕೂಷ್ಯರೂ ಫೊಟ್ಯರು ಬಿಲ್ಲನ್ನು ಹಿಡಿದು ಬೊಗ್ಗಿಸುವ ಲೂದ್ಯರೂ ಹೊರಗೆ ಬರಲಿ. ಇದು ಸೈನ್ಯಗಳ ಕರ್ತನಾದ ದೇವರ ದಿನವೇ; ಆತನು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ದಿನವು ಕತ್ತಿಯು ಸಂಹರಿಸಿ ಅವರ ರಕ್ತದಿಂದ ತೃಪ್ತಿಯಾಗಿ ಮತ್ತವಾಗುವದು; ಉತ್ತರ ದೇಶದಲ್ಲಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಸೈನ್ಯಗಳ ಕರ್ತನಾದ ದೇವರಿಗೆ ಬಲಿ ಆಗುತ್ತದೆ. ಐಗುಪ್ತದ ಮಗಳಾದ ಕನ್ಯಾಸ್ತ್ರೀಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತಕ್ಕೋ! ನೀನು ಬಹಳ ಮದ್ದು ತಕ್ಕೊಳ್ಳುವದು ವ್ಯರ್ಥವಾಗಿದೆ; ನಿನಗೆ ಗುಣವಾಗು ವದಿಲ್ಲ. ಜನಾಂಗಗಳು ನಿನ್ನ ಮಾನಭಂಗವನ್ನು ಕುರಿತು ಕೇಳಿಯವೆ, ನಿನ್ನ ಕೂಗು ದೇಶವನ್ನು ತುಂಬಿಸಿ ಯದೆ; ಪರಾಕ್ರಮಶಾಲಿಯು ಪರಾಕ್ರಮಶಾಲಿಯ ಮೇಲೆ ವಿರೋಧವಾಗಿ ಎಡವಿದ್ದಾರೆ; ಏಕವಾಗಿ ಬಿದ್ದುಹೋಗಿದ್ದಾರೆ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತದೇಶವನ್ನು ಹೇಗೆ ಹೊಡೆಯುವನೆಂಬದರ ವಿಷಯ ಕರ್ತನು ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ ವಾಕ್ಯವು. ಐಗುಪ್ತದಲ್ಲಿ ತಿಳಿಸಿರಿ, ಮಿಗ್ದೋಲಿನಲ್ಲಿ ಪ್ರಕಟಿ ಸಿರಿ. ನೋಫ್ನಲ್ಲಿಯೂ ತಹಪನೇಸ್ನಲ್ಲಿಯೂ ಪ್ರಕ ಟಿಸಿ, ಸ್ಥಿರವಾಗಿ ನಿಂತುಕೋ; ಸಿದ್ದಮಾಡಿಕೋ; ಕತ್ತಿಯು ನಿನ್ನ ಸುತ್ತಲೂ ಸಂಹರಿಸುವದೆಂದು ಹೇಳಿರಿ. ನಿನ್ನ ಬಲಿಷ್ಠರು ಯಾಕೆ ಬಡಕೊಂಡು ಹೋಗಿದ್ದಾರೆ? ಕರ್ತನು ಅವರನ್ನು ಓಡಿಸಿದ್ದದರಿಂದ ಅವರು ನಿಲ್ಲಲಿಲ್ಲ. ಅನೇಕರನ್ನು ಎಡವುವಂತೆ ಮಾಡಿದನು. ಹೌದು, ಒಬ್ಬರ ಮೇಲೊ ಬ್ಬರು ಬಿದ್ದರು; ಅವರು--ಏಳು ಉಪದ್ರಪಡಿಸುವ ಕತ್ತಿಯನ್ನು ಬಿಟ್ಟು, ಸ್ವಂತ ಜನರ ಬಳಿಗೂ ನಾವು ಹುಟ್ಟಿದ ದೇಶದ ಬಳಿಗೂ ತಿರುಗಿ ಹೋಗೋಣ ಎಂದು ಹೇಳಿದರು. ಐಗುಪ್ತದ ಅರಸ ನಾದ ಫರೋಹನು ನಾಶವಾದನು; ಸಮಯವನ್ನು