Habakkuk · chapter 2 · verse 18
Habakkuk 2:18 in Kannada
ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು?
Adannu ketti roopisidavana kettida vigrahadinda prayojanavenu? Sullannu bodhisuvantha, adannu roopisidavanu mooka bombegalannu maadi adaralli nambikeyidu vantha, erakada vigrahadinda prayojanavenu?
Habakkuk 2:18 in English
- King James Version (KJV)
- What profiteth the graven image that the maker thereof hath graven it; the molten image, and a teacher of lies, that the maker of his work trusteth therein, to make dumb idols?
- World English Bible (WEB)
- “What value does the engraved image have, that its maker has engraved it; the molten image, even the teacher of lies, that he who fashions its form trusts in it, to make mute idols?
- American Standard Version (ASV)
- What profiteth the graven image, that the maker thereof hath graven it; the molten image, even the teacher of lies, that he that fashioneth its form trusteth therein, to make dumb idols?
- Bible in Basic English (BBE)
- What profit is the pictured image to its maker? and as for the metal image, the false teacher, why does its maker put his faith in it, making false gods without a voice?
- Darby Translation (DBY)
- What profiteth the graven image that the maker thereof hath graven it? the molten image, and the teacher of falsehood, that the maker of his work dependeth thereon, to make dumb idols?
- Webster's Bible (WBS)
- What profiteth the graven image that its maker hath graven it; the molten image, and a teacher of lies, that the maker of his work trusteth therein, to make dumb idols?
- Young's Literal Translation (YLT)
- What profit hath a graven image given That its former hath graven it? A molten image and teacher of falsehood, That trusted hath the former on his own formation — to make dumb idols?
Read in context
- 16ಘನತೆಗೆ ಬದಲಾಗಿ ನಿಂದೆ ಯಿಂದ ತುಂಬಿದ್ದೀ; ನೀನು ಸಹ ಕುಡಿದು ನಿನ್ನ ಮುಂದೊಗಲು ಮುಚ್ಚಲ್ಪಡದಿರಲಿ. ಕರ್ತನ ಬಲಗೈಯ ಪಾತ್ರೆ ನಿನ್ನ ಕಡೆಗೆ ತಿರುಗುವದು. ನಿನ್ನ ಘನತೆಯ ಮೇಲೆ ಕಾರುವಿಕೆಯೂ ಲಜ್ಜೆಯೂ ಇರುವದು.
- 17ಲೆಬನೋನಿನ ಹಿಂಸೆಯು ನಿನ್ನನ್ನು ಮುಚ್ಚುವದು; ಮೃಗಗಳ ಸೂರೆ ನಿನ್ನನ್ನು ಹೆದರಿಸುವದು; ಮನುಷ್ಯರ ರಕ್ತಕ್ಕಾಗಿ, ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಹಿಂಸೆಯು ನಿಮಿತ್ತವೇ.
- 18ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು?
- 19ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
- 20ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
Cross references
- Jeremiah 10:8 ಯೆರೆಮೀಯ 10:8ಅವರು ಒಟ್ಟಾರೆ ಕ್ರೂರಿಗಳೂ ಮೂರ್ಖರೂ ಆಗಿದ್ದಾರೆ; ಮರವು ವ್ಯರ್ಥವಾದ ಬೋಧನೆಯಾಗಿವೆ.
- Zechariah 10:2 ಜೆಕರ್ಯ 10:2ವಿಗ್ರಹಗಳು ವ್ಯರ್ಥವಾಗಿ ಮಾತ ನಾಡಿವೆ; ಶಕುನಗಾರರು ಸುಳ್ಳನ್ನು ನೋಡಿದ್ದಾರೆ; ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ; ವ್ಯರ್ಥವಾಗಿ ಆದರಿಸುತ್ತಾರೆ; ಆದದರಿಂದ ಮಂದೆಯ ಹಾಗೆ ತಮ್ಮ ದಾರಿಯಲ್ಲಿ ಹೋಗಿದ್ದಾರೆ; ಕುರುಬನಿಲ್ಲದ ಕಾರಣ ಕಳವಳಗೊಂಡಿದ್ದಾರೆ.
- Isaiah 44:9–10 ಯೆಶಾಯ 44:9–10ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು. ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು?
- 1 Corinthians 12:2 1 ಕೊರಿಂಥದವರಿಗೆ 12:2ನೀವು ಅನ್ಯರಾಗಿದ್ದಾಗ ನಿಮಗೆ ಪ್ರೇರಣೆಯಾದ ಹಾಗೆ ಮೂಕವಿಗ್ರಹಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.
- Jeremiah 2:27–28 ಯೆರೆಮೀಯ 2:27–28ಅವರು ಮರಕ್ಕೆ ನೀನು ನನ್ನ ತಂದೆ ಎಂದೂ ಕಲ್ಲಿಗೆ--ನೀನು ನನ್ನನ್ನು ಹೆತ್ತಿದ್ದೀ ಎಂದೂ ಹೇಳುತ್ತಾರಲ್ಲಾ? ಯಾಕಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ಅವರ ಕಷ್ಟ ಕಾಲದಲ್ಲಿ--ಎದ್ದು, ನಮ್ಮನ್ನು ರಕ್ಷಿಸು ಎಂದು ಹೇಳುವರು. ಆದರೆ ನೀನು ನಿನಗೋಸ್ಕರ ಮಾಡಿಕೊಂಡ ನಿನ್ನ ದೇವರುಗಳು ಎಲ್ಲಿ? ನಿನ್ನ ಕಷ್ಟ ಕಾಲದಲ್ಲಿ ನಿನ್ನನ್ನು ರಕ್ಷಿಸಲು ಸಾಧ್ಯವಾದರೆ ಅವರೇ ಏಳಲಿ, ಯಾಕಂದರೆ ಓ ಯೆಹೂದವೇ, ನಿನ್ನ ಪಟ್ಟಣಗಳ ಲೆಕ್ಕದ ಹಾಗೆ ನಿನ್ನ ದೇವರುಗಳು ಇದ್ದಾರೆ.