ತಪ್ಪಿಸಿದ್ದಾನೆಂದು ಅಲ್ಲಿ ಕೂಗುತ್ತಾರೆ. ಸೈನ್ಯಗಳ ಕರ್ತ ನೆಂದು ಹೆಸರುಳ್ಳ ಅರಸನು ಅನ್ನುವದೇನಂದರೆ--ನನ್ನ ಜೀವದಾಣೆ, ಬೆಟ್ಟಗಳಲ್ಲಿ ತಾಬೋರಿನಂತೆಯೂ ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯ ವಾಗಿ ಬರುವನು. ಓ ಐಗುಪ್ತದ ಯುವತಿಯಾದ ನಿವಾಸಿಯೇ, ಸೆರೆಯ ಸಾಮಾನುಗಳನ್ನು ಸಜ್ಜು ಗೊಳಿಸಿಕೋ; ನೋಫ್ಹಾಳಾಗುವದು; ನಿವಾಸಿ ಗಳಿಲ್ಲದ ಬೀಡಾಗುವದು. ಐಗುಪ್ತವು ಬಹಳ ಚೆಲುವಾದ ಕಡಸಾಗಿದೆ; ಆದರೆ ಉತ್ತರದಿಂದ ನಾಶ ನವು ಬಂದೇ ಬರುತ್ತದೆ. ಅದರೊಳಗಿರುವ ಅದರ ಸಂಬಳದವರು ಕೊಬ್ಬಿದ ಹೋರಿಗಳ ಹಾಗಿದ್ದಾರೆ; ಅವರು ಸಹ ಹಿಂದಕ್ಕೆ ತಿರುಗಿಕೊಂಡು ಏಕವಾಗಿ ಓಡಿಹೋಗುತ್ತಾರೆ; ಅವರು ನಿಲ್ಲಲಿಲ್ಲ; ಅವರ ಆಪತ್ತಿನ ದಿವಸವೂ ಅವರ ವಿಚಾರಣೆಯ ಕಾಲವೂ ಅವರ ಮೇಲೆ ಬಂತು. ಅದರ ಶಬ್ದವು ಸರ್ಪದಂತೆ ಹೊರಡುವದು; ಅವರು ದಂಡಿನ ಸಂಗಡ ಸಂಚರಿಸಿ ಕಟ್ಟಿಗೆ ಕಡಿಯುವವರ ಹಾಗೆ ಕೊಡಲಿಗಳ ಸಂಗಡ ಅದಕ್ಕೆ ವಿರೋಧವಾಗಿ ಬರುವರು. ಆದರೆ ಅಡವಿ ಯನ್ನು ಅದು ಶೋಧಿಸ ಕೂಡದ್ದಾಗಿದ್ದರೂ ಕಡಿದು ಹಾಕುವರೆಂದು ಕರ್ತನು ಅನ್ನುತ್ತಾನೆ; ಅವರು ಮಿಡಿತೆ ಗಳಿಗಿಂತ ಹೆಚ್ಚಾಗಿ ಲೆಕ್ಕವಿಲ್ಲದೆ ಇದ್ದಾರೆ. ಐಗುಪ್ತದ ಮಗಳು ನಾಚಿಕೆಪಡುವಳು, ಉತ್ತರದ ಜನರ ಕೈಯಲ್ಲಿ ಒಪ್ಪಿಸಲ್ಪಡುವಳು. ಇಸ್ರಾಯೇಲಿನ ದೇವರಾದ ಸೈನ್ಯ ಗಳ ಕರ್ತನು ಹೇಳುವದೇನಂದರೆ--ಇಗೋ, ನಾನು ನೋಡುವ ಸಮೂಹವನ್ನೂ ಫರೋಹನನ್ನೂ ಐಗುಪ್ತ ವನ್ನೂ ಅದರ ದೇವರುಗಳನ್ನೂ ಅದರ ಅರಸರನ್ನೂ ಅಂತೂ ಫರೋಹನನ್ನೂ ಅವನಲ್ಲಿ ನಂಬಿಕೆಯಿಡುವ ಎಲ್ಲರನ್ನೂ ದಂಡಿಸುತ್ತೇನೆ; ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸುತ್ತೇನೆ. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸ ವಾಗುವದೆಂದು ಕರ್ತನು ಅನ್ನುತ್ತಾನೆ. ಆದರೆ ನೀನು, ಓ ನನ್ನ ಸೇವಕನಾದ ಯಾಕೋಬನೇ, ನೀನು ಭಯ ಪಡಬೇಡ; ಇಸ್ರಾಯೇಲೇ, ದಿಗ್ಭ್ರಮೆಗೊಳ್ಳಬೇಡ; ಇಗೋ, ನಾನು ನಿನ್ನನ್ನು ದೂರದಿಂದಲೂ ನಿನ್ನ ಸಂತಾನವನ್ನು ಅವರು ಸೆರೆಯಾಗಿ ಹೋದ ದೇಶ ದಿಂದಲೂ ರಕ್ಷಿಸುವೆನು; ಯಾಕೋಬನು ತಿರುಗಿ ಬಂದು ವಿಶ್ರಾಂತಿಯಾಗಿಯೂ ಸುಖವಾಗಿಯೂ ಇರುವನು; ಅವನನ್ನು ಭಯಪಡಿಸುವದಕ್ಕೆ ಯಾರೂ ಇರುವದಿಲ್ಲ.ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ. ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ.
- Isaiah 14:6 ಯೆಶಾಯ 14:6ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಕರ್ತನು ಮುರಿದುಬಿಟ್ಟಿದ್ದಾನೆ. ಯಾವನೂ ಅಡ್ಡಿ ಮಾಡನು.
- Habakkuk 2:17 ಹಬಕ್ಕೂಕ 2:17ಲೆಬನೋನಿನ ಹಿಂಸೆಯು ನಿನ್ನನ್ನು ಮುಚ್ಚುವದು; ಮೃಗಗಳ ಸೂರೆ ನಿನ್ನನ್ನು ಹೆದರಿಸುವದು; ಮನುಷ್ಯರ ರಕ್ತಕ್ಕಾಗಿ, ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಹಿಂಸೆಯು ನಿಮಿತ್ತವೇ.
- Habakkuk 2:5–8 ಹಬಕ್ಕೂಕ 2:5–8ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ. ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ? ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ. ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ.
- Isaiah 14:16–17 ಯೆಶಾಯ 14:16–17ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು.
- Habakkuk 1:9–10 ಹಬಕ್ಕೂಕ 1:9–10ಅವರೆಲ್ಲರು ಹಿಂಸಿಸುವದಕ್ಕೆ ಬರುವರು; ಅವರ ಮುಖಗಳು ಮೂಡಣ ಗಾಳಿ ಯಂತೆಯೇ ತಿಂದುಬಿಡುವವು; ಸೆರೆಯವರನ್ನು ಮರ ಳಿನ ಹಾಗೆ ಕೂಡಿಸುವರು. ಅವರು ಅರಸರನ್ನು ಧಿಕ್ಕರಿಸುವರು; ಪ್ರಧಾನರು ಅವರಿಗೆ ಪರಿಹಾಸ್ಯ ಮಾಡುವರು. ಕೋಟೆಗಳಿಗೆಲ್ಲಾ ಕುಚೋದ್ಯ ಮಾಡು ವರು. ಮಣ್ಣನ್ನು ಕುಪ್ಪೆಮಾಡಿ ಅದನ್ನು ಹಿಡಿಯುವರು.