- Isaiah 42:17 ಯೆಶಾಯ 42:17ಕೆತ್ತಿದ ವಿಗ್ರಹಗಳಲ್ಲಿ ನಂಬಿಕೆಯಿಡುವವರು ಎರಕಹೊಯ್ದ ವಿಗ್ರಹಗಳಿಗೆ ನೀವೇ ನಮ್ಮ ದೇವರುಗಳೆಂದು ಹೇಳುವ ವರು ಹಿಂದೆ ಬಿದ್ದು ನಾಚಿಕೆಗೆ ಈಡಾಗುವರು.
- Psalm 115:4–8 ಕೀರ್ತನೆಗಳು 115:4–8ಅವರ ವಿಗ್ರಹಗಳು ಬೆಳ್ಳಿಯೂ ಬಂಗಾರವೂ ಮನುಷ್ಯನ ಕೈಕೆಲಸವೂ ಆಗಿವೆ. ಅವುಗಳಿಗೆ ಬಾಯಿ ಉಂಟು; ಮಾತಾಡುವದಿಲ್ಲ; ಕಣ್ಣುಗಳುಂಟು; ನೋಡು ವದಿಲ್ಲ. ಕಿವಿಗಳುಂಟು; ಕೇಳುವದಿಲ್ಲ. ಮೂಗು ಉಂಟು; ಮೂಸುವದಿಲ್ಲ. ಕೈಗಳುಂಟು; ಮುಟ್ಟುವ ದಿಲ್ಲ. ಕಾಲುಗಳುಂಟು; ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ, ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- Isaiah 45:16 ಯೆಶಾಯ 45:16ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
- Psalm 135:15–18 ಕೀರ್ತನೆಗಳು 135:15–18ಅನ್ಯಜನಾಂಗಗಳ ವಿಗ್ರಹಗಳು ಬೆಳ್ಳಿ ಬಂಗಾರ ದಿಂದ ಮಾಡಿದ ಮನುಷ್ಯನ ಕೈ ಕೆಲಸವಾಗಿವೆ. ಅವು ಗಳಿಗೆ ಬಾಯಿ ಉಂಟು, ಮಾತನಾಡುವದಿಲ್ಲ. ಕಣ್ಣುಗ ಳುಂಟು, ನೋಡುವುದಿಲ್ಲ. ಕಿವಿಗಳುಂಟು, ಕೇಳುವ ದಿಲ್ಲ. ಅವುಗಳ ಬಾಯಿಯಲ್ಲಿ ಶ್ವಾಸವೇನೂ ಇಲ್ಲ. ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸ ವಿಡುವವರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- Isaiah 45:20 ಯೆಶಾಯ 45:20ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸವಿಾಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತು ಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನಹಿಸುವವರು ಏನೂ ತಿಳಿಯದವರಾಗಿದ್ದಾರೆ.
- Jeremiah 10:14–15 ಯೆರೆಮೀಯ 10:14–15ಪ್ರತಿ ಮನುಷ್ಯನು ತನ್ನ ಜ್ಞಾನದಲ್ಲಿ ಪಶುವಾಗಿದ್ದಾನೆ; ಎರಕ ಹೊಯ್ಯುವವರೆಲ್ಲಾ ಕೆತ್ತಿದ ವಿಗ್ರಹಕ್ಕೋಸ್ಕರ ನಾಚಿಕೆಪಡುತ್ತಾರೆ; ಅವರ ಎರಕ ವಿಗ್ರಹವು ಸುಳ್ಳಾದದ್ದು; ಅವುಗಳಲ್ಲಿ ಉಸಿರು ಇಲ್ಲ. ಅವು ವ್ಯರ್ಥವೇ, ತಪ್ಪಾದ ಕೆಲಸವೇ; ಅವು ವಿಚಾ ರಿಸಲ್ಪಡುವ ಕಾಲದಲ್ಲಿ ನಾಶವಾಗುವವು.
- 2 Thessalonians 2:9–11 2 ಥೆಸಲೊನೀಕದವರಿಗೆ 2:9–11ಆ ಕೆಡುಕನ ಬರುವಿಕೆಯು ಸೈತಾನನ ಕಾರ್ಯಕ್ಕನು ಸಾರವಾಗಿರುವದು; ಅದು ಎಲ್ಲಾ ಶಕ್ತಿಯಿಂದಲೂ ಸೂಚಕ ಕಾರ್ಯಗಳಿಂದಲೂ ಸುಳ್ಳಾದ ಅದ್ಭುತ ಕಾರ್ಯಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ. ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ.
Original words (Hebrew)
- profiteth · H3276יַעַל yaʻal
- image · H6459פֶּסֶל peçel
- maker · H3335יָצַר yâtsar
- graven · H6458פָּסַל pâçal
- image · H4541מַסֵּכָה maççêkâh
- teacher · H3384יָרָה yârâh
- lies · H8267שֶׁקֶר sheqer
- maker · H3335יָצַר yâtsar
- work · H3336יֵצֶר yêtser
- trusteth · H982בָּטַח bâṭach
- make · H6213עָשָׂה ʻâsâh
- dumb · H483אִלֵּם ʼillêm
- idols · H457אֱלִיל ʼĕlîyl