- Jeremiah 52:1–34 ಯೆರೆಮೀಯ 52:1–34ಚಿದ್ಕೀಯನು ಆಳುವದಕ್ಕೆ ಆರಂಭಿಸಿದಾಗ ಇಪ್ಪತ್ತೊಂದು ವರುಷದವನಾಗಿದ್ದನು; ಅವನು ಹನ್ನೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು; ಅವನ ತಾಯಿಯ ಹೆಸರು ಲಿಬ್ನದವನಾದ ಯೆರೆವಿಾಯನ ಮಗಳಾದ ಹಮೂಟಲ್. ಅವನು ಯೆಹೋಯಾಕೀಮನು ಮಾಡಿದ್ದೆಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಕರ್ತನು ಯೆಹೂದದ ಮೇಲೆಯೂ ಯೆರೂಸಲೇಮಿನ ಮೇಲೆಯೂ ಅವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಡುವ ವರೆಗೆ ಮಾಡಿದ ಕೋಪದಿಂದ ಚಿದ್ಕೀಯನು ಬಾಬೆಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು. ಅವನ ಆಳಿಕೆಯ ಒಂಭತ್ತನೇ ವರುಷದಲ್ಲಿ, ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತಾನು ತನ್ನ ಸಮಸ್ತ ಸೈನ್ಯದ ಸಂಗಡ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದಕ್ಕೆ ವಿರೋಧವಾಗಿ ದಂಡಿಳಿದು ಅದಕ್ಕೆ ವಿರೋಧವಾಗಿ ಸುತ್ತಲೂ ಕೋಟೆಗಳನ್ನು ಕಟ್ಟಿದನು. ಈ ಪ್ರಕಾರ ಅರಸನಾದ ಚಿದ್ಕೀಯನ ಹನ್ನೊಂದನೇ ವರುಷದ ವರೆಗೆ ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ನಾಲ್ಕನೇ ತಿಂಗಳಲ್ಲಿ, ತಿಂಗಳಿನ ಒಂಭತ್ತನೇ ದಿವಸದಲ್ಲಿ ದೇಶಸ್ಥರಿ ಗೋಸ್ಕರ ರೊಟ್ಟಿ ಇಲ್ಲದೆ ಪಟ್ಟಣದಲ್ಲಿ ಕ್ಷಾಮವು ಕಠಿಣವಾಗಿತ್ತು. ಆಗ ಪಟ್ಟಣವು ವಿಭಾಗವಾಯಿತು; ಯುದ್ಧಸ್ಥರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದ ಬಾಗಲಿನ ಮಾರ್ಗವಾಗಿ ರಾತ್ರಿಯಲ್ಲಿ ಪಟ್ಟಣವನ್ನು ಬಿಟ್ಟು ಹೊರಟು, ಬೈಲು ಸೀಮೆಯ ಮಾರ್ಗವಾಗಿ ಹೋದರು. ಆದರೆ ಕಸ್ದೀಯರು ಪಟ್ಟಣದ ಸುತ್ತಲೂ ಇದ್ದರು. ಆಗ ಕಸ್ದೀಯರ ದಂಡು ಅರಸನನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಹಿಡಿದರು. ಅವನ ದಂಡೆಲ್ಲಾ ಅವನನ್ನು ಬಿಟ್ಟು ಚದರಿಹೋಯಿತು. ಆಗ ಅವರು ಅರಸನನ್ನು ಹಿಡಿದು, ಬಾಬೆಲಿನ ಅರಸನ ಬಳಿಗೆ ಹಮಾತ್ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು; ಅಲ್ಲಿ ಅವನು ಅವನ ವಿಷಯ ನ್ಯಾಯತೀರ್ಪು ಮಾಡಿದನು. ಬಾಬೇಲಿನ ಅರಸನು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣುಗಳ ಮುಂದೆ ಕೊಂದು ಹಾಕಿಸಿದನು. ಯೆಹೂದದ ಪ್ರಧಾನರೆಲ್ಲ ರನ್ನೂ ಸಹ ರಿಬ್ಲದಲ್ಲಿ ಕೊಂದು ಹಾಕಿಸಿದನು. ಇದಲ್ಲದೆ ಬಾಬೆಲಿನ ಅಸನು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿಸಿ, ಅವನನ್ನು ಹಿತ್ತಾಳೆಯ ಸಂಕೋಲೆಗಳಿಂದ ಕಟ್ಟಿಸಿ, ಬಾಬೆಲಿಗೆ ಒಯ್ದು ಅವನು ಸಾಯುವ ದಿನದ ವರೆಗೆ ಸೆರೆಮನೆಯಲ್ಲಿ ಇಟ್ಟನು. ಬಾಬೆಲಿನ ಅರಸನಾದ ನೆಬೂಕದೇಚ್ಚರನ ಹತ್ತೊಂಭತ್ತನೇ ವರುಷದ, ಐದನೇ ತಿಂಗಳಿನ, ಹತ್ತನೇ ದಿವಸದಲ್ಲಿ, ಬಾಬೆಲಿನ ಅರಸನ ಸೇವಕನೂ ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂ ಸಲೇಮಿಗೆ ಬಂದು, ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು; ಸುತ್ತಲಿರುವ ಯೆರೂಸಲೇಮಿನ ಗೋಡೆ ಗಳನ್ನೆಲ್ಲಾ ಕಾವಲಿನವರ ಅಧಿಪತಿಯ ಸಂಗಡ ಇದ್ದ ಕಸ್ದೀಯರ ದಂಡೆಲ್ಲಾ ಕೆಡವಿ ಹಾಕಿತು. ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವ ರಾದ ಕೆಲವರನ್ನೂ ಪಟ್ಟಣದಲ್ಲಿ ಉಳಿದ ಜನರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಸಮೂಹದಲ್ಲಿ ಮಿಕ್ಕಾದವರನ್ನೂ ಸೆರೆಯಾಗಿ ಒಯ್ದನು. ಆದರೆ ಕಾವಲಿನವರ ಅಧಿಪತಿಯಾದ ನೆಬೂಜರದಾನನು ದೇಶದ ಬಡವರಲ್ಲಿ ಕೆಲವರನ್ನು ದ್ರಾಕ್ಷೇತೋಟ ಕಾಯು ವವರಾಗಿಯೂ ಬೇಸಾಯ ಮಾಡುವವರಾಗಿಯೂ ಬಿಟ್ಟನು. ಇದಲ್ಲದೆ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸ್ತಂಭಗಳನ್ನೂ ಗದ್ದಿಗೆಗಳನ್ನೂ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸಮುದ್ರವನ್ನೂ ಕಸ್ದೀಯರು ಒಡೆದು ಅವುಗಳ ಹಿತ್ತಾಳೆಯನ್ನೆಲ್ಲಾ ಬಾಬೆಲಿಗೆ ತಕ್ಕೊಂಡು ಹೋದರು. ಗುಡಾಣಗಳನ್ನೂ ಸಲಿಕೆಗಳನ್ನೂ ಕತ್ತರಿಗಳನ್ನೂ ತಂಬಿಗೆಗಳನ್ನೂ ಸೌಟುಗಳನ್ನೂ ಸೇವೆಗೆ ಸಂಬಂಧವಾದ ಎಲ್ಲಾ ಹಿತ್ತಾಳೆಯ ಪಾತ್ರೆಗಳನ್ನೂ ತಕ್ಕೊಂಡರು. ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು. ಅರಸನಾದ ಸೊಲೊಮೋನನು ಕರ್ತನ ಆಲಯದಲ್ಲಿ ಮಾಡಿಸಿದ ಎರಡು ಸ್ತಂಭಗಳನ್ನೂ ಒಂದು ಸಮುದ್ರವನ್ನೂ ಗದ್ದಿಗೆಗಳ ಕೆಳಗಿದ್ದ ಹನ್ನೆರಡು ಹಿತ್ತಾಳೆಯ ಎತ್ತುಗಳನ್ನೂ ತಕ್ಕೊಂಡನು; ಈ ಎಲ್ಲಾ ಪಾತ್ರೆಗಳಿಗೆ ಲೆಕ್ಕವಿಲ್ಲದಷ್ಟು ಹಿತ್ತಾಳೆ ತೂಕವಾಗಿತ್ತು. ಸ್ತಂಭಗಳ ವಿಷಯ, ಒಂದು ಸ್ತಂಭದ ಉದ್ದವು ಹದಿನೆಂಟು ಮೊಳವಾಗಿತ್ತು, ಹನ್ನೆರಡು ಮೊಳದ ಸರಿಗೆ ಅದನ್ನು ಸುತ್ತಿಕೊಂಡಿತು; ಅದರ ದಪ್ಪ ನಾಲ್ಕು ಬೆರಳು; ಅದು ಟೊಳ್ಳಾಗಿತ್ತು. ಅದರ ಮೇಲೆ ಹಿತ್ತಾಳೆಯ ಕುಂಭ ಇತ್ತು; ಒಂದು ಕುಂಭದ ಎತ್ತರವು ಐದು ಮೊಳವಾಗಿತ್ತು. ಮತ್ತು ಕುಂಭಗಳ ಮೇಲೆ ಸುತ್ತಲಾಗಿ ಜಾಲರು ಕೆಲಸವೂ ದಾಳಿಂಬರಗಳೂ ಇದ್ದವು; ಎಲ್ಲಾ ಹಿತ್ತಾಳೆಯೇ; ಎರಡನೇ ಸ್ತಂಭವೂ ದಾಳಿಂಬರಗಳೂ ಅದರಂತೆಯೇ ಇದ್ದವು; ಒಂದು ಕಡೆಗೆ ತೊಂಭತ್ತಾರು ದಾಳಿಂಬರಗಳೂ ಇದ್ದವು; ಜಾಲರು ಕೆಲಸದ ಮೇಲೆ ಸುತ್ತಲಾಗಿದ್ದ ದಾಳಿಂಬರಗಳೆಲ್ಲಾ ನೂರು. ಕಾವಲಿನ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂವರು ದ್ವಾರಪಾಲಕರನ್ನೂ ತಕ್ಕೊಂಡನು. ಯುದ್ಧಸ್ಥರ ಮೇಲೆ ನೇಮಿಸಲ್ಪಟ್ಟಿದ್ದ ಒಬ್ಬ ಮನೇವಾರ್ತೆಯವನನ್ನೂ ಅರಸನ ಸನ್ನಿಧಾನದಲ್ಲಿ ನಿಂತವರೊಳಗೆ ಪಟ್ಟಣದಲ್ಲಿ ಸಿಕ್ಕಿದ ಏಳು ಮನುಷ್ಯರನ್ನೂ ದೇಶಸ್ಥರನ್ನೂ ದಂಡಿನವರ ಲೆಕ್ಕದಲ್ಲಿ ಸೇರಿಸಿದ ಸೈನ್ಯಾಧಿಪತಿಯ ಲೇಖಕನನ್ನೂ ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶಸ್ಥರಲ್ಲಿ ಅರುವತ್ತು ಮನುಷ್ಯರನ್ನೂ ಪಟ್ಟಣದೊಳಗಿಂದ ತಕ್ಕೊಂಡನು. ಇವರನ್ನು ಕಾವಲಿನ ಅಧಿಪತಿಯಾದ ನೆಬೂಜರ ದಾನನು ತಕ್ಕೊಂಡು ಬಾಬೆಲಿನ ಅರಸನ ಬಳಿಗೆ ರಿಬ್ಲಕ್ಕೆ ಒಯ್ದನು. ಆಗ ಬಾಬೆಲಿನ ಅರಸನು ಅವರನ್ನು ಹೊಡಿಸಿ, ಹಮಾತ್ ದೇಶದ ರಿಬ್ಲದಲ್ಲಿ ಕೊಂದು ಹಾಕಿಸಿದನು. ಈ ಪ್ರಕಾರ ಯೆಹೂದನು ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಟ್ಟನು. ನೆಬೂಕ ದ್ನೆಚ್ಚರನು ಸೆರೆಯಾಗಿ ಒಯ್ದ ಜನರು ಇವರೇ--ಏಳನೇ ವರುಷದಲ್ಲಿ ಮೂರು ಸಾವಿರದ ಇಪ್ಪತ್ತು ಮೂರು ಯೆಹೂದ್ಯರು. ನೆಬೂಕದ್ನೆಚ್ಚರನ ಹದಿನೆಂಟನೇ ವರುಷದಲ್ಲಿ ಅವನು ಯೆರೂಸಲೇಮಿನಿಂದ ಎಂಟು ನೂರ ಮೂವತ್ತೆರಡು ಜನರನ್ನು ಒಯ್ದನು. ನೆಬೂ ಕದ್ನೆಚ್ಚರನ ಇಪ್ಪತ್ತು ಮೂರನೇ ವರುಷದಲ್ಲಿ ಕಾವಲಿನ ಅಧಿಪತಿಯಾದ ನೆಬೂಜರದಾನನು ಏಳುನೂರು ನಾಲ್ವತ್ತೈದು ಮಂದಿ ಯೆಹೂದ್ಯರನ್ನು ಒಯ್ದನು. ಜನರೆಲ್ಲರು ನಾಲ್ಕು ಸಾವಿರದ ಆರುನೂರು. ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೇ ವರುಷದಲ್ಲಿ, ಹನ್ನೆರಡನೇ ತಿಂಗಳಿನ ಇಪ್ಪತ್ತೈದನೇ ದಿವಸದಲ್ಲಿ ಆದದ್ದೇನಂ ದರೆ--ಬಾಬೆಲಿನ ಅರಸನಾದ ಎವೀಲ್ಮೆರೋದಕನು ತನ್ನ ಆಳಿಕೆಯ ಮೊದಲನೇ ವರುಷದಲ್ಲಿ ಯೆಹೂದದ ಅರಸನಾದ ಯೆಹೋಯಾಖೀನನ ತಲೆಯನ್ನು ಎತ್ತಿ ಅವನನ್ನು ಸೆರೆಮನೆಯೊಳಗಿಂದ ಹೊರಗೆ ತರಿಸಿ ಅವನ ಸಂಗಡ ಕರುಣೆಯಿಂದ ಮಾತನಾಡಿ ಅವನ ಸಿಂಹಾ ಸನವನ್ನು ತನ್ನ ಸಂಗಡ ಬಾಬೆಲಿನಲ್ಲಿದ್ದ ಅರಸರ ಸಿಂಹಾಸನಗಳ ಮೇಲೆ ಇರಿಸಿ ಅವನ ಸೆರೆಮನೆಯ ವಸ್ತ್ರಗಳನ್ನು ಬದಲಾಯಿಸಿದನು. ಆಗ ಅವನು ಬದುಕಿದ ದಿನಗಳೆಲ್ಲಾ ಯಾವಾಗಲೂ ಅವನ ಮುಂದೆ ಊಟಮಾಡುತ್ತಿದ್ದನು.ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು. ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು.
- Ezekiel 25:1–17 ಯೆಹೆಜ್ಕೇಲನು 25:1–17ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ-- ಮನುಷ್ಯಪುತ್ರನೇ, ನೀನು ಅಮ್ಮೋನನ ಕುಮಾರರಿಗೆ ಅಭಿಮುಖನಾಗಿ ಅವರಿಗೆ ವಿರೋಧವಾಗಿ ಪ್ರವಾದಿಸು; ಅಮ್ಮೋನನ ಕುಮಾರರಿಗೆ ಹೇಳು, ದೇವರಾದ ಕರ್ತನ ವಾಕ್ಯವನ್ನು ಕೇಳಿರಿ; ದೇವರಾದ ಕರ್ತನು ಹೇಳುವದೇನಂದರೆ --ನೀನು ನನ್ನ ಪರಿಶುದ್ದಸ್ಥಳವನ್ನು ಅಪವಿತ್ರಪಡಿಸಿದಾ ಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ಅಹಾ, ಅಂದವಾದದರಿಂದ ನಿನ್ನನ್ನು ಹೆಚ್ಚಿಸಿಕೊಂಡದ್ದ ರಿಂದ ಇಗೋ, ನಾನು ನಿನ್ನನ್ನು ಮೂಡಣದವರಿಗೆ ಸ್ವಾಸ್ತ್ಯವಾಗಿ ಕೊಡುತ್ತೇನೆ, ಅವರು ತಮ್ಮ ಭವನಗಳನ್ನು ನಿನ್ನಲ್ಲಿ ಇರಿಸುವರು, ತಮ್ಮ ನಿವಾಸಗಳನ್ನು ನಿನ್ನಲ್ಲಿ ಮಾಡಿಕೊಳ್ಳುವರು, ಅವರು ನಿನ್ನ ಫಲವನ್ನು ತಿಂದು ನಿನ್ನ ಹಾಲನ್ನೇ ಕುಡಿಯುವರು. ನಾನು ರಬ್ಬಾವನ್ನು ಒಂಟೆಗಳ ನಿವಾಸಸ್ಥಳವಾಗಿಯೂ ಅಮ್ಮೋನ್ಯರ ಮಂದೆ ಗಳು ಮಲಗುವ ಸ್ಥಳವನ್ನಾಗಿಯೂ ಮಾಡುವೆನು. ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶವನ್ನು ಮನಃ ಪೂರ್ವಕವಾಗಿ ತಿರಸ್ಕರಿಸಿ ಅದರ ಆ ಸ್ಥಿತಿಗೆ ಸಂತೋಷ ಪಟ್ಟದ್ದರಿಂದ ಇಗೋ, ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಅನ್ಯಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಗಳೊಳಗೆ ನಿನ್ನನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನನ್ನು ನಾಶಮಾಡಿ ಸಂಹಾರ ಮಾಡುವೆನು, ಆಗ ನಾನೇ ಕರ್ತನೆಂದು ತಿಳಿಯುವಿ. ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಮೋವಾಬು ಮತ್ತು ಸೇಯಾರು--ಇಗೋ, ಯೆಹೂ ದನ ಮನೆಯು ಸಮಸ್ತ ಅನ್ಯಜನಾಂಗಗಳ ಹಾಗಿದೆ ಎಂದು ಹೇಳುವರು. ಆದದರಿಂದ ಇಗೋ, ನಾನು ಮೋವಾಬಿನ ಗಡಿಯನ್ನು ಪಟ್ಟಣಗಳ ಕಡೆ ಯಿಂದಲೂ ಅದರ ಪ್ರಾಂತ್ಯದಲ್ಲಿರುವಂತ ಮಹತ್ತಾದ ರಮ್ಯ ದೇಶದ ಪಟ್ಟಣಗಳಾದ ಬೇತ್ಯೆಷೀ ಮೋತ್ ಬಾಳ್ಮೆ ಯೋನ್ ಕಿರ್ಯಾಥಯಿಮ್ ಸೀಮೆಗಳನ್ನಲ್ಲದೆ ಅಮ್ಮೋನನಿಗೆ ಮೂಡಣದ ವರೆಗೆ ಸ್ವಾಸ್ತ್ಯವಾಗಿ ಕೊಟ್ಟು ಅಮ್ಮೋನ್ಯರು ಜನಾಂಗಗಳೊಳಗೆ ಜ್ಞಾಪಕ ಮಾಡದ ಹಾಗೆ ಅವ ರಿಗೆ ಸ್ವಾಸ್ತ್ಯವಾಗಿ ಕೊಡುವೆನು; ಮೋವಾಬ್ಯರಿಗೆ ನಾನು ನ್ಯಾಯಗಳನ್ನು ತೀರಿಸುವೆನು; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು. ದೇವರಾದ ಕರ್ತನು--ಎದೋಮು ಮತ್ತು ಯೆಹೂದನ ಮನೆತನದವರಿಗೆ ಮುಯ್ಯಿಗೆಮುಯ್ಯಿ ತೀರಿಸಿದ್ದರಿಂದಲೇ ಮತ್ತು ಅತಿ ಅಪರಾಧ ಮಾಡಿ ಅವರಲ್ಲಿ ಸೇಡು ತೀರಿಸಿ ತೆಗೆದುಕೊಂಡದ್ದರಿಂದಲೇ ಎಂದು ಹೇಳುತ್ತಾನೆ. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು. ನಾನು ನನ್ನ ಜನರಾದ ಇಸ್ರಾಯೇಲಿನ ಮೂಲಕವಾಗಿ ನನ್ನ ಪ್ರತಿದಂಡನೆಯನ್ನು ಎದೋಮಿನ ಮೇಲೆ ಇಡುವೆನು, ಅವರು ಎದೋಮಿನಲ್ಲಿ ನನ್ನ ಕೋಪದ ಪ್ರಕಾರವೂ ರೋಷದ ಪ್ರಕಾರವೂ ಮಾಡು ವರು; ಹೀಗೆಯೇ ಅವರು ನನ್ನ ಪ್ರತಿದಂಡನೆಯನ್ನು ತಿಳಿಯುವರೆಂದು ದೇವರಾದ ಕರ್ತನು ಹೇಳುತ್ತಾನೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು. ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